ವಿಶ್ವ ವೈದ್ಯರ ದಿನ: ವೈದ್ಯರ ಲವಲವಿಕೆಯ ಆರೋಗ್ಯದ ಗುಟ್ಟಿನ ರಹಸ್ಯ

By: Arshad
Subscribe to Boldsky

ನಮ್ಮ ಆರೋಗ್ಯದ ಕಾಳಜಿ ವಹಿಸುವ ವೈದ್ಯರು ತಮ್ಮ ಆರೋಗ್ಯವನ್ನೂ ಚೆನ್ನಾಗಿಯೇ ಇಟ್ಟುಕೊಂಡಿರಬೇಕಲ್ಲವೇ? ಸಾಮಾನ್ಯವಾಗಿ ನಾವು ಯಾರೂ ಯೋಚಿಸದ ಸಂಗತಿ ಇದು. ಸಾಮಾನ್ಯವಾಗಿ ಇತರರಿಗಿಂತಲೂ ವೈದ್ಯರಿಗೆ ತಮ್ಮ ಆರೋಗ್ಯದ ಬಗ್ಗೆ ಕೊಂಚ ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ.

ನಿತ್ಯವೂ ಅವರನ್ನು ಸಂದರ್ಶಿಸುವ ನೂರಾರು ರೋಗಿಗಳು ತಮ್ಮೊಂದಿಗೆ ತರುವ ವಿವಿಧ ಸೋಂಕುಕಾರಕ ಕ್ರಿಮಿಗಳಿಂದ ರಕ್ಷಣೆ ಪಡೆಯಲು ವೈದ್ಯರು ಸದಾ ಎಚ್ಚರದಿಂದಲೇ ಇರಬೇಕಾಗುತ್ತದೆ. ಆ ಪ್ರಕಾರ ವೈದ್ಯರು ತಮ್ಮ ಊಟ ಹಾಗೂ ದಿನಚರಿಯಲ್ಲಿ ಅತಿ ಹೆಚ್ಚಿನ ಕಾಳಜಿ ವಹಿಸುತ್ತಾರೆ ಹಾಗೂ ವಯಸ್ಸಾದರೂ ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ.

ಇಂದು ವಿಶ್ವ ವೈದ್ಯರ ದಿನ ಬಂದೇ ಬಿಟ್ಟಿದೆ. ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಖ್ಯಾತ ಹೃದಯತಜ್ಞ ಹಾಗೂ ಫಿಸಿಶಿಯನ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ರಮಣ ರಾವ್ ರವರು ಇಂದು ತಮ್ಮ ಆರೋಗ್ಯದ ಗುಟ್ಟುಗಳನ್ನು ಬೋಲ್ಡ್ ಸ್ಕೈ ತಂಡದೊಂದಿಗೆ ಹಂಚಿಕೊಂಡಿದ್ದು ಇಂದು ಕೆಲವು ಮಹತ್ವದ ಮಾಹಿತಿಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.

ಡಾ. ರಾ. ರವರು ಹೇಳುವಂತೆ "ಉತ್ತಮ ಆರೋಗ್ಯ ಹೊಂದಲು ಆರೋಗ್ಯಕರ ಆಹಾರ ಸೇವನೆಯೇ ಮೂಲ. ಅಷ್ಟೇ ಅಲ್ಲ, ಚಟುವಟಿಕೆಯಿಂದಿರುವುದು, ತಮ್ಮ ಕೆಲಸದಲ್ಲಿಯೇ ಸಂತೋಷ ಕಾಣುವುದು, ಸಮಾಜಕ್ಕೆ ಯಾವುದಾದರೊಂದು ರೀತಿಯಲ್ಲಿ ಉಪಯೋಗವಾಗುವಂತೆ ನಡೆದುಕೊಳ್ಳುವುದು ಮೊದಲಾದವು ಆರೋಗ್ಯಕರ ಹಾರ್ಮೋನುಗಳ ಬಿಡುಗಡೆಗೆ ನೆರವಾಗುತ್ತದೆ. ಇವೆಲ್ಲವೂ ಮನಸ್ಸಿನ ಖಾಲಿತನವನ್ನು ನಿವಾರಿಸಿ ಯಾವುದೇ ರೋಗ ಬರದಂತೆ ನೋಡಿಕೊಳ್ಳುತ್ತವೆ"

ನಿಮ್ಮ ದೇಹಕ್ಕೆ ಏನು ಒಳ್ಳೆಯದು ಏನು ಒಳ್ಳೆಯದಲ್ಲ ಎಂಬುದನ್ನು ದೇಹವೇ ಹೇಳುತ್ತದೆ. ಆದ್ದರಿಂದ ನಮ್ಮ ದೇಹ ಏನು ಹೇಳುತ್ತಿದೆ ಎಂಬುದನ್ನು ನೀವು ಗಮನವಿಟ್ಟು ಕೇಳಬೇಕಾಗುತ್ತದೆ. ಈ ಮೂಲಕ ಮುಂದೆ ಬರಬಹುದಾದ ಹಲವಾರು ತೊಂದರೆಗಳಿಂದ ರಕ್ಷಣೆ ಪಡೆಯಬಹುದು. 

ವಿಶ್ವ ವೈದ್ಯರ ದಿನ ವಿಶೇಷ: ಸ್ವಚ್ಛವಾಗಿದ್ದರೆ ಮಾತ್ರ ಆರೋಗ್ಯ...

ಆರೋಗ್ಯ ಕಾಪಾಡಲು ಚಿನ್ನದಂತಹ ಮಾತೆಂದರೆ ನಿಮ್ಮ ಹೊಟ್ಟೆಯನ್ನು ಎಂದಿಗೂ ಪೂರ್ಣವಾಗಿ ಭರ್ತಿ ಮಾಡದೇ ಇರುವುದು. ಆಗಾಗ ಹೊಟ್ಟೆಯಲ್ಲಿ ಖಾಲಿಯಾಗಿಟ್ಟು ಸರಿಯಾದ ಸಮಯದಲ್ಲಿ ಅಲ್ಪ ಪ್ರಮಾಣವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಆರೋಗ್ಯಕರ ಆಹಾರಕ್ರಮವೆಂದರೆ ವಾರಕ್ಕೆ ನಾಲ್ಕೈದು ದಿನವಾದರೂ ಕಡ್ಡಾಯವಾಗಿ ಸಸ್ಯಾಹಾರವಾಗಿರುವಂತೆ ನೋಡಿಕೊಳ್ಳುವುದಾಗಿದೆ. ಮಾಂಸಾಹಾರದ ಸೇವನೆಯಿಂದ ಒಮ್ಮೆಲೇ ಅಪಾರ ಪ್ರಮಾಣದ ಪೋಷಕಾಂಶಗಳು ದೊರಕುವುದಿರಿಂದ ಇವುಗಳನ್ನು ಜೀರ್ಣಿಸಿ ಶಕ್ತಿಗೆ ಪರಿವರ್ತಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಬನ್ನಿ, ವೈದ್ಯರು ತಿಳಿಸುವ ಗುಟ್ಟಿನ ಸಲಹೆಗಳು ಯಾವುವು ಎಂಬುದನ್ನು ನೋಡೋಣ..... 

ಬೆಳಿಗೆದ್ದ ತಕ್ಷಣ ತಣ್ಣೀರು ಕುಡಿಯುವುದು

ಬೆಳಿಗೆದ್ದ ತಕ್ಷಣ ತಣ್ಣೀರು ಕುಡಿಯುವುದು

ಬೆಳಿಗ್ಗೆದ್ದ ತಕ್ಷಣವೇ ಒಂದು ಲೋಟ ತಣ್ಣೀರು (ಸಾದಾ ನೀರು, ಫ್ರಿಜ್ಜಿನದ್ದಲ್ಲ) ಕುಡಿಯುವುದು ಕಡ್ಡಾಯವಾಗಿದೆ. ಇದು ರಾತ್ರಿಯ ಜೀರ್ಣಾಂಗಗಳ ಚಟುವಟಿಕೆಯಿಂದ ಜಠರದಲ್ಲಿ ಹೆಚ್ಚಾಗಿದ್ದ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಸುಲಭವಾದ ಮಲವಿಸರ್ಜನೆಗೆ ನೆರವಾಗುತ್ತದೆ. ಸುಮಾರು ಮುಕ್ಕಾಲು ಘಂಟೆಯ ಬಳಿಕವೇ ನಿಮ್ಮ ನಿತ್ಯದ ಕಾಫಿ ಅಥವಾ ಟೀ ಸೇವಿಸಬಹುದು. ಡಾ. ರಾವ್ ರವರ ಪ್ರಕಾರ ಈ ವಿಧಾನದಿಂದ ದಿನದ ಚಟುವಟಿಕೆ ಸುಲಲಿತವಾಗಿ ನಡೆಯಲು ಇಂಧನ ದೊರೆತಂಗಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ನೀರು ಕುಡಿದ ಒಂದು ಗಂಟೆಯ ಬಳಿಕವೇ ಬ್ರೇಕ್ ಫಾಸ್ಟ್ ಮಾಡಿ

ನೀರು ಕುಡಿದ ಒಂದು ಗಂಟೆಯ ಬಳಿಕವೇ ಬ್ರೇಕ್ ಫಾಸ್ಟ್ ಮಾಡಿ

ಬೆಳಿಗ್ಗೆ ನೀರು ಕುಡಿದ ಒಂದು ಗಂಟೆಯ ಬಳಿಕವೇ ಬೆಳಗ್ಗಿನ ಉಪಾಹಾರ ಸೇವಿಸಬೇಕು. ಈ ಅವಧಿಯಲ್ಲಿ ನಿಮ್ಮ ದೇಹವನ್ನು ಸಾಧ್ಯವಾದಷ್ಟು ದೈಹಿಕ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ಕನಿಷ್ಟ ಅರ್ಧ ಘಂಟೆಯಾದರೂ ನಡೆಯಬೇಕು. ಸುಮ್ಮನೆ ಅರ್ಧ ಘಂಟೆ ನಡೆದಾಡಿದರೆ ಅಥವಾ ಟ್ರೆಡ್ ಮಿಲ್ ನಲ್ಲಿ ನಡೆದರೂ ಸಾಕು. ಇದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಾಗೂ ದಿನದ ಚಟುವಟಿಕೆಗಳಿಂದ ಸುಸ್ತಾಗದಿರಲು ನೆರವಾಗುತ್ತದೆ.

ಉಪಾಹಾರ

ಉಪಾಹಾರ

ಪ್ರತಿದಿನವೂ ನಿಮ್ಮ ಉಪಾಹಾರ ಬೇರೆ ಬೇರೆಯಾಗಿರಬೇಕು. ಅದರಲ್ಲೂ ನಿಮ್ಮ ಕುತೂಹಲ ಕೆರಳಿಸುವಂತಹ ಪ್ರಯೋಗಗಳಿದ್ದರೆ ಇನ್ನೂ ಉತ್ತಮ. ಇಡ್ಲಿ, ಉಪ್ಪಿಟ್ಟು, ಅವಲಕ್ಕಿ ಮೊದಲಾದವು ಉತ್ತಮ ಆಯ್ಕೆಗಳು. ಉಪಾಹಾರವನ್ನು ಎಂದಿಗೂ ಲಗುಬಗೆಯಿಂದ ತಿನ್ನಬಾರದು. ನಿಧಾನವಾಗಿ ಅಗಿದು ನುಂಗಬೇಕು. ನಿಮ್ಮ ನಿತ್ಯದ ಕೆಲಸ ಪ್ರಾರಂಭವಾದ ಬಳಿಕ ಸುಮಾರು ಹನ್ನೊಂದು ಘಂಟೆಗೊಂದು ಪುಟ್ಟ ವಿರಾಮ ಪಡೆದು ಈ ಸಮಯದಲ್ಲಿ ಒಂದು ಕಪ್ ಕಾಫಿ ಅಥವಾ ಟೀ ಸೇವಿಸಬಹುದು. ಹಸಿವು ಎನಿಸಿದರೆ ಲಘು ಉಪಾಹಾರವನ್ನೂ ಸೇವಿಸಬಹುದು. ಆದರೆ ಈ ಉಪಾಹಾರ ಎಣ್ಣೆರಹಿತವಾಗಿರಬೇಕು. ಪುಟ್ಟ ಏಲಕ್ಕಿ ಬಾಳೆಹಣ್ಣು ಅತ್ಯುತ್ತಮ ಆಯ್ಕೆ. ಇದರಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟ ಸಂತುಲಿತವಾಗಿರಲು ನೆರವಾಗುತ್ತದೆ.

ಮಧ್ಯಾಹ್ನದ ಊಟ

ಮಧ್ಯಾಹ್ನದ ಊಟ

ಮಧ್ಯಾಹ್ನದ ಊಟದ ಸಮರ್ಪಕ ಸಮಯವೆಂದರೆ ಒಂದರಿಂದ ಮೂರು ಗಂಟೆಯವರೆಗೆ. ಇದರಲ್ಲಿ ಬೇಳೆ, ಅಕ್ಕಿ ಹಾಗೂ ತರಕಾರಿಗಳಿರಬೇಕು. ತರಕಾರಿಗಳು ಇರುವುದು ಕಡ್ಡಾಯ. ಒಂದು ವೇಳೆ ಮಾಂಸಾಹಾರ ಸೇವಿಸುವುದಾದರೆ ಇದು ಮಧ್ಯಾಹ್ನದ ಊಟಕ್ಕೇ ಇರಲಿ. ಊಟದ ಕೊನೆಯಲ್ಲಿ ಮೊಸರು ಸೇವಿಸುವುದೂ ಅಗತ್ಯ. ಇದರಿಂದ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಮಧ್ಯಾಹ್ನದ ಊಟದ ಬಳಿಕ ಸುಮಾರು ಅರ್ಧ ಗಂಟೆ ವಿರಾಮ ತೆಗೆದುಕೊಳ್ಳುವುದೂ ಅಗತ್ಯ. ಡಾ. ರಮಣ ರವರು ತಮ್ಮ ಊಟದ ಬಳಿಕ ಅರ್ಧ ಗಂಟೆಯ ಪುಟ್ಟ ನಿದ್ದೆ ಹೋಗುತ್ತಾರೆ. ಇದರಿಂದ ದೇಹ ನಿರಾಳಗೊಂಡು ಮುಂದಿನ ದಿನದ ಅವಧಿಗೆ ಬೇಕಾದ ಶಕ್ತಿಯನ್ನು ನೀಡುತ್ತದೆ ಹಾಗೂ ಚಟುವಟಿಕೆಯನ್ನು ಉತ್ಸಾಹದೊಂದಿಗೆ ನಡೆಸಲು ಸಾಧ್ಯವಾಗುತ್ತದೆ.

ಸಂಜೆಯ ತಿಂಡಿ

ಸಂಜೆಯ ತಿಂಡಿ

ಸಂಜೆ ಸುಮಾರು ಐದರಿಂದ ಐದೂವರೆಯ ನಡುವೆ ಲಘು ಉಪಾಹಾರವನ್ನು ಸೇವಿಸಬೇಕು. ಇದರಿಂದ ಹೊಟ್ಟೆ ತುಂಬಿದಂತಿದ್ದು ದೇಹದಲ್ಲಿ ಸಕ್ಕರೆಯ ಪ್ರಮಾಣ ಸಂತುಲಿತವಾಗಿರಲು ನೆರವಾಗುತ್ತದೆ.

ರಾತ್ರಿಯ ಊಟ

ರಾತ್ರಿಯ ಊಟ

ರಾತ್ರಿಯ ಊಟ ಎಂದಿಗೂ ಸರಳ ಹಾಗೂ ಲಘುವಾಗಿರಬೇಕು. ಎರಡು ಚಪಾತಿ ಹಾಗೂ ಒಂದು ಅಥವಾ ಎರಡು ಪಲ್ಯವಿದ್ದರೆ ಬೇಕಾದಷ್ಟಾಯಿತು. ರಾತ್ರಿ ಊಟದಲ್ಲಿ ಅಕ್ಕಿ ಒಳ್ಳೆಯದಲ್ಲ. ಏಕೆಂದರೆ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ರಾತ್ರಿಯ ಊಟದಲ್ಲಿ ಸುಲಭವಾಗಿ ಜೀರ್ಣವಾಗುವ ಆಹಾರಗಳೇ ಇರಬೇಕು. ರಾತ್ರಿಯ ಊಟದ ಬಳಿಕವೂ ಕೊಂಚ ದೂರ ನಡೆದಾಡಿಕೊಂದು ಬಂದ ಬಳಿಕವೇ ಮಲಗಬೇಕು.

English summary

Doctor’s Secret Diet Tips To Stay Fit As You Age

Have you ever come across a doctor who is unhealthy? This is something which you would have hardly witnessed. A healthy diet is one of the most important factors that helps in keeping a doctor healthy. Well, if you want to know the secret diet tips from a doctor to stay healthy as you age, then you need to read this article. With the National Doctor’s Day just around, Bangalore based Dr Ramana Rao, a Padmashree awardee and a renowned physician and cardiologist shares his diet secret of being healthy on Boldsky.
Subscribe Newsletter