For Quick Alerts
ALLOW NOTIFICATIONS  
For Daily Alerts

ಉಗುರು ಬೆಚ್ಚನೆಯ ನೀರಿಗೆ, ಎರಡು ಚಮಚ ಜೇನು ಬೆರೆಸಿ ನಿತ್ಯ ಕುಡಿಯಿರಿ...

By Hemanth
|

ಪ್ರಕೃತಿಯಲ್ಲಿ ಸಿಗುವಂತಹ ಕೆಲವು ಆಹಾರಗಳಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಜನರು ಇದರ ಲಾಭ ಪಡೆದುಕೊಳ್ಳುತ್ತಾರಾದರೂ ನಗರ ವಾಸಿಗಳಿಗೆ ಇದರ ಲಾಭ ಸಿಗದು. ಯಾಕೆಂದರೆ ನಗರವಾಸಿಗಳಿಗೆ ಸಿಗುವುದು ಹೆಚ್ಚಾಗಿ ಕಲಬೆರಕೆ ಮಾಡಿರುವಂತಹ ಆಹಾರಗಳು. ಅದೇನೇ ಇರಲಿ, ಹೆಚ್ಚಿನವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ತಿಳಿದುಕೊಂಡಿದ್ದಾರೆ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಲಾಭಗಳು ಇವೆ. ಅದೇ ರೀತಿ ಬಿಸಿ ನೀರಿಗೆ ಜೇನುತುಪ್ಪ ಹಾಕಿಕೊಂಡು ಕುಡಿದರೆ ಅದರ ಲಾಭ ವೃದ್ಧಿಯಾಗುವುದು. ಜೇನುತುಪ್ಪ ಮತ್ತು ಉಗುರು ಬಿಸಿ ನೀರು ಕುಡಿದರೆ ಅದರಿಂದ ದೇಹ ಹಾಗೂ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಸಿಗುವುದು. ಇದನ್ನು ತಜ್ಞರು ಕೂಡ ಒಪ್ಪಿಕೊಂಡಿದ್ದಾರೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಜೇನುತುಪ್ಪ ಹಾಕಿ ಕುಡಿಯುವುದರಿಂದ ಆಗುವ ಲಾಭಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ. ಮುಂದಕ್ಕೆ ಓದುತ್ತಾ ಸಾಗಿದರೆ ನೀವು ಆರೋಗ್ಯಕ್ಕೆ ಲಾಭ ಮಾಡಿಕೊಳ್ಳಬಹುದು....

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ನೂರು ಗ್ರಾಂನಷ್ಟು ಜೇನುತುಪ್ಪದಲ್ಲಿ 305ರಷ್ಟು ಕ್ಯಾಲರಿಗಳಿರುತ್ತವೆ. ಒಂದು ಚಮಚ ಜೇನುತುಪ್ಪವು ತೂಕ ಕಳೆದುಕೊಳ್ಳಲು ನೆರವಾಗುವುದು. ಜೇನುತುಪ್ಪದಲ್ಲಿ ನೈಸರ್ಗಿಕದತ್ತ ಸಕ್ಕರೆಯಿರುವ ಕಾರಣ ಹೆಚ್ಚು ಸಕ್ಕರೆ ದಾಹವು ನಿಮಗೆ ಕಾಡದು.

ನಿತ್ಯಕರ್ಮಗಳಿಗೆ ಸಹಕಾರಿ

ನಿತ್ಯಕರ್ಮಗಳಿಗೆ ಸಹಕಾರಿ

ಜೇನುತುಪ್ಪವು ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ನಂಜುನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದಾಗ ಅದು ಹೊಟ್ಟೆಯನ್ನು ನಿವಾರಿಸಿ ಕರುಳಿನ ಕ್ರಿಯೆಯು ಸರಾಗವಾಗಿ ಆಗಲು ನೆರವಾಗುವುದು.

ಪ್ರತಿರೋಧಕ ಶಕ್ತಿ ಹೆಚ್ಚಳ

ಪ್ರತಿರೋಧಕ ಶಕ್ತಿ ಹೆಚ್ಚಳ

ಹಸಿ ಜೇನುತುಪ್ಪವು ಕಿಣ್ವಗಳಿಂದ ಸಮೃದ್ಧವಾಗಿದ್ದು, ಇದರಲ್ಲಿ ವಿಟಮಿನ್ ಹಾಗೂ ಖನಿಜಾಂಶಗಳು ಸಾಕಷ್ಟಿವೆ. ಹಾನಿಕಾರ ಬ್ಯಾಕ್ಟೀರಿಯಾದಿಂದ ದೇಹವನ್ನು ರಕ್ಷಿಸಲು ಇದು ಪ್ರಮುಖ ಪಾತ್ರ ನಿರ್ವಹಿಸುವುದು. ಹೆಚ್ಚಿನ ಆ್ಯಂಟಿಆಕ್ಸಿಡೆಂಟ್ ಹೊಂದಿರುವ ಇದು ಚರ್ಮವನ್ನು ಒಳಗಿನಿಂದಲೇ ಶಮನಗೊಳಿಸುವುದು. ಬೆಳಿಗ್ಗೆ ಬಿಸಿ ನೀರಿಗೆ ಜೇನುತುಪ್ಪ ಹಾಕಿ ಕುಡಿಯುವುದರ ಬಹುದೊಡ್ಡ ಲಾಭ ಇದಾಗಿದೆ.

ಅಲರ್ಜಿಗಳ ವಿರುದ್ಧ ಹೋರಾಟ

ಅಲರ್ಜಿಗಳ ವಿರುದ್ಧ ಹೋರಾಟ

ದೇಹದ ನಿರ್ದಿಷ್ಟ ಭಾಗಗಳಿಗೆ ಕಚ್ಚಾ ಜೇನುತುಪ್ಪ ಹಚ್ಚಿಕೊಳ್ಳುವುದರಿಂದ ಆ ಪ್ರದೇಶದ ಪರಾಗಸ್ಪರ್ಶಗಳಿಗೆ ಒಗ್ಗಿಕೊಳ್ಳುವಂತೆ ಮಾಡುವುದು. ಇದರಿಂದ ವಾತಾವರಣದಿಂದ ಉಂಟಾಗುವ ಅಲರ್ಜಿ ತಡೆಗಟ್ಟಬಹುದು.

ಹೆಚ್ಚಿನ ಶಕ್ತಿ ಸಿಗುವುದು

ಹೆಚ್ಚಿನ ಶಕ್ತಿ ಸಿಗುವುದು

ಬಿಸಿ ನೀರಿಗೆ ಜೇನುತುಪ್ಪ ಬೆರೆಸಿಕೊಂಡು ಕುಡಿದರೆ ಅದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುವುದು. ಇದು ಉದಾಸೀನ ಮತ್ತು ಅಲರ್ಜಿಯನ್ನು ತೊಡೆದುಹಾಕುವುದು. ನೀವು ತುಂಬಾ ಪುನರುಜ್ಜೀವನ ಮತ್ತು ಉಲ್ಲಾಸದಿಂದ ಇರಲಿದ್ದೀರಿ. ಜೇನುತುಪ್ಪ ಬೆರೆಸಿದ ಬಿಸಿ ನೀರು ಕುಡಿಯುವುದರ ದೊಡ್ಡ ಲಾಭ ಇದಾಗಿದೆ.

ಕೆಮ್ಮು ಮತ್ತು ಗಂಟಲು ನೋವು ನಿವಾರಣೆ

ಕೆಮ್ಮು ಮತ್ತು ಗಂಟಲು ನೋವು ನಿವಾರಣೆ

ಜೇನುತುಪ್ಪವು ಗಂಟಲು ನೋವು ಮತ್ತು ಕೆಮ್ಮಿನಿಂದ ನಿಮಗೆ ಮುಕ್ತಿ ನೀಡುವುದು. ಇದನ್ನು ನೀವು ಪ್ರತಿನಿತ್ಯ ಸೇವಿಸುತ್ತಾ ಇದ್ದರೆ ಅದರಿಂದ ನಿಮಗೆ ಗಂಟಲು ನೋವು ಮತ್ತು ಕೆಮ್ಮಿನ ಸಮಸ್ಯೆ ಕಡಿಮೆಯಾಗುವ ಅನುಭವವಾಗುವುದು.

ಹೃದಯವನ್ನು ಆರೋಗ್ಯವಾಗಿಡುವುದು

ಹೃದಯವನ್ನು ಆರೋಗ್ಯವಾಗಿಡುವುದು

ಈ ಪಾನೀಯವು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿ ಹೃದಯ ಸಂಬಂಧಿ ಕಾಯಿಲೆ ತಡೆಯುವುದು. ಅಧಿಕ ರಕ್ತದೊತ್ತಡದ ಸಮಸ್ಯೆಯೂ ಇದರಿಂದ ನಿವಾರಣೆಯಾಗುವುದು. ಬೆಳಿಗ್ಗೆ ಎದ್ದು ಜೇನುತುಪ್ಪದೊಂದಿಗೆ ಬಿಸಿ ನೀರು ಕುಡಿದರೆ ಹೃದಯವು ಆರೋಗ್ಯವಾಗಿರುವುದು.

English summary

Drink Honey Water For A Month, Every Morning

Most of us only know about the benefits of a warm glass of water in the morning. You many also have heard about honey being really beneficial for the skin. But have you ever come across the benefits of drinking warm water and honey? Known as honey water, this drink is known to have potent health benefits. Combining honey and warm water can do a great deal of things for your overall health and well-being.
X
Desktop Bottom Promotion