ವ್ಯಾಯಮದ ಬಳಿಕ ಕಡೆಗಣಿಸಲೇಬೇಕಾದ ಆಹಾರಗಳು

By: Hemanth
Subscribe to Boldsky

ಕೆಲವರು ಜಿಮ್ ಹೋಗಿ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡು ತೂಕ ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಪ್ರಯತ್ನಿಸುವರು. ತಮ್ಮ ದೇಹ ಕಟ್ಟುಮಸ್ತಾಗಿ ಫಿಟ್ ಆಗಿರಬೇಕೆಂಬುವುದೇ ಅವರ ಇಚ್ಛೆಯಾಗಿದೆ. ಆದರೆ ಹೆಚ್ಚಿನವರು ಕೇವಲ ವ್ಯಾಯಾಮ ಮಾಡಿದರೆ ಮಾತ್ರ ಒಳ್ಳೆಯ ಕಟ್ಟುಮಸ್ತಾದ ದೇಹ ಸಿಗುವುದು ಎಂದು ಭಾವಿಸಿದ್ದಾರೆ. ಜಿಮ್ ಗೆ ಹೋಗುವವರು ಸರಿಯಾದ ಆಹಾರ ಕ್ರಮ ಪಾಲಿಸಿಕೊಂಡು ಹೋದರೆ ಮಾತ್ರ ದೇಹವು ಕಟ್ಟುಮಸ್ತಾಗಿರುವುದು. ವ್ಯಾಯಾಮಕ್ಕೆ ತೆರಳುವ ಮೊದಲು ಕೆಲವೊಂದು ಆಹಾರ ಸೇವನೆ ಮಾಡಬೇಕಾಗುತ್ತದೆ.

ಅದೇ ರೀತಿಯ ವ್ಯಾಯಾಮದ ಬಳಿಕವೂ ಆಹಾರ ಸೇವನೆ ಅತೀ ಅಗತ್ಯ. ನಮ್ಮ ದೇಹದಲ್ಲಿ ಅಂಗಾಂಗಗಳು ವ್ಯಾಯಾಮದಿಂದ ಆಯಾಸಗೊಂಡಿರುವುದರಿಂದ ಅವುಗಳನ್ನು ಉಲ್ಲಾಸೀತಗೊಳಿಸಲು ಆಹಾರ ಅತೀ ಅಗತ್ಯ. ಆದರೆ ಕೆಲವು ವ್ಯಾಯಾಮದ ಬಳಿಕ ಸಿಕ್ಕಿದೆಲ್ಲವನ್ನು ತಿನ್ನುವರು. ಇದು ಸರಿಯಲ್ಲ. ಇದರಿಂದ ದೇಹವು ಮತ್ತಷ್ಟು ತೂಕ ಹೆಚ್ಚಿಸಿಕೊಳ್ಳುವುದು. ನಿಮ್ಮ ದೇಹವು ಕ್ರಮಬದ್ಧವಾಗಿರಬೇಕೆಂದರೆ ಅದಕ್ಕೆ ಸರಿಯಾದ ಆಹಾರ ಕೂಡ ಅತೀ ಅಗತ್ಯ. ವ್ಯಾಯಾಮದ ಬಳಿಕ ಕಡೆಗಣಿಸಬೇಕಾದ ಕೆಲವೊಂದು ಆಹಾರಗಳ ಬಗ್ಗೆ ನಿಮಗೆ ಬೋಲ್ಡ್ ಸ್ಕೈ ತಿಳಿಸಲಿದೆ.

ಸೋಡಾ

ಸೋಡಾ

ವ್ಯಾಯಾಮದ ಬಳಿಕ ಸೋಡಾ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ಕಡೆಗಣಿಸಬೇಕು. ತುಂಬಾ ಕಠಿಣ ವ್ಯಾಯಾಮದ ಬಳಿಕ ದೇಹಕ್ಕೆ ಸರಿಯಾದ ತೇವಾಂಶ ಬೇಕಿರುತ್ತದೆ. ಆದರೆ ಸೋಡಾವು ದೇಹಕ್ಕೆ ತೇವಾಂಶ ನೀಡದು. ಇದರಿಂದ ಹೊಟ್ಟೆಯುಬ್ಬರ ಉಂಟಾಗಬಹುದು.

ಖಾರದ ಆಹಾರಗಳು

ಖಾರದ ಆಹಾರಗಳು

ಖಾರದ ಆಹಾರಗಳು ಯಾವತ್ತಿದ್ದರೂ ದೇಹಕ್ಕೆ ಒಳ್ಳೆಯದಲ್ಲ. ಅದರಲ್ಲೂ ವ್ಯಾಯಾಮದ ಬಳಿಕ ಇದನ್ನು ಸೇವಿಸಬೇಡಿ. ಇದು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುವುದು. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆ ಮೇಲೆ ಅತಿಯಾದ ಭಾರ ಬೀಳುವುದು. ದೇಹಕ್ಕೆ ವಿಶ್ರಾಂತಿ ನೀಡಬೇಕಾದ ಸಮಯದಲ್ಲಿ ಸರಿಯಾಗಿ ಜೀರ್ಣವಾಗುವಂತಹ ಆಹಾರ ಸೇವನೆ ಮಾಡಿ.

ಅಧಿಕ ಪ್ರೋಟೀನ್ ಇರುವ ಆಹಾರ

ಅಧಿಕ ಪ್ರೋಟೀನ್ ಇರುವ ಆಹಾರ

ಅಧಿಕ ಪ್ರೋಟೀನ್ ಇರುವಂತಹ ಆಹಾರ ಕೂಡ ಜೀರ್ಣಕ್ರಿಯೆಗೆ ಕಷ್ಟವಾಗುವುದು. ಇಂತಹ ಆಹಾರ ಜೀರ್ಣಿಸಿಕೊಳ್ಳುವುದು ಕಷ್ಟ. ಕಠಿಣ ವ್ಯಾಯಾಮದ ಬಳಿಕ ಹೊಟ್ಟೆಗೆ ವಿಶ್ರಾಂತಿ ಬೇಕಿರುವುದು. ವ್ಯಾಯಾಮದ ಮೂಲಕ ನೀವು ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾ ಇದ್ದರೆ ಕಾರ್ಬ್ರೋಹೈಡ್ರೇಟ್ಸ್ ಅಧಿಕವಾಗಿರುವ ಆಹಾರ ಸೇವಿಸಿ. ತೂಕ ಕಳೆದುಕೊಳ್ಳಲು ವ್ಯಾಯಾಮ ಮಾಡುತ್ತಲಿದ್ದರೆ ಸುಲಭವಾಗಿ ಜೀರ್ಣಿಸಿಕೊಳ್ಳುವ ಪ್ರೋಟೀನ್ ಯುಕ್ತ ಆಹಾರ ಸೇವಿಸಿ.

ಚಾಕಲೇಟ್ಸ್

ಚಾಕಲೇಟ್ಸ್

ವ್ಯಾಯಾಮದ ಬಳಿಕ ಚಾಕಲೇಟ್ ಸೇವನೆ ಮಾಡುವುದು ಆರೋಗ್ಯಕಾರಿ ಕ್ರಮವಲ್ಲ. ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಾ ಇದ್ದರೆ ವ್ಯಾಯಾಮದ ಬಳಿಕ ಚಾಕಲೇಟ್ ಸೇವನೆ ಮಾಡಬೇಡಿ. ಚಾಕಲೇಟ್ ನಲ್ಲಿರುವ ಕೊಬ್ಬಿನಿಂದಾಗಿ ಪ್ರೋಟೀನ್ ಹೀರಿಕೊಳ್ಳುವಿಕೆಯು ನಿಧಾನವಾಗುವುದು.

ಉಪ್ಪಿನ ಆಹಾರಗಳು

ಉಪ್ಪಿನ ಆಹಾರಗಳು

ಚಿಪ್ಸ್ ನಂತಹ ಉಪ್ಪಿನಾಂಶ ಹೆಚ್ಚಿಗೆ ಇರುವಂತಹ ಆಹಾರ ವ್ಯಾಯಾಮದ ಬಳಿಕ ಸೇವನೆ ಮಾಡಬಾರದು. ಹಲವಾರು ರೀತಿಯ ಅಧಿಕ ಉಪ್ಪು ಇರುವಂತಹ ಆಹಾರಗಳು ನಿಮ್ಮ ಕೈಗೆಟುಕಬಹುದು. ಆದರೆ ಇದು ಸರಿಯಲ್ಲ. ಯಾಕೆಂದರೆ ವ್ಯಾಯಾಮದ ಬಳಿಕ ಇಂತಹ ಆಹಾರವು ವ್ಯಾಯಾಮದ ಬಳಿಕ ಸರಿಯಾದ ಕೊಬ್ಬು ಬಿಡುಗಡೆ ಮಾಡದು ಮತ್ತು ವ್ಯಾಯಾಮದ ಬಳಿಕ ದೇಹದಲ್ಲಿ ಉಪ್ಪಿನಾಂಶ ಹೆಚ್ಚಾಗುವುದು.

ಸಕ್ಕರೆಯುಕ್ತ ಆಹಾರ

ಸಕ್ಕರೆಯುಕ್ತ ಆಹಾರ

ವ್ಯಾಯಾಮದ ಬಳಿಕ ಸೇವಿಸುವಂತಹ ಆಹಾರದಲ್ಲಿ ಕಾರ್ಬ್ರೋಹೈಡ್ರೇಟ್ಸ್ ಮತ್ತು ನಾರಿನಾಂಶವು ಹೆಚ್ಚಿರಬೇಕು. ಇದು ದೇಹದಲ್ಲಿ ಗ್ಲೈಕೋಜಿನ್ ನ್ನು ಪುನಃ ಸ್ಥಾಪಿಸುವುದು. ಅಧಿಕ ಸಕ್ಕರೆಯಂಶ ಇರುವಂತಹ ಆಹಾರಗಳಲ್ಲಿ ಅನಾರೋಗ್ಯಕರ ಕಾರ್ಬ್ರೋಹೈಡ್ರೇಟ್ಸ್, ಕೊಬ್ಬು ಮತ್ತು ಸಕ್ಕರೆಯು ಹೆಚ್ಚಿರುವುದು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು.

ಕರಿದ ಮೊಟ್ಟೆಗಳು

ಕರಿದ ಮೊಟ್ಟೆಗಳು

ಮೊಟ್ಟೆಗಳನ್ನು ಎಣ್ಣೆ ಅಥವಾ ಬೆಣ್ಣೆಯಲ್ಲಿ ಕರಿಯಲಾಗುತ್ತದೆ. ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುವುದು. ವ್ಯಾಯಮದ ಬಳಿಕ ಇದನ್ನು ಸೇವಿಸಿದರೆ ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು. ಬೇಯಿಸಿದ ಮೊಟ್ಟೆ ಅಥವಾ ಹಸಿ ಮೊಟ್ಟೆಯನ್ನು ಪ್ರೋಟೀನ್ ಶೇಕ್ ನೊಂದಿಗೆ ಸೇವಿಸಿ.

ಆಲ್ಕೋಹಾಲ್

ಆಲ್ಕೋಹಾಲ್

ವ್ಯಾಯಾಮದ ಬಳಿಕ ಆಲ್ಕೋಹಾಲ್ ಸೇವನೆ ಮಾಡಿದರೆ ಅದರಿಂದ ದೇಹದ ಮೇಲೆ ಕೆಟ್ಟ ಪರಿಣಾಮವಾಗುವುದು. ಆಲ್ಕೋಹಾಲ್ ದೇಹದಲ್ಲಿ ಮೂತ್ರವರ್ಧಕವಾಗಿ ಕೆಲಸ ಮಾಡುವುದು ಮತ್ತು ಯಾವುದೇ ಪ್ರಯೋಜನ ಬೀರದು. ವ್ಯಾಯಾಮದ ಬಳಿಕ ಸ್ನಾಯುಗಳ ಚೇತರಿಕೆಗೆ ತೊಂದರೆ ಉಂಟು ಮಾಡುವುದು.

ಹಸಿ ತರಕಾರಿಗಳು

ಹಸಿ ತರಕಾರಿಗಳು

ಹಸಿ ತರಕಾರಿಗಳು ತೂಕ ಕಳೆದುಕೊಳ್ಳಲು ಮತ್ತು ಆರೋಗ್ಯಕ್ಕೆ ಒಳ್ಳೆಯದು. ಆದರೆ ವ್ಯಾಯಾಮದ ಬಳಿಕ ಇದನ್ನು ಸೇವಿಸಬಾರದು. ವ್ಯಾಯಾಮದ ಬಳಿಕ ದೇಹವು ವಿಟಮಿನ್, ಖನಿಜಾಂಶ ಮತ್ತು ಪೋಷಕಾಂಶಗಳನ್ನು ಮರುಸ್ಥಾಪಿಸಲು ಪ್ರಯತ್ನಿಸುವುದು. ದೇಹಕ್ಕೆ ಬೇಕಾಗುವುದನ್ನು ಹಸಿ ತರಕಾರಿ ನೀಡುವುದಿಲ್ಲ.

ಅಧಿಕ ಕೊಬ್ಬಿನಾಂಶದ ಆಹಾರ

ಅಧಿಕ ಕೊಬ್ಬಿನಾಂಶದ ಆಹಾರ

ಕೊಬ್ಬಿನಾಂಶವಿರುವ ಆಹಾರವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ದೇಹಕ್ಕೆ ಬೇಕಿರುವಂತಹ ಅಗತ್ಯ ಪೋಷಕಾಂಶಗಳನ್ನು ವೇಗವಾಗಿ ಒದಗಿಸಲು ವಿಫಲವಾಗುವುದು. ಇದರಿಂದ ವ್ಯಾಯಾಮದ ಬಳಿಕ ಅಧಿಕ ಕೊಬ್ಬು ಇರುವ ಆಹಾರ ಸೇವಿಸಬೇಡಿ. ವ್ಯಾಯಾಮದ ಬಳಿಕ ಸರಿಯಾದ ಆಹಾರ ಸೇವನೆ ಮಾಡಿದರೆ ಬೇಕಾದ ಫಲಿತಾಂಶ ಪಡೆದುಕೊಳ್ಳಬಹುದು. ಮೇಲೆ ಹೇಳಿರುವಂತಹ ಆಹಾರಗಳನ್ನು ವ್ಯಾಯಾಮದ ಬಳಿಕ ಸೇವನೆ ಮಾಡಬೇಡಿ.

English summary

Foods You Should Strictly Avoid After A Workout

After a strenuous workout, we would probably feel elated that we have done something useful in life which is good for our body and we may be overwhelmed with a sense of satisfaction and achievement. We would also try to gobble the food, the first thing that our eyes set on. Post workout foods are absolutely necessary to restore your much needed energy, to build and repair the torn out muscle tissues and to give a boost in metabolism.
Subscribe Newsletter