For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಎದ್ದ ಕೂಡಲೇ-ಲಿಂಬೆ ರಸ ಬೆರೆಸಿದ ನೀರು ಕುಡಿಯಿರಿ

By Arshad
|

ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುವ ಅಗ್ಗದ ಪೇಯವೊಂದನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯುವ ಮೂಲಕ ಹಲವು ಪ್ರಯೋಜನಗಳನ್ನು ಪಡೆಯಬಹುದು ಗೊತ್ತೇ? ಇದು ಮಾರುಕಟ್ಟೆಯಲ್ಲಿ ದೊರಕುವ ಪೇಯವಂತೂ ಅಲ್ಲ, ಬದಲಿಗೆ ಎಲ್ಲಾ ಮನೆಯಲ್ಲಿರುವ ಸಾಮಾನ್ಯವಾದ ಲಿಂಬೆರಸ ಬೆರೆಸಿದ ನೀರು! ಈ ನೀರನ್ನು ನಿತ್ಯವೂ, ಕನಿಷ್ಟ ಎರಡು ವಾರಗಳವರೆಗೆ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯುವ ಮೂಲಕ ಕೆಲವಾರು ಕಾಯಿಲೆಗಳು ಮಾಯವಾಗಿರುವುದನ್ನು ಕಂಡುಕೊಳ್ಳಲಾಗಿದೆ.

ತೆಂಗಿನ ಎಣ್ಣೆ+ಲಿಂಬೆರಸ, ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ

ಲಿಂಬೆರಸದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಒಂದು ಲೋಟದಲ್ಲಿ ಒಂದು ಲಿಂಬೆಯ ರಸವನ್ನು ಬೆರೆಸಿ ಬೆಳಿಗ್ಗೆ ಕುಡಿಯುವ ಮೂಲಕ ದಿನದ ಅಗತ್ಯವಿರುವ ವಿಟಮಿನ್ ಸಿ ಪ್ರಮಾಣದ 187% ರಷ್ಟು ಲಭಿಸುತ್ತದೆ. ಅಲ್ಲದೇ ಲಿಂಬೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ, ಮೆಗ್ನೀಶಿಯಂ ಹಾಗೂ ತಾಮ್ರವೂ ಇದೆ. ಲಿಂಬೆಹಣ್ಣಿನಲ್ಲಿ ಬೀಜ ಇಲ್ಲದಿದ್ದರೆ ಸಂಜೀವಿನಿಯಾಗುತ್ತಿತ್ತು ಎಂದು ಹಿರಿಯರು ಹೇಳುವುದರಲ್ಲಿ ಉತ್ಪ್ರೇಕ್ಷೆಯಿಲ್ಲ! ಈ ಸಂಜೀವಿನಿ ಅತ್ಯಂತ ಸುರಕ್ಷಿತ, ಅತ್ಯಂತ ಅಗ್ಗವಾದ ಹಾಗೂ ಅತ್ಯಂತ ಸುಲಭವಾದ ಆರೋಗ್ಯಕರ ಪೇಯವಾಗಿದೆ.


ಲಿಂಬೆ ಜ್ಯೂಸ್ ಕುಡಿದರೆ ಕೆಲವೊಂದು ರೋಗಗಳಿಗೆ ಮದ್ದೇ ಬೇಡ!

ಈ ನೀರನ್ನು ಕುಡಿಯುವ ಮೂಲಕ ಜೀರ್ಣಕ್ರಿಯೆ ಸುಲಭಗೊಳ್ಳುವುದು, ಯಕೃತ್ ಸ್ವಚ್ಛಗೊಳಿಸುವುದು, ಹಳೆಯ ಕಲೆಗಳನ್ನು ತಿಳಿಗೊಳಿಸುವುದು, ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವುದು, ಖಿನ್ನತೆ ಮತ್ತು ಉದ್ವೇಗದಿಂದ ಹೊರಬರಲು ನೆರವಾಗುವುದು, ಎದೆಯುರಿಯನ್ನು ಕಡಿಮೆ ಮಾಡುವುದು, ಕೆಲವಾರು ಕ್ಯಾನ್ಸರ್ ಬರುವುದರಿಂದ ತಡೆಗಟ್ಟುವುದು, ಉರಿಯೂತವನ್ನು ಶಮನಗೊಳಿಸುವುದು ಮೊದಲಾದ ಪ್ರಯೋಜನಗಳನ್ನು ಪಡೆಯಬಹುದು. ಈ ಅದ್ಭುತ ರಸವನ್ನು ಕನಿಷ್ಠ ಎರಡು ವಾರಗಳವರೆಗೆ ಬೆಳಗ್ಗಿನ ಪ್ರಥಮ ಆಹಾರವಾಗಿ ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ, ಮುಂದಿನ ಮುಕ್ಕಾಲು ಘಂಟೆ ಬೇರೇನನ್ನೂ ಸೇವಿಸದೇ ಇರುವ ಮೂಲಕ ಪಡೆಯಬಹುದಾದ ಪ್ರಯೋಜನಗಳೇನು ಎಂಬುದನ್ನು ಇಂದು ಸಂಗ್ರಹಿಸಲಾಗಿದೆ, ಮುಂದೆ ಓದಿ.....

ದಿನವಿಡೀ ಚಟುವಟಿಕೆಯಿಂದಿರಲು ನೆರವಾಗುತ್ತದೆ

ದಿನವಿಡೀ ಚಟುವಟಿಕೆಯಿಂದಿರಲು ನೆರವಾಗುತ್ತದೆ

ಬೆಳಗ್ಗೆದ್ದ ಬಳಿಕ ದಿನವಿಡೀ ಚಟುವಟಿಕೆಯಿಂದಿರಲು ಕಾಫಿ ಅಥವಾ ಬೇರಾವುದೋ ಪೇಯವನ್ನು ಕುಡಿಯುತ್ತಾ ಬಂದಿದ್ದೀರಿ. ಈಗ ಲಿಂಬೆರಸ ಬೆರೆಸಿದ ನೀರನ್ನು ಕುಡಿಯುವ ಮೂಲಕ ಈ ಅಗತ್ಯತೆಯನ್ನು ಪೂರೈಸಿಕೊಳ್ಳುವ ಜೊತೆಗೇ ದಿನವಿಡೀ ಆಹ್ಲಾದತೆಯಿಂದಿರಲೂ ನೆರವಾಗುತ್ತದೆ. ಹಾಗಾಗಿ ವರ್ಷಗಳಿಂದ ನೀವು ಕುಡಿಯುತ್ತಾ ಬಂದಿರುವ ಟೀ ಕಾಫಿ ಮೊದಲಾದ ವ್ಯಸನಗಳನ್ನು ಬಿಡಲು ಈಗ ಸಕಾಲವಾಗಿದೆ. ಅಲ್ಲದೇ ಕಾಫಿ ಟೀ ಗಿಂತಲೂ ಹೆಚ್ಚು ಹೊತ್ತಿನವರೆಗೆ ಆಹ್ಲಾದತೆ ಹಾಗೂ ಚಟುವಟಿಕೆಯಿಂದಿರಲು ನೆರವಾಗುವ ಮೂಲಕ ಲಿಂಬೆರಸ ಶೀಘ್ರವೇ ನಿಮ್ಮ ನಿತ್ಯದ ಪ್ರಥಮ ಪೇಯವಾಗಲಿದೆ.

ತಲೆನೋವು ಇಲ್ಲವಾಗುತ್ತದೆ

ತಲೆನೋವು ಇಲ್ಲವಾಗುತ್ತದೆ

ಇಂದಿನ ದಿನಗಳಲ್ಲಿ ಬೆಳಕು ಸೂಸುವ ಕಂಪ್ಯೂಟರ್ ಹಾಗೂ ಮೊಬೈಲ್ ಪರದೆಗಳನ್ನು ಇಡಿಯ ದಿನ ನೋಡುವ ಮೂಲಕ ತಲೆನೋವು ಎದುರಾಗುತ್ತದೆ. ಲಿಂಬೆರಸವನ್ನು ಬೆಳಗ್ಗೆ ಕುಡಿಯುವ ಮೂಲಕ ತಲೆನೋವು ಮಾಯವಾಗುವುದು ಮಾತ್ರವಲ್ಲ ಈ ಮೂಲಕ ಎದುರಾಗುವ ಕಿರಿಕಿರಿ ಸಹಾ ಇಲ್ಲವಾಗುತ್ತದೆ.

ತೂಕವಿಳಿಸಲು ನೆರವಾಗುತ್ತದೆ ಹಾಗೂ ಹೊಟ್ಟೆ ಸಪಾಟಾಗಲು ನೆರವಾಗುತ್ತದೆ

ತೂಕವಿಳಿಸಲು ನೆರವಾಗುತ್ತದೆ ಹಾಗೂ ಹೊಟ್ಟೆ ಸಪಾಟಾಗಲು ನೆರವಾಗುತ್ತದೆ

ದಿನದ ಬೆಳಗ್ಗಿನ ಪ್ರಥಮ ಆಹಾರವಾಗಿ ಲಿಂಬೆರಸ ಸೇವಿಸುವ ಮೂಲಕ ಕೊಬ್ಬು ಕರಗುತ್ತದೆ. ಅಂದರೆ ಲಿಂಬೆರಸದ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು ಅಪಾರ ಪ್ರಮಾಣದ ಕೊಬ್ಬನ್ನು ದೇಹ ಅನಿವಾರ್ಯವಾಗಿ ಬಳಸಿಕೊಳ್ಳಬೇಕಾಗಿ ಬರುತ್ತದೆ. ಪರಿಣಾಮವಾಗಿ ಕೊಬ್ಬು ಕರಗುತ್ತದೆ ಹಾಗೂ ತೂಕ ಇಳಿಯಲು ನೆರವಾಗುತ್ತದೆ. ಕೆಲವೇ ದಿನಗಳಲ್ಲಿ ಹೊಟ್ಟೆಯ ಕೊಬ್ಬು ಕರಗುತ್ತಾ ಬಂದು ನಿಮ್ಮ ನೆಚ್ಚಿನ ಜೀನ್ಸ್ ಧರಿಸಲೂ ಸಾಧ್ಯವಾಗುತ್ತದೆ.

ಶೀತ ಈಗ ಹಿಂದಿನಂತೆ ಸತಾಯಿಸುವುದಿಲ್ಲ

ಶೀತ ಈಗ ಹಿಂದಿನಂತೆ ಸತಾಯಿಸುವುದಿಲ್ಲ

ಒಂದು ವೇಳೆ ತಣ್ಣೀರು ಕುಡಿದರೂ, ಗಾಳಿಯಲ್ಲಿ ಕೊಂಚ ತೇವಾಂಶ ಮೂಡಿದರೂ ಶೀತವಾಗುತ್ತಿದ್ದರೆ ಬೆಳಗ್ಗಿನ ಲಿಂಬೆರಸದ ಆಹಾರ ನಿಮ್ಮ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸುವ ಮೂಲಕ ಶೀತ ಕೆಮ್ಮುಗಳಿಂದ ಹೆಚ್ಚಿನ ರಕ್ಷಣೆ ಒದಗಿಸಬಲ್ಲುದು. ಕೆಲವೇ ದಿನಗಳಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು ಪದೇ ಪದೇ ಆಗುತ್ತಿದ್ದ ಶೀತ ಈಗ ಅಪರೂಪವಾಗಿರುವುದನ್ನು ಗಮನಿಸಬಹುದು.

ನಿಮ್ಮ ತ್ವಚೆ ಹೆಚ್ಚು ಕಾಂತಿಯುಕ್ತ ಹಾಗೂ ಕಲೆಯಿಲ್ಲದಂತಾಗುತ್ತದೆ

ನಿಮ್ಮ ತ್ವಚೆ ಹೆಚ್ಚು ಕಾಂತಿಯುಕ್ತ ಹಾಗೂ ಕಲೆಯಿಲ್ಲದಂತಾಗುತ್ತದೆ

ಲಿಂಬೆರಸದಲ್ಲಿರುವ ಪೋಷಕಾಂಶಗಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ಕೆಲವೇ ದಿನಗಳಲ್ಲಿ ನಿಮ್ಮ ತ್ವಚೆ ಸುಂದರ ಹಾಗೂ ಕಲೆಯಿಲ್ಲದಂತಾಗುತ್ತದೆ. ಇದುವರೆಗೆ ಬಳಸುತ್ತಾ ಬಂದಿರುವ ದುಬಾರಿ ಪ್ರಸಾದನಗಳನ್ನು ಉಪಯೋಗಿಸುವ ಅಗತ್ಯತೆಯೇ ಇಲ್ಲವಾಗುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಬೆಳಗ್ಗಿನ ಲಿಂಬೆರಸದ ಸೇವನೆ ಜೀರ್ಣಾಂಗಗಳಿಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ತ್ಯಾಜ್ಯಗಳನ್ನು ಸುಲಭವಾಗಿ ವಿಸರ್ಜಿಸಲೂ ನೆರವಾಗುತ್ತದೆ. ಲಿಂಬೆರಸದ ಸೇವನೆಯ ಇದು ಅತ್ಯುತ್ತಮ ಪ್ರಯೋಜನವಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಲಿಂಬೆರಸದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ಇದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇವೆರಡೂ ಅಗತ್ಯವಾಗಿವೆ. ನಿಯಮಿತವಾಗಿ ಲಿಂಬೆರಸವನ್ನು ಕುಡಿಯುತ್ತ ಬರುವ ಮೂಲಕ ಶಿಥಿಲವಾಗಿದ್ದ ರೋಗ ನಿರೋಧಕ ಶಕ್ತಿ ಉತ್ತಮವಾಗುತ್ತಾ ಹೋಗುತ್ತದೆ.

 ಯಕೃತ್ ನ ಕಾರ್ಯಕ್ಷಮತೆ ಹೆಚ್ಚುತ್ತದೆ

ಯಕೃತ್ ನ ಕಾರ್ಯಕ್ಷಮತೆ ಹೆಚ್ಚುತ್ತದೆ

ಲಿಂಬೆರಸ ಬೆರೆಸಿದ ನೀರು ಕುಡಿಯುವ ಮೂಲಕ ಯಕೃತ್ ನಲ್ಲಿ ಸಂಗ್ರಹಗೊಂಡಿದ್ದ ಕಲ್ಮಶಗಳು ನಿವಾರಣೆಯಾಗುತ್ತದೆ ಹಾಗೂ ಈ ಮೂಲಕ ಯಕೃತ್ ನ ಕ್ಷಮತೆ ಹೆಚ್ಚುತ್ತದೆ. ಲಿಂಬೆರಸದ ಸೇವನೆಯಿಂದ ಜಠರರಸದ ಉತ್ಪತ್ತಿಯೂ ಹೆಚ್ಚುತ್ತದೆ ಹಾಗೂ ಈ ಮೂಲಕ ಪಿತ್ತರಸದ ಉತ್ಪಾದನೆಯೂ ಹೆಚ್ಚುತ್ತದೆ. ಈ ಪ್ರಯೋಜನವೂ ಲಿಂಬೆರಸವನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವುದರಿಂದ ಪಡೆಯಬಹುದಾದ ಅತ್ಯುತ್ತಮ ಪ್ರಯೋಜನಗಳಲ್ಲೊಂದಾಗಿದೆ.

English summary

Drink Lemon Water Every Day For Two Weeks In The Morning

Lemon water is known to have some abundant health benefits that are known to treat several ailments that we face on a day-to-day basis. Lemons are loaded with vitamin C and one glass of fresh lemon juice every morning is known to provide you with 187% of the daily recommended serving of vitamin C. Lemon also provides your body with potassium, magnesium and copper.
X
Desktop Bottom Promotion