'ಸಪೋಟ ಹಣ್ಣು'-ಆರೋಗ್ಯಕ್ಕೆ ಸಾಕಷ್ಟು ಲಾಭ ತಂದು ಕೊಡುತ್ತದೆ!

By: manu
Subscribe to Boldsky

ಅಪ್ಪಟ ಕಂದು ಬಣ್ಣದ ಚಿಕ್ಕೂ, ಸಪೋಟ ಅಥವಾ ಸ್ಪಾಡಿಲ್ಲಾ ಫ್ರೂಟ್ ಎಂದು ಕರೆಯುವ (ವೈಜ್ಞಾನಿಕ ಹೆಸರು Manilkara Zapota) ಈ ಸಿಹಿಯಾದ ಹಣ್ಣು ಸಪೋಟೇಸೀ ಎಂಬ ಸಸ್ಯವರ್ಗಕ್ಕೆ ಸೇರಿದೆ. ಇದೇ ಕಾರಣಕ್ಕೆ ಇದನ್ನು ಸಪೋಟ ಎಂದೂ ಕರೆಯುತ್ತಾರೆ.

ನೋಡಲಿಕ್ಕೆ ಕಿವಿಹಣ್ಣಿನ ಒಂದು ಭಾರವನ್ನು ಚೂಪಾಗಿಸಿದಂತೆ ಕಾಣುವ ಈ ಹಣ್ಣಿನ ಹೊರಕವಚ ತೆಳುವಾಗಿದ್ದು ಒಳಗಣ ತಿರುಳು ಮೊದಲೇ ಕತ್ತರಿಸಿಟ್ಟಂತೆ ಐದಾರು ಭಾಗಗಳಲ್ಲಿದ್ದು ನಡುವೆ ಕಪ್ಪು ಮತ್ತು ಉದ್ದದ ಬೀಜಗಳಿರುತ್ತವೆ.

ಸಪೋಟ ಹಣ್ಣಿನ ತಿರುಳು ಅಪ್ಪಟ ಸಿಹಿಯಾಗಿದ್ದು ಕೊಂಚವೂ ಹುಳಿಯ ಅಂಶವಿರುವುದಿಲ್ಲ. ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಬನ್ನಿ, ಯಾವ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....   

ವಿಟಮಿನ್ ಬಿ ಕೊರತೆಯನ್ನು ನೀಗಿಸುತ್ತದೆ

ವಿಟಮಿನ್ ಬಿ ಕೊರತೆಯನ್ನು ನೀಗಿಸುತ್ತದೆ

ಈ ಹಣ್ಣಿನಲ್ಲಿ ವಿಟಮಿನ್ ಬಿ-ಕಾಂಪ್ಲೆಕ್ಸ್ ಹೇರಳವಾಗಿರುವ ಕಾರಣ ಈ ಗುಂಪಿನ ವಿಟಮಿನ್ನುಗಳಿಂದ ದೊರಕುವ ಎಲ್ಲಾ ಪ್ರಯೋಜನಗಳು ದೊರಕುತ್ತವೆ. ವಿಟಮಿನ್ ಬಿ ಕೊರತೆಯಿಂದ ಎದುರಾಗುವ ರಕ್ತಹೀನತೆ, ಸುಸ್ತು, ಕಣ್ಣಿನ ದೃಷ್ಟಿ ಕುಂದುವುದು, ಬೆಳವಣಿಗೆಯಲ್ಲಿ ಕುಂಠಿತವಾಗುವುದು, ನರವ್ಯವಸ್ಥೆ ಶಿಥಿಲಗೊಳ್ಳುವುದು, ಹೃದಯ ಸಂಬಂಧಿ ತೊಂದರೆಗಳು ಇತ್ಯಾದಿಗಳನ್ನು ಸರಿಪಡಿಸುವಲ್ಲಿ ಸಪೋಟ ಹಣ್ಣಿನ ಸೇವನೆ ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನಮ್ಮ ಅಹಾರದಲ್ಲಿರುವ ಸಪೋಟ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಪರಿಣಾಮವಾಗಿ ಹತ್ತು ಹಲವು ಸೋಂಕುಗಳಿಂದ ದೇಹ ರಕ್ಷಣೆ ಪಡೆಯುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು, ತರಕಾರಿಗಳಿವು...

ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಗೊಳಿಸುತ್ತದೆ

ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಗೊಳಿಸುತ್ತದೆ

ಇದರಲ್ಲಿರುವ ಪೋಷಕಾಂಶಗಳ ಕಾರಣದಿಂದಾಗಿ ಸಪೋಟವನ್ನು ಸುಪರ್ ಫುಡ್ ಅಥವಾ ಅತಿ ಪ್ರಬಲ ಆಹಾರಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಇದರ ಗುಣಗಳಲ್ಲಿ ಕ್ಯಾನ್ಸರ್ ನಿವಾರಕ ಗುಣವೂ ಒಂದಾಗಿದೆ. ಈ ಹಣ್ಣಿನಲ್ಲಿ ಕರಗುವ ನಾರು, ಸಕ್ಷಮ ಆಂಟಿ ಆಕ್ಸಿಡೆಂಟುಗಳು ಹಾಗೂ ಕ್ಯಾನ್ಸರ್ ನಿರೋಧಕ ಗುಣವಿರುವ ವಿಟಮಿನ್ ಎ ಕ್ಯಾನ್ಸರ್ ಕಾರಕ ಕಣಗಳನ್ನು ನಿವಾರಿಸುವಲ್ಲಿ ಬೆಂಬಲ ನೀಡುವ ಮೂಲಕ ಹಲವು ಬಗೆಯ ಕ್ಯಾನ್ಸರುಗಳಿಂದ ರಕ್ಷಣೆ ಒದಗಿಸುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ- ಕ್ಯಾನ್ಸರ್ ವಿರುದ್ಧ ಹೋರಾಡುವ ಸಂಜೀವಿನಿ

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸುತ್ತದೆ

ಹಲವು ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಚಿಕ್ಕೂ ಹಣ್ಣಿನಲ್ಲಿರುವ ಕ್ಯಾಲ್ಸಿಯಂ, ಗಂಧಕ, ಕಬ್ಬಿಣ ಹಾಗೂ ಇತರ ಖನಿಜಗಳು ಮೂಳೆಗಳನ್ನು ಆರೋಗ್ಯಕರವಾಗಿ ಹಾಗೂ ದೃಢಯುತವಾಗಿರಿಸಲು ನೆರವಾಗುತ್ತವೆ. ಸಪೋಟವನ್ನು ನಿಯಮಿತವಾಗಿ ತಿನ್ನುತ್ತಾ ಬರುವ ಮೂಲಕ ಮೂಳೆಗಳ ಧಾತುಗಳು ಸಂತುಲಿತ ಪ್ರಮಾಣದಲ್ಲಿರಲು ನೆರವಾಗುತ್ತವೆ, ತನ್ಮೂಲಕ ಮೂಳೆಗಳು ಉತ್ತಮ ದೃಢತೆ ಪಡೆಯಲು ನೆರವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಸೇವಿಸಲೂ ಸೂಕ್ತವಾಗಿದೆ

ಗರ್ಭಾವಸ್ಥೆಯಲ್ಲಿ ಸೇವಿಸಲೂ ಸೂಕ್ತವಾಗಿದೆ

ತಜ್ಞರ ಪ್ರಕಾರ ಗರ್ಭಿಣಿಯರು ಸೇವಿಸಲು ಈ ಹಣ್ಣು ಅತ್ಯಂತ ಸೂಕ್ತವಾಗಿದೆ. ಇದರಲ್ಲಿ ಹೇರಳವಾಗಿರುವ ಅಗತ್ಯ ಪೋಷಕಾಂಶಗಳು, ಕಾರ್ಬೋಹೈಡ್ರೇಟುಗಳು ಗರ್ಭಿಣಿಯರ ಅಗತ್ಯತೆಯನ್ನು ಪೂರೈಸುತ್ತವೆ. ಈ ಮೂಲಕ ಗರ್ಭಿಣಿಯರು ಎದುರಿಸುವ ನಿಃಶಕ್ತಿ, ತಲೆ ತಿರುಗುವುದು, ಸುಸ್ತು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.

ಕಣ್ಣುಗಳ ಆರೋಗ್ಯಕ್ಕೂ ಉತ್ತಮ

ಕಣ್ಣುಗಳ ಆರೋಗ್ಯಕ್ಕೂ ಉತ್ತಮ

ಚಿಕ್ಕುವಿನಲ್ಲಿರುವ ವಿಟಮಿನ್ ಎ ಕಣ್ಣುಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದ್ದು ನಿಯಮಿತವಾಗಿ ಈ ಹಣ್ಣನ್ನು ತಿನ್ನುತ್ತಿರುವ ಮೂಲಕ ಕಣ್ಣುಗಳ ಆರೋಗ್ಯ ಹಾಗೂ ದೃಷ್ಟಿ ಉತ್ತಮಗೊಳ್ಳುತ್ತದೆ.

ಕಣ್ಣಿನ ದೃಷ್ಟಿ ಸಾಮರ್ಥ್ಯ ಕಾಪಾಡಲು ಟಾಪ್ 20 ಟಿಪ್ಸ್

ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ನಿವಾರಿಸುತ್ತದೆ

ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ನಿವಾರಿಸುತ್ತದೆ

ಒಂದು ವೇಳೆ ಮೂತ್ರಪಿಂಡದಲ್ಲಿ ಕಲ್ಲುಗಳಾಗಿದ್ದರೆ ಇದನ್ನು ನಿವಾರಿಸಲು ಶಸ್ತ್ರಕ್ರಿಯೆಯೇ ಆಗಬೇಕೆಂದೇನಿಲ್ಲ. ಬದಲಿಗೆ ಚಿಕ್ಕು ಹಣ್ಣಿನ ಬೀಜಗಳನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿ ನಿಯಮಿತವಾಗಿ ಒಂದು ಲೋಟಾ ನೀರಿನೊಂದಿಗೆ ಬೆರೆಸಿ ಕುಡಿದರೆ ಸಾಕಾಗುತ್ತದೆ. ಈ ಬೀಜಗಳು ಅತ್ಯುತ್ತಮ ಮೂತ್ರವರ್ಧಕವಾಗಿದ್ದು ಮೂತ್ರವನ್ನು ಹೆಚ್ಚಿಸಿ ಕಲ್ಲುಗಳನ್ನು ಕರಗಿಸಿ ವಿಸರ್ಜಿಸಲು ನೆರವಾಗುತ್ತದೆ.

ಮೂಳೆಗಳ ಆರೋಗ್ಯ

ಮೂಳೆಗಳ ಆರೋಗ್ಯ

ಹೆಚ್ಚುವರಿ ಪ್ರಮಾಣದಲ್ಲಿ ಕ್ಯಾಲ್ಸಿಯುಮ್, ರಂಜಕ (ಫಾಸ್ಫರಸ್) ಮತ್ತು ಕಬ್ಬಿಣ ಅಂಶಗಳು ಮೂಳೆಗಳ ಸಹಿಷ್ಣುತೆಯನ್ನು ಹೆಚ್ಚಿಸಲು ಅಗತ್ಯವಿದೆ. ಈ ಹಣ್ಣಿನಲ್ಲಿ ಕ್ಯಾಲ್ಸಿಯುಮ್, ಕಬ್ಬಿಣ ಮತ್ತು ರಂಜಕಾಂಶಗಳು ಅಧಿಕಪ್ರಮಾಣದಲ್ಲಿರುವುದರಿಂದ ಮೂಳೆಗಳ ಸಹಿಷ್ಣುತೆ ಮತ್ತು ಬಲವನ್ನು ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ.

English summary

Health Benefits Of Chikoo Or Sapodilla

Chikoo or the ‘Sapodilla fruit’, scientifically known as Manilkara Zapota, belongs to the Sapotaceae family. It is a kiwi-like brown-colored fruit with smooth outer skin, soft and slightly sticky pulp and 3-5 black bean-like seeds. Chikoo is mostly appreciated for its exceptionally sweet taste and flavor. But the best thing about the fruit is its amazing nutritional values as well as health benefits
Subscribe Newsletter