ಜೇನುತುಪ್ಪ-ಎಳ್ಳು ಬೆರೆಸಿ ಒಂದು ತಿಂಗಳು ಖಾಲಿ ಹೊಟ್ಟೆಯಲ್ಲಿ ಸೇವಿಸಿ!

By: Arshad
Subscribe to Boldsky

ಒಂದು ವೇಳೆ ಉತ್ತಮ ಉದ್ಯೋಗ, ಸಂತಸದ ಕುಟುಂಬ, ಪ್ರಾಣ ಕೊಡುವ ಸ್ನೇಹಿತರು ಎಲ್ಲವೂ ಇದ್ದು ಆರೋಗ್ಯವೇ ಇಲ್ಲವಾಗಿದ್ದರೆ? ಎಲ್ಲವೂ ಇದ್ದೂ ಜೀವನ ನಿಮಗೆ ನೀಡಿರುವ ಸಂತೋಷವನ್ನು ಅನುಭವಿಸಲಾರದೇ ಹೋಗುತ್ತೀರಿ. ನಿಮಗಿಷ್ಟವಾದುದನ್ನು ತಿನ್ನಲು ಸಾಧ್ಯವಾಗದೇ, ನಿಮಗಿಷ್ಟವಾದ ಕಡೆ ಹೋಗಲಾರದೇ ಪರಿತಾಪ ಪಡುವಂತಾಗುತ್ತದೆ.

ಹಾಗಾಗಿ ಎಷ್ಟೇ ಸಂಪತ್ತು ಹೊಂದಿದ್ದರೂ ಆರೋಗ್ಯ ಪಡೆಯದಿರದ ವ್ಯಕ್ತಿ ಆರೊಗ್ಯಕರ ವ್ಯಕ್ತಿಗಳನ್ನು ಕಂಡಾಗ ಅಪಾರ ಅಸೂಯೆಯ ಭಾವನೆ ಅನುಭವಿಸುತ್ತಾರೆ. ಇದು ಸ್ವಾಭಾವಿಕ. ಆದ್ದರಿಂದ ಆರೋಗ್ಯವೇ ಭಾಗ್ಯ ಎಂಬ ಗಾದೆಮಾತನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತೇವೋ ಅಷ್ಟೇ ಒಳ್ಳೆಯದು. ನಿರೋಗಿಯಾದ ಶರೀರವೇ ನಿಜವಾದ ಐಶ್ವರ್ಯ.  

ವೈದ್ಯಲೋಕಕ್ಕೇ ಸವಾಲೆಸೆಯುವ ಹಳ್ಳಿಗಾಡಿನ ಮನೆಮದ್ದು

ನಮ್ಮ ದೇಹದ ಮೇಲೆ ಸತತವಾಗಿ ಸೂಕ್ಷ್ಮಜೀವಿಗಳ ಧಾಳಿಯಾಗುತ್ತಲೇ ಇರುತ್ತದೆ. ಆದರೆ ಇವುಗಳ ವಿರುದ್ಧ ಹೋರಾಡಲು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯೂ ಸತತವಾಗಿ ಕೆಲಸ ಮಾಡುತ್ತಲೇ ಬರುವುದರಿಂದ ರೋಗಗಳು ಭಾಧಿಸುವುದಿಲ್ಲ. ಆದರೆ ಕೆಲವು ಕಾಯಿಲೆಗಳು ವ್ಯಕ್ತಿಯೊಬ್ಬರ ಜೀವನವನ್ನು ಕೆಲವೇ ಕ್ಷಣಗಳಲ್ಲಿ ಕೊನೆಯಾಗಿಸುವಷ್ಟು ಮಾರಕವಾಗಿರುತ್ತವೆ. ನಮ್ಮ ದೇಹವೊಂದು ನಿಗೂಢ ಮಂದಿರ. ನಮ್ಮ ದೇಹದ ಮೇಲೆ ಆಗುವ ಕೆಲವಾರು ಧಾಳಿಯನ್ನು ಎದುರಿಸುತ್ತಾ ಒಂದು ರಕ್ಷಣಾ ಗೋಡೆಯನ್ನು ಕಟ್ಟಿರುತ್ತವೆ.

ಯಾವಾಗ ಈ ಗೋಡೆಯ ಸಾಮರ್ಥ ಮೀರಿ ಕುಸಿಯಿತೋ, ಆಗ ಥಟ್ಟನೇ ಭಯಾನಕ ರೋಗ ಆವರಿಸುತ್ತದೆ. ಧೂಮಪಾನಿಗಳು ಇಡಿಯ ಜೀವಮಾನ ಧೂಮಪಾನ ಮಾಡಿದರೂ ಧಾಳಿ ಎಸಗದಿದ್ದುದು ಜೀವನದ ಯಾವುದೋ ಒಂದು ಅವಧಿಯಲ್ಲಿ ಥಟ್ಟನೇ ಕ್ಯಾನ್ಸರ್ ರೂಪದಲ್ಲಿ ಧಾಳಿ ಎಸಗುತ್ತದೆ. ಇದುವರೆಗೆ ಈ ಗೋಡೆಯ ಸಾಮರ್ಥವನ್ನು ತಮ್ಮ ಸಾಮರ್ಥ ಎಂದೇ ಪರಿಗಣಿಸಿದ್ದ ಧೂಮಪಾನಿಗೆ ಈಗ ನಿಂತ ನೆಲವೇ ಕುಸಿದ ಅನುಭವವಾಗುತ್ತದೆ. ಆದ್ದರಿಂದ ನಮ್ಮ ಆರೋಗ್ಯದ ಬಗ್ಗೆ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ..... 

ದೊಡ್ಡಚಮಚದಷ್ಟು ಜೇನು ಮತ್ತು ಎಳ್ಳು

ದೊಡ್ಡಚಮಚದಷ್ಟು ಜೇನು ಮತ್ತು ಎಳ್ಳು

ಆರೋಗ್ಯದ ಕಾಳಜಿಗೆ ಹೆಚ್ಚು ಕಷ್ಟಪಡಬೇಕಾಗಿಲ್ಲ. ನಮ್ಮ ಅಡುಗೆ ಮನೆಯಲ್ಲಿರುವ ಸಾಮಾನ್ಯ ಸಾಮಾಗ್ರಿಗಳೇ ಸಾಕಾಗುತ್ತವೆ. ಆದರೆ ಈ ಕ್ರಮಗಳನ್ನು ನಿಯಮಿತವಾಗಿ ಅನುಸರಿಸುವುದು ಮಾತ್ರ ತುಂಬಾ ಅವಶ್ಯ. ಇಂತಹದ್ದೇ ಒಂದು ರಕ್ಷಣಾ ವ್ಯವಸ್ಥೆ ಎಂದರೆ ತಲಾ ಒಂದು ದೊಡ್ಡಚಮಚದಷ್ಟು ಜೇನು ಮತ್ತು ಎಳ್ಳನ್ನು ಬೆರೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ಕನಿಷ್ಠ ಏಳು ಬಗೆಯ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು. ಮುಂದೆ ಓದಿ...

ಜೇನು ಅಪ್ಪಟವೇ ಅಥವಾ ಕಲಬೆರಕೆಯೇ? ಹೀಗೆ ಪರೀಕ್ಷಿಸಿ

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸುತ್ತದೆ

ಎಳ್ಳು ಮತ್ತು ಜೇನಿನಲ್ಲಿರುವ ಪೋಷಕಾಂಶಗಳಲ್ಲಿ ಹೆಚ್ಚಿನ ಪ್ರೋಟೀನು ಮತ್ತು ಕೊಂಚ ಕ್ಯಾಲ್ಸಿಯಂ ಇದೆ. ಅಲ್ಲದೇ ಈ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ಜೇನು ನೆರವಾಗುತ್ತದೆ. ಪರಿಣಾಮವಾಗಿ ಮೂಳೆಗಳು ದೃಢಗೊಳ್ಳುತ್ತವೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಈ ಸಂಯೋಜನೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ತನ್ಮೂಲಕ ಹಲವಾರು ಖಾಯಿಲೆಗಳ ವಿರುದ್ದ ರಕ್ಷಣೆ ಒದಗಿಸುತ್ತದೆ. ಪರಿಣಾಮವಾಗಿ ಆರೋಗ್ಯ ವೃದ್ಧಿಸುತ್ತದೆ.

ಶಕ್ತಿಯನ್ನು ಹೆಚ್ಚಿಸುತ್ತದೆ

ಶಕ್ತಿಯನ್ನು ಹೆಚ್ಚಿಸುತ್ತದೆ

ಇದರಲ್ಲಿರುವ ಹಾರ್ಮೋನುಗಳು ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸುತ್ತವೆ. ಇದರಲ್ಲಿರುವ ಹಲವಾರು ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚು ಶಕ್ತಿವರ್ಧಕವಾಗಿರುವ ಕಾರಣ ವ್ಯಾಯಾಮ, ದೂರದ ನಡಿಗೆ ಮೊದಲಾದ ಶ್ರಮದ ಕೆಲಸಗಳಿಗೂ ಮುನ್ನ ತಿಂದು ಹೊರಟರೆ ಹೆಚ್ಚು ಆಯಾಸವಾಗುವುದಿಲ್ಲ.

ಸೆಡೆತವನ್ನು ಕಡಿಮೆಗೊಳಿಸುತ್ತದೆ

ಸೆಡೆತವನ್ನು ಕಡಿಮೆಗೊಳಿಸುತ್ತದೆ

ಮಹಿಳೆಯರು ಮಾಸಿಕ ದಿನಗಳಲ್ಲಿ ಅನುಭವಿಸುವ ಕೆಳಹೊಟ್ಟೆಯ ಸೆಡೆತ ಹಾಗೂ ನೋವನ್ನು ಕಡಿಮೆಗೊಳಿಸಲು ಈ ಮಿಶ್ರಣ ಅತ್ಯುತ್ತಮವಾಗಿದೆ. ಇದರಲ್ಲಿರುವ ಪೋಷಕಾಂಶಗಳು ಗರ್ಭಾಶಯದ ಗೋಡೆಗಳ ಉರಿಯೂತವನ್ನು ಕಡಿಮೆಗೊಳಿಸುವ ಗುಣ ಹೊಂದಿದ್ದು ಸೆಡೆತವನ್ನು ಕಡಿಮೆ ಮಾಡುತ್ತದೆ.

ಹಸಿವನ್ನು ಕಡಿಮೆಮಾಡುತ್ತದೆ

ಹಸಿವನ್ನು ಕಡಿಮೆಮಾಡುತ್ತದೆ

ಒಂದು ವೇಳೆ ನೀವು ತೂಕ ಇಳಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದರೆ ಈ ಮಿಶ್ರಣ ನಿಮಗೆ ತುಂಬ ಅಗತ್ಯವಾಗಿದೆ. ಏಕೆಂದರೆ ಈ ಮಿಶ್ರಣವನ್ನು ಸೇವಿಸಿದ ಬಳಿಕ ಹೆಚ್ಚಿನ ಹೊತ್ತಿನವರೆಗೆ ಹೊಟ್ಟೆ ತುಂಬಿದಂತಿದ್ದು ಅನಗತ್ಯವಾಗಿ ಅನಾರೋಗ್ಯಕರ ಆಹಾರವನ್ನು ಸೇವಿಸದಂತೆ ತಡೆಯುತ್ತದೆ. ತನ್ಮೂಲಕ ಹೆಚ್ಚಬಹುದಾಗಿದ್ದ ತೂಕವನ್ನು ತಡೆದಂತಾಗುತ್ತದೆ.

ಚರ್ಮ ಮತ್ತು ಕೂದಲ ಆರೋಗ್ಯ ಹೆಚ್ಚಿಸುತ್ತದೆ

ಚರ್ಮ ಮತ್ತು ಕೂದಲ ಆರೋಗ್ಯ ಹೆಚ್ಚಿಸುತ್ತದೆ

ಜೇನು ಮತ್ತು ಎಳ್ಳಿನಲ್ಲಿರುವ ಪ್ರೋಟೀನು ಮತ್ತು ಆಂಟಿ ಆಕ್ಸಿಡೆಂಟುಗಳು ಚರ್ಮ ಮತ್ತು ಕೂದಲಿಗೂ ಉತ್ತಮವಾಗಿವೆ. ಇವುಗಳು ಆರೋಗ್ಯಕರ ಚರ್ಮ ಹಾಗೂ ಕೂದಲಿನ ಜೀವಕೋಶಗಳು ಬೆಳೆಯಲು ನೆರವಾಗುತ್ತವೆ ಹಾಗೂ ತನ್ಮೂಲಕ ಆರೋಗ್ಯಕರ ಚರ್ಮ ಹಾಗೂ ಸೊಂಪಾದ ಕೂದಲು ಪಡೆಯಲು ನೆರವಾಗುತ್ತದೆ.

ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ

ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ

ಈ ಮಿಶ್ರಣದ ಆಂಟಿ ಆಕ್ಸಿಡೆಂಟುಗಳು ಮೆದುಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸಿ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಏಕಾಗ್ರತೆ, ಸ್ಮರಣಾಶಕ್ತಿ, ತಾರ್ಕಿಕ ಶಕ್ತಿ ಮೊದಲಾದ ಸಾಮರ್ಥ್ಯಗಳು ಹೆಚ್ಚುತ್ತವೆ.

English summary

Eat Honey And Sesame Seeds For A Month; Watch What Happens!

There are many kitchen ingredients available in our own homes, which can help prevent and treat a number of diseases. Did you know that mixing 1 tablespoon of honey with 1 tablespoon of sesame seeds and consuming this mixture every morning on an empty stomach, can help treat and prevent over 7 ailments?
Subscribe Newsletter