For Quick Alerts
ALLOW NOTIFICATIONS  
For Daily Alerts

ಮದ್ಯದ ಜೊತೆಗೆ 'ಎನರ್ಜಿ ಡ್ರಿಂಕ್' ಬೆರೆಸಿ ಕುಡಿದರೆ ಇನ್ನೂ ಆಪತ್ತು!

By Divya
|

ಆಲ್ಕೋಹಾಲ್ ಭರಿತ ಪಾನೀಯವನ್ನು ಕುಡಿಯುವುದು ರಾಜ-ಮಹರಾಜರ ಕಾಲದಿಂದಲೂ ನಡೆದು ಬಂದ ಪದ್ಧತಿ. ಇತ್ತೀಚೆಗೆ ಇದು ವಿಪರೀತ ಎನ್ನುವ ಮಟ್ಟಿಗೆ ಸಾಗಿದೆ. ಎಳೆಯ ವಯಸ್ಸಿನವರಿಂದ ಹಿಡಿದು ತಾತಂದಿರು ಸಹ ಇದನ್ನು ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ಹಾನಿಕರ ಎಂದು ಅದೆಷ್ಟೇ ಹೇಳಿದರೂ, ಆಲ್ಕೋಹಾಲ್ ಪಾನೀಯ ಕುಡಿಯುವವರ ಸಂಖ್ಯೆಗೇನೂ ಕಡಿಮೆಯಾಗಿಲ್ಲ.

ಆಲ್ಕೋಹಾಲ್ ಪಾನೀಯ ಇಲ್ಲವೇ, ಯಾವುದಾದರೂ ಎನರ್ಜಿ ಪಾನೀಯಗಳಿಗೆ ಆಲ್ಕೋಹಾಲ್ ಸೇರಿಸಿ ಕುಡಿಯುವುದು. ಇವನ್ನೆಲ್ಲಾ ಒಂದು ಹವ್ಯಾಸವಾಗಿ ಪರಿವರ್ತಿಸಿಕೊಂಡಿದ್ದಾರೆ. ಆದರೆ ಈ ರೀತಿ ಎನರ್ಜಿ ಪಾನೀಯಗಳಿಗೆ ಆಲ್ಕೋಹಾಲ್ ಬೆರೆಸಿ ಸೇವಿಸಿದರೆ ಗಂಭೀರವಾದ ಆರೋಗ್ಯ ಸಮಸ್ಯೆ ಬರುವುದು.

ಒತ್ತಡದ ನೆಪ, ಫ್ಯಾಷನ್ ಹಾಗೂ ದೊಡ್ಡಸ್ತಿಕೆಯ ತೋರಿಕೆಗಾಗಿ ಕುಡಿಯುವ ಈ ಚಟ ನಿಮ್ಮನ್ನು ಚಟ್ಟ ಏರುವಂತೆ ಮಾಡಬಹುದು ಎನ್ನುವ ಆಘಾತಕಾರಿ ಸಂಶೋಧನೆಯೊಂದು ವರದಿ ಮಾಡಿದೆ. ಬರಿಯ ಆಲ್ಕೋಹಾಲ್ ಸೇವಿಸುವುದಕ್ಕಿಂತ ಹೆಚ್ಚು ದುಷ್ಪರಿಣಾಮ ಬೀರುವುದು ಎನರ್ಜಿ ಪಾನೀಯದೊಡನೆ ಆಲ್ಕೋಹಾಲ್ ಪಾನೀಯ ಬೆರೆಸಿ ಸೇವಿಸುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ತಿಳಿಯಬೇಕೆಂದರೆ ಮುಂದೆ ಓದಿ...

ಸಂಶೋಧಕರ ವಿವರ

ಸಂಶೋಧಕರ ವಿವರ

ಇತ್ತೀಚೆಗೆ ಕೆನಡಾದ "ವಿಕ್ಟೋರಿಯಾ ಸೆಂಟರ್ ಫಾರ್ ಎಡಿಕ್ಷನ್ಸ್ ರಿಸರ್ಚ್ ಆಫ್ ಬಿಸಿ ವಿಶ್ವವಿದ್ಯಾಲಯದ'' ತಂಡವೊಂದು ನಡೆಸಿದ ಅಧ್ಯಯನದ ಪ್ರಕಾರ ಇದೊಂದು ಅಪಾಯಕಾರಿ ಪದ್ಧತಿ ಎಂದು ಹೇಳಿದೆ. ಉದಾ: ರೆಡ್ ಬುಲ್ ಪಾನೀಯಕ್ಕೆ ವೋಡ್ಕಾ ಸೇರಿಸಿ ಕುಡಿಯುವುದು ನಿಮ್ಮ ಉತ್ತಮ ಪರಿಕಲ್ಪನೆ ಅಥವಾ ಬುದ್ಧಿವಂತಿಕೆ ಇರಬಹುದು, ಆದರೆ ಈ ಬಗೆಯಲ್ಲಿ ಬೆರೆಸಿ ಕುಡಿಯುವುದರಿಂದ ಆರೋಗ್ಯದಲ್ಲಿ ಆಘಾತಕಾರಿ ಬೆಳವಣಿಗೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿದೆ.

ಅಧ್ಯಯನಕಾರರ ಪ್ರಕಾರ

ಅಧ್ಯಯನಕಾರರ ಪ್ರಕಾರ

ಅಧ್ಯಯನಕಾರ ಮತ್ತು ಲೇಖಕರಾದ ಆದ್ರ ರೋಮರ್, ಎಂ.ಎಸ್ಸಿ, ಅವರು ಹೇಳುವ ಪ್ರಕಾರ ಆಲ್ಕೋಹಾಲ್ ಪ್ರಿಯರು ಸಾಮಾನ್ಯವಾಗಿ ಕೆಲಸ ಮುಗಿಸಿ ಮನೆಗೆ ವಿಶ್ರಾಂತಿ ಪಡೆಯಲು ಬರುತ್ತಾರೆ. ಆ ಸಮಯದಲ್ಲಿ ಒತ್ತಡ ಮತ್ತು ಆಯಾಸದ ನಿವಾರಣೆಯ ನೆಪದಲ್ಲಿ ಎನರ್ಜಿ ಪಾನೀಯದ ಜೊತೆಗೆ ಆಲ್ಕೋಹಾಲ್ ಬೆರೆಸಿ ಸೇವಿಸುತ್ತಾರೆ. ಇದು ಅವರಿಗೆ ಹೆಚ್ಚಿನ ಅಮಲನ್ನು ನೀಡಿ, ಸಂತೈಸಿದ ಅನುಭವ ಕೊಡಬಹುದು. ಆದರೆ ಈ ರೀತಿಯ ಮಿಶ್ರಣದಿಂದ ಅಪಾಯಕಾರಿ ಆರೋಗ್ಯದ ಬೆಳವಣಿಗೆ ಹಾಗೂ ಅನುಚಿತ ನಡವಳಿಕೆಗೆ ಉತ್ತೇಜನ ನೀಡುವುದು.

ಪರಿಣಾಮಗಳು

ಪರಿಣಾಮಗಳು

ಈ ಬಗೆಯ ಮಿಶ್ರಣ ಪಾನೀಯವನ್ನು ಸೇವಿಸಿದರೆ ಮಿದುಳಿನ ಭಾಗಕ್ಕೆ, ಕರಳು, ಲಿವರ್, ಕಿಡ್ನಿ ಹಾಗೂ ಸಂವೇದನೆಗಳ ಮೇಲೆ ತೀವ್ರತರಹದ ಪರಿಣಾಮ ಬೀರುವುದು. ಇವುಗಳ ಸೇವನೆ ಒಂದು ಹವ್ಯಾಸವಾಗಿ ತಿರುಗಿದರೆ ಅದರಿಂದ ಆಚೆ ಬರುವುದು ಸಹ ಸ್ವಲ್ಪ ಕಷ್ಟವೇ ಎಂದು ಹೇಳಲಾಗುತ್ತದೆ.

ರೋಮರ್ ಪ್ರಕಾರ

ರೋಮರ್ ಪ್ರಕಾರ

ಆಲ್ಕೋಹಾಲ್ ಸಂಬಂಧಿತ ಅನೇಕ ಅಧ್ಯಯನಗಳು ಮತ್ತು ಸಂಶೋಧನೆಗಳು ನಡೆದಿವೆ. ಹೀಗೆ ನಡೆಯುತ್ತಲೇ ಇರುತ್ತವೆ. ಇವರು ಹೇಳುವ ಹಾಗೆ, ಎನರ್ಜಿ ಪಾನೀಯಗಳಿಗೆ ಆಲ್ಕೋಹಾಲ್ ಸೇರಿಸಿ ಕುಡಿಯುವುದರಿಂದ ಅನೇಕ ಆಪತ್ತುಗಳು ಉಂಟಾಗುವುದು ಎಂಬುದನ್ನು ಪಟ್ಟಿ ಮಾಡಿದ್ದೇವೆ. ಇವುಗಳ ಸೇವನೆಯಿಂದ ಒಳ್ಳೆಯ ಪರಿಣಾಮಕ್ಕಿಂತ ಕೆಟ್ಟ ಪರಿಣಾಮಗಳೇ ಹೆಚ್ಚಾಗುತ್ತವೆ.

ಸಾರ್ವಜನಿಕ ಹಿತಾಸಕ್ತಿ

ಸಾರ್ವಜನಿಕ ಹಿತಾಸಕ್ತಿ

ಈ ಸಂಶೋಧನೆ ಮತ್ತು ಅಧ್ಯಯನಗಳ ಉದ್ದೇಶ ಸಾರ್ವಜನಿಕ ಹಿತಾಸಕ್ತಿ ಹಾಗೂ ಆರೋಗ್ಯ ಕಾಳಜಿ. ಈ ವಿಚಾರ ಎಲ್ಲರಿಗೂ ತಿಳಿಯಬೇಕು ಹಾಗೂ ಅರಿವುಂಟಾಗಬೇಕು ಎನ್ನುವುದೇ ನಮ್ಮ ಗುರಿ ಎಂದಿದ್ದಾರೆ.

English summary

Drinkers, here’s why you should never mix alcohol with energy drinks

According to a new research, mixing alcohol with highly caffeinated energy drinks could increase the risk of falls and injury.
Story first published: Thursday, June 15, 2017, 20:30 [IST]
X
Desktop Bottom Promotion