Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಫಿ ಕುಡಿದರೆ ಈ ಮೂರು ಮಾರಕ ರೋಗ ತಡೆಯಬಹುದು!
ಕಾಫಿ ಸುವಾಸನೆ ಕೇಳಿದರೆ ಯಾರಿಗಾದರೂ ಅದನ್ನು ಕುಡಿಯಬೇಕೆನಿಸುವುದು. ಅಂತಹ ಸುವಾಸನೆ ಹಾಗೂ ರುಚಿ ಹೊಂದಿರುವ ಕಾಫಿ ಬೆಳಗ್ಗೆ ಎದ್ದ ಕೂಡಲೇ ನಮ್ಮ ಹೊಟ್ಟೆ ಸೇರಿಕೊಳ್ಳುವುದು. ಹೆಚ್ಚಿನವರು ಬೆಳಿಗ್ಗೆದ್ದು ಕಾಫಿ ಸೇವನೆ ಮಾಡುವರು. ಅದರಲ್ಲೂ ಹೆಚ್ಚು ಚಳಿ ಇರುವಂತಹ ಪ್ರದೇಶಗಳಲ್ಲಿ ಕಾಫಿ ಕುಡಿಯುವುದು ಸಾಮಾನ್ಯವಾಗಿದೆ. ಕಾಫಿಯಿಂದ ಹಲವಾರು ರೀತಿಯ ಲಾಭಗಳು ಸಿಗುತ್ತದೆ ಎಂದು ಬಗ್ಗೆ ಅಧ್ಯಯನಗಳು ಕೂಡ ಹೇಳಿವೆ.
ದಿನದಲ್ಲಿ ಒಂದೆರಡು ಸಣ್ಣ ಕಪ್ ಕಾಫಿ ಕುಡಿದರೆ ಅದರಿಂದ ಆರೋಗ್ಯದ ಮೇಲೆ ಯಾವುದೇ ಹಾನಿಯಾಗದು. ಆದರೆ ಅತಿಯಾಗಿ ಕಾಫಿ ಕುಡಿದರೂ ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಖಚಿತ. ಕಚೇರಿಗೆ ಹೋಗುವವರಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳ ತನಕ ಪ್ರತಿಯೊಬ್ಬರು ಕಾಫಿ ದಾಸರು!
ಕಾಫಿಯಿಂದ ಆರೋಗ್ಯಕ್ಕೆ ಆಗುವ ಲಾಭ ಮತ್ತು ಅಡ್ಡಪರಿಣಾಮಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಇಲ್ಲಿ ಕಾಫಿಯಿಂದ ಆಗುವ ಲಾಭಗಳ ಬಗ್ಗೆ ನಿಮಗೆ ಬೋಲ್ಡ್ ಸ್ಕೈ ತಿಳಿಸಿಕೊಡಲಿದೆ. ವಯಸ್ಸಾಗುತ್ತಾ ಇರುವಂತೆ ನಮ್ಮ ಕಾಡುವಂತಹ ಕೆಲವೊಂದು ಸಮಸ್ಯೆಗಳಿಗೆ ಕಾಫಿಯು ಒಳ್ಳೆಯ ಪರಿಹಾರ...ಸರಿ ಹಾಗಾದರೆ ಇನ್ನು ತಡ ಮಾಡುವುದು ಬೇಡ, ಯಾವ್ಯಾವ ಕಾಯಿಲೆಗಳಿಗೆ ಕಾಫಿ ಒಳ್ಳೆಯದು ಎಂದು ತಿಳಿಯಲು ಮುಂದೆ ಓದುತ್ತಾ ಸಾಗಿ...

ಮಧುಮೇಹ
ಮಧುಮೇಹವು ದೇಹದ ಒಂದು ಪ್ರಮುಖ ಸಮಸ್ಯೆಯಾಗಿದೆ. ದೇಹದಲ್ಲಿ ಇನ್ಸುಲಿನ್ ಪ್ರತಿರೋಧಕವು ನಿರ್ಮಾಣವಾಗಿ ಯಾವುದೇ ರೀತಿಯ ಇನ್ಸುಲಿನ್ ದೇಹದಲ್ಲಿ ಉತ್ಪತ್ತಿಯಾಗದೆ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗುವುದು. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುವುದು. ಮಧುಮೇಹ ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಿಲ್ಲ. ಆದರೆ ಚಿಕಿತ್ಸೆಯಿದೆ.

ಮಧುಮೇಹ
ಕಾಫಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಚಯಾಪಚಯಾ ಕ್ರಿಯೆಯ ಆರೋಗ್ಯವಾಗಿಸಿ, ಇನ್ಸುಲಿನ್ ಹಾರ್ಮೋನು ಸಮತೋಲ ಕಾಪಾಡಿಕೊಂಡು ವಯಸ್ಸಾಗುವ ವೇಳೆ ಬರುವ ಮಧುಮೇಹ ತಡೆಯುವುದು ಎಂದು ಅಮೆರಿಕನ್ ಕೆಮಿಕಲ್ ಸೊಸೈಟಿ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯೊಂದು ಹೇಳಿದೆ.

ಪಾರ್ಶ್ವವಾಯು
ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಮೆದುಳಿಗೆ ಸರಿಯಾಗಿ ರಕ್ತ ಸರಬರಾಜು ಆಗದೆ ಅದರ ಕೋಶಗಳಿಗೆ ಹಾನಿಯಾಗುವುದೇ ಪಾರ್ಶ್ವವಾಯು. ಇದು ತುಂಬಾ ಗಂಭೀರ ಮತ್ತು ಪ್ರಾಣಹಾನಿ ಉಂಟು ಮಾಡುವ ಕಾಯಿಲೆ. ಪ್ರತೀ ದಿನ ಒಂದು ಸಣ್ಣ ಕಪ್ ಕಾಫಿ ಸಕ್ಕರೆ ಹಾಕದೆ ಸೇವಿಸಿದರೆ ಅದರಿಂದ ರಕ್ತನಾಳಗಳು ಸರಾಗವಾಗಿ ಕೆಲಸ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆದು ಪಾರ್ಶ್ವವಾಯು ತಡೆಯುವುದು.

ಆಲ್ಝೈಮೆರ್
ಆಲ್ಝೈಮೆರ್ ಎನ್ನುವುದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದು ಮೆದುಳಿನ ಜೀವಕೋಶದ ನೆನಪು, ಕಾರ್ಯ ಮತ್ತು ಕೌಶಲ್ಯ ಹಾಳುಗೆಡವುದು. ಇದರಿಂದ ಆ ವ್ಯಕ್ತಿಯ ದೈನಂದಿನ ಚಟುವಟಿಕೆ ಮೇಲೆ ಪರಿಣಾಮವಾಗುವುದು.

ಆಲ್ಝೈಮೆರ್
ಕಾಫಿಯಲ್ಲಿ ಇರುವಂತಹ ಕೆಫಿನ್ ಮೆದುಳಿನ ಕೋಶಗಳು ಆರೋಗ್ಯವಾಗಿ ಹಾಗೂ ದೀರ್ಘಕಾಲ ತನಕ ಚಟುವಟಿಕೆಯಿಂದ ಇರುವಂತೆ ಮಾಡುವುದು. ಇದರಿಂದ ಆಲ್ಝೈಮೆರ್ ಕಾಯಿಲೆ ತಡೆಯಬಹುದು ಎಂದು ಅಮೆರಿಕಾದ ಸಂಶೋಧನಾ ವರದಿ ಹೇಳಿದೆ.



Click it and Unblock the Notifications
