ಖತರ್ನಾಕ್ 'ಅಪೆಂಡಿಕ್ಸ್‌' ರೋಗವನ್ನು ನಿಯಂತ್ರಿಸುವ ಮನೆಮದ್ದುಗಳು

Posted By: manu
Subscribe to Boldsky

ಅಪೆಂಡಿಕ್ಸ್ ಆಗಿದೆಯಂತೆ, ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎನ್ನುವ ಮಾತನ್ನು ನಾವು ಹಲವು ಮಂದಿಯಿಂದ ಕೇಳಿರುತ್ತೇವೆ. ಆದರೆ ಈ ಅಪೆಂಡಿಕ್ಸ್(ಕರುಳುವಾಳ) ಎಂದರೇನು ಎನ್ನುವ ಬಗ್ಗೆ ಹಲವರಲ್ಲಿ ಯಕ್ಷ ಪ್ರಶ್ನೆಯಿದೆ. ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನೀವು ಈ ಲೇಖನವನ್ನು ಓದಲೇಬೇಕು. ಯಾಕೆಂದರೆ ಬೋಲ್ಡ್ ಸ್ಕೈ ಅಪೆಂಡಿಕ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಅದನ್ನು ಉಪಚರಿಸಲು ಬೇಕಾಗಿರುವ ಕೆಲವೊಂದು ಮನೆಮದ್ದುಗಳನ್ನು ನಿಮಗೆ ಹೇಳಿಕೊಡಲಿದೆ.

ಅಪೆಂಡಿಕ್ಸ್ ಎನ್ನುವುದು ದೇಹದ ಪ್ರಮುಖ ಅಂಗವಾಗಿದೆ. ಇದು ದೊಡ್ಡ ಕರುಳಿನಿಂದ ಹೊರಬರುವ ಒಂದು ಅಂಗ ಮತ್ತು ಹೊಟ್ಟೆಯ ತುಂಬಾ ಕೆಳಭಾಗದಲ್ಲಿ ಇರುತ್ತದೆ. ಅಪೆಂಡಿಕ್ಸ್ ಇಲ್ಲದೆಯೂ ದೇಹ ಕಾರ್ಯನಿರ್ವಹಿಸಬಲ್ಲದು ಎಂದು ಹಲವಾರು ಸಂಶೋಧನೆಗಳು ಹೇಳಿವೆ. ಆದರೆ ಇದುವರೆಗೆ ಇದು ದೃಢಪಟ್ಟಿಲ್ಲ. ಅಪೆಂಡಿಕ್ಸ್‌ನಲ್ಲಿ ಅತಿಯಾದ ಉರಿಯೂತ ಮತ್ತು ಬಾಹು ಕಾಣಿಸಿಕೊಂಡಾಗ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ   'ಅಪೆಂಡಿಕ್ಸ್' ಎಂಬ ದಿಢೀರ್ ರೋಗ! ಇದರ ಲಕ್ಷಣಗಳೇನು?

ಹೀಗೆ ಆದಾಗ ಹೊಟ್ಟೆಯನೋವು, ಜ್ವರ, ವಾಂತಿ ಮತ್ತು ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಅಪೆಂಡಿಕ್ಸ್ ಗೆ ಸರಿಯಾದ ಚಿಕಿತ್ಸೆ ನೀಡದೇ ಇದ್ದರೆ ಅದು ಹೊಡೆದು ಹೋಗಬಹುದು. ಇಂತಹ ಸಂದರ್ಭದಲ್ಲಿ ಇದು ಗಂಭೀರ ಸಮಸ್ಯೆಯನ್ನು ಉಂಟು ಮಾಡಬಹುದು. ಈ ರೋಗ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅತೀ ಅಗತ್ಯ. ಇಂದಿನ ಲೇಖನದಲ್ಲಿ ಅಪೆಂಡಿಕ್ಸ್‌ನಿಂದ ಆದ ನೋವನ್ನು ಕಡಿಮೆ ಮಾಡಲು ಕೆಲವು ಮನೆಮದ್ದನ್ನು ಬಳಸಬಹುದು. ಆದರೆ ಇದುವೇ ಅಂತಿಮ ಚಿಕಿತ್ಸೆಯಲ್ಲ...ವೈದ್ಯರ ಬಳಿ ಹೋಗಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ....

ಉಗುರು ಬೆಚ್ಚಗಿನ ಬಿಸಿ ನೀರು

ಉಗುರು ಬೆಚ್ಚಗಿನ ಬಿಸಿ ನೀರು

ಅಪೆಂಡಿಕ್ಸ್‌ನ ಚಿಕಿತ್ಸೆಗೆ ಉಗುರು ಬೆಚ್ಚಗಿನ ಬಿಸಿ ನೀರು ಪ್ರಮುಖಪಾತ್ರ ವಹಿಸಲಿದೆ. ಬಿಸಿ ನೀರು ರೋಗಿಯ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದರೊಂದಿಗೆ ಕರುಳನ್ನು ಸ್ವಚ್ಛಗೊಳಿಸುತ್ತದೆ. ಕರುಳಿನಲ್ಲಿ ವಿಷ ತುಂಬಿರುವ ಕಾರಣದಿಂದ ಕರುಳಿನಲ್ಲಿ ಉರಿಯೂತ ಉಂಟಾಗುತ್ತದೆ. ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹಕ್ಕೆ ಶಮನ ನೀಡುವುದು.

ಹೆಸರುಕಾಳು

ಹೆಸರುಕಾಳು

‌ಅಪೆಂಡಿಕ್ಸ್‌ಗೆ ಚಿಕಿತ್ಸೆ ನೀಡಲು ಹೆಸರುಕಾಳು ತುಂಬಾ ಹಳೆಯ ಮನೆಮದ್ದಾಗಿದೆ. ನೀರಿನಲ್ಲಿ ನೆನೆಸಿದ ಹೆಸರುಕಾಳುಗಳನ್ನು ದಿನದಲ್ಲಿ ಮೂರು ಸಲ ಒಂದು ಚಮಚ ಸೇವಿಸಿ. ಇದರಿಂದ ನಿಮಗೆ ಬೇಕಾಗಿರುವ ಪೋಷಕಾಂಶಗಳು ಲಭ್ಯವಾಗುತ್ತದೆ.

ಮಜ್ಜಿಗೆ

ಮಜ್ಜಿಗೆ

ಮಜ್ಜಿಗೆ ಅಪೆಂಡಿಕ್ಸ್‌ಗೆ ಚಿಕಿತ್ಸೆ ನೀಡಲು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಇದು ಅಪೆಂಡಿಸಿಟಿಸ್ ನ ನೋವನ್ನು ಕಡಿಮೆ ಮಾಡುತ್ತದೆ. ಮಜ್ಜಿಗೆಗೆ ಸ್ವಲ್ಪ ಉಪ್ಪು ಹಾಕಿ. 2-3 ಲೋಟ ಮಜ್ಜಿಗೆ ದಿನಾ ಕುಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ಅಪೆಂಡಿಕ್ಸ್‌ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ಮಜ್ಜಿಗೆಯು ತಡೆಯುತ್ತದೆ. ಇದರಿಂದ ಅಪೆಂಡಿಸಿಟಿಸ್ ಕಡಿಮೆಯಾಗುವುದು. ಆರೋಗ್ಯವೃದ್ಧಿಗೆ ದಿನನಿತ್ಯ ಕುಡಿಯಿರಿ, ಒಂದು ಗ್ಲಾಸ್ ಮಜ್ಜಿಗೆ

ಬೆಳ್ಳುಳ್ಳಿ

ಬೆಳ್ಳುಳ್ಳಿ

ಅಪೆಂಡಿಕ್ಸ್‌ ಗೆ ಬೆಳ್ಳುಳ್ಳಿ ತುಂಬಾ ಹಳೆಯ ಮನೆಮದ್ದಾಗಿದೆ. ಬೆಳ್ಳುಳ್ಳಿಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಅಪೆಂಡಿಸಿಟಿಸ್ ನ್ನು ನಿವಾರಿಸಲು ನೆರವಾಗುವುದು. ಹಸಿ ಬೆಳ್ಳುಳ್ಳಿಯ ಒಂದೆರಡು ಎಸಲುಗಳನ್ನು ತಿಂದರೆ ಪರಿಣಾಮಕಾರಿ. ಇದರ ವಾಸನೆ ಹಿಡಿಸದಿದ್ದರೆ ಬೆಳ್ಳುಳ್ಳಿ ಮಾತ್ರೆಗಳನ್ನು ಸೇವಿಸಿ. (ಬೆಳ್ಳುಳ್ಳಿ ಸೇವಿಸುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಿ)

ತರಕಾರಿ ಜ್ಯೂಸ್

ತರಕಾರಿ ಜ್ಯೂಸ್

ಮುಳ್ಳುಸೌತೆ, ಬೀಟ್ ರೂಟ್, ಕ್ಯಾರೆಟ್, ಮೂಲಂಗಿ ಮತ್ತು ಕೊತ್ತಂಬರಿ ಸೊಪ್ಪಿನ ಜ್ಯೂಸ್ ತುಂಬಾ ಒಳ್ಳೆಯದು. ಇದನ್ನು ದಿನದಲ್ಲಿ ಒಂದೆರಡು ಸಲ ಸೇವಿಸಿದರೆ ಅಪೆಂಡಿಸಿಟಿಸ್ ನೋವು ಕಡಿಮೆ ಮಾಡಬಹುದು. ತರಕಾರಿಯಲ್ಲಿ ವಿಟಮಿನ್ ಹಾಗೂ ನಾರಿನಾಂಶ ಸಮೃದ್ಧವಾಗಿದೆ. ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಅತ್ಯಗತ್ಯವಾಗಿ ಬೇಕು. ನಾರಿನಾಂಶವು ಮಲಬದ್ಧತೆಯಂತಹ ಸಮಸ್ಯೆಯನ್ನು ನಿವಾರಿಸುವುದು.

ಲಿಂಬೆ

ಲಿಂಬೆ

ಲಿಂಬೆರಸ ಮತ್ತು ಜೇನುತುಪ್ಪ ಅಥವಾ ಲಿಂಬೆನೀರನ್ನು ಸೇವಿಸಿದರೆ ಅಪೆಂಡಿಸಿಟಿಸ್ ಗೆ ಪರಿಣಾಮಕಾರಿ ಔಷಧಿಯಾಗಿದೆ. ಲಿಂಬೆಯಲ್ಲಿ ಸಿಟ್ರಸ್ ಅಂಶವಿದೆ ಮತ್ತು ಇದು ತುಂಬಾ ಹುಳಿಯಾಗಿರುತ್ತದೆ. ಇದರಲ್ಲಿರುವಂತಹ ವಿಟಮಿನ್ ಸಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಲಿಂಬೆಯು ನೋವನ್ನು ಕಡಿಮೆ ಮಾಡಿ ಅಜೀರ್ಣ ಮತ್ತು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.

ಮೆಂತೆ ಚಹಾ

ಮೆಂತೆ ಚಹಾ

ಮೆಂತೆ ಕಾಳಿನಿಂದ ಮಾಡಿದಂತಹ ಚಹಾವನ್ನು ಅಪೆಂಡಿಕ್ಸ್‌‌ನ ಚಿಕಿತ್ಸೆಗೆ ಪ್ರತೀದಿನ ಸೇವನೆ ಮಾಡಿ. ಮೆಂತೆ ಕಾಳುಗಳು ಅಪೆಂಡಿಕ್ಸ್ ನಲ್ಲಿ ಕೀವು ಮತ್ತು ಲೋಳೆ ಜಮೆಯಾಗುವುದನ್ನು ತಡೆಯುತ್ತದೆ. ಇದರಿಂದ ಅಪೆಂಡಿಸಿಟಿಸ್ ಕಡಿಮೆಯಾಗುವುದು.ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!

ಮಸಾಜ್

ಮಸಾಜ್

ಅಪೆಂಡಿಕ್ಸ್‌‌ನಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಹರಳೆಣ್ಣೆಯಂತಹ ವಿವಿಧ ರೀತಿಯ ತೈಲಗಳಿಂದ ಹೊಟ್ಟೆಯ ಕೆಳಭಾಗದಲ್ಲಿ ಮಸಾಜ್ ಮಾಡಬೇಕು. ಅರಿಶಿನ ಮತ್ತು ಶುಂಠಿಯ ಪೇಸ್ಟ್ ಮಾಡಿಕೊಂಡು ಇದನ್ನು ಹೊಟ್ಟೆಯ ಕೆಳಭಾಗಕ್ಕೆ ಹಚ್ಚದರೂ ನೋವು ಕಡಿಮೆ ಮಾಡಬಹುದು.

 

For Quick Alerts
ALLOW NOTIFICATIONS
For Daily Alerts

    English summary

    Effective Home Remedies For Appendicitis Pain

    We can live our life without any consequences if the appendix is removed from our body. Appendicitis is a medical condition characterized by abrupt swelling or inflammation of this appendix. The symptoms include fever, severe abdominal pain (especially in the lower region), constipation and vomiting. Moreover, if appendicitis is not treated, the inflamed appendix might burst spilling out infected material.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more