Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಪ್ಪಿತಪ್ಪಿಯೂ ದಿನಕ್ಕೆ ನಾಲ್ಕು ಕಪ್‌ಗಿಂತ ಜಾಸ್ತಿ 'ಗ್ರೀನ್ ಟೀ' ಕುಡಿಯಬೇಡಿ!
ಹಸಿರು ಟೀ ಅಥವಾ ಗ್ರೀನ್ ಟೀ ಆರೋಗ್ಯಕರವೇ ಆಗಿದ್ದರೂ ದಿನಕ್ಕೆ ನಾಲ್ಕು ಕಪ್‌ಗಿಂತ ಹೆಚ್ಚು ಕುಡಿದರೆ ಇದೂ ವಿಷಕರವಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.
ಇತ್ತೀಚೆಗೆ ಭಾರತದಲ್ಲಿಯೂ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಹಸಿರು ಟೀ ಅಥವಾ ಗ್ರೀನ್ ಟೀ ತೂಕ ಇಳಿಸಿಕೊಳ್ಳುವವರಿಗೆ ಹಾಗೂ ದೇಹದಿಂದ ಕಲ್ಮಶಗಳನ್ನು ಹೊರಹಾಕಬಯಸುವವರಿಗೆ ವರದಾನವಾಗಿದೆ. ಯಾವಾಗ ಈ ವಾಕ್ಯಗಳಿಗೆ ಭಾರತೀಯರು ಹೆಚ್ಚಿನ ಪ್ರಾಧಾನ್ಯತೆ ನೀಡತೊಡಗಿದರೋ ಆಗಿನಿಂದ ಮಾರುಕಟ್ಟೆಯಲ್ಲಿ ಹಲವು ವಿಧದ ಹಸಿರು ಟೀಗಳು ಲಗ್ಗೆಯಿಟ್ಟಿವೆ.
ಚೀನಾದಲ್ಲಿ ಸಾವಿರಾರು ವರ್ಷಗಳಿಂದ ಇದರ ಬಳಕೆಯಿದ್ದರೂ ಭಾರತದಲ್ಲಿ ಇದರ ಬಳಕೆಗೆ ಇತ್ತೀಚಿಗಷ್ಟೇ ಹೆಚ್ಚಿನ ಬಲ ಬರಲು ಕಾರಣ ಇದರಲ್ಲಿ ಮಧುಮೇಹದ ವಿರುದ್ಧ ಹೋರಾಡುವ, ಮೆದುಳನ್ನು ಸವೆತದಿಂದ ರಕ್ಷಿಸುವ, ಕೊಬ್ಬನ್ನು ಕರಗಿಸುವ, ಒಟ್ಟಾರೆ ಆರೋಗ್ಯ ಮತ್ತು ಮನೋಭಾವವನ್ನು ಉತ್ತಮಗೊಳಿಸುವ ಗುಣಗಳಿವೆ ಎಂಬ ನಂಬಿಕೆ.
ಆದರೆ ಅತಿಯಾದರೆ ಅಮೃತವೂ ವಿಷವೆಂದು ಕನ್ನಡದ ಗಾದೆಮಾತಿದೆ. ಹಸಿರು ಟೀ ಸಹಾ ಆರೋಗ್ಯಕರವೇ ಆಗಿದ್ದರೂ ದಿನಕ್ಕೆ ನಾಲ್ಕು ಕಪ್‌ಗಿಂತ ಹೆಚ್ಚು ಕುಡಿದರೆ ಇದೂ ವಿಷಕರವಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಅದರಲ್ಲೂ ಈ ಕೆಳಗೆ ವಿವರಿಸಿದ ಆರೋಗ್ಯದ ತೊಂದರೆಗಳಿರುವ ವ್ಯಕ್ತಿಗಳು ಹಸಿರು ಟೀ ಸೇವಿಸಲೇಬಾರದು. ಏಕೆ ಎಂಬುದನ್ನು ತಿಳಿಯಲು ಮುಂದೆ ಓದಿ....

ಮಧುಮೇಹಿಗಳು
ಮಧುಮೇಹಿಗಳು ಹಸಿರು ಟೀಯನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದರೂ ಇದರ ಪರೋಕ್ಷ ಪರಿಣಾಮ ಮಧುಮೇಹದ ಮೇಲೆ ಅಗಿಯೇ ಆಗುತ್ತದೆ. ವಿಶೇಷವಾಗಿ ದೇಹದಲ್ಲಿರುವ ರಕ್ತ ಮತ್ತು ಸಕ್ಕರೆಯ ಸಮತೋಲನದ ಮೇಲೆ ಪ್ರಭಾವ ಬೀರುವ ಮೂಲಕ ತಲೆ ತಿರುಗುವಿಕೆ, ಎದೆಯುರಿ ಮತ್ತು ವ್ಯಾಕುಲತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಧುಮೇಹಿಗಳು ಹಸಿರು ಟೀ ಹೆಸರೆತ್ತದೇ ಇರುವುದೇ ಒಳ್ಳೆಯದು.

ಗರ್ಭಿಣಿಯರು
ಒಂದು ವೇಳೆ ನೀವು ಗರ್ಭಿಣಿಯಾಗಿದ್ದರೆ ಅಥವಾ ಗರ್ಭ ಧರಿಸುವ ತಯಾರಿ ನಡೆಸುತ್ತಿದ್ದರೆ ಹಸಿರು ಟೀ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಇದರಲ್ಲಿರುವ ಕೆಫೀನ್ ನಿಮ್ಮ ದೇಹದ ಜೊತೆಗೇ ಗರ್ಭದಲ್ಲಿರುವ ಮಗುವಿನ ರಕ್ತಕ್ಕೂ ಧಾವಿಸುತ್ತದೆ. ಕೆಫೀನ್ ಒಂದು ಪ್ರಚೋದಕವಾಗಿದ್ದು ಇದರ ಪ್ರಚೋದನೆಯಿಂದ ಪ್ರಭಾವಿತಗೊಳ್ಳುವ ಜೀವರಾಸಾಯನಿಕ ಕ್ರಿಯೆಯನ್ನು ಮಗುವಿನ ಸೂಕ್ಷ್ಮ ದೇಹಕ್ಕೆ ವಯಸ್ಕ ದೇಹದಂತೆ ತಡೆಯಲು ಸಾಧ್ಯವಿಲ್ಲ.

ಅಧಿಕ ರಕ್ತದ ಒತ್ತಡವಿರುವ ವ್ಯಕ್ತಿಗಳು
ಹಸಿರು ಟೀ ಸೇವನೆಯ ಬಳಿಕ ರಕ್ತದಲ್ಲಿ ಅಡ್ರಿನಲಿನ್ ಎಂಬ ರಸದೂತ ಬಿಡುಗಡೆಯಾಗಿ ಹೃದಯದ ಬಡಿತದ ವೇಗವನ್ನು ಹೆಚ್ಚಿಸುತ್ತದೆ. ಈಗಾಗಲೇ ಹೃದಯದ ಒತ್ತಡ ಹೆಚ್ಚಿರುವ ವ್ಯಕ್ತಿಗಳಿಗೆ ಈ ಹೆಚ್ಚುವರಿ ಬಡಿತದ ಪರಿಣಾಮ ಅಪಾಯಕಾರಿಯಾಗಬಹುದು.

ಮಕ್ಕಳು
ಹಸಿರು ಟೀ ಮಕ್ಕಳಿಗೆ ಸರ್ವಥಾ ಹೇಳಿಸಿದ್ದಲ್ಲ. ಇದರಲ್ಲಿರುವ ಟ್ಯಾನಿನ್ ಮಕ್ಕಳ ಎಳೆಯ ಜೀರ್‍ಣಾಂಗಗಳು ಪ್ರೋಟೀನುಗಳು ಮತ್ತು ಕೊಬ್ಬನ್ನು ಹೀರಿಕೊಳ್ಳದಂತೆ ಅಡ್ಡಿಪಡಿಸುತ್ತದೆ. ಆದರೆ ಈ ವಿಷಯವನ್ನು ಇನ್ನೂ ಖಚಿತಪಡಿಸಬೇಕಿದ್ದು ಮುಂದಿನ ದಿನಗಳ ಸಂಶೋಧನೆಗಳು ದೃಢೀಕರಿಸಲಿವೆ. ಅಲ್ಲಿಯವರೆಗೂ ಮಕ್ಕಳಿಗೆ ಹಸಿರು ಟೀ ಕೊಡುವುದು ಬೇಡ. ಅಷ್ಟೇ ಅಲ್ಲ, ಇದರಲ್ಲಿರುವ ಕೆಫೀನ್ ಮಕ್ಕಳ ಬೆಳವಣಿಗೆಗೆ ಪೂರಕವಾದ ಕೆಲವು ರಸದೂತಗಳು ಅಗತ್ಯಕ್ಕೂ ಹೆಚ್ಚು ಸ್ರವಿಸಲು ಕಾರಣವಾಗಿ ಅವರ ಬೆಳವಣಿಗೆಯ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ಇವರ ಬೆಳವಣಿಗೆ ಪೂರ್ಣಮಟ್ಟಕ್ಕೆ ಬರುವವರೆಗೂ ಹಸಿರು ಟೀ ಬೇಡ.

ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳು
ಕಬ್ಬಿಣದ ಕೊರತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಹಸಿರು ಟೀ ಸಲ್ಲದು. ಏಕೆಂದರೆ ಕಬ್ಬಿಣದ ಕೊರತೆಯಿಂದ ರಕ್ತದ ಕೊರತೆಯೂ ಉಂಟಾಗುತ್ತದೆ.2001ರಲ್ಲಿ ನಡೆಸಿದ ಸಂಶೋಧನೆಯೊಂದರ ಪ್ರಕಾರ ಹಸಿರು ಟೀ ಸೇವನೆಯಿಂದ ಆಹಾರದಲ್ಲಿದ್ದ ಕಬ್ಬಿಣವನ್ನು ಹೀರಿಕೊಳ್ಳಲು ಹಸಿರು ಟೀ ಅಡ್ಡಿಪಡಿಸುತ್ತದೆ. ಈ ವ್ಯಕ್ತಿಗಳು ಹೆಚ್ಚು ಹೆಚ್ಚು ಹಸಿರು ಟೀ ಕುಡಿದಷ್ಟೂ ಹೆಚ್ಚು ಹೆಚ್ಚಾಗಿ ರಕ್ತಹೀನತೆಯಿಂದ ಬಳಲುತ್ತಾರೆ.

ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳು
ನಿದ್ದೆ ಆವರಿಸಲು ಮೆದುಳಿಗೆ ಕೆಲವು ರಾಸಾಯನಿಕಗಳು ತಲುಪಬೇಕು. ಹಸಿರು ಟೀ ಸೇವನೆಯಿಂದ ಈ ರಾಸಾಯನಿಕಗಳು ಮೆದುಳನ್ನು ತಲುಪದೇ ನಿದ್ದೆ ಆವರಿಸುವುದು ಕಠಿಣವಾಗುತ್ತದೆ. ಆದ್ದರಿಂದ ನಿದ್ರಾಹೀನತೆಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳು ಅಥವಾ ನಿದ್ದೆ ಆವರಿಸಲು ಕಷ್ಟವಾಗುತ್ತಿರುವ ವ್ಯಕ್ತಿಗಳಿಗೆ ಹಸಿರು ಟೀ ಸೇವನೆ ಸಲ್ಲದು.

ಹೃದಯದ ಬಡಿತ ಕ್ರಮಬದ್ಧವಿಲ್ಲದ ವ್ಯಕ್ತಿಗಳು
ಹಸಿರು ಟೀಯಲ್ಲಿ ಸೋಸಲ್ಪಟ್ಟಿರುವ ಕೆಫೀನ್ ಇದೆ. ಇದು ಹೃದಯಬಡಿತದ ವೇಗವನ್ನು ಏರುಪೇರಾಗಿಸಬಹುದು. ಅಲ್ಲದೇ ವಿಶ್ರಾಂತಿಯ ಸಮಯದಲ್ಲಿ ಹೃದಯದ ಸ್ನಾಯುಗಳಿಗೆ ಪ್ರಚೋದನೆ ನೀಡುವ ಮೂಲಕ ಅಗತ್ಯವೇ ಇಲ್ಲದೆ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ವ್ಯಕ್ತಿಗಳಿಗೂ ಹಸಿರು ಟೀ ಸಲ್ಲದು.



Click it and Unblock the Notifications
