Latest Updates
-
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ?
ಆಹಾರಕ್ರಮ ಹೀಗಿದ್ದರೆ, ದೇಹದ ಲಿವರ್‌ನ ಆರೋಗ್ಯಕ್ಕೆ ಬಹಳ ಒಳ್ಳೆಯದು..
ತಿನ್ನುವಂತಹ ಆಹಾರವು ಜಠರ ಸೇರಿಕೊಂಡು ಅಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆ ನಡೆಯುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ದೇಹದೊಳಗಿನ ಪ್ರತಿಯೊಂದು ಅಂಗಗಳು ಕೂಡ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಿ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳನ್ನು ಆಹಾರದಿಂದ ಹೀರಿಕೊಳ್ಳುವುದು. ನಾವು ತಿನ್ನುವಂತಹ ಆಹಾರವು ಯಕೃತ್ (ಲಿವರ್) ಮೂಲಕವಾಗಿ ಸಂಸ್ಕರಿಸಲ್ಪಡುವುದು. ಇದರಿಂದ ಯಕೃತ್‌ನ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ. ತಿನ್ನುವಂತಹ ಆಹಾರವು ಘಟಕಗಳಾಗಿ ದೇಹವನ್ನು ಶುದ್ಧೀಕರಿಸುವುದು.
ಯಕೃತ್‌ನ್ನು ದೇಹದ ತುಂಬಾ ಪರಿಣಾಮಕಾರಿ ಅಂಗವೆಂದು ಪರಿಗಣಿಸಲಾಗಿದೆ. ಯಕೃತ್ ಹಲವಾರು ರೀತಿಯ ಕಾರ್ಯಗಳನ್ನು ನಿರ್ವಹಿಸುವುದು. ಪ್ರೋಟೀನ್ , ಕೊಲೆಸ್ಟ್ರಾಲ್ ಮತ್ತು ಪಿತ್ತರಸ ಬಿಡುಗಡೆ, ವಿಟಮಿನ್, ಖನಿಜಾಂಶ ಮತ್ತು ಕಾರ್ಬೋಹೈಡ್ರೇಟ್ಸ್ ಗಳ ಶೇಖರಣೆ ಇದರ ಪ್ರಮುಖ ಕಾರ್ಯವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಯಕೃತ್‌ನ್ನು ಒಳ್ಳೆಯ ರೀತಿಯಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಕೆಲವು ವಿಷಕಾರಿಗಳನ್ನು ಯಕೃತ್ ವಿಘಟಿಸುವುದು. ಯಕೃತ್‌ನ ಆರೋಗ್ಯ ಕಾಪಾಡಲು ಮೊದಲು ಆದ್ಯತೆ ನೀಡಬೇಕಾಗಿದೆ. ಯಕೃತ್‌ನ ಆರೋಗ್ಯಕ್ಕೆ ಯಾವ ಆಹಾರ ಸೇವನೆ ಮಾಡಬೇಕು ಎಂಬ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ...

ಬೆಳ್ಳುಳ್ಳಿ ಮತ್ತು ಜೇನುತುಪ್ಪ
ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಎನ್ನುವ ಅಂಶವಿದ್ದು, ಯಕೃತ್ ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಆ್ಯಂಟಿಆಕ್ಸಿಡೆಂಟ್ ನ ಪ್ರಭಾವ ಹೆಚ್ಚಿಸಿ ದೇಹವನ್ನು ನಿರ್ವಿಷಗಳಿಸುವುದು. ಯಕೃತ್‌ಗೆ ಬೆಳ್ಳುಳ್ಳಿ ಅತ್ಯುತ್ತಮ ಆಹಾರ. ಇದರಲ್ಲಿ ಅರ್ಜಿನೈನ್ ಎನ್ನುವ ಅಮಿನೋ ಆಮ್ಲವಿದ್ದು, ಇದು ರಕ್ತನಾಳಗಳಿಗೆ ಆರಾಮ ನೀಡಿ ಯಕೃತ್ ನ ರಕ್ತದೊತ್ತಡ ಕಡಿಮೆ ಮಾಡುವುದು.

ಆಲಿವ್ ತೈಲ
ಎಕ್ಸ್ ಟ್ರಾ ವರ್ಜಿನ್ ಆಲಿವ್ ತೈಲವನ್ನು ಮಿತವಾಗಿ ಸೇವಿಸಿದಾಗ ಇದು ಯಕೃತ್‌ಗೆ ತುಂಬಾ ಒಳ್ಳೆಯದು. ದೇಹದಲ್ಲಿ ವಿಷ ಹೀರುವಂತಹ ಲಿಪಿಡ್ ಬೇಸ್ ನ್ನು ಇದು ನಿರ್ಮಿಸುವುದು. ಇದರಿಂದಾಗಿ ಇದು ಯಕೃತ್‌ನ ಕಾರ್ಯನಿರ್ವಹಣೆಗೆ ನೆರವಾಗುವುದು.

ಗಿಡಮೂಲಿಕೆ ಮತ್ತು ತರಕಾರಿಗಳು
ಹಸಿರೆಲೆ ತರಕಾರಿಗಳು ಯಕೃತ್ ಗೆ ತುಂಬಾ ಒಳ್ಳೆಯದು. ನಾವು ತಿನ್ನುವಂತಹ ಆಹಾರ ಮತ್ತು ವಾತಾವರಣದಿಂದ ದೇಹ ಸೇರುವ ಲೋಹ, ರಾಸಾಯನಿಕ ಮತ್ತು ಕೀಟನಾಶಗಳನ್ನು ಇದು ತಟಸ್ಥಗೊಳಿಸುವುದು. ಬಸಲೆ, ಬೀಟ್ ರೂಟ್, ಬ್ರಾಕೋಲಿ, ಹೂಕೋಸು ಮತ್ತು ಬ್ರಸಲ್ಸ್ ಮೊಗ್ಗುಗಳು ತುಂಬಾ ಒಳ್ಳೆಯದು.

ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಫ್ಲೆವನಾಯ್ಡ್ ಸಾವಯವ ಗುಂಪಿಗೆ ಸೇರಿದ ಕ್ಯಾಟ್ಚಿನ್ಸ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಇದೆ. ಇದು ದೇಹವನ್ನು ವಿವಿಧ ಬಗೆಯ ಕ್ಯಾನ್ಸರ್ ನಿಂದ ತಡೆಯುವುದು ಮತ್ತು ಯಕೃತ್‌ನ ಆರೋಗ್ಯ ಕಾಪಾಡುವುದು.

ಆಕ್ರೋಟ್
ಆಕ್ರೋಟ್ ನಲ್ಲಿ ಅಧಿಕ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ ಮತ್ತು ಆರೋಗ್ಯಕರ ಅಪರ್ಯಾಪ್ತ ಕೊಬ್ಬುಗಳು ಇವೆ. ಯಕೃತ್‌ನಲ್ಲಿ ಶೇಖರಣೆಯಾಗುವ ಕೊಬ್ಬು ತಡೆಯಲು ಇದು ನೆರವಾಗುವುದು. ಈ ಆರೋಗ್ಯಕರ ಕೊಬ್ಬುಗಳು ಯಕೃತ್ತಿನ ಕೋಶಗಳ ಸುತ್ತ ಬಲವಾದ ಜೀವಕೋಶದ ಪೊರಗಳ ನಿರ್ಮಾಣ ಮಾಡಲು ಅವಶ್ಯಕವಾಗಿದೆ.

ಸೇಬು
ಸೇಬಿನಲ್ಲಿ ಪೆಕ್ಟಿನ್ ಸಮೃದ್ಧವಾಗಿದ್ದು, ಇದು ದೇಹವನ್ನು ಶುದ್ಧೀಕರಿಸುವುದು ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿರುವ ವಿಷ ಹೊರಹಾಕುವುದು. ಇದರಿಂದ ಯಕೃತ್ ಮೇಲೆ ಉಂಟಾಗುವ ಭಾರ ಕಡಿಮೆ ಮಾಡಬಹುದು.

ಅರಿಶಿನ
ಅರಿಶಿನದಲ್ಲಿ ಕರ್ಕ್ಯುಮಿನ್ ಎನ್ನುವ ಅಂಶವಿದ್ದು, ಇದು ಪ್ರಮುಖ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣ ಹೊಂದಿದೆ. ಇದು ಪಿತ್ತರಸ ನಾಳವನ್ನು ರಕ್ಷಿಸಿ, ಪಿತ್ತರಸವು ಸರಾಗವಾಗಿ ಹರಿಯುವಂತೆ ಮಾಡಿ ಯಕೃತ್‌ನ್ನು ಶುದ್ಧೀಕರಿಸುವುದು. ಯಕೃತ್‌ನ ಆರೋಗ್ಯಕ್ಕೆ ಇದು ಅತ್ಯುತ್ತಮ ಆಹಾರವಾಗಿದೆ.



Click it and Unblock the Notifications
