For Quick Alerts
ALLOW NOTIFICATIONS  
For Daily Alerts

ಕಿವಿ ಹಾಗೂ ಮೂಗಿಗೆ ಆಭರಣ ಧರಿಸುವುದರಿಂದ ಆಗುವ ಆರೋಗ್ಯ ಲಾಭಗಳು

By
|

ಆಭರಣಗಳನ್ನು ಧರಿಸುವುದು ಸ್ಟೈಲ್ ಗಾಗಿ ಎಂದು ಎಲ್ಲರೂ ಭಾವಿಸುತ್ತಾರೆ. ಯುವ ಜನಾಂಗವನ್ನು ನೋಡಿದಾಗ ಇದು ನಿಜವೆನ್ನಬಹುದು. ಅದರೆ ಹಿಂದಿನಿಂದಲೂ ಭಾರತೀಯ ಮಹಿಳೆಯರು ಕಿವಿ ಹಾಗೂ ಮೂಗಿನ ಸಹಿತ ಕುತ್ತಿಗೆ ಕೈ ಮತ್ತು ಕಾಲುಂಗರ ಧರಿಸುತ್ತಿದ್ದರು. ಇದಕ್ಕೆ ತನ್ನದೇ ಆದ ಮಹತ್ವವಿದೆ. ವೇದಗಳ ಪ್ರಕಾರ ಕಿವಿ ಮತ್ತು ಮೂಗಿಗೆ ಧರಿಸುವ ಆಭರಣದಿಂದ ಹೆಚ್ಚಿನ ಆರೋಗ್ಯ ಲಾಭಗಳು ಇವೆಯಂತೆ. ಎಂಟು ತಿಂಗಳಲ್ಲಿ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯು ಆರಂಭವಾಗುತ್ತದೆ. ಈ ವೇಳೆ ಕಿವಿ ಮತ್ತು ಮೂಗಿಗೆ ಆಭರಣ ಧರಿಸಿದರೆ ಅದರಿಂದ ಮದುಳಿನ ಬೆಳವಣಿಗೆಗೆ ನೆರವಾಗುತ್ತದೆ ಎಂದು ವೇದಗಳು ಹೇಳಿವೆ.

ಆಭರಣಕ್ಕಾಗಿ ಚುಚ್ಚಿಸಿಕೊಂಡ ವೇಳೆ ಮಾಡಬಹುದಾದ ಮನೆಮದ್ದುಗಳು

ಎಡಗಿವಿಗೆ ಆಭರಣ ಧರಿಸುವುದರಿಂದ ತೀವ್ರ ನೋವು ಕಡಿಮೆ ಮಾಡಿಕೊಳ್ಳಬಹುದು ಎಮದು ಹೇಳಲಾಗುತ್ತದೆ. ಕಿವಿ ಮತ್ತು ಮೂಗಿನ ಆಭರಣಗಳು ಪರ್ಯಾಯ ಚಿಕಿತ್ಸೆಯೆಂದು ವೈದ್ಯಕೀಯ ವಿಜ್ಞಾನವು ಪರಿಗಣಿಸಿದೆ. ಇದನ್ನು ಅಕ್ಯೂಪಂಕ್ಚರ್ ವಿಭಾಗಕ್ಕೆ ಸೇರಿಸಲಾಗಿದೆ. ಈ ಆಭರಣಗಳು ದೇಹದ ಕೆಲವೊಂದು ಪ್ರಮುಖ ಭಾಗಗಳಿಗೆ ಒತ್ತಡ ಹಾಕುವ ಕಾರಣದಿಂದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಇದು ಕೆಲವೊಂದು ಕಾಯಿಲೆಗಳನ್ನು ಗುಣಪಡಿಸುವುದು. ಕಿವಿಯಲ್ಲಿ ಇರುವ ಮತ್ತೊಂದು ಕೇಂದ್ರವೆಂದರೆ ಅದು ಹಸಿವಿನ ಕೇಂದ್ರ. ಇದು ಜೀರ್ಣಕ್ರಿಯೆ ಪ್ರಕ್ರಿಯೆಗೆ ನೆರವಾಗುವುದು...

ಮಹಿಳೆಯ ಸಂಪೂರ್ಣ ಸಂತಾನೋತ್ಪತ್ತಿಗೆ

ಮಹಿಳೆಯ ಸಂಪೂರ್ಣ ಸಂತಾನೋತ್ಪತ್ತಿಗೆ

ಆಯುರ್ವೇದ ಪ್ರಕಾರ ಮಹಿಳೆಯ ಎಡ ಬದಿಯ ಮೂಗು ಮಹಿಳೆಯ ಸಂತಾನೋತ್ಪತ್ತಿಯ ಅಂಗದ ಮೇಲೆ ಸಂಬಂಧ ಹೊಂದಿದೆ. ಎಡ ಬದಿಯ ಮೂಗಿಗೆ ಆಭರಣ ಧರಿಸುವುದರಿಂದ ಅದು ಮಹಿಳೆಯ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಹೆಚ್ಚಿಸುವುದು.

ಹೆರಿಗೆ ನೋವು ನಿವಾರಣೆಗೆ

ಹೆರಿಗೆ ನೋವು ನಿವಾರಣೆಗೆ

ಎಡದ ಮೂಗಿಗೆ ಆಭರಣ ಧರಿಸುವುದರಿಂದ ಅದು ಮಗುವಿಗೆ ಜನ್ಮ ನೀಡುವ ವೇಳೆ ಉಂಟಾಗುವ ನೋವು ಕಡಿಮೆ ಮಾಡುವುದು. ಮೂಗಿನ ಆಭರಣಗಳು ಹೆರಿಗೆ ಸುಲಭಗೊಳಿಸುವುದು ಎಂದು ಭಾರತೀಯರು ನಂಬಿದ್ದಾರೆ.

ಋತುಸ್ರಾವದ ನೋವಿಗೆ

ಋತುಸ್ರಾವದ ನೋವಿಗೆ

ಮೂಗಿನ ಎಡದ ಬದಿಗೆ ಆಭರಣ ಧರಿಸಿದರೆ ಅದರಿಂದ ಋತುಸ್ರಾವದ ವೇಳೆ ಉಂಟಾಗುವ ನೋವು ಕಡಿಮೆಯಾಗುವುದು ಎಂದು ಆಯುರ್ವೇದವು ಹೇಳುತ್ತದೆ. ಇದು ಮೂಗಿಗೆ ಆಭರಣ ಧರಿಸುವುದರಿಂದ ಸಿಗುವ ಅತ್ಯುನ್ನತ ಲಾಭಗಳು.

ಮಾನಸಿಕ ಶಕ್ತಿಗೆ

ಮಾನಸಿಕ ಶಕ್ತಿಗೆ

ಕಿವಿಗೆ ಆಭರಣ ಧರಿಸುವುದರಿಂದ ರಕ್ತಸಂಚಾರವು ಸರಿಯಾದ ರೀತಿಯಲ್ಲಿ ಆಗುವುದು. ಮೆದುಳಿಗೆ ಸರಿಯಾಗಿ ರಕ್ತಸಂಚಾರವಾದರೆ ಅದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುವುದು.

ಪ್ರತಿರೋಧಕ ಶಕ್ತಿ ಹೆಚ್ಚಾಗಲು

ಪ್ರತಿರೋಧಕ ಶಕ್ತಿ ಹೆಚ್ಚಾಗಲು

ಕಿವಿಯ ಮಧ್ಯದ ಭಾಗವು ದೇಹದ ಪ್ರತಿರೋಧಕ ಶಕ್ತಿಗೆ ಜವಾಬ್ದಾರಿಯಾಗಿದೆ. ಇದರಿಂದ ಕಿವಿಯ ಮಧ್ಯದ ಭಾಗಕ್ಕೆ ಆಭರಣ ಧರಿಸುವುದರಿಂದ ಹುಡುಗರು ಹಾಗೂ ಹುಡುಗಿಯರಿಗೆ ಒಳ್ಳೆಯದು. ಅಸಾಮಾನ್ಯ ಋತುಸ್ರಾವವನ್ನು ಇದು ತಡೆಯುವುದು.

ವೀರ್ಯ ಹೆಚ್ಚಿಸಲು!

ವೀರ್ಯ ಹೆಚ್ಚಿಸಲು!

ಪುರುಷರಿಗೆ ಕಿವಿಗೆ ಆಭರಣ ಚುಚ್ಚಿಸಿಕೊಂಡರೆ ಅದರಿಂದ ವೀರ್ಯವು ಹೆಚ್ಚಾಗುವುದು. ಭಾರತದ ಕೆಲವೊಂದು ಭಾಗಗಳಲ್ಲಿ ಪುರುಷರು ಕಿವಿಗೆ ಆಭರಣ ಚುಚ್ಚಿಸಿಕೊಳ್ಳುವುದು ಸಂಪ್ರದಾಯವಾಗಿದೆ.

ಕಣ್ಣ ದೃಷ್ಟಿಗೆ

ಕಣ್ಣ ದೃಷ್ಟಿಗೆ

ಅಕ್ಯೂಪಂಕ್ಚರ್ ಪ್ರಕಾರ ಕಿವಿಯ ಮಧ್ಯ ಭಾಗವು ಸಂಪೂರ್ಣವಾಗಿ ಕಣ್ಣಿನ ದೃಷ್ಟಿಯ ಮೇಲೆ ಪ್ರಭಾವ ಬೀರುವುದು. ಆಭರಣ ಚುಚ್ಚಿಕೊಳ್ಳುವುದರಿಂದ ಈ ಜಾಗದಲ್ಲಿ ಒತ್ತಡ ಬಿದ್ದು ಅದು ನೇರವಾಗಿ ಕಣ್ಣಿಗೆ ನೆರವಾಗುವುದು. ಇದು ಆಭರಣ ಚುಚ್ಚಿಸಿಕೊಳ್ಳುವ ಅದ್ಭುತ ಲಾಭಗಳು.

ಆರೋಗ್ಯಕರ ಕಿವಿಗಳಿಗೆ

ಆರೋಗ್ಯಕರ ಕಿವಿಗಳಿಗೆ

ಕಿವಿಯ ರಂಧ್ರವನ್ನು ಅಕ್ಯೂಪಂಕ್ಚರ್‌ನ ಮಾಸ್ಟರ್ ಸೆನ್ಸರ್ ಮತ್ತು ಮಾಸ್ಟರ್ ಸೆರೆಬ್ರಾ ಎನ್ನಲಾಗುವುದು. ಈ ಕೇಂದ್ರಗಳನ್ನು ಕಿವಿಯ ಕೇಳುವ ಶಕ್ತಿ ಎನ್ನಲಾಗುತ್ತದೆ. ಕಿವಿಗೆ ಆಭರಣ ಚುಚ್ಚಿಸಿಕೊಂಡರೆ ಟೆಟನಸ್ ನಿಂದ ಮುಕ್ತಿ ಪಡೆಯಲು ನೆರವಾಗುವುದು.

ಮೆದುಳಿನ ಬೆಳವಣಿಗೆಯಲ್ಲಿ ಸಹಕರಿಸುತ್ತದೆ

ಮೆದುಳಿನ ಬೆಳವಣಿಗೆಯಲ್ಲಿ ಸಹಕರಿಸುತ್ತದೆ

ತಜ್ಞರ ಪ್ರಕಾರ ಕಿವಿಯ ಚುಚ್ಚುವ ಮೂಲಕ ಈ ಭಾಗದಲ್ಲಿರುವ ನರಗಳು ಮೆದುಳಿನ ಕೆಲವು ಭಾಗಗಳಿಗೆ ಸತತವಾಗಿ ಪ್ರಚೋದನೆ ನೀಡುತ್ತಿರುತ್ತವೆ. ಈ ಪ್ರಚೋದನೆ ಮೆದುಳಿನ ಉತ್ತಮ ಬೆಳವಣಿಗೆಗೆ ನೆರವಾಗುತ್ತದೆ. ಇದೇ ವಿಷಯವನ್ನು ಕಂಡುಕೊಂಡ ಚೀನೀಯರು ನರಾಗ್ರಗಳಿರುವ ಕೆಲವು ಸೂಕ್ಷ್ಮ ಭಾಗಗಳಲಿ ಸೂಜಿ ಚುಚ್ಚುವ ಮೂಲಕ ಚಿಕಿತ್ಸೆಯನ್ನು ನೀಡುತ್ತಾರೆ

ಈ ನರಾಗ್ರಗಳ ಭಾಗಗಳಲ್ಲಿ ಒತ್ತಡ ನೀಡುವ ಮೂಲಕ ಮೆದುಳಿಗೆ ಹೆಚ್ಚಿನ ಸಂವೇದನೆ ದೊರೆತು ಮೆದುಳಿನ ಕ್ಷಮತೆ, ಸ್ಮರಣಶಕ್ತಿ ಮತ್ತು ಬೆಳವಣಿಗೆ ಹೆಚ್ಚುತ್ತದೆ. ಇದನ್ನೇ ಆಯುರ್ವೇದದಲ್ಲಿ ಮುದ್ರೆಗಳು ಎನ್ನಲಾಗುತ್ತದೆ. ಆದ್ದರಿಂದ ಆಯುರ್ವೇದದ ಪ್ರಕಾರ ಮಗುವಿನ ಮೆದುಳು ಬೆಳವಣಿಗೆಯ ಹಂತದಲ್ಲಿರುವಾಗ, ಅಂದರೆ ಸುಮಾರು ಎಂಟು ತಿಂಗಳ ವಯಸ್ಸಿನೊಳಗೇ ಕಿವಿ ಚುಚ್ಚಿಸುವುದು ಉತ್ತಮವಾಗಿದೆ.

ಉದ್ವೇಗ, ಆತಂಕ, OCD, ಹೆದರಿಕೆ ಮೊದಲಾದ ನರಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ

ಉದ್ವೇಗ, ಆತಂಕ, OCD, ಹೆದರಿಕೆ ಮೊದಲಾದ ನರಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ

ತಜ್ಞರ ಪ್ರಕಾರ ಕಿವಿ ಚುಚ್ಚಿಸಿಕೊಳ್ಳುವ ಮೂಲಕ ಮಕ್ಕಳು ಮಾನಸಿಕರಾಗಿ ಹೆಚ್ಚು ಸ್ಥೈರ್ಯವುಳ್ಳವರಾಗಿರುತ್ತಾರೆ. ನರವ್ಯವಸ್ಥೆ ಹಾಗೂ ಮೆದುಳಿನ ಕ್ಷಮತೆ ಹೆಚ್ಚುವುದರಿಂದ ನರಸಂಬಂಧಿ ತೊಂದರೆಗಳಾದ ಉದ್ವೇಗ, ಆತಂಕ, ಒಂದೇ ಕಾರ್ಯವನ್ನು ಅಥವಾ ಯೋಚನೆಯನ್ನು ಪದೇ ಪದೇ ಪುನರಾವರ್ತಿಸುವ Obsessive-Compulsive Disorder (OCD), ಹೆದರಿಕೆ, ಅಧೈರ್ಯ ಮೊದಲಾದ ತೊಂದರೆಗಳನ್ನು ನಿವಾರಿಸಬಹುದು.

ಅಷ್ಟೇ ಅಲ್ಲ, ಹುಚ್ಚು ಹಿಡಿಯಲು ಪ್ರೇರೇಪಿಸುವ ಉನ್ಮಾದವನ್ನೂ ತಡೆಗಟ್ಟಬಹುದು. ಆಕ್ಯುಪ್ರೆಶರ್ ಚಿಕಿತ್ಸೆ ನೀಡುವ ಪರಿಣಿತರ ಪ್ರಕಾರ ಕಿವಿ ಚುಚ್ಚಿಸಿಕೊಳ್ಳುವ ಮೂಲಕ ಮೆದುಳಿನ ಯೋಚನಾಲಹರಿಯನ್ನು ಬದಲಿಸಲು, ತನ್ಮೂಲಕ ಹಲವು ಕಾಯಿಲೆಗಳು ಕಡಿಮೆಯಾಗಲು ಅಥವಾ ಬಾರದಂತಿರಲು ಸಾಧ್ಯವಾಗುತ್ತದೆ.

ಕಣ್ಣುಗಳನ್ನು ಚುರುಕುಗೊಳಿಸುತ್ತದೆ

ಕಣ್ಣುಗಳನ್ನು ಚುರುಕುಗೊಳಿಸುತ್ತದೆ

ಚೀನಿಯರು ಕಂಡುಕೊಂಡ ಆಕ್ಯುಪಂಕ್ಚರ್ ವಿಧಾನದ ಪ್ರಕಾರ ಕಿವಿ ಚುಚ್ಚುವ ಭಾಗದಲ್ಲಿ ದೃಷ್ಟಿಯ ಕೇಂದ್ರದ ನರವೂ ಹಾದುಹೋಗಿದೆ. ಆದ್ದರಿಂದ ಈ ಭಾಗದಲ್ಲಿ ಕೊಂಚ ಒತ್ತಡ ಅಥವಾ ಪ್ರಚೋದನೆ ನೀಡುವ ಮೂಲಕ ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತದೆ. ಇದೇ ವಿಷಯವನ್ನು ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಹೇಳಲಾಗಿದೆ.

English summary

ear and nose piercing can have these surprising health benefits

Ear and nose piercing is more than just a means to adorn your body. According to Vedic rituals, ear and nose piercing has several health benefits for the body of a woman. Piercing is a common practice in rural India and many from other parts of India are observing this as a fashion statement. Specifically, it helps brain development, which is very rapid from eight months onwards. Ear and nose piercing has been practised since ancient times. Some women wear a nose stud in the left ear to relieve herself of the intense pain.
X
Desktop Bottom Promotion