For Quick Alerts
ALLOW NOTIFICATIONS  
For Daily Alerts

  ಹೌದು ಸ್ವಾಮಿ, ಇಂತಹ ಸಮಸ್ಯೆಗಳೆಲ್ಲಾ ಪುರುಷರಿಗೆಯೇ ಹೆಚ್ಚಾಗಿ ಕಾಡುತ್ತದೆ!

  By Lekhaka
  |

  ಆರೋಗ್ಯ ಸಮಸ್ಯೆ ಎನ್ನುವುದು ಜಾತಿ, ಲಿಂಗ ಕೇಳಿಕೊಂಡು ಬರುವುದಿಲ್ಲ. ಯಾವುದೇ ರೀತಿಯ ಅನಾರೋಗ್ಯವಾದರೂ ಅದು ಎಲ್ಲರನ್ನು ಬಾಧಿಸುವುದು. ಆದರೆ ಕೇವಲ ಮಹಿಳೆಯರು ಹಾಗೂ ಇನ್ನು ಕೆಲವೊಂದು ರೋಗಗಳು ಕೇವಲ ಪುರುಷರಲ್ಲಿ ಮಾತ್ರ ಕಾಣಿಸಿಕೊಳ್ಳುವುದು. ಕೆಲವೊಂದಕ್ಕೆ ವೈದ್ಯರ ಚಿಕಿತ್ಸೆ ಅತೀ ಅಗತ್ಯವಾಗಿರುವುದು. ಇನ್ನು ಕೆಲವನ್ನು ಮನೆಮದ್ದಿನಿಂದ ಕೂಡ ನಿವಾರಣೆ ಮಾಡಬಹುದು.

  ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಶೀಘ್ರಸಲ್ಖನ ಮತ್ತು ದೇಹದಿಂದ ಬರುವಂತಹ ದುರ್ಗಂಧಗಳು ಈ ಹಲವಾರು ಸಮಸ್ಯೆಗಳು ಇದ್ದೇ ಇರುತ್ತದೆ. ಆದರೆ ಕೆಲವು ಕಾಯಿಲೆಗಳಿಗೆ ತಕ್ಷಣ ವೈದ್ಯರ ನೆರವು ಪಡೆಯದೆ ಹೋದರೆ ಅದರ ಪರಿಣಾಮ ಭಿನ್ನವಾಗಿರುವುದು. ಈ ಲೇಖನದಲ್ಲಿ ಕೆಲವೊಂದು ಕಾಯಿಲೆಗಳ ಬಗ್ಗೆ ತಿಳಿಸಲಾಗಿದೆ ಮತ್ತು ಅದಕ್ಕೆ ಚಿಕಿತ್ಸೆ ಪಡೆದುಕೊಂಡು ಸಾಮಾನ್ಯ ಜೀವನ ಸಾಗಿಸಿ ಎನ್ನುವುದೇ ನಮ್ಮ ಉದ್ದೇಶ. ಪುರುಷರಲ್ಲಿ ಕಾಣಿಸಿಕೊಳ್ಳುವ ಕೆಲವು ಆರೋಗ್ಯ ಸಮಸ್ಯೆ ಬಗ್ಗೆ ತಿಳಿಯಲು ಮುಂದೆ ಓದಿ...

  ಪದೇ ಪದೇ ಮೂತ್ರವಿಸರ್ಜನೆ

  ಪದೇ ಪದೇ ಮೂತ್ರವಿಸರ್ಜನೆ

  ವಯಸ್ಸಾಗುತ್ತಾ ಇರುವಂತೆ ಜನನೇಂದ್ರಿಯದ ನಾಳವು ದೊಡ್ಡದಾಗುವ ಸಮಸ್ಯೆ ಕಾಣಿಸುವುದು. ಇದರಿಂದ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ನೀವು ಯಾರೊಂದಿಗಾದರೂ ಹೊರಗಡೆ ತಿರುಗಾಡಲು ಹೋದರೆ ಇದು ತುಂಬಾ ಮುಜುಗರ ಉಂಟು ಮಾಡುವುದು. ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ಇಂತಹ ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು

  ಜೇನುತುಪ್ಪ ಹಾಗೂ ತುಳಸಿ

  ಜೇನುತುಪ್ಪ ಹಾಗೂ ತುಳಸಿ

  ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆಗೆ ಮತ್ತೊ೦ದು ಪರಿಹಾರೋಪಾಯ. ಬೆಳಗ್ಗೆ ಖಾಲಿ ಹೊಟ್ಟೆಗೆ ಮೂರರಿ೦ದ ನಾಲ್ಕು ತುಳಸಿ ಎಲೆಗಳೊ೦ದಿಗೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇವಿಸಿರಿ. ಪ್ರತಿದಿನವೂ ಈ ಪರಿಹಾರೋಪಾಯವನ್ನು ಅನುಸರಿಸಿದಲ್ಲಿ, ಖ೦ಡಿತವಾಗಿಯೂ ಇದು ನಿಮ್ಮ ಸಮಸ್ಯೆಯನ್ನು ಕೊನೆಗಾಣಿಸುತ್ತದೆ.

   ಪ್ರತಿದಿನವೂ ಮೊಸರನ್ನು ಸೇವಿಸಿರಿ

  ಪ್ರತಿದಿನವೂ ಮೊಸರನ್ನು ಸೇವಿಸಿರಿ

  ಊಟದೊ೦ದಿಗೆ ಪ್ರತಿದಿನವೂ ಮೊಸರನ್ನು ಸೇವಿಸಿರಿ. ನಿಮ್ಮ ಮೂತ್ರಕೋಶಕ್ಕೆ ದಾಳಿಯನ್ನು೦ಟು ಮಾಡಿ, ಅಲ್ಲಿ ಆಶ್ರಯವನ್ನು ಪಡೆದು ಬೆಳೆಯುವ ಅಪಾಯಕಾರಿ ಸೂಕ್ಷ್ಮಾಣುಜೀವಿಗಳನ್ನು ಮೊಸರಿನಲ್ಲಿ ಅಡಕವಾಗಿರುವ ಪ್ರೋಬಯಾಟಿಕ್ ಗಳು ತಡೆಯುತ್ತವೆ.

  ಅಪಸಾಮಾನ್ಯ ನಿಮಿರುವಿಕೆ

  ಅಪಸಾಮಾನ್ಯ ನಿಮಿರುವಿಕೆ

  ಇದು ಪುರುಷರಿಗೆ ತುಂಬಾ ಗಂಭೀರ ಸಮಸ್ಯೆ ಉಂಟು ಮಾಡುವಂತಹ ಕಾಯಿಲೆಯಾಗಿದೆ. ನಿಮ್ಮ ಅಂಗಾಂಗವು ನಿಮ್ಮ ಹಿಡಿತದಲ್ಲಿ ಇಲ್ಲದೆ ಇರುವಾಗ ಹಾಸಿಗೆ ಖಂಡಿತವಾಗಿಯೂ ನಿಮಗೆ ಮುಜುಗರವಾಗಲಿದೆ. ಇದಕ್ಕೆ ನೀವು ವೈದ್ಯಕೀಯ ನೆರವು ಪಡೆದರೆ ಒಳ್ಳೆಯದು. ಮಧುಮೇಹ ಅಥವಾ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಹೀಗೆ ಆಗಬಹುದು.

  ಶೀಘ್ರ ಸಲ್ಖನ

  ಶೀಘ್ರ ಸಲ್ಖನ

  ಇದು ಪುರುಷರಲ್ಲಿನ ಆತ್ಮವಿಶ್ವಾಸದ ಮಟ್ಟವನ್ನು ಕಸಿದುಹಾಕುವುದರಲ್ಲಿ ಸಂಶಯವೇ ಇಲ್ಲ. ಆತಂಕ ಮತ್ತು ಒತ್ತಡವು ಇದಕ್ಕೆ ಕಾರಣವಾಗಿರಬಹುದು. ಜಾಹೀರಾತು ನೋಡಿಕೊಂಡು ನೀವೇ ಪ್ರಯತ್ನ ಮಾಡುವ ಬದಲು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ಇನ್ನು ಶೀಘ್ರ ಸಲ್ಖನಕ್ಕೆ ಒಂದಿಷ್ಟು ನೈಸರ್ಗಿಕ ಪರಿಹಾರಗಳನ್ನು ಸೂಚಿಸಿದ್ದೇವೆ, ಮುಂದೆ ಓದಿ...

  ಹಸಿ ಬೆಳ್ಳುಳ್ಳಿ

  ಹಸಿ ಬೆಳ್ಳುಳ್ಳಿ

  ಹಸಿ ಬೆಳ್ಳುಳ್ಳಿಯು ಗಂಡಸರಲ್ಲಿ ಶೀಘ್ರ ವೀರ್ಯ ಸ್ಖಲನ ಹಾಗು ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತದೆ. 3-4 ಬೆಳ್ಳುಳ್ಳಿಯ ತುಣುಕುಗಳನ್ನು ಜಗಿಯುವುದರಿಂದ ಶೀಘ್ರ ವೀರ್ಯ ಸ್ಖಲನದ ಸಮಸ್ಯೆಯಲ್ಲಿ ಗಣನೀಯವಾದ ಪರಿಹಾರವನ್ನು ನೀವು ಕಾಣಬಹುದಾಗಿದೆ. ಇದರ ಜೊತೆಗೆ ನಿಮ್ಮ ಆರೋಗ್ಯವು ಸಹ ಸುಧಾರಿಸುತ್ತದೆ. ಬೆಳ್ಳುಳ್ಳಿಯನ್ನು ಶುದ್ಧವಾದ ಹಸುವಿನ ತುಪ್ಪದಲ್ಲಿ ಕರಿದು ಸಹ ಬಳಸಬಹುದು. ಏಕೆಂದರೆ ತುಪ್ಪದಲ್ಲಿ ಕರಿದ ನಂತರವು ಬೆಳ್ಳುಳ್ಳಿಯಲ್ಲಿರುವ ಕಾಮೋತ್ತೇಜಕ ಗುಣಗಳು ಅದರಿಂದ ಹೋಗಲಾರವು. ಬೆಳ್ಳುಳ್ಳಿಯು ಜನನಾಂಗದ ನಿಮಿರುವುಕೆಯಲ್ಲಿರುವ ಲೋಪ ದೋಷಗಳನ್ನು ಸರಿಪಡಿಸುತ್ತದೆ ಮತ್ತು ಶೀಘ್ರ ವೀರ್ಯಸ್ಖಲನದ ಸಮಸ್ಯೆಯನ್ನು ದೂರಮಾಡುತ್ತದೆ.

  ಈರುಳ್ಳಿಗಳು

  ಈರುಳ್ಳಿಗಳು

  ಹಸಿರು ಈರುಳ್ಳಿಯ ಬೀಜಗಳು ಅತ್ಯುತ್ತಮವಾದ ಕಾಮೋತ್ತೇಜಕ ಗುಣಗಳನ್ನು ಹೊಂದಿದ್ದಾವೆ. ಇದರಿಂದಾಗಿ ಇವು ಶೀಘ್ರ ವೀರ್ಯ ಸ್ಖಲನವನ್ನು ತಡೆಗಟ್ಟಿ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅದಕ್ಕಾಗಿ ಒಂದು ಚಮಚದಷ್ಟು ಹಸಿರು ಈರುಳ್ಳಿಯ ಬೀಜಗಳನ್ನು ತೆಗೆದುಕೊಂಡು, ಅದನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ. ಇವುಗಳನ್ನು ಚೆನ್ನಾಗಿ ಕಲೆಸಿ ಪ್ರತಿ ಬಾರಿ ಊಟ ಮಾಡುವ ಮುನ್ನ ಇದನ್ನು ಸೇವಿಸಿ. ಇದರಿಂದ ನಿಮ್ಮ ದೇಹದ ಶಕ್ತಿ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ನೀವು ನಿಮ್ಮ ವೀರ್ಯ ಸ್ಖಲನವನ್ನು ಹತೋಟಿಯಲ್ಲಿಡಬಹುದು. ಬಿಳಿ ಈರುಳ್ಳಿಗಳು ಸಹ ಅತ್ಯುತ್ತಮವಾದ ಕಾಮೋತ್ತೇಜಕ ಗುಣಗಳನ್ನು ತಮ್ಮಲ್ಲಿ ಹೊಂದಿವೆ. ಇವು ನಿಮ್ಮ ಜನನಾಂಗಗಳನ್ನು ಸದೃಢಗೊಳಿಸಿ ಶೀಘ್ರ ವೀರ್ಯ ಸ್ಖಲನವನ್ನು ತಡೆಯುತ್ತವೆ. ಇದರಲ್ಲಿರುವ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಲು ಈರುಳ್ಳಿಗಳನ್ನು ಹಸಿಯಾಗಿ ಸೇವಿಸಿ ಸಾಕು.

  ಬಾಯಿ ವಾಸನೆ

  ಬಾಯಿ ವಾಸನೆ

  ಮಹಿಳೆಗೆ ಮುತ್ತಿಕ್ಕಲು ನೋಡುವಾಗ ಅಥವಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಾಗ ಬಾಯಿಯಿಂದ ಕೆಟ್ಟ ವಾಸನೆ ಬಂದರೆ ಅದು ತುಂಬಾ ಮುಜುಗರ ಉಂಟು ಮಾಡುವುದು. ಆಹಾರ ಅಥವಾ ಬಾಯಿಯ ಕೆಟ್ಟ ಆರೈಕೆಯಿಂದಾಗಿ ಹೀಗೆ ಆಗಬಹುದು. ದಂತವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ... ಬಾಯಿ ವಾಸನೆಗೆ ಒಂದಿಷ್ಟು ಸಿಂಪಲ್ ಟಿಪ್ಸ್

  ಲವಂಗ

  ಲವಂಗ

  ಲವಂಗದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅಗಾಧವಾಗಿದೆ. 1-2 ಲವಂಗ ತೆಗೆದುಕೊಂಡು ಅದನ್ನು ಸರಿಯಾಗಿ ಜಗಿಯಿರಿ. ಇದು ಬಾಯಿ ವಾಸನೆಯನ್ನು ಬೇಗನೆ ನಿವಾರಿಸುವುದು.

  ಮೆಂತೆ ಕಾಳು

  ಮೆಂತೆ ಕಾಳು

  ಒಂದೆರಡು ಚಮಚ ಮೆಂತೆ ಕಾಳನ್ನು ಚೆನ್ನಾಗಿ ಬೇಯಿಸಿ ಅದರ ನೀರನ್ನು ಸೋಸಿಕೊಳ್ಳಿ. ಈ ನೀರನ್ನು ದಿನದಲ್ಲಿ ಒಂದು ಸಲ ಚಹಾದಂತೆ ಕುಡಿಯಿರಿ. ಬಾಯಿ ವಾಸನೆ ಇರುವ ತನಕ ಇದನ್ನು ಮುಂದುವರಿಸಿ.

  ಬಟ್ ಮೊಡವೆ

  ಬಟ್ ಮೊಡವೆ

  ನಿಮ್ಮ ಪುರುಷ ದೇಹವನ್ನು ತೋರಿಸಬೇಕೆಂದು ಎಲ್ಲ ಬಟ್ಟೆಗಳನ್ನು ಬಿಚ್ಚುತ್ತೀರಿ. ಆದರೆ ಬಟ್ ಮೊಡವೆ ಇರುವಾಗ ಇದು ಸಾಧ್ಯವಾಗುವುದಿಲ್ಲ. ಈ ಚರ್ಮದ ಸಮಸ್ಯೆಗೆ ಮನೆಮದ್ದು ಬಳಸಬಹುದು ಅಥವಾ ಚರ್ಮವೈದ್ಯರಿಂದ ಚಿಕಿತ್ಸೆ ಪಡೆಯಬಹುದು.

  ಕೆಟ್ಟ ವಾಯು

  ಕೆಟ್ಟ ವಾಯು

  ಅಜೀರ್ಣ ಮತ್ತು ಹೊಟ್ಟೆಯುಬ್ಬರ ಕಾಣಿಸಿಕೊಂಡಾಗ ಕೆಟ್ಟ ವಾಯು ಹೊರಗಡೆ ಹೋಗುವುದು ಸಾಮಾನ್ಯ. ಆದರೆ ಸಾಮಾಜಿಕ ಪರಿಸ್ಥಿತಿಗಳಲ್ಲಿ ಇದು ನಿಮಗೆ ಮುಜಗರ ಉಂಟು ಮಾಡಬಹುದು.

  ಬಿಯರ್ ಹೊಟ್ಟೆ

  ಬಿಯರ್ ಹೊಟ್ಟೆ

  ಬಿಯರ್ ಹೊಟ್ಟೆಯನ್ನು ಕರಗಿಸಬೇಕೆಂದರೆ ನೀವು ಮೊದಲಾಗಿ ಬಿಯರ್ ಮತ್ತು ಜಂಕ್ ಫುಡ್ ತ್ಯಜಿಸಬೇಕು. ಕ್ಯಾಲರಿ ಕಡಿಮೆ ಇರುವ ಆಹಾರ ಸೇವನೆ ಮಾಡಿ ಹೆಚ್ಚಿನ ವ್ಯಾಯಾಮ ಮಾಡಿದರೆ ಹೊಟ್ಟೆ ಕರಗಿಸಬಹುದು. ಮುಜುಗರ ಉಂಟು ಮಾಡುವ ಈ ಸಮಸ್ಯೆ ನಿವಾರಣೆ ಅತೀ ಅಗತ್ಯ.

  ತುರಿಕೆ

  ತುರಿಕೆ

  ದೇಹದ ಯಾವುದೇ ಭಾಗದಲ್ಲಾದರೂ ತುರಿಕೆ ಕಾಣಿಸಿಕೊಂಡರೆ ಅದಕ್ಕಿಂತ ಅಸಹನೀಯ ವಿಷಯ ಮತ್ತೊಂದಿಲ್ಲ. ಅದರಲ್ಲೂ ಹುಡುಗಿ ಜತೆಗಿದ್ದಾಗ ತುರಿಕೆ ಕಾಣಿಸಿದರೆ ಆಗ ದೇವರೇ ಗತಿ. ಶಿಲೀಂಧ್ರಿಯಗಳಿಂದ ಉಂಟಾಗುವ ಸೋಂಕಿನ ನಿವಾರಣೆಗೆ ವೈದ್ಯರನ್ನು ಸಂಪರ್ಕಿಸಿ.

  ನಪುಂಸಕತೆ

  ನಪುಂಸಕತೆ

  ಅಸಾಮಾನ್ಯ ನಿಮಿರುವಿಕೆಯು ನಪುಂಸಕತೆಗಿಂತ ಸ್ವಲ್ಪ ಭಿನ್ನ. ನಿಮ್ಮ ವೀರ್ಯದ ಗಣತಿ ಕಡಿಮೆಯಿದ್ದರೆ ಮತ್ತು ನೀವು ಮಹಿಳೆಯರನ್ನು ಗರ್ಭಿಣಿಯಾಗಿ ಮಾಡಲು ಅಸಮರ್ಥರಾದರೆ ಆಗ ನೀವು ನಪುಂಸಕತೆಯಿಂದ ಬಳಲುತ್ತಿದ್ದೀರಿ ಎಂದು ಹೇಳಬಹುದು. ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ.

  ದೇಹದ ದುರ್ಗಂಧ

  ದೇಹದ ದುರ್ಗಂಧ

  ನಿಮ್ಮ ದೇಹದಿಂದ ದುರ್ಗಂಧ ಬರುತ್ತಾ ಇದ್ದರೆ ಆಗ ಮಹಿಳೆಯನ್ನು ಅಪ್ಪಿ ಹಿಡಿಯಲು ನಿಮಗೆ ಮುಜುಗರವಾಗುವುದು. ದುರ್ಗಂಧ ನಿಲ್ಲಿಸುವಂತಹ ಕೆಲವೊಂದು ಡಿಯೋಡ್ರೆಂಟ್ ಅಥವಾ ಪರ್ಫ್ಯೂಮ್ ಬಳಸಿದರೆ ತಾತ್ಕಾಲಿಕ ಪರಿಹಾರ ಸಿಗುವುದು. ಈ ಸಮಸ್ಯೆಗೆ ನಿಖರ ಕಾರಣ ತಿಳಿಯಲು ವೈದ್ಯರನ್ನು ಸಂಪರ್ಕಿಸಿದರೆ ಒಳ್ಳೆಯದು.

  English summary

  Embarrassing Health Problems Of Men

  There are some embarrassing health issues that men generally suffer. Some of them could be due to medical reasons and may need a doctor's help whereas some of them could be minor issues which can treated by home remedies.It could be your clogged arteries which betray you when you are in bed or your mouth odour that may turn her off just when you try to brush her lips with yours; certain health conditions may embarrass you terribly.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more