ದಿನಕ್ಕೆ ಮೂರು ಚಮಚ ಇದನ್ನು ಸೇವಿಸಿ ಖಂಡಿತ ಬೊಜ್ಜು ಕರಗುವುದು!

By: manu
Subscribe to Boldsky

ನಾವಿಲ್ಲಿ ಹೇಳುತ್ತಿರುವ ಪಾಕವಿಧಾನವನ್ನು ನೀವು ಮನೆಯಲ್ಲಿ ಪ್ರಯತ್ನಿಸಬಹುದು. ಇದರಿಂದ ನಿಮ್ಮ ಹೊಟ್ಟೆ ಭಾಗದಲ್ಲಿರುವ ಕೊಬ್ಬು ಕರಗುವುದು. ಇದು ನೈಸರ್ಗಿಕವಾದ ಪಾಕವಿಧಾನ. ಇದಕ್ಕೆ ಯಾವುದೇ ಬಗೆಯ ಭಯ ಅಥವಾ ಹಿಂಜರಿಕೆಯ ಅಗತ್ಯವಿಲ್ಲ. ಹೊಟ್ಟೆ ಭಾಗದಲ್ಲಿ ಕೊಬ್ಬು ಶೇಖರಣೆಯಾದರೆ ನಮಗಿಷ್ಟವಾಗುವ ಉಡುಗೆ ತೊಡಲು ಸಾಧ್ಯವಿರುವುದಿಲ್ಲ. ಅಲ್ಲದೆ ದೇಹದ ಆಕರ್ಷಣೆಯನ್ನು ಕುಂಟಿತಗೊಳಿಸುತ್ತದೆ. ಈ ಸಮಸ್ಯೆಯಿಂದ ವಿವಿಧ ರೋಗಗಳು ಬರುವ ಸಾಧ್ಯತೆ ಇರುತ್ತದೆ.

ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಅನೇಕ ಜನರು ಬೊಜ್ಜನ್ನು ಕರಗಿಸಲು ವ್ಯಾಯಾಮ, ವಾಕಿಂಗ್, ಓಟ, ಉಪವಾಸ ವಿನೂತನ ಚಿಕಿತ್ಸೆ ಹಾಗೂ ಔಷಧಗಳನ್ನು ಕುಡಿಯುತ್ತಾರೆ. ಇದರಲ್ಲಿ ಕೆಲವು ವಿಧಾನಗಳಿಂದ ದೇಹದ ಕೊಬ್ಬನ್ನು ಕಡಿಮೆ ಮಾಡಬಹುದು. ಆದರೆ ಸಂಪೂರ್ಣ ಬದಲಾವಣೆ ಸ್ವಲ್ಪ ಕಷ್ಟ ಎಂದೇ ಹೇಳಬಹುದು. ಆದರೆ ಇಲ್ಲಿ ಹೇಳುತ್ತಿರುವ ಒಂದು ಬಗೆಯ ಮನೆ ಔಷಧಿಯು ಹೊಟ್ಟೆಯ ಬೊಜ್ಜನ್ನು ನಿವಾರಿಸುತ್ತದೆ. ಅದುವೇ ಬೆಳ್ಳುಳ್ಳಿ ಪಾನೀಯ....

ಬೆಳ್ಳುಳ್ಳಿ ಪಾನೀಯ ಸಾಮಾಗ್ರಿಗಳು

ಬೆಳ್ಳುಳ್ಳಿ ಪಾನೀಯ ಸಾಮಾಗ್ರಿಗಳು

1. 12 ಎಸಳು ಸುಲಿದ ಬೆಳ್ಳುಳ್ಳಿ

2. 1/2 ಲೀ. ಕೆಂಪು ವೈನ್

ತಯಾರಿಸುವ ವಿಧಾನ

ತಯಾರಿಸುವ ವಿಧಾನ

1. ಬೆಳ್ಳುಳ್ಳಿ ಎಸಳನ್ನು ಚಿಕ್ಕದಾಗಿ ಕತ್ತರಿಸಿ, ಒಂದು ಜಾರಿನಲ್ಲಿ ತುಂಬಿ. ನಂತರ ಇದರ ಮೇಲೆ ಕೆಂಪು ವೈನ್‍ಅನ್ನು ಸುರಿಯಬೇಕು.

2. ಜಾರಿನ ಮುಚ್ಚಲನ್ನು ಬಿಗಿಯಾಗಿ ಮುಚ್ಚಿ. ಎರಡು ವಾರಗಳ ಕಾಲ ಜಾರನ್ನು ಬಿಸಿಲಲ್ಲಿ ಇಡಬೇಕು.

3. 14 ದಿನದ ನಂತರ ಜಾರಿನಲ್ಲಿದ್ದ ದ್ರವವನ್ನು ಒಂದು ಬಾಟಲಿಯಲ್ಲಿ ಸೋಸಿ ಸಂಗ್ರಹಿಸಿಡಬಹುದು.

4. ಈ ಪಾನೀಯವನ್ನು ದಿನಕ್ಕೆ ಮೂರು ಬಾರಿ, ಒಂದೊಂದೇ ಚಮಚ ಸ್ವೀಕರಿಸಬೇಕು. ಹೀಗೆ 6 ತಿಂಗಳ ಕಾಲ ಮಾಡಿದರೆ ಕೊಬ್ಬು ಕರಗುವುದು. ಬನ್ನಿ ಈ ಬೆಳ್ಳುಳ್ಳಿ ಪಾನೀಯದಿಂದ ಯಾವೆಲ್ಲಾ ಪ್ರಯೋಜನ ಪಡೆಯಬಹುದು ಎಂಬ ವಿವರಣೆ ಇಲ್ಲಿದೆ.

ಕೊಬ್ಬು ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ

ಕೊಬ್ಬು ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ

ಹೊಟ್ಟೆಯ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದಲ್ಲದೆ ಉರಿಯೂತದ ಸಮಸ್ಯೆಗೂ ಉತ್ತಮ ಚಿಕಿತ್ಸೆ ನೀಡುತ್ತದೆ.

ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ

ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ

ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವುದರ ಮೂಲಕ ಈ ಪಾನೀಯ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.

ಅಧಿಕ ಉಪ್ಪಿನಂಶವನ್ನು ನಿವಾರಿಸುತ್ತದೆ

ಅಧಿಕ ಉಪ್ಪಿನಂಶವನ್ನು ನಿವಾರಿಸುತ್ತದೆ

ಈ ಪಾನೀಯ ದೇಹದಲ್ಲಿರುವ ಅಧಿಕ ಉಪ್ಪಿನಂಶವನ್ನು ನಿವಾರಿಸಿ ರಕ್ತದೊತ್ತಡವನ್ನು ತಡೆಯುತ್ತದೆ. ಮೂತ್ರ ಪಿಂಡದ ಮೇಲೆ ಉಂಟಾಗುವ ಒತ್ತಡವನ್ನು ತಡೆಯುತ್ತದೆ.

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದರ ಜೊತೆಗೆ ರಕ್ತನಾಳ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ದೇಹದ ಕೊಲೆಸ್ಟ್ರಾಲ್ ನಿಯಂತ್ರಿಸಿ, ಆರೋಗ್ಯ ವೃದ್ಧಿಸಿ...

English summary

Eat This Three Spoons A Day To Lose Belly Fat & Reduce Cholesterol Level

Many people try to lose this fat by eating less or starving themselves. It's high time that you accepted the fact that this is not the right thing to do. Further, few natural products have been clinically proven to reduce cholesterol. High cholesterol is often caused by unhealthy lifestyle choices like following a diet that is high in saturated fats and lack of physical activity. Read further to know more about how to prepare this natural remedy to reduce belly fat and cholesterol.
Subscribe Newsletter