ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸುವ ಶಕ್ತಿ ಇಂತಹ ಆಹಾರಗಳಲ್ಲಿದೆ!

By: manu
Subscribe to Boldsky

ಮಾನವನ ದೇಹದಲ್ಲಿ ಅತಿ ಹೆಚ್ಚು ಶಕ್ತಿಯನ್ನು ಬಳಸಿಕೊಳ್ಳುವ ಅಂಗವೆಂದರೆ ಅದು ಮೆದುಳು. ನಮ್ಮ ಮೆದುಳು ಸಹ ಒಂದು ಸ್ನಾಯು ಇದನ್ನು ಬಳಸಿದಷ್ಟು ಅದರ ಕಾರ್ಯಕ್ಷಮತೆ ಹೆಚ್ಚುತ್ತ ಹೋಗುತ್ತದೆ. ಈ ಅಂಗವು ಮಾಡುವ ಕಾರ್ಯವನ್ನು ಸರಿಯಾಗಿ ಯೋಚಿಸಿದರೆ ಅಚ್ಚರಿಗೊಳಗಾಗುತ್ತೀರಿ. ಜೊತೆಗೆ ನಮ್ಮ ದೇಹದಲ್ಲಿರುವ ಅತ್ಯಂತ ಸೂಕ್ಷ್ಮ ಅಂಗವಾಗಿದೆ.

ನಮ್ಮ ಮೆದುಳು ಮಾನಸಿಕ ಲಕ್ಷಣಗಳನ್ನು ನಿರ್ಧರಿಸುತ್ತದೆ. ಇದು ಮುಖ್ಯವಾಗಿ ಜ್ಞಾಪಕ ಶಕ್ತಿ , ಏಕಾಗ್ರತೆ, ದೈಹಿಕ ಮತ್ತು ಅಸಂಖ್ಯಾತವಾದ ಮಾನವನ ವರ್ತನೆಗಳ ಲಕ್ಷಣಗಳನ್ನು ನಿರ್ಧರಿಸುತ್ತದೆ. ಆದ್ದರಿಂದ ನಮ್ಮ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ನಾವು ಸ್ವಲ್ಪ ಹೆಚ್ಚಿನ ಕಾಳಜಿಯನ್ನು ತೋರಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ನಿಮಗಾಗಿ ಆಹಾರ ಪದಾರ್ಥಗಳ ಬಗ್ಗೆ ತಿಳಿಸುತ್ತಿದ್ದೇವೆ. ಇವು ನಿಮ್ಮ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಕರಿಸುತ್ತವೆ. 

ಮಿದುಳನ್ನು ಚುರುಕುಗೊಳಿಸುವ ರಹಸ್ಯ!

ವ್ಯಾಯಾಮ ಮತ್ತು ಯೋಗವು ಜ್ಞಾಪಕ ಶಕ್ತಿಯ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ ಎಂಬುದು ಈಗಾಗಲೇ ಸಾಬೀತುಪಡಿಸಿದೆ ಇದರ ಜೊತೆಗೆ ಕೆಲವೊಂದು ಆಹಾರ ಪದಾರ್ಥಗಳು ಸಹ ಈ ಉದ್ದೇಶದಲ್ಲಿ ತಮ್ಮ ನೆರವು ನೀಡುತ್ತವೆ. ಹಾಗಾದರೆ ಯಾವುದು ಆ ಆಹಾರ ಪದಾರ್ಥಗಳು ಎಂಬ ಕುತೂಹಲ ನಿಮಗಿದೆಯಲ್ಲವೆ, ಬನ್ನಿ ಆ ಆಹಾರ ಪದಾರ್ಥಗಳತ್ತ ಒಂದು ನೋಟ ಹರಿಸೋಣ. ಮುಂದೆ ಓದಿ...

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿರುವಂತಹ ಪ್ರೋಟೀನ್‌ಗಳು ಮೆದುಳಿಗೆ ತುಂಬಾ ಒಳ್ಳೆಯದೆಂದು ಸಾಬೀತಾಗಿದೆ. ಇದು ಮೆದುಳಿಗೆ ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲದೆ ಮೆದುಳಿಗೆ ಆಗಿರುವಂತಹ ಸಣ್ಣಪುಟ್ಟ ತೊಂದರೆಗಳನ್ನು ಇದು ನಿವಾರಿಸುತ್ತದೆ. ಇದು ಮೆದುಳಿನ ಜ್ಞಾನದ ಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ನಿರ್ಹಹಿಸುತ್ತದೆ. ನೆನಪಿನ ಶಕ್ತಿಯ ಸಾಮರ್ಥ್ಯವನ್ನು ವೃದ್ಧಿಸಲು ಇದು ನೆರವಾಗುವುದು, ಪ್ರತಿ ದಿನ ನೆನೆಸಿಟ್ಟ ಎರೆಡು-ಮೂರು ಬಾದಾಮಿಗಳನ್ನು ಸೇವಿಸಿ

ಚಾಕೊಲೆಟ್!!

ಚಾಕೊಲೆಟ್!!

ಚಾಕೊಲೆಟ್ ಸೇವಿಸಲು ಇದಕ್ಕಿಂತ ಒಳ್ಳೆಯ ನೆಪ ಬೇಕಾಗಿಲ್ಲ. ಅಲ್ಲವೇ!!? ಚಾಕೊಲೆಟ್‍ಗಳು, ವಿಶೇಷವಾಗಿ ಡಾರ್ಕ್ ಚಾಕೊಲೆಟ್‍ಗಳು ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಹೇಳಿ ಮಾಡಿಸಿದಂತಹ ಆಹಾರವಾಗಿರುತ್ತದೆ. ಇದು ದೇಹದಲ್ಲಿ ರಕ್ತದ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಮೆದುಳಿಗೆ ರಕ್ತವು ಸರಾಗವಾಗಿ ಸಾಗುವಂತೆ ಮಾಡುತ್ತದೆ.

ಧಾನ್ಯಗಳು

ಧಾನ್ಯಗಳು

ಧಾನ್ಯಗಳು ಮೆದುಳಿನ ಆರೋಗ್ಯಕ್ಕೆ ಬೇಕಾಗುವ ಅಸಂಖ್ಯಾತ ಪೋಷಕಾಂಶಗಳು ದೊರೆಯುತ್ತವೆ. ಇವು ನಾರಿನಂಶ, ಸಂಕೀರ್ಣವಾದ ಕಾರ್ಬೊಹೈಡ್ರೇಟ್‍ಗಳು ಮತ್ತು ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಯಥೇಚ್ಛವಾಗಿ ಹೊಂದಿರುತ್ತವೆ. ಇದರ ಜೊತೆಗೆ ಇವುಗಳಲ್ಲಿ ವಿಟಮಿನ್ ಬಿ ಸಹ ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಮೆದುಳಿಗೆ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತವೆ.

ಮೊಟ್ಟೆಯ ಲೋಳೆ

ಮೊಟ್ಟೆಯ ಲೋಳೆ

ಮೊಟ್ಟೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಮೊಟ್ಟೆಯ ಲೋಳೆಯು ವ್ಯಕ್ತಿಯ ಮೆದುಳಿನ ಆರೋಗ್ಯವನ್ನು ಉತ್ತಮಪಡಿಸುತ್ತದೆ. ಮೊಟ್ಟೆಯ ಲೋಳೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಎಂದು ಅಧ್ಯಯನಗಳು ಹೇಳಿವೆ.

ಬಸಲೆ ಹಾಗೂ ಪಾಲಕ್ ಸೊಪ್ಪನ್ನು ಹೆಚ್ಚು ಸೇವಿಸಿ

ಬಸಲೆ ಹಾಗೂ ಪಾಲಕ್ ಸೊಪ್ಪನ್ನು ಹೆಚ್ಚು ಸೇವಿಸಿ

ಬಸಲೆ ಹಾಗೂ ಪಾಲಕ್ ಏಕಾಗ್ರತೆಯನ್ನು ಹೆಚ್ಚಿಸುವುದರೊಂದಿಗೆ ಜ್ಞಾಪಕ ಶಕ್ತಿಯನ್ನು ಸುಧಾರಣೆ ಮಾಡುತ್ತದೆ. ಒಮೆಗಾ-3 ಕೊಬ್ಬಿನ ಆಮ್ಲವನ್ನು ಒಳಗೊಂಡಿರುವ ಬಸಲೆಯು ಮೆದುಳಿನ ಕಾರ್ಯಚಟುವಟಿಕೆಯನ್ನು ಉತ್ತಮಪಡಿಸುವಂತಹ ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ.

ಹೆಚ್ಚು ಹಣ್ಣು ತರಕಾರಿಗಳನ್ನು ತಿನ್ನಿ

ಹೆಚ್ಚು ಹಣ್ಣು ತರಕಾರಿಗಳನ್ನು ತಿನ್ನಿ

ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸಿ ತರಕಾರಿ ಮತ್ತು ಹಣ್ಣುಗಳಿರಲಿ. ಇದರಿಂದ ಹೆಚ್ಚಿನ ಪ್ರಮಾಣದ ನಾರು, ವಿಟಮಿನ್ನುಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಲಭ್ಯವಾಗುತ್ತವೆ ಹಾಗೂ ತನ್ಮೂಲಕ ಮೆದುಳಿನೆ ಜೀವಕೋಶಗಳಿಗೆ ಚೈತನ್ಯ ಒದಗಿಸುತ್ತದೆ.

ಆಹಾರದಲ್ಲಿ ಕೊಬ್ಬರಿ ಎಣ್ಣೆ ಬಳಸಿ

ಆಹಾರದಲ್ಲಿ ಕೊಬ್ಬರಿ ಎಣ್ಣೆ ಬಳಸಿ

ಇತರ ಎಣ್ಣೆಗಳ ಬದಲಿಗೆ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಬಳಸಿ ಅಡುಗೆ ಮಾಡಿ. ಇದರಿಂದ ಸಂತುಲಿತ ಕೊಬ್ಬು ಕಡಿಮೆಯಾಗುತ್ತದೆ ಹಾಗೂ ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತವೆ. ಇವು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತವೆ.

ಡೈರಿ ಉತ್ಪನ್ನಗಳನ್ನೂ ಕಡಿಮೆ ಮಾಡಿ

ಡೈರಿ ಉತ್ಪನ್ನಗಳನ್ನೂ ಕಡಿಮೆ ಮಾಡಿ

ಡೈರಿ ಉತ್ಪನ್ನಗಳಾದ ಹಾಲು, ಮೊಸರು ಇತ್ಯಾದಿಗಳಲ್ಲಿಯೂ ಅತಿ ಹೆಚ್ಚಿನ ಪ್ರಮಾಣದ ಸಂತುಲಿತ ಕೊಬ್ಬು ಇದ್ದು ಇವೂ ಮೆದುಳಿನ ಕ್ಷಮತೆಯನ್ನು ಉಡುಗಿಸಿ ಚಿಂತನಾ ಶಕ್ತಿಯನ್ನು ಕುಂದಿಸುತ್ತವೆ.

ದಿನಕ್ಕೊಂದು ಕಪ್ ಪುದೀನಾ ಚಹಾ ಕುಡಿಯಿರಿ

ದಿನಕ್ಕೊಂದು ಕಪ್ ಪುದೀನಾ ಚಹಾ ಕುಡಿಯಿರಿ

ಪುದೀನಾ ತಾಜಾ ಪುದೀನಾದ ಸುವಾಸನೆಯು ಪ್ರಚೋದಕದಂತೆ ಕೆಲಸ ಮಾಡಿ ಜಾಗೃತಾವಸ್ಥೆ ಮತ್ತು ಮೆದುಳಿನ ಕ್ರಿಯೆಯನ್ನು ಉತ್ತಮ ಪಡಿಸುತ್ತದೆ. ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ದಿನದಲ್ಲಿ ಒಂದು ಕಪ್ ಪುದೀನಾ ಚಹಾ ಕುಡಿಯಿರಿ.

ಪುದೀನಾ(ಪೆಪ್ಪರ್ಮಿಂಟ್) ಚಹಾ

ಪುದೀನಾ(ಪೆಪ್ಪರ್ಮಿಂಟ್) ಚಹಾ

ತಯಾರಿಸುವ ವಿಧಾನ ಸುಮಾರು ನಾಲ್ಕು ಲೋಟ ಕುದಿಯುವ ನೀರಿಗೆ ಎರಡು ದೊಡ್ಡಚಮಚ ಒಣ ಎಲೆಗಳನ್ನು ಸೇರಿಸಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಿ (ಮತ್ತೆ ಕುದಿಸಬಾರದು). ಬಳಿಕ ಸೋಸಿ ನೀರನ್ನು ಬಾಟಲಿಯಲ್ಲಿ ಶೇಖರಿಸಿ ಫ್ರಿಜ್ ನಲ್ಲಿಡಬಹುದು. ಕುಡಿಯುವ ಅಗತ್ಯವಿದ್ದಾಗ ಬಾಟಲಿ ಹೊರತೆಗೆದು ಮತ್ತೊಮ್ಮೆ ಬಿಸಿಮಾಡಿ ಸೇವಿಸಿ. ರುಚಿಗಾಗಿ ಕೆಲವು ತೊಟ್ಟು ಲಿಂಬೆರಸ ಮತ್ತು ಸಕ್ಕರೆ ಅಥವಾ ಕಲ್ಲುಸಕ್ಕರೆಯನ್ನೂ ಸೇರಿಸಬಹುದು.

ಸಾಧ್ಯವಾದಷ್ಟು ಒಣ ಹಣ್ಣುಗಳನ್ನು ಸೇವಿಸಿ

ಸಾಧ್ಯವಾದಷ್ಟು ಒಣ ಹಣ್ಣುಗಳನ್ನು ಸೇವಿಸಿ

ವಾಲ್‍ನಟ್‍ಗಳು, ಬಾದಾಮಿ ಬೀಜಗಳು ಮತ್ತು ಹಝೆಲ್‍ನಟ್‍ಗಳಂತಹ ಒಣಹಣ್ಣುಗಳು ನಿಮ್ಮ ಸ್ಮರಣೆ ಶಕ್ತಿ ಮತ್ತು ಏಕಾಗ್ರತೆಗಳನ್ನು ಸುಧಾರಿಸಲು ತಮ್ಮದೆ ಆದ ಕೊಡುಗೆಯನ್ನು ನೀಡುತ್ತವೆ. ಇವುಗಳಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲಗಳು ಮತ್ತು ಪ್ರೊಟೀನ್‍ಗಳು ನಿಮ್ಮ ಮೆದುಳಿನ ಕೋಶಗಳನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತವೆ. ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಒಣ ಹಣ್ಣುಗಳು ಹೇಳಿ ಮಾಡಿಸಿದಂತಹ ಆಹಾರ ಪದಾರ್ಥಗಳಾಗಿವೆ.

English summary

Eating these foods can improve your memory Power

in this article is on these brilliant foods to improve your memory and concentration. Let us now look at these brilliant foods to boost memory and concentration. Here are foods to boost your memory and concentration...
Story first published: Wednesday, July 5, 2017, 23:31 [IST]
Subscribe Newsletter