ಹಿರಿಯರು ಇರುವ ಮನೆಯಲ್ಲಿ 'ಬಾತ್‌ರೂಮ್‌' ವಿಚಾರದಲ್ಲಿ ಜಾಗ್ರತೆ!

Posted By: Arshad
Subscribe to Boldsky

ನಿತ್ಯಕ್ರಿಯೆಗಳನ್ನು ಪೂರೈಸಲು ಮನೆಯಲ್ಲಿರುವ ಶೌಚಾಲಯ ಬಹಳ ಮುಖ್ಯವಾದ ಭಾಗವಾಗಿದೆ. ಹಿಂದಿನ ದಿನಗಳಲ್ಲಿ ಸ್ನಾನಕ್ಕೆಂದು ಸ್ನಾನಗೃಹ ಹಾಗೂ ಶೌಚಕ್ರಿಯೆಗೆ ಶೌಚಗೃಹಗಳನ್ನು ಮನೆಯಿಂದ ಕೊಂಚ ದೂರಕ್ಕಿರುವಂತೆ ನಿರ್ಮಿಸಲಾಗುತ್ತಿತ್ತು. ಈಗ ಸ್ಥಳಾವಕಾಶದ ಆಭಾವದಿಂದಾಗಿ ಮನೆಯಲ್ಲಿಯೇ ಇವೆರಡನ್ನೂ ಒಂದೇ ಸ್ಥಳದಲ್ಲಿರಿಸಲಾಗುತ್ತಿದೆ. ಅಲ್ಲದೇ ಮನೆಮಂದಿಯೆಲ್ಲಾ ಸತತವಾಗಿ ಬಳಸುತ್ತಲೇ ಇರುವ ಕಾರಣ ಈ ನೆಲ ಸದಾ ತೇವವಾಗಿಯೇ ಇರುತ್ತದೆ. 

ಮನೆಯ ಬಾತ್ ರೂಮ್‌ ಟೈಲ್ಸ್‌ಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಈ ನೆಲದ ಮೇಲೆ ಜಾರಿ ಬೀಳುವ ಸಾಧ್ಯತೆಯೂ ಹೆಚ್ಚು. ಅದರಲ್ಲೂ ಹಿರಿಯರಿಗೆ ಈ ಸಾಧ್ಯತೆ ಇನ್ನೂ ಹೆಚ್ಚು. ಕೆಲವೊಮ್ಮೆ ಜಾರಿ ಬೀಳುವ ಹೊಡೆತ ಕೈ ಕಾಲುಗಳನ್ನು ಮುರಿಯುವಂತಿದ್ದರೆ ಕೆಲವೊಮ್ಮೆ ತಲೆಗೆ ಬಿದ್ದ ಪೆಟ್ಟು ಪ್ರಾಣವನ್ನೇ ತೆಗೆಯಬಹುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಹಾಗೂ ಒಂದೇ ಸ್ನಾನಗೃಹವಿದ್ದರೆ ನಿಮ್ಮ ಮನೆಯ ಪ್ರತಿ ಸದಸ್ಯರೂ ಖಂಡಿತವಾಗಿಯೂ ತಿಳಿದಿರಲೇಬೇಕಾದ ಕೆಲವು ವಾಸ್ತವಾಂಶಗಳು ಇಲ್ಲಿವೆ.... 

ವಾಸ್ತವಾಂಶ #1

ವಾಸ್ತವಾಂಶ #1

ಸಮೀಕ್ಷೆಗಳ ಪ್ರಕಾರ ಹಿರಿಯ ನಾಗರಿಕರಲ್ಲಿ ಸುಮಾರು 33%ದಷ್ಟು 65ವರ್ಷ ದಾಟಿದ ಹಿರಿಯರು ವರ್ಷಕ್ಕೊಮ್ಮೆಯಾದರೂ ಸ್ನಾನಗೃಹದಲ್ಲಿ ಜಾರಿ ಬೀಳುತ್ತಾರೆ. ಆದ್ದರಿಂದ ಮನೆಯಲ್ಲಿ ಹಿರಿಯರಿದ್ದರೆ ಈ ಬಗ್ಗೆ ಜಾಗ್ರತೆ ವಹಿಸಬೇಕು.

ವಾಸ್ತವಾಂಶ #1

ವಾಸ್ತವಾಂಶ #1

ಸಮೀಕ್ಷೆಗಳ ಪ್ರಕಾರ ಹಿರಿಯ ನಾಗರಿಕರಲ್ಲಿ ಸುಮಾರು 33%ದಷ್ಟು 65ವರ್ಷ ದಾಟಿದ ಹಿರಿಯರು ವರ್ಷಕ್ಕೊಮ್ಮೆಯಾದರೂ ಸ್ನಾನಗೃಹದಲ್ಲಿ ಜಾರಿ ಬೀಳುತ್ತಾರೆ. ಆದ್ದರಿಂದ ಮನೆಯಲ್ಲಿ ಹಿರಿಯರಿದ್ದರೆ ಈ ಬಗ್ಗೆ ಜಾಗ್ರತೆ ವಹಿಸಬೇಕು.

ವಾಸ್ತವಾಂಶ #3

ವಾಸ್ತವಾಂಶ #3

ಇವುಗಳಲ್ಲಿ ಗಂಭೀರ ಸ್ವರೂಪದ ಪ್ರಕರಣಗಳು ಅತಿ ತುರ್ತು ಚಿಕಿತ್ಸೆಗೆ ಧಾವಿಸುವಷ್ಟು ಗಂಭೀರವಾಗಿವೆ. ಜಾರುವ ಸ್ನಾನಗೃಹದಲ್ಲಿ ವಿಶೇಷವಾಗಿ ಹಿರಿಯರು ಮುಂದೆ ಅಥವಾ ಪಕ್ಕಕ್ಕೆ ಜಾರಿ ಬೀಳುವುದಕ್ಕಿಂತಲೂ ಹಿಂದೆ ಜಾರಿ ಬಿದ್ದಾಗ ಪ್ರಾಣಾಪಾಯವುಂಟಾಗುವ ಆಘಾತವಾಗುವ ಸಾಧ್ಯತೆ ಹೆಚ್ಚು.

ವಾಸ್ತವಾಂಶ #4

ವಾಸ್ತವಾಂಶ #4

ಚಿಕ್ಕ ಪುಟ್ಟ ಗಾಯಗಳು, ಜಜ್ಜಿದ ಭಾಗಗಳು, ಮುರಿದ ಮೂಳೆ, ಬೆನ್ನುಮೂಳೆಯ ಸರಿತ ಇವೆಲ್ಲವೂ ಘಾತಕವಾದರೂ ಹಿಂಬದಿ ಬಿದ್ದಾಗ ತಲೆ ನೆಲಕ್ಕೆ ಬಡಿಯುವ ಆಘಾತ ಅತ್ಯಂತ ಭೀಕರವಾಗಿದ್ದು ಪ್ರಾಣಾಪಾಯ ಅತಿ ಹೆಚ್ಚಾಗಿರುತ್ತದೆ.

ವಾಸ್ತವಾಂಶ #4

ವಾಸ್ತವಾಂಶ #4

ಸಾಮಾನ್ಯವಾಗಿ ಈ ಜಾರುವಿಕೆಗಳು ಯಾವಾಗ ಸಂಭವಿಸುತ್ತವೆ? ಸಮೀಕ್ಷೆಯಲ್ಲಿ ಕಂಡುಕೊಂಡಂತೆ ಬಾತ್ ಟಬ್ ನಿಂದ ಹೊರಗೆ ಬರಲು ಏಳುವಾಗ, ಟಾಯ್ಲೆಟ್ ಕಮೋಡ್‌ನಲ್ಲಿ ಕುಳಿತುಕೊಳ್ಳಲು ಯತ್ನಿಸುವಾಗ, ಕುಳಿತಿದ್ದಾಗ ಕೊಂಚ ದೂರವಿರುವ ಟವೆಲ್ ಅಥವಾ ಬೇರೇನಾದರೂ ವಸ್ತುವನ್ನು ಕೈಗೆ ತೆಗೆದುಕೊಳ್ಳಲು ಬಾಗಿದಾಗ, ಅಥವಾ ನೆಲ ತೇವವಿರುವ ಅರಿವೇ ಇಲ್ಲದೇ ಮುಂದೆ ಅಡಿಯಿಟ್ಟಾಗ, ಕಾಲ ಕೆಳಗೆ ಸೋಪು ಅಥವಾ ಇನ್ನಾವುದೋ ಜಾರುವ ವಸ್ತುವಿದ್ದುದನ್ನು ಗಮನಿಸದೇ ಅಥವಾ ಗಮನಿಸಲು ಸಾಧ್ಯವಾಗದೇ ಪಾದ ಮುಂದೆ ಜಾರಿ ಹಿಮ್ಮುಖವಾಗಿ ಬಿದ್ದಾಗಲೆಲ್ಲಾ ಈ ಅಪಘಾತಗಳು ಸಂಭವಿಸುತ್ತವೆ.

ವಾಸ್ತವಾಂಶ #6

ವಾಸ್ತವಾಂಶ #6

ವೃದ್ಧಾಪ್ಯದಲ್ಲಿಯೇ ಇದು ಏಕೆ ಆವರಿಸುತ್ತದೆ? ಇದು ಸಾಮಾನ್ಯವೇ ಹೊರತು ಇಲ್ಲಿ ಬೀಳಲಿಕ್ಕೆ ವಯಸ್ಸಿನ ಮಿತಿಯಿಲ್ಲ. ಮಕ್ಕಳಿಂದ ಪ್ರಾರಂಭಗೊಂಡು ಮನೆಯ ಪ್ರತಿ ಸದಸ್ಯರೂ ಇಲ್ಲಿ ಜಾರಿ ಬೀಳುವ ಸಾಧ್ಯತೆಯನ್ನು ಹೊಂದಿರುತ್ತಾರೆ. ಆದರೆ ಹಿರಿಯರಲ್ಲಿ ಮೂಳೆಗಳು ಶಿಥಿಲವಾಗಿರುವುದು, ದೇಹದ ಮೇಲೆ ನಿಯಂತ್ರಣ ಪೂರ್ಣ ಪ್ರಮಾಣದಲ್ಲಿ ಇಲ್ಲದಿರುವುದು, ಕುಗ್ಗಿದ ಶಕ್ತಿ, ಮಂದವಾಗಿರುವ ದೃಷ್ಟಿ, ಮೊದಲಾದವು ಜಾರಿಬೀಳುವ ಸಂಭವವನ್ನು ಹೆಚ್ಚಿಸುತ್ತವೆ. ವಯಸ್ಸಾಗುತ್ತಾ ಹೋದಂತೆ ಸ್ವಾಸ್ಥ್ಯವೂ ಕುಗ್ಗುತ್ತಲೇ ಹೋಗುವುದರಿಂದ ಈ ಸಾಧ್ಯತೆಗಳೂ ಹೆಚ್ಚುತ್ತಾ ಹೋಗುತ್ತವೆ.

ವಾಸ್ತವಾಂಶ #7

ವಾಸ್ತವಾಂಶ #7

ಈ ಅಪಾಯಗಳನ್ನು ಕಡಿಮೆ ಮಾಡಲು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಮನೆಯ ಪ್ರತಿ ಸದಸ್ಯರಿಗೂ ಅಗತ್ಯವಾಗಿದೆ. ಸ್ನಾನಗೃಹದಲ್ಲಿರುವ ಬಲ್ಬ್ ಪ್ರಖರವಾಗಿರಬೇಕು ಹಾಗೂ ಸ್ನಾನಗೃಹಕ್ಕೆ ಒಳಹೋಗುವ ಮುನ್ನವೇ ಹೊರಗಿನಿಂದಲೇ ಸ್ವಿಚ್ ಬೆಳಗಿಸುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಒಂದು ವೇಳೆ ಸ್ವಿಚ್ ಒಳಗೇ ಇದ್ದು ಕತ್ತಲಲ್ಲಿ ಒಳಹೋದ ಬಳಿಕ ಸ್ವಿಚ್ ಆನ್ ಮಾಡುವುದಾದರೆ ಆದಷ್ಟು ಬೇಗ ಈ ಸ್ವಿಚ್ ಅನ್ನು ಹೊರಗೆ ಅಳವಡಿಸಿಕೊಳ್ಳಬೇಕು. ಸ್ನಾನಗೃಹದ ಒಳಗೆ ತೇವಾಂಶವನ್ನು ಹೀರಿಕೊಳ್ಳುವ ಕಾಲೊರೆಸು ಅಥವಾ ಬಾಥ್ ಮ್ಯಾಟ್ ಹಾಸಬೇಕು.

ಮುನ್ನೆಚ್ಚರಿಕೆ ಅನುಸರಿಸಿ...

ಮುನ್ನೆಚ್ಚರಿಕೆ ಅನುಸರಿಸಿ...

ಸ್ನಾನಗೃಹದ ನೆಲ ಸದಾ ಒಣಗಿರುವಂತೆ ಹಾಗೂ ಹರಿದ ನೀರು ಒಂದು ಸ್ವಲ್ಪವೂ ನಿಲ್ಲದೇ ಪೂರ್ಣವಾಗಿ ಹರಿದು ಹೋಗುವಂತಿರಬೇಕು. ಒಂದು ವೇಳೆ ನಿಲ್ಲುತ್ತಿದ್ದರೆ ಮೊದಲ ಪ್ರಾಶಸ್ಥ್ಯದಲ್ಲಿ ಕೊಂಚ ಖರ್ಚಾದರೂ ಸರಿ, ಸರಿ ಮಾಡಿಸಬೇಕು. ಸಾಧ್ಯವಾದರೆ ಈಗ ಲಭ್ಯವಿರುವ ಆಂಟಿ ಸ್ಲಿಪ್ ಟೈಲುಗಳನ್ನು ಅಳವಡಿಸಿ. ಕೊಂಚ ದುಬಾರಿಯಾದರೂ ಸರಿಯೇ, ಎಲ್ಲರ ಆರೋಗ್ಯದ ರಕ್ಷಣೆಗೆ ಇದು ಅಗತ್ಯ. ಹಿರಿಯರಿಗೆ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಗೋಡೆಗಳಲ್ಲಿ ಬಲಿಷ್ಠವಾದ ಸ್ಟ್ಯಾಂಡುಗಳನ್ನು ಅಳವಡಿಸಬೇಕು. ಕುಳಿತ ಬಳಿಕ ಎದ್ದು ನಿಲ್ಲಲು ಕಷ್ಟಪಡುವ ಹಿರಿಯರಿದ್ದರೆ ಮೇಲಿನಿಂದ ಒಂದು ಹಗ್ಗವನ್ನು ತೂಗು ಹಾಕುವ ಮೂಲಕ ನಿಲ್ಲಲು ಸಹಾಯವಾಗುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Facts About Bathroom Falls And Injuries Among The Elderly

    Though bathroom is the place to relax and unwind, it can also turn into a dangerous place especially due to the slipperiness of the floor. Wet floor can even take lives! Though none of us bother much about bathroom safety tips, as we age, the risk of slipping and falling in the bathroom increases. Here are some facts you should know about bathroom hazards especially if you have elderly people at home.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more