ಋತುಚಕ್ರದ ನೋವು ನಿವಾರಣೆಗೆ 'ಮೆಂತೆ ಚಹಾ' ರಾಮಬಾಣ...

Posted By: Divya Pandith
Subscribe to Boldsky

ಋತುಚಕ್ರದ ನೋವು ಮಹಿಳೆಯರಿಗೆ ಸಾಮಾನ್ಯವಾದದ್ದು. ಆ ಸಂದರ್ಭದಲ್ಲಿ ಕಿಬ್ಬೊಟ್ಟೆ ಮತ್ತು ಬೆನ್ನು ನೋವು ಸಾಮಾನ್ಯವಾಗಿ ಕಾಡುತ್ತದೆ. ಕೆಲವರಿಗೆ ವಾಕರಿಕೆ ಮತ್ತು ಮಾನಸಿಕವಾಗಿ ಖಿನ್ನತೆಯ ಭಾವನೆ ಮೂಡುವ ಸಾಧ್ಯತೆ ಇರುತ್ತದೆ. ಕೆಲವು ಅಧ್ಯಯನದ ಪ್ರಕಾರ ಪ್ರತಿ ಐದು ಮಹಿಳೆಯರಲ್ಲಿ ಒಬ್ಬರಿಗೆ ಋತುಚಕ್ರದ ನೋವು ವಿಪರೀತದ ಸ್ಥಿತಿಯಲ್ಲಿರುತ್ತದೆ ಎಂದು. ಋತುಚಕ್ರ ಎನ್ನುವುದು ಪ್ರತಿ ತಿಂಗಳು ಮಹಿಳೆಯರ ದೇಹದಲ್ಲಿ ನೈಸರ್ಗಿಕವಾಗಿ ಉಂಟಾಗುವ ಒಂದು ಸಾಮಾನ್ಯ ಪ್ರಕ್ರಿಯೆ ಇರಬಹುದು. ಆದರೆ ಆ ಸಂದರ್ಭದಲ್ಲಿ ಉಂಟಾಗುವ ನೋವು ಹಾಗೂ ಅಸಹಜತೆಗಳು ಅಷ್ಟು ಸಾಮಾನ್ಯವಾಗಿರುವುದಿಲ್ಲ.

fenugreek tea

ಇಂತಹ ಸಂದರ್ಭದಲ್ಲಿ ಮೆಂತೆ ನೀರು ಸೇವನೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎನ್ನಲಾಗುವುದು. ಮೆಂತೆವು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ಕಡಿಮೆಮಾಡುತ್ತದೆ. ಅಧಿಕ ಪ್ರಮಾಣದ ಕಬ್ಬಿಣಂಶವನ್ನು ದೇಹಕ್ಕೆ ನೀಡುತ್ತದೆ. ಹಾಗಾಗಿಯೇ ಮಧುಮೇಹ ಹೊಂದಿದವರಿಗೆ, ಋತುಚಕ್ರದ ಸಮಯದಲ್ಲಿ ಕಾಡುವ ಕಿಬ್ಬೊಟ್ಟೆ ನೋವು ನಿವಾರಿಸಲು ಮೆಂತ್ಯ ಅತ್ಯುತ್ತಮ ಸಹಕಾರ ನೀಡುವುದು. ಮುಟ್ಟಿನ ನೋವಿನಿಂದ ಪಾರಾಗ ಬೇಕೆಂದುಕೊಂಡಿದ್ದರೆ ಮೊದಲು ಒಂದು ಕಪ್ ಮೆಂತ್ಯ ಚಹಾವನ್ನು ಸೇವಿಸಬೇಕು.

ವಿವಿಧ ಪ್ರೋಟೀನ್ ಹಾಗೂ ಪೋಷಕಾಂಶಗಳನ್ನು ಒಳಗೊಂಡಿರುವ ಮೆಂತ್ಯ ಮನುಷ್ಯನಿಗೊಂದು ದಿವ್ಯ ಔಷಧ ಎನ್ನಬಹುದು. ಇದರ ಚಹಾ ಸೇವನೆಯಿಂದ ವಿವಿಧ ಬಗೆಯ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು. ಹಾಗಾದರೆ ಈ ಚಹಾ ತಯಾರಿಸುವ ವಿಧಾನ ಹೇಗೆ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ. 

ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ಇದು ಹೇಗೆ ಸಹಾಯ ಮಾಡುತ್ತದೆ?

ಆಧುನಿಕ ಈಜಿಪ್ಟಿನ ಮಹಿಳೆಯರು ಇಂದಿಗೂ ಮೆಂತೆಯನ್ನು ಮುಟ್ಟಿನ ಸೆಳೆತವನ್ನು ನಿವಾರಿಸಲು ಬಳಸುತ್ತಾರೆ. ಜೊತೆಗೆ ಹೊಟ್ಟೆ ನೋವು ಇತರ ರೀತಿಯ ಸಮಸ್ಯೆಗಳ ನಿವಾರಣೆಗೆ ಮೆಂತೆದಿಂದ ನೈಸರ್ಗಿಕ ಚಹಾವನ್ನು ತಯಾರಿಸಿ ಸೇವಿಸುತ್ತಾರೆ. ಚೀನಿಯರು ಇದನ್ನು ಹು ಲು ಬಾ ಎಂದು ಕರೆದುಕೊಳ್ಳುತ್ತಾರೆ. ಕಿಬ್ಬೊಟ್ಟೆಯ ನೋವಿನ ಚಿಕಿತ್ಸೆಗಾಗಿ ಇದನ್ನು ಬಳಸುತ್ತಾರೆ.

fenugreek

ಮುಟ್ಟಿನ ನೋವನ್ನು ಸರಾಗಗೊಳಿಸುವಲ್ಲಿ ನೋವು ನಿವಾರಕ ಸಂಯುಕ್ತಗಳ ಉಪಸ್ಥಿತಿಯು ಪ್ರಮುಖ ಪಾತ್ರ ವಹಿಸುತ್ತದೆ. ಮುಟ್ಟಿನ ಬದಲಾವಣೆ, ಮುಟ್ಟಿನ ಸೆಳೆತ ಮತ್ತು ಹೊಟ್ಟೆ ಅಸ್ವಸ್ಥತೆಗೆ ಸಹಾಯ ಮಾಡುವಂತಹ ಈಸ್ಟ್ರೊಜೆನ್ ಕ್ರಿಯೆಯನ್ನು ಅನುಕರಿಸುವ ಡಯೋಸ್ಜೆನಿನ್ ಮತ್ತು ಐಸೊಫ್ಲೋವೊನ್ ಗಳನ್ನು ನಿಯಂತ್ರಿಸುವಂತಹ ಗುಣವನ್ನು ಮೆಂತೆ ಒಳಗೊಂಡಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಮನೆಯಲ್ಲಿ ಮೆಂತೆ ಚಹಾವನ್ನು ತಯಾರಿಸುವದು ಹೇಗೆ?

ಮಹಿಳೆಯರು ತಮ್ಮ ಸಾಂಬಾರು ಬಟ್ಟಲಿನಲ್ಲಿ ಮೆಂತೆಯನ್ನು ಇರಿಸಿರುತ್ತಾರೆ. ನಿತ್ಯವೂ ಮೇಲೋಗರಗಳಿಗೆ ಬಳಸುವುದು, ಮೆಂತೆದಿಂದ ತಯಾರಿಸಿದ ರೈಸ್ ಬಾತ್, ರೊಟ್ಟಿ, ಪಲ್ಯ, ಸಾರು ಸೇರಿದಂತೆ ಎಂತಹದ್ದೇ ಅಡುಗೆಯನ್ನು ತಯಾರಿಸಬಹುದು. ಅದರೊಟ್ಟಿಗೆ ಮೆಂತೆ ಚಹಾವನ್ನು ಮಾಡಿ ಸೇವಿಸಿದಾಗ ಮಾತ್ರ ಮುಟ್ಟಿನ ನೋವು ನಿವರಣೆಯಾಗುತ್ತದೆ.

fenugreek

ಮೆಂತೆ ಚಹಾ ತಯಾರಿಸುವ ವಿಧಾನ

ಒಂದು ಪಾತ್ರೆಯಲ್ಲಿ 4 ಕಪ್ ನೀರನ್ನು ಹಾಕಿ

ಮಧ್ಯಮ ಉರಿಯಲ್ಲಿ ನೀರನ್ನು ಕುದಿಸಿ

ಕುದಿಯಲು ಪ್ರಾರಂಭಿಸಿದ ಮೇಲೆ ಒಂದು ಟೀ ಚಮಚ ಮೆಂತೆಯನ್ನು ಸೇರಿಸಿ

ನಂತರ ಪಾತ್ರೆಗೆ ಮುಚ್ಚಳವನ್ನು ಮುಚ್ಚಿ, ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಯಲು ಬಿಡಿ.

Periods pain

ನೀರಿನ ಬಣ್ಣವು ಹಳದಿ ಬಣ್ಣಕ್ಕೆ ತಿರುಗಿದ ನಂತರ ಉರಿಯನ್ನು ಆರಿಸಿ, ಚಹಾ ತಣಿಯಲು ಬಿಡಿ.

ನಂತರ ಮೆಂತೆ ಬೀಜವನ್ನು ಸೋಸಿ, ಸೇವಿಸಿ.

ಮುಟ್ಟಿನ ನೋವನ್ನು ತಡೆಯಲು ಈ ಚಹಾವನ್ನು ಒಂದು ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಂಡು ಆಗಾಗ ಸೇವಿಸುತ್ತಲಿರಬಹುದು.

ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

English summary

Drink fenugreek tea to beat period pain

Fenugreek or methi is known for its blood glucose lowering properties. Hence, methi either in the form of ladoos or curries is a must. Methi is not only for diabetics, it also can help non-diabetic women in many ways. When taken as seeds or leaves, methi is known to increase the milk production in lactating women. It is also known to increase the iron content in the body and ease menopausal symptoms.