Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಏಲಕ್ಕಿ ನೀರನ್ನು ಒಂದು ವಾರ ಕುಡಿಯಿರಿ-ಪರಿಣಾಮ ಗಮನಿಸಿ
ಕೆಲವು ಏಲಕ್ಕಿಗಳನ್ನು ನೀರಿನಲ್ಲಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಈ ಸಾಂಬಾರ ಪದಾರ್ಥ ಕೇವಲ ಅಡುಗೆಗೆ ಮೀಸಲಾಗಿಲ್ಲ, ಬದಲಿಗೆ ಬಾಯಿಯ ಹುಣ್ಣುಗಳನ್ನು ಮಾಗಿಸಲು, ಜೀರ್ಣಕ್ರಿಯೆಯ ತೊಂದರೆಗಳನ್ನು ನಿವಾರಿಸುವುದು ಮೊದಲಾದ ದೈಹಿಕ ತೊಂದರೆಗಳ ಜೊತೆಗೇ ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳನ್ನೂ ಗುಣಪಡಿಸುತ್ತದೆ. ಏಲಕ್ಕಿಯ ಸೇವನೆಯ ಪ್ರಯೋಜನವನ್ನು ಹಲವಾರು ಸಂಶೋಧನೆಗಳು ದೃಢೀಕರಿಸಿವೆ. ನಮ್ಮ ನಿತ್ಯದ ಆಹಾರಗಳಲ್ಲಿ ಏಲಕ್ಕಿಯನ್ನು ಸೇರಿಸುವ ಮೂಲಕ ನಮ್ಮ ಆಹಾರ ಸುಗಂಧಭರಿತವಾಗುವುದು ಮಾತ್ರವಲ್ಲದೇ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ.
ಸಹ್ಯಾದ್ರಿ ಬೆಟ್ಟದ ಒಡೆಯ 'ಏಲಕ್ಕಿಯ' ಅದ್ಭುತ ಪವರ್!
ಏಲಕ್ಕಿಯ ಸೇವನೆಯಿಂದ ಹುಳಿತೇಗು, ಎದೆಯುರಿ, ಕರುಳುಗಳು ಕಿವುಚಿದಂತಾಗುವುದು, ಜೀರ್ಣಾಂಗಗಳಲ್ಲಿ ಉರಿ, ವಾಯುಪ್ರಕೋಪ, ಮಲಬದ್ದತೆ, ಯಕೃತ್ ಹಾಗೂ ಪಿತ್ತಕೋಶದ ತೊಂದರೆಗಳು ಮೊದಲಾದವು ಕಡಿಮೆಯಾಗುತ್ತದೆ. ಅಲ್ಲದೇ ಜೀರ್ಣಾಂಗಗಳಲ್ಲಿ ಆಹಾರದ ಚಲನೆಯ ಗತಿಯನ್ನೂ ಹೆಚ್ಚಿಸುತ್ತದೆ. ಏಲಕ್ಕಿಯಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಗಂಧಕ, ಮೆಗ್ನೇಶಿಯಂ, ಕಬ್ಬಿಣ ಹಾಗೂ ಮ್ಯಾಂಗನೀಸ್ ಇವೆ. ಇವೆಲ್ಲವೂ ಏಲಕ್ಕಿಯ ಆರೋಗ್ಯಕರ ಗುಣಗಳನ್ನು ಹೆಚ್ಚಿಸುತ್ತವೆ. ಅಂದರೆ ಏಲಕ್ಕಿಯನ್ನು ಉತ್ತಮ ಪ್ರತಿಜೀವಕ, ಆಂಟಿ ಆಕ್ಸಿಡೆಂಟು, ಗುಣಕಾರಕ, ಜೀರ್ಣಕಾರಕ, ಮೂತ್ರವರ್ಧಕ, ಕಫ ನಿವಾರಕ, ಪ್ರಚೋದಕವಾಗಿಸುತ್ತದೆ ಹಾಗೂ ಉತ್ತಮವಾದ ಶಕ್ತಿವರ್ಧಕ ಅಥವಾ ಟಾನಿಕ್ ಸಹಾ ಆಗಿದೆ. ಏಲಕ್ಕಿ ನಿಮ್ಮ ಆರೋಗ್ಯವನ್ನು ಇನ್ನೂ ಹಲವಾರು ರೀತಿಯಲ್ಲಿ ಉತ್ತಮಗೊಳಿಸುತ್ತದೆ. ಇದರ ಹಲವಾರು ಪ್ರಯೋಜನಗಳಲ್ಲಿ ಕೆಲವು ಪ್ರಮುಖ ಪ್ರಯೋಜನಗಳ ಬಗ್ಗೆ ಇಂದು ಪ್ರಸ್ತಾಪಿಸಲಾಗಿದ್ದು ಏಲಕ್ಕಿ ಕುದಿಸಿದ ನೀರನ್ನು ಕುಡಿಯುವ ಪ್ರಯೋಜನಗಳನ್ನು ನೋಡೋಣ...
ಜೀರ್ಣಕ್ರಿಯೆ
ಜೀರ್ಣಕ್ರಿಯೆಯ ತೊಂದರೆಗಳನ್ನು ಏಲಕ್ಕಿ ಹಲವಾರು ರೀತಿಯಲ್ಲಿ ಸರಿಪಡಿಸುತ್ತದೆ. ಪ್ರತಿದಿನವೂ ಏಲಕ್ಕಿ ಕುದಿಸಿದ ನೀರನ್ನು ಕುಡಿಯುವ ಮೂಲಕ ವಾಕರಿಕೆ, ಹೊಟ್ಟೆಯಲ್ಲಿ ಆಮ್ಲೀಯತೆ, ಹೊಟ್ಟೆಯುಬ್ಬರಿಕೆ, ವಾಯುಪ್ರಕೋಪ, ಹಸಿವಿಲ್ಲದಿರದಿರುವುದು, ಮಲಬದ್ಧತೆ ಮೊದಲಾದ ತೊಂದರೆಗಳಿಂದ ಪರಿಹಾರ ದೊರಕುತ್ತದೆ.
ಕಲ್ಮಶಗಳನ್ನು ನಿವಾರಿಸುತ್ತದೆ
ಈ ನೀರನ್ನು ನಿತ್ಯವೂ ಕುಡಿಯುವ ಮೂಲಕ ದೇಹದಲ್ಲಿರುವ ಕಲ್ಮಶಗಳನ್ನು ನಿವಾರಿಸುವುದು ಸುಲಭವಾಗುತ್ತದೆ.ವಿಶೇಷವಾಗಿ ಮೂತ್ರಪಿಂಡಗಳ ಕ್ಷಮತೆ ಹೆಚ್ಚುವ ಮೂಲಕ ಕಲ್ಮಶಗಳು ಹೆಚ್ಚು ನಿವಾರಣೆಯಾಗುತ್ತದೆ.
ಮೂತ್ರವರ್ಧಕ
ನಿತ್ಯವೂ ಏಲಕ್ಕಿ ಕುದಿಸಿದ ನೀರನ್ನು ಕುಡಿಯುವ ಮೂಲಕ ಮೂತ್ರದ ಪ್ರಮಾಣ ಹೆಚ್ಚುತ್ತದೆ. ಏಲಕ್ಕಿಯ ಮೂತ್ರವರ್ಧಕ ಗುಣ ಮೂತ್ರದ ಪ್ರಮಾಣವನ್ನು ಹೆಚ್ಚಿಸಿ ಮೂತ್ರನಾಳ, ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಪರಿಣಾಮವಾಗಿ ಕಲ್ಮಶಗಳು, ಉಪ್ಪು, ಹೆಚ್ಚುವರಿ ನೀರು, ವಿಷಕಾರಿ ವಸ್ತುಗಳನ್ನು ನಿವಾರಿಸಿ ಸೋಂಕುಗಳಿಂದ ರಕ್ಷಿಸುತ್ತದೆ.
ಖಿನ್ನತೆ
ನಿತ್ಯವೂ ಏಲಕ್ಕಿ ನೀರನ್ನು ಕುಡಿಯುವ ಮೂಲಕ ಖಿನ್ನತೆಯ ವಿರುದ್ದ ಹೋರಾಡುವ ಶಕ್ತಿ ಹೆಚ್ಚುತ್ತದೆ. ಖಿನ್ನತೆಯಿಂದ ಬಳಲುವ ರೋಗಿಗಳಿಗೆ ಬಹಳ ಹಿಂದಿನಿಂದಲೇ ಆಯುರ್ವೇದದ ಏಲಕ್ಕಿ ನೀರನ್ನು ಕುಡಿಯುವ ಚಿಕಿತ್ಸೆಯನ್ನು ಒದಗಿಸಿದೆ.
ಬಾಯಿಯ ಸ್ವಚ್ಛತೆ
ಏಲಕ್ಕಿ ನೀರನ್ನು ನಿತ್ಯವೂ ಕುಡಿಯುವ ಮೂಲಕ ಬಾಯಿಯಲ್ಲಿ ಹುಣ್ಣುಗಳಾಗುವುದು, ಸೋಂಕು ಹಾಗೂ ಗಂಟಲಿನಲ್ಲಿ ಆಗುವ ಕಿರಿಕಿರಿ ಮೊದಲಾದವುಗಳಿಂದ ರಕ್ಷಣೆ ದೊರಕುತ್ತದೆ.
ಶೀತ ಮತ್ತು ಫ್ಲೂ
ಈ ಅದ್ಭುತ ನೀರನ್ನು ನಿತ್ಯವೂ ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಶೀತ, ಫ್ಲೂ ಮೊದಲಾದ ತೊಂದರೆಗಳಿಂದ ರಕ್ಷಣೆ ದೊರಕುತ್ತದೆ. ಅಲ್ಲದೇ ಶ್ವಾಸಕೋಶದ ತೊಂದರೆಯಾದ ಬ್ರಾಂಖೈಟಿಸ್ ಹಾಗೂ ಕೆಮ್ಮು, ಕಫ ಮೊದಲಾದ ತೊಂದರೆಗಳನ್ನೂ ನಿವಾರಿಸುತ್ತದೆ.
ಕ್ಯಾನ್ಸರ್
ಕೆಲವಾರು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ನಿತ್ಯವೂ ಏಲಕ್ಕಿ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕಣಗಳ ಬೆಳವಣಿಗೆ ನಿಯಂತ್ರಿಸುತ್ತದೆ ಹಾಗೂ ಈ ಮೂಲಕ ಕ್ಯಾನ್ಸರ್ ಎದುರಾಗುವ ಸಂಭವ ಕಡಿಮೆಯಾಗುತ್ತದೆ. ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್ ಗೆ ಗುರಿಯಾದ ಜೀವಕೋಶಗಳನ್ನೂ ಕೊಲ್ಲುತ್ತದೆ.
ಅಧಿಕ ರಕ್ತದೊತ್ತಡ
ಏಲಕ್ಕಿ ಉತ್ತಮ ಮೂತ್ರವರ್ಧಕವಾಗಿರುವ ಕಾರಣ ಹಾಗೂ ಇದರಲ್ಲಿ ಕರಗುವ ನಾರು ಉತ್ತಮ ಪ್ರಮಾಣದಲ್ಲಿರುವ ಕಾರಣ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಆಂಟಿ ಆಕ್ಸಿಡೆಂಟ್
ಏಲಕ್ಕಿಯಲ್ಲಿರುವ ವಿಟಮಿನ್ನುಗಳು, ಫೈಟೋ ನ್ಯೂಟ್ರಿಯೆಂಟ್ ಹಾಗೂ ಅವಶ್ಯಕ ತೈಲಗಳು ಉತ್ತಮ ಆಂಟಿ ಆಕ್ಸಿಡೆಂಟುಗಳಂತೆ ಕಾರ್ಯನಿರ್ವಹಿಸುತ್ತವೆ.ಪರಿಣಾಮವಾಗಿ ದೇಹದಿಂದ ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ರಕ್ಷಣೆ ಒದಗುತ್ತದೆ ಹಾಗೂ ಜೀವಕೋಶಗಳ ಸವೆತ ಕಡಿಮೆಯಾಗುತ್ತದೆ.
ಕ್ರಿಮಿ ನಿವಾರಕ
ಇದರಲ್ಲಿರುವ ಅವಶ್ಯಕ ತೈಲಗಳು ಸುಲಭವಾಗಿ ಆವಿಯಾಗುವಂತಹದ್ದಾಗಿದ್ದು ಇದರ ಸೇವನೆಯಿಂದ ದೇಹದಲ್ಲಿ ಪ್ರವೇಶ ಪಡೆದಿರುವ ವೈರಸ್ಸುಗಳು, ಬ್ಯಾಕ್ಟೀರಿಯಾ, ಶಿಲೀಂಧ್ರ ಹಾಗೂ ಹೈಫೇ (hyphae) ಎಂಬ ಬಗೆಯ ಕ್ರಿಮಿಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.