ಆರೋಗ್ಯ ಟಿಪ್ಸ್: ಕುಂಬಳಕಾಯಿ ಬೀಜದಿಂದ ಪುರುಷರಿಗೆ ದುಪ್ಪಟ್ಟು ಲಾಭ!

By: Hemanth
Subscribe to Boldsky

ವಯಸ್ಸಾಗುತ್ತಾ ಇರುವಂತೆ ಪುರುಷರಲ್ಲಿ ಲೈಂಗಿಕ ಆಸಕ್ತಿಯ ಕೊರತೆ ಕಾಣಿಸಿಕೊಳ್ಳುವುದು ಮತ್ತು ಅವರಲ್ಲಿ ವೀರ್ಯ ಉತ್ಪಾದನೆಯು ಕಡಿಮೆಯಾಗುವುದು. ಇಂತಹ ಸಮಸ್ಯೆಗೆ ಕಾರಣಗಳು ಹಲವಾರು ಇದ್ದರೂ ಇದರಲ್ಲಿ ಪ್ರಮುಖವಾಗಿ ಪುರುಷ ಜನನೇಂದ್ರಿಯ ಗ್ರಂಥಿಯು ಪ್ರಮುಖವಾಗಿದೆ. ಪುರುಷ ಜನನೇಂದ್ರೀಯ ಗ್ರಂಥಿಯು ಪುರುಷರಲ್ಲಿ ವೀರ್ಯವನ್ನು ಉತ್ಪತ್ತಿ ಮಾಡುತ್ತದೆ.

ಹೃದಯಕ್ಕೆ ನವಚೈತನ್ಯ ತುಂಬುವ ಕುಂಬಳಕಾಯಿ ಬೀಜ

ಈ ಸಮಸ್ಯೆಯನ್ನು ಹೋಗಲಾಡಿಸಲು ಕುಂಬಳಕಾಯಿ ಬೀಜವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕುಂಬಳಕಾಯಿ ಬೀಜದಲ್ಲಿ ಇರುವಂತಹ ಸತು ಜನನೇಂದ್ರಿಯ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ಕುಂಬಳಕಾಯಿ ಬೀಜದ ಎಣ್ಣೆಯು ಒಳ್ಳೆಯ ರೀತಿ ಕೆಲಸ ಮಾಡಲಿದೆ. ಜನನೇಂದ್ರಿಯ ಗ್ರಂಥಿಯ ಉರಿಯೂತ, ಕೊಲೆಸ್ಟ್ರಾಲ್ ಹಾಗೂ ಇತರ ಕೆಲವೊಂದು ಸಮಸ್ಯೆಗಳಿಗೆ ಕುಂಬಳಕಾಯಿ ಬೀಜದಿಂದ ಆಗುವ ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ... 

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*2 ಚಮಚ ಕುಂಬಳಕಾಯಿ ಬೀಜ

*ಒಂದು ಕಪ್ ನೀರು

ತಯಾರಿ

ತಯಾರಿ

ನೀರು ಬಿಸಿ ಮಾಡಿ ಮತ್ತು ಅದಕ್ಕೆ ಜಜ್ಜಿದ ಕುಂಬಳಕಾಯಿ ಬೀಜಗಳನ್ನು ಹಾಕಿ. 10 ನಿಮಿಷ ಕಾಲ ಇದನ್ನು ಕುದಿಸಿದ ಬಳಿಕ ನೀರನ್ನು ತೆಗೆದು ಕುಡಿಯಿರಿ. ನಿಯಮಿತವಾಗಿ ಹೀಗೆ ಮಾಡಿ ಮತ್ತು ನಿಮ್ಮಲ್ಲಿ ಖಂಡಿತವಾಗಿಯೂ ಬದಲಾವಣೆ ಕಂಡುಬರುವುದು.

 ಕುರ್ಕುಬಿಟಾಸಿನ್

ಕುರ್ಕುಬಿಟಾಸಿನ್

ಕುಂಬಳಕಾಯಿ ಬೀಜಗಳಲ್ಲಿ ಕುರ್ಕುಬಿಟಾಸಿನ್ ಎನ್ನುವ ಅಂಶವಿದೆ. ಈ ಪೋಷಕಾಂಶವು ಪ್ರೊಸ್ಟೇಟ್ ಬೆಳವಣಿಗೆಯನ್ನು ತಡೆಯುತ್ತದೆ. ಒಂದು ಚಮಚ ಕುಂಬಳಕಾಯಿ ಬೀಜಗಳನ್ನು ಪ್ರತೀ ದಿನ ಸೇವಿಸಿದರೆ ಹಲವಾರು ಸಮಸ್ಯೆ ನಿವಾರಣೆ ಮಾಡಬಹುದು.

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜದ ತೈಲವು ಪ್ರೊಸ್ಟೇಟ್ ಹೈಪಪ್ಲಾಸಿಯಾದ ಲಕ್ಷಣವನ್ನು ತಡೆಯುತ್ತದೆ. ಕುಂಬಳಕಾಯಿ ತೈಲವು ಬಳಸಲು ತುಂಬಾ ಸುರಕ್ಷಿತ.

 ಸತು

ಸತು

ಪ್ರೊಸ್ಟೇಟ್ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಖನಿಜಾಂಶವೆಂದರೆ ಸತು. ಜನನೇಂದ್ರಿಯ ಗ್ರಂಥಿಯು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ದೇಹದಲ್ಲಿ ಹೆಚ್ಚಿನ ಮಟ್ಟದ ಸತುವಿನ ಅಗತ್ಯವಿದೆ.

ಮೂತ್ರವರ್ಧಕ

ಮೂತ್ರವರ್ಧಕ

ಕುಂಬಳಕಾಯಿ ಬೀಜಗಳು ಮೂತ್ರವರ್ಧಕವಾಗಿರುವ ಕಾರಣದಿಂದ ಇದು ದೇಹದಲ್ಲಿರುವ ಹಲವಾರು ರೀತಿಯ ವಿಷಕಾರಿ ಅಂಶಗಳನ್ನು ಹೊರಹಾಕುವುದು. ಇದರಿಂದ ಜನನೇಂದ್ರಿಯ ಗ್ರಂಥಿ ದೊಡ್ಡದಾಗುವ ಸಮಸ್ಯೆ ನಿವಾರಣೆಯಾಗುವುದು.

ವೈದ್ಯರೊಂದಿಗೆ ಮಾತನಾಡಿ

ವೈದ್ಯರೊಂದಿಗೆ ಮಾತನಾಡಿ

ದೈನಂದಿನ ಬಳಕೆಗೆ ದೇಹಕ್ಕೆ ಬೇಕಾಗುವ ಶೇ.50ರಷ್ಟು ಸತುವನ್ನು ಒಂದು ಕಪ್ ಕುಂಬಳಕಾಯಿ ಬೀಜವು ಒದಗಿಸುತ್ತದೆ. ಕುಂಬಳಕಾಯಿ ಬೀಜವನ್ನು ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

English summary

Do Pumpkin Seeds Treat Prostate Issues?

Men generally suffer prostate issues as they age. What exactly is the prostate? Well, it is a gland that develops the semen in men. Firstly, pumpkin seeds supply zinc which is an important mineral that supports prostate function. Also, these seeds are said to inhibit the growth of prostate. Even pumpkin seed oil works well. Here is a remedy for cholesterol issues, gastritis and inflamed prostate. Pumpkin seeds can curb inflammation.
Story first published: Tuesday, July 18, 2017, 23:45 [IST]
Subscribe Newsletter