ಉಬ್ಬಿರುವ ರಕ್ತನಾಳ ಸಮಸ್ಯೆಗೆ ಹಸಿರು ಟೊಮೆಟೊ ಪರಿಹಾರ

By: Jaya subramanya
Subscribe to Boldsky

ಇಂದಿನ ದಿನಗಳಲ್ಲಿ ವಯಸ್ಸಾಗುವಿಕೆ ಎಂಬುದು ಹೆಚ್ಚಿನವರಿಗೆ ಶಾಪದಂತೆ ಪರಿಣಮಿಸಿದೆ. ತಮಗೆ ವಯಸ್ಸಾಗಿದ್ದರೂ ಅದು ಬೇರೆಯವರಿಗೆ ಕಾಣಬಾರದು ಎಂಬುದಾಗಿಯೇ ಅವರು ಬಯಸುತ್ತಾರೆ. ಆದರೆ ಇಂದಿನ ದಿನಗಳಲ್ಲಿ ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ನಾವುಗಳು ವಯಸ್ಸಾಗದೇ ಇದ್ದರೂ ವಯಸ್ಸಾದಂತೆ ಕಂಡುಬರುತ್ತಿದ್ದೇವೆ. ಬೊಜ್ಜು, ಸ್ಥೂಲಕಾಯದೊಂದಿಗೆ ಬಿಪಿ, ಶುಗರ್, ಸಂಧಿವಾತ ಮೊದಲಾದ ರೋಗಗಳು ನಮ್ಮನ್ನು ಕಾಡುತ್ತಿವೆ. ರೋಗನಿರೋಧಕ ಶಕ್ತಿಯು ಸಾಮರ್ಥ್ಯವನ್ನು ಕಳೆದುಕೊಂಡು ಹೆಚ್ಚು ಹೆಚ್ಚು ರೋಗಗಳನ್ನು ಆಹ್ವಾನಿಸುತ್ತಿದೆ.  

Varicose Veins

ದೇಹದ ರಕ್ತನಾಳಗಳು ಹಿಗ್ಗಿ ದೊಡ್ಡದಾಗುತ್ತವೆ ಮತ್ತು ಹೆಚ್ಚಿನ ಪ್ರಮಾಣದ ರಕ್ತ ಇದರಲ್ಲಿ ತುಂಬಿರುವಂತಹ ಪರಿಸ್ಥತಿ ನಿರ್ಮಾಣವಾಗಿರುತ್ತದೆ. ಈ ಸ್ಥಳದಲ್ಲಿ ಚರ್ಮ ಎದ್ದಂತೆ ಕಂಡುಬರುತ್ತದೆ ಮತ್ತು ಗಾಯಕ್ಕೆ ಒಳಗಾಗದಂತೆ ಕಂಡುಬರುತ್ತದೆ. ಉಬ್ಬಿರುವ ರಕ್ತನಾಳಗಳು ಒಂದೊಮ್ಮೆ ದೇಹದಲ್ಲಿ ಕಂಡುಬಂದಲ್ಲಿ ಇದು ಕಡಿಮೆಯಾಗಲು ಹಲವಾರು ಸಮಯಗಳನ್ನೇ ತೆಗೆದುಕೊಳ್ಳಬಹುದು. ಅಂತೆಯೇ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ನೀವು ಒಳಗಾಗುವ ಸಾಧ್ಯತೆ ಇದೆ. ಆದರೆ ಇದಕ್ಕಾಗಿ ನೀವು ಮನೆಯಲ್ಲೇ ತಯಾರಿಸಬೇಕಾದ ಪರಿಹಾರವೊಂದಿದ್ದು ಇದನ್ನು ಬಳಸಿ ಈ ಸಮಸ್ಯೆಯನ್ನು ಹೋಗಲಾಡಿಸಬಹುದಾಗಿದೆ...

green tomato

*ಹಸಿರು ಟೊಮೇಟೊ - 2 ಮಧ್ಯಮ ಗಾತ್ರದ್ದು

*ಜೇನು - 1 ಚಮಚ

ಸರಿಯಾದ ಪ್ರಮಾಣದಲ್ಲಿ ನಿಯಮಿತವಾಗಿ ಈ ವಿಧಾನವನ್ನು ನೀವು ಅನುಸರಿಸಿದಲ್ಲಿ ಉಬ್ಬಿರುವ ರಕ್ತನಾಳಗಳು ಇಲ್ಲವೇ ವರಿಕೋಸ್ ವೈನ್ಸ್‌ನಂತಹ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.

ಈ ವಿಧಾನವನ್ನು ನೀವು ಬಳಸುವ ಮುನ್ನ ದೇಹದ ತೂಕವನ್ನು ನೀವು ಮೊದಲು ಕಡಿಮೆ ಮಾಡಬೇಕು ನಿತ್ಯವೂ ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. 

Honey

ತಯಾರಿಸುವ ವಿಧಾನ

*ಹಸಿರು ಟೊಮೇಟೊದ ಒಳಭಾಗದಲ್ಲಿರುವ ಅಂಶವನ್ನು ಹೊರತೆಗೆಯಿರಿ ಮತ್ತು ಜೇನು ಸೇರಿಸಿಕೊಂಡು ನೀರನ್ನು ಮಿಶ್ರ ಮಾಡಿಕೊಂಡು ಇದನ್ನು ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ.

*ದ್ರಾವಣ ರೂಪದಲ್ಲಿ ದೊರೆಯುವವರೆಗೆ ಇದನ್ನು ಬ್ಲೆಂಡ್ ಮಾಡಿ

*ಬೆಳಗ್ಗೆ ಈ ದ್ರಾವಣವನ್ನು ಸೇವಿಸಿ, ಉಪಹಾರಕ್ಕಿಂತ ಮುನ್ನ ಇದನ್ನು ಸೇವಿಸಿ.

*ಅಂತೆಯೇ ಉಬ್ಬಿರುವ ರಕ್ತನಾಳವಿರುವ ಸ್ಥಳದಲ್ಲಿ ಹಸಿರು ಟೊಮೇಟೊವನ್ನು ನೀವು ಉಜ್ಜಬಹುದಾಗಿದೆ.

English summary

Green Tomato Remedy To Reduce Varicose Veins

They say that there are two kinds of people in the world, the ones who are not scared of growing old and the other set who dread the process of ageing! Well, people are scared of growing old for a number of reasons. It could be the fear of losing their youthful looks and energy, the fear of dying and loneliness and also the fear of suffering from diseases.
Story first published: Wednesday, July 12, 2017, 8:31 [IST]
Subscribe Newsletter