ಅಡುಗೆಮನೆಯ ಶುಂಠಿ: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು!

By: Hemanth
Subscribe to Boldsky

ದೇಹದಲ್ಲಿ ಬೊಜ್ಜು ಬಂದರೆ ಅದನ್ನು ಕರಗಿಸುವುದು ಹಿಮಾಲಯವನ್ನು ಏರಿದಷ್ಟೇ ಕಠಿಣ ಕೆಲಸವಾಗಿದೆ. ಬೊಜ್ಜು ದೇಹದ ರೂಪವನ್ನೇ ಕೆಡಿಸುವುದು ಮಾತ್ರವಲ್ಲದೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದರಿಂದ ಬೊಜ್ಜು ಕರಗಿಸುವುದು ಅತೀ ಅಗತ್ಯವಾಗಿದೆ. ಬೊಜ್ಜು ಬರುವ ಮೊದಲೇ ಕ್ರಮ ತೆಗೆದುಕೊಂಡರೆ ತುಂಬಾ ಒಳ್ಳೆಯದು. ಆದರೆ ಫಾಸ್ಟ್ ಫುಡ್ ಯುಗದಲ್ಲಿ ಬೊಜ್ಜು ಹೆಚ್ಚಿನವರಿಗೆ ಕಟ್ಟಿಟ್ಟ ಬುತ್ತಿಯಾಗಿದೆ. ಬೊಜ್ಜು ಕರಗಿಸಲು ವ್ಯಾಯಾಮ ಪ್ರಮುಖ ಅಂಗವಾಗಿದೆ. 

Ginger Water Remedy To Burn Fat

ವ್ಯಾಯಾಮವಿಲ್ಲದೆ ಇದ್ದರೆ ಯಾವುದೇ ಮದ್ದು ತೆಗೆದುಕೊಂಡರೂ ಬೊಜ್ಜು ಕರಗದು. ಬೊಜ್ಜು ನಿವಾರಿಸಲು ಕೆಲವೊಂದು ಮನೆಮದ್ದುಗಳು ತುಂಬಾ ಪರಿಣಾಮಕಾರಿ. ಅದರಲ್ಲೂ ಶುಂಠಿಯ ನೀವು ಬೊಜ್ಜನ್ನು ಕರಗಿಸುವ ಪ್ರಮುಖ ಮನೆಮದ್ದಾಗಿದೆ. ಸುಲಭವಾಗಿ ಕೈಗೆಟಕುವ ಶುಂಠಿಯು ಬೊಜ್ಜನ್ನು ಕೆಲವೇ ದಿನಗಳಲ್ಲಿ ಕಡಿಮೆ ಮಾಡಲಿದೆ. ಇಷ್ಟು ಮಾತ್ರವಲ್ಲದೆ ಊತ, ಗಂಟುನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲಿದೆ.   ಇದನ್ನೂ ಓದಿ -  ಡೊಳ್ಳು ಹೊಟ್ಟೆ ಕರಗಿಸಲು-ಬಾಳೆ ಹಣ್ಣು+ಶುಂಠಿ ಸಾಕು!

ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕೂಡ ಶುಂಠಿ ನೀರು ಕಡಿಮೆ ಮಾಡಲಿದೆ. ಇದು ದೇಹದಲ್ಲಿ ಫ್ರೀರ್ಯಾಡಿಕಲ್ ಅನ್ನು ಕಡಿಮೆ ಮಾಡಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ರಕ್ತವನ್ನು ತೆಳು ಮಾಡಿ ರಕ್ತಸಂಚಾರವನ್ನು ಸುಗಮಗೊಳಿಸುವುದು. ಶುಂಠಿ ನೀರಿನಿಂದ ಬೊಜ್ಜನ್ನು ಹೇಗೆ ಕರಗಿಸಬಹುದು ಎಂದು ತಿಳಿಯಲು ಮುಂದಕ್ಕೆ ಓದಿ...  

ginger

ಬೇಕಾಗುವ ಸಾಮಗ್ರಿಗಳು

*ಶುಂಠಿ (ಸುಮಾರು ಒಂದಿಂಚಿನಷ್ಟು ದೊಡ್ಡ ಹಸಿಶುಂಠಿಯನ್ನು ಸಿಪ್ಪೆ ಸುಲಿದು ಚಿಕ್ಕದಾಗಿ ಹೆಚ್ಚಿ. ಅಂದರೆ ಹೆಚ್ಚಿದ ಬಳಿಕ ಇದು ಒಂದು ದೊಡ್ಡ ಚಮಚಕ್ಕೆ ಕಡಿಮೆ ಇರಬಾರದು)

*ಸರಿಸುಮಾರು ಎರಡು ಲೀಟರ್ ನೀರು

Ginger Water Remedy To Burn Fat

ತಯಾರಿಸುವ ವಿಧಾನ

*ನೀರನ್ನು ಚೆನ್ನಾಗಿ ಕುದಿಸಿಕೊಂಡು ತುಂಡು ಮಾಡಿರುವ ಶುಂಠಿಯನ್ನು ಅದಕ್ಕೆ ಹಾಕಿ. ತದನಂತರ ಇದನ್ನು ಕುದಿಸಿದ ಬಳಿಕ ತೆಗೆದು ಶುಂಠಿಯನ್ನು ರುಬ್ಬಿಕೊಳ್ಳಿ. ಶುಂಠಿಯ ನೀರನ್ನು ತೆಗೆಯಿರಿ. ಈಗ ಅದು ಕುಡಿಯಲು ತಯಾರಾಗಿದೆ.

*ಶುಂಠಿ ನೀರು ಕೊಬ್ಬನ್ನು ಕರಗಿಸುವುದು ಮಾತ್ರವಲ್ಲದೆ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿ, ಕ್ಯಾನ್ಸರ್ ವಿರುದ್ಧ ಕೂಡ ಹೋರಾಡುವುದು

English summary

Ginger Water Remedy To Burn Fat From Hips, Thighs And Waist

Ginger water can be made in your kitchen and is considered as the best natural remedy to burn fat. This water is also known to detoxify your whole body and also get rid of that excess fat. Drinking water helps in easing the swelling, joint uneasiness and aggravation. Ginger water helps in diminishing this swelling in all aspects. Because viable cell inforcement and calming properties, ginger water can suppress the advancement of cancer growth.
Story first published: Monday, May 15, 2017, 23:33 [IST]
Subscribe Newsletter