Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಲಗಿದ ತಕ್ಷಣ ನಿದ್ದೆ ಬರಬೇಕೇ? ಹಾಗಾದರೆ ಈ ಆಹಾರಗಳಿಂದ ದೂರವಿರಿ!
ನಿದ್ರೆಯಿಲ್ಲದೆ ಇದ್ದರೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ. ಸರಿಯಾದ ನಿದ್ರೆಯಿದ್ದರೆ ಆರೋಗ್ಯವೂ ಸರಿಯಾಗಿರುವುದು. ದೇಹವು ತನ್ನೊಳಗೆ ತನ್ನನ್ನು ರಿಪೇರಿ ಮಾಡಿಕೊಳ್ಳಲು ಒಳ್ಳೆಯ ನಿದ್ರೆಯು ಅತೀ ಅಗತ್ಯವಾಗಿ ಬೇಕೇಬೇಕು.
ನಿದ್ರಾಹೀನತೆ ಕಾಡಿದರೆ ಅದರಿಂದ ದೇಹದಲ್ಲಿ ಬಳಲಿಕೆ ಉಂಟಾಗಬಹುದು ಮತ್ತು ನೀವು ಮಾಡುವ ಕೆಲಸದಲ್ಲಿ ಇದರ ಪರಿಣಾಮ ಉಂಟಾಗಬಹುದು. ನೀವು ತಿನ್ನುವಂತಹ ಆಹಾರ ಕೂಡ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆ ಸರಿಯಾಗಿ ಆಹಾರಬೇಕಾದರೆ ಕೆಲವೊಂದು ಆಹಾರ ಸೇವಿಸುವುದನ್ನು ಕಡೆಗಣಿಸಬೇಕಾಗುತ್ತದೆ....

ಸಕ್ಕರೆ ಇರುವ ಆಹಾರಗಳು
ರಾತ್ರಿ ಮಲಗುವ ಮುನ್ನ ಸಿಹಿ ಹೆಚ್ಚಿರುವ ತಿಂಡಿಗಳನ್ನು ತಿನ್ನಬಾರದು. ಏಕೆಂದರೆ ರಕ್ತದಲ್ಲಿ ಸಕ್ಕರೆ ಹೆಚ್ಚಾದರೆ ರಾತ್ರಿ ನಿದ್ದೆಯಲ್ಲಿ ಹಲವು ಬಾರಿ ಬೆಚ್ಚಿ ಬಿದ್ದು ಎಚ್ಚರಾಗುವುದನ್ನು ಗಮನಿಸಲಾಗಿದೆ. ಆದರೆ ಬೆಚ್ಚಿ ಬೀಳಲು ಸಿಹಿತಿಂಡಿಗಳೇ ಏಕೈಕ ಕಾರಣ ಎಂದು ಹೇಳಲಾಗುವುದಿಲ್ಲ. ಆದರೂ ಸುಖನಿದ್ದೆಗೆ ಅಡ್ಡಿಯಾಗದಿರಲು ಸಿಹಿತಿಂಡಿ, ಚಾಕಲೇಟು ಮೊದಲಾದವುಗಳನ್ನು ಸೇವಿಸದಿರುವುದೇ ಉತ್ತಮ.

ಸೆಲರಿ
ಸೆಲರಿ ತಿಂದರೆ ರಾತ್ರಿ ಮಲಗಿದ ಮೇಲೆ ಪದೇ ಪದೇ ಮೂತ್ರ ವಿಸರ್ಜನೆಗೆ ಏಳಬೇಕಾಗಬಹುದು. ಮೂತ್ರವರ್ಧಕವಾಗಿರುವ ಕಾರಣದಿಂದ ನಿದ್ರಿಸುವ ಮೊದಲು ಇದರ ಸೇವನೆ ಮಾಡಬಾರದು.

ಬೆಳ್ಳುಳ್ಳಿ
ಬೆಳ್ಳುಳ್ಳಿ ತುಂಬಾ ಉರಿ ಹಾಗೂ ಖಾರದ ಆಹಾರವಾಗಿದೆ. ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸುವುದು. ಇದು ಆಮ್ಲವು ಹಿಮ್ಮುಖವಾಗಿ ಹರಿಯುವಂತೆ ಮಾಡುವುದು. ಇದರಿಂದ ಹೊಟ್ಟೆಗೆ ತೊಂದರೆಯಾಗುವುದು ಮತ್ತು ನಿದ್ರೆಗೂ ಪರಿಣಾಮ ಬೀರಬಹುದು.

ಆಲ್ಕೋಹಾಲ್
ಆಲ್ಕೋಹಾಲ್ ಸೇವನೆ ಮಾಡಿದರೆ ಸರಿಯಾಗಿ ನಿದ್ರೆ ಮಾಡಬಹುದು ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ದೇಹದಲ್ಲಿರುವ ಆಲ್ಕೋಹಾಲ್ ನಿಂದಾಗಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಆಲ್ಕೋಹಾಲ್ ನಿಂದ ದೇಹವು ನಿರ್ಜಲೀಕರಣವಾಗುವುದು ಮತ್ತು ಇದರಿಂದ ಹೆಚ್ಚು ಹೆಚ್ಚು ನೀರು ಕುಡಿಯಬೇಕಾಗುತ್ತದೆ.

ಐಸ್ ಕ್ರೀಮ್
ಒಂದು ಐಸ್ ಕ್ರೀಮ್ ಒಂದು ಪೂರ್ಣ ಊಟದ ಮೂಲಕ ದೊರಕುವುದಕ್ಕಿಂತಲೂ ಹೆಚ್ಚಿನ ಕೊಬ್ಬನ್ನು ನೀಡುತ್ತದೆ. ಅಂದರೆ ರಾತ್ರಿ ಮಲಗುವ ಮುನ್ನ ಒಂದು ಐಸ್ ಕ್ರೀಂ ತಿಂದರೂ ದೇಹಕ್ಕೆ ಲಭಿಸಿರುವ ಅಪಾರವಾದ ಕೊಬ್ಬನ್ನು ದಹಿಸಲು ಸಮಯವೇ ಉಳಿಯುವುದಿಲ್ಲ. ಇದು ತೂಕ ಹೆಚ್ಚಿಸಲು ನೆರವಾಗುತ್ತದೆ ಹಾಗೂ ರಾತ್ರಿ ಸುಖನಿದ್ದೆಯನ್ನೂ ಬಾಧಿಸುತ್ತದೆ.

ಧೂಮಪಾನ
ನಿದ್ದೆ ಬರದೇ ಇರಲು ರಾತ್ರಿ ಮಲಗುವ ಮುನ್ನ ಮಾಡುವ ಧೂಮಪಾನವೂ ಒಂದು ಕಾರಣವಾಗಿದೆ. ಧೂಮಪಾನಿಗಳ ಶ್ವಾಸನಾಳಗಳು ಕಿರಿದಾಗಿದ್ದು ಮೂಗಿನ ನಳಿಕೆಗಳು ಶಿಥಿಲವೂ ಸಡಿಲವೂ ಆಗಿರುತ್ತವೆ. ಇವು ನಿದ್ದೆಯಲ್ಲಿ ಗೊರಕೆಯನ್ನೂ, ಸರಾಗ ಉಸಿರಾಟಕ್ಕೆ ಅಡ್ಡಿಯುಂಟುಮಾಡುವ ಮೂಲಕ ನಿದ್ದೆಯಲ್ಲಿ ಆಗಾಗ ಎಚ್ಚರಿಸುತ್ತಾ ಸುಖನಿದ್ದೆಯನ್ನು ಮರೀಚಿಕೆಯಾಗಿಸುತ್ತದೆ.

ಕಾಫಿ
ಕೆಫಿನ್ ಇರುವಂತಹ ಪಾನೀಯ ಸೇವನೆಯಿಂದಾಗಿ ನಿದ್ರಾಹೀನತೆ ಉಂಟಾಗಬಹುದು. ಕೆಫಿನ್ ಉತ್ತೇಜಕವಾಗಿರುವ ಕಾರಣದಿಂದಾಗಿ ಮಲಗುವ ಮೊದಲು ಇದನ್ನು ಸೇವಿಸಬಾರದು.



Click it and Unblock the Notifications
