ಸ್ನಾನ ಗೃಹವನ್ನು ಒಮ್ಮೆ ಪ್ರವೇಶಿಸಿ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಿ

By: Divya Pandith
Subscribe to Boldsky

ನಿತ್ಯ ಸ್ನಾನ ಮಾಡುವುದರಿಂದ ನಮ್ಮ ದೇಹದ ಕಲ್ಮಶವನ್ನು ತೆಗೆಯಬಹುದು. ಜೊತೆಗೆ ದೇಹದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಆಯುರ್ವೇದ ಚಿಕಿತ್ಸಾ ಕ್ರಮದಲ್ಲಿ ಸ್ನಾನಕ್ಕೆ ವಿಶೇಷ ಆಧ್ಯತೆ ನೀಡಿರುವುದನ್ನು ನಾವು ಗಮನಿಸಬಹುದು. ಸ್ನಾನದಲ್ಲಿಯೇ ವಿವಿಧ ಪರಿಗಳು ಹಾಗೂ ಅದರಿಂದ ಚಿಕಿತ್ಸಾ ಕ್ರಮಗಳಿರುವುದು ಆಯುರ್ವೇದದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ವಿಶೇಷ ಸ್ನಾನ ಪದ್ಧತಿಯಲ್ಲಿ ಬಿಸಿ ಹಬೆಯ ಸ್ನಾನವು ಒಂದು.

ವಾರದಲ್ಲಿ 4-7 ಬಾರಿ ಬಿಸಿ ಹಬೆಯ ಸ್ನಾನ ಮಾಡುವುದರಿಂದ ಶೇ. 50 ರಷ್ಟು ಅಧಿಕ ರಕ್ತದೊತ್ತಡದ ಅಪಾಯವನ್ನು ತಡೆಯಬಹುದು ಎನ್ನಲಾಗುತ್ತದೆ. ಅಲ್ಲದೆ ಅನಿರೀಕ್ಷಿತ ಹೃದಯಘಾತ ಉಂಟಾಗುವುದು, ರಕ್ತನಾಳದ ಸಮಸ್ಯೆ ಹಾಗೂ ಎಲ್ಲಾ ಕಾರಣದ ಮರಣಗಳನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಸಂಶೋಧಕರು ದೃಢಪಡಿಸಿದ್ದಾರೆ.

ಎಲಿವೇಟೆಡ್ ರಕ್ತದೊತ್ತಡ ಸಮಸ್ಯೆಯು ಹೃದಯ ರಕ್ತನಾಳದ ಕಾಯಿಲೆಗಳ ಅಪಾಯಕಾರಿ ಅಂಶಗಳಲ್ಲಿ ಒಂದು ಎಂದು ದಾಖಲಾಗಿದೆ. ಈಸ್ಟರ್ನ್ ಫಿನ್ಲ್ಯಾಂಡ್ ವಿಶ್ವವಿದ್ಯಾಲಯದ ಸಂಸೋಧಕರು ಹೇಳುವ ಪ್ರಕಾರ ಬಿಸಿ ಹಬೆಯ ಸ್ನಾನ ಮಾಡುವುದರಿಂದ ಆರೋಗ್ಯದಲ್ಲಿ ಅನುಕೂಲಕರ ಬದಲಾವಣೆ ಉಂಟಾಗುವುದನ್ನು ಗಮನಿಸಬಹುದು ಎಂದು ಹೇಳಿದ್ದಾರೆ. ಅಮೆರಿಕಾದ ಜರ್ನಲ್ ಆಫ್ ಹೈಪರ್ ಟೆನ್ಷನ್‍ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಫಿನ್‍ಲ್ಯಾಂಡ್‍ನಲ್ಲಿ 1.621 ಮಧ್ಯ ವಯಸ್ಸಿನ ಪುರುಷರ ಮೇಲೆ ಪ್ರಯೋಗ ಮಾಡಲಾಯಿತು. 

Sauna Baths

ಈ ಪರೀಕ್ಷೆಯಲ್ಲಿ ಅಧಿಕ ರಕ್ತದೊತ್ತಡದವರು ಹಾಗೂ ಕಡಿಮೆ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡಿತ್ತು. ಸ್ನಾನದ ಹವ್ಯಾಸಗಳಿಗನುಗುಣವಾಗಿ ಬಿಸಿ ಹಬೆಯ ಸ್ನಾನಕ್ಕೆ ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಒಂದು ವಾರದಲ್ಲಿ ಒಂದು ಬಿಸಿ ಹಬೆಯ ಸ್ನಾನ ತೆಗೆದುಕೊಳ್ಳುವವರ ಗುಂಪು ಒಂದು, ವಾರಕ್ಕೆ 2-3 ಬಾರಿ ಬಿಸಿ ಹಬೆಯ ಸ್ನಾನಕ್ಕೆ ಒಳಗಾಗುವವರ ಗುಂಪೊಂದು, ಹಾಗೂ 4-7 ಬಾರಿ ಸ್ನಾನ ಮಾಡುವವವರ ಗುಂಪೊಂದನ್ನಾಗಿ ವಿಂಗಡಿಸಲಾಗಿತ್ತು. ಇದರಲ್ಲಿ ಸರಾಸರಿ 15.5ರಷ್ಟು ಪುರುಷರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಹೊರ ಬಂದಿದ್ದರು.

ವಾರದಲ್ಲಿ 2-3 ಬಾರಿ ಸ್ನಾನ ಮಾಡಿದ ಪುರುಷರಲ್ಲಿ ಶೇ. 24ರಷ್ಟು ಅಧಿಕ ರಕ್ತದೊತ್ತಡ ಪ್ರಮಾಣ ಕಡಿಮೆಯಾಗಿತ್ತು. ವಾರದಲ್ಲಿ 4-7 ಬಾರಿ ಸ್ನಾನ ಮಾಡಿದವರಲ್ಲಿ ಶೇ. 46 ರಷ್ಟು ಅಧಿಕ ರಕ್ತದೊತ್ತಡ ಕಡಿಮೆಯಾಗಿತ್ತು. ಜೈವಿಕವಾದ ಈ ಪದ್ಧತಿ ಉತ್ತಮ ಪರಿಣಾಮವನ್ನುಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಬಿಸಿ ಹಬೆಯ ಸ್ನಾನದಲ್ಲಿ ದೇಹದ ಉಷ್ಣಾಂಶವು ಶೇ. 2 ಡಿಗ್ರಿ ಸೆಲ್ಸಿಯಸ್ ಡಿಗ್ರಿಗಳಷ್ಟು ಹೆಚ್ಚುವುದರಿಂದ ರಕ್ತನಾಳಗಳ ಹಿಗ್ಗುವಿಕೆ ಹಾಗೂ ರಕ್ತ ಸಂಚಾರ ಸುಗಮವಾಗಿ ಆಗುವುದು. 

blood pressure

ನಿಯಮಿತವಾಗಿ ಬಿಸಿ ಹಬೆಯ ಸ್ನಾನ ಮಾಡುವುದರಿಂದ ಎಂಡೋಥೀಲಿಯಲ್ ಕಾರ್ಯ ಸುಧಾರಿಸುತ್ತದೆ. ರಕ್ತನಾಳದೊಳಗೆ ಇರುವ ಪದರದ ಕಾರ್ಯವೂ ವ್ಯವಸ್ಥಿತವಾದ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಬೆವರುವ ಕ್ರಿಯೆಯಿಂದ ದೇಹದಲ್ಲಿರುವ ಅನವಶ್ಯಕ ದ್ರವವೂ ಹೊರಹೊಮ್ಮುತ್ತವೆ. ಇವು ಕಡಿಮೆ ಪ್ರಮಾಣದ ರಕ್ತದೊತ್ತಡಕ್ಕೆ ಕಾರಣವಾಗುತ್ತವೆ.

English summary

Frequent Sauna Baths May Keep Blood Pressure In Check: Study

Taking a sauna bath 4-7 times a week may reduce the risk of elevated blood pressure by nearly 50 per cent, a study has found. Researchers had previously shown that frequent sauna bathing reduces the risk of sudden cardiac death, and cardiovascular and all-cause mortality.
Subscribe Newsletter