ಬಿಯರ್ ಕುಡಿಯುವ ವ್ಯಕ್ತಿಗಳಿಗೆ ಸೊಳ್ಳೆಗಳು ಹೆಚ್ಚೇ ಕಚ್ಚುತ್ತವೆಯಂತೆ!!

By: Arshad
Subscribe to Boldsky

ಯಾವ ಜಾತಿ ಮತ ಬೇಧವಿಲ್ಲದೇ ಎಲ್ಲಾ ರಕ್ತವನ್ನೂ ಒಂದೇ ಒಂದು ಪರಿಗಣಿಸುವ ಒಂದೇ ಒಂದು ಜೀವಿ-ಅದು ಸೊಳ್ಳೆ, ಹೀಗೊಂದು ನಗೆಹನಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ರಕ್ತ ಹೀರುವ ಯಾವುದೇ ಕ್ರಿಮಿ ಅಪಾಯಕಾರಿಯೇ. ಆದರೆ ಸೊಳ್ಳೆ ಇನ್ನೂ ಹೆಚ್ಚು ಅಪಾಯಕರ.

ಏಕೆಂದರೆ ಇದು ತನ್ನ ಸೂಜಿಯಂತಹ ಉಪಕರಣವನ್ನು ಚುಚ್ಚಿ ರಕ್ತವನ್ನು ಹೀರುವುದು ಮಾತ್ರವಲ್ಲ, ಹಿಂದೆ ಹೀಗೆ ಚುಚ್ಚಿದ್ದ ವ್ಯಕ್ತಿಯ ದೇಹದಿಂದ ಸೋಂಕುಕಾರಕ ಸೂಕ್ಷ್ಮಜೀವಿಗಳನ್ನು ಪಡೆದು ತನ್ನ ದೇಹದಲ್ಲಿ ಬೆಳೆಸಿ ಮುಂದಿನ ವ್ಯಕ್ತಿಯ ರಕ್ತ ಹೀರಲು ಚುಚ್ಚುವಾಗ ನಿಧಾನವಾಗಿ ಈ ವ್ಯಕ್ತಿಗೆ ಆ ಸೂಕ್ಷ್ಮಜೀವಿಗಳನ್ನು ದಾಟಿಸಿಬಿಡುತ್ತದೆ. 

ಮನೆಯಲ್ಲಿಯೇ ಬೆಳೆಸಬಹುದಾದ ಸೊಳ್ಳೆ ನಿವಾರಕ ಸಸ್ಯಗಳು!

ಇದೇ ಕಾರಣಕ್ಕೆ ಸೊಳ್ಳೆ ಅತ್ಯಂತ ಅಪಾಯಕಾರಿಯಾದ ಕ್ರಿಮಿಯಾಗಿದೆ. ಹೀಗೆ ಹರಡುವ ರೋಗಗಳಲ್ಲಿ ಮಲೇರಿಯಾ, ಡೆಂಗ್ಯೂ ಹಾಗೂ ಇತ್ತೀಚಿಗೆ ವ್ಯಾಪಕವಾಗುತ್ತಿರುವ ಝಿಕಾ ವೈರಸ್ ಮೂಲಕ ಬರುವಂತಹ ಜ್ವರಗಳು ಪ್ರಮುಖವಾಗಿವೆ. ಸೊಳ್ಳೆಗಳು ಹಲವಾರು ಬಗೆಯ ಬ್ಯಾಕ್ಟೀರಿಯಾಗಳನ್ನು ಮತ್ತು ವೈರಸ್ಸುಗಳನ್ನು ತನ್ನೊಂದಿಗೆ ಕೊಂಡೊಯ್ಯುವ ಮೂಲಕ ಇನ್ನೂ ಹಲವಾರು ಬಗೆಯ ಕಾಯಿಲೆಗಳನ್ನು ಹರಡಬಲ್ಲುದು.

ಅಷ್ಟೇ ಅಲ್ಲ, ಸೂಜಿಯಿಂದ ಚುಚ್ಚಿದಾಗ ಆಗುವ ನೋವು ನಿದ್ದೆಗೆಡಿಸಿದರೆ ರಕ್ತ ಹೀರಿ ಹಾರಿ ಹೋದ ಬಳಿಕ ಆ ಸ್ಥಳದಲ್ಲಿ ಚರ್ಮದಲ್ಲಿ ದದ್ದು ಎದ್ದು ಭಾರೀ ಉರಿ ಹಾಗೂ ತುರಿಕೆಯುಂಟಾಗುತ್ತದೆ. ಅಲ್ಲದೇ ಇವು ಹಾರಾಡುವಾಗ ಹೊಮ್ಮುವ ಗುಂಯ್ದುಡುವಿಕೆಯೂ ಭಾರೀ ಅಸಮಾಧಾನವನ್ನು ಉಂಟುಮಾಡಬಹುದು. 

ನಿಮ್ಮ ಮನೆಯಲ್ಲಿ ಸೊಳ್ಳೆ ಕಾಟವೇ? ಹಾಗಿದ್ದರೆ ಈ ಟ್ರಿಕ್ಸ್ ಪ್ರಯತ್ನಿಸಿ ನೋಡಿ

ಸೊಳ್ಳೆ ಜಾತಿ ನೋಡುವುದಿಲ್ಲ ಎನ್ನುವುದೇನೋ ಸರಿ, ಆದರೆ ರಕ್ತ ನೋಡುವುದಿಲ್ಲ ಎನ್ನುವುದು ಸರಿಯಲ್ಲ. ಏಕೆಂದರೆ ಒಂದು ಕೋಣೆಯಲ್ಲಿ ನಾಲ್ಕಾರು ಜನರಿದ್ದಾಗ ಅಲ್ಲಿರುವ ಸೊಳ್ಳೆಗಳಲ್ಲಿ ಹೆಚ್ಚಿನವು ಓರ್ವ ವ್ಯಕ್ತಿಯನ್ನು ಇತರರಿಗಿಂತ ಹೆಚ್ಚಾಗಿಯೇ ಕಚ್ಚುತ್ತವೆ. ಹೀಗೆ ಕಚ್ಚಿಸಿಕೊಂಡ ವ್ಯಕ್ತಿ ನೀವಾಗಿದ್ದರೆ ಇದಕ್ಕೆ ಕಾರಣವೇನು ಎಂದು ತಿಳಿದುಕೊಳ್ಳುವ ಕುತೂಹಲವಂತೂ ನಿಮಗೆ ಇದ್ದೇ ಇರುತ್ತದೆ. ಹಲವು ಸಂಶೋಧನೆಗಳ ಮೂಲಕ ಸೊಳ್ಳೆಗಳು ಕೆಲವು ವಿಶಿಷ್ಟ ರಕ್ತದ ಗುಂಪಿನ ವ್ಯಕ್ತಿಗಳನ್ನೇ ಹೆಚ್ಚಾಗಿ ಕಚ್ಚುತ್ತವೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಏಕೆ? ಎಂಬ ಪ್ರಶ್ನೆಗೆ ಕೆಳಗಿನ ಮಾಹಿತಿಗಳು ಉತ್ತರಿಸಲಿವೆ...

ರಕ್ತದ ಗುಂಪು

ರಕ್ತದ ಗುಂಪು

ಸೊಳ್ಳೆಗಳಿಗೆ ರಕ್ತದ ಗುಂಪು ಹೇಗೆ ಗೊತ್ತಾಗುತ್ತದೆ? ವಾಸ್ತವದಲ್ಲಿ ನಿಸರ್ಗ ಸೊಳ್ಳೆಗಳಿಗೆ ತಾವು ಕಚ್ಚಲಿರುವ ವ್ಯಕ್ತಿಗಳ ರಕ್ತದ ಗುಂಪು ಯಾವುದು ಎಂಬುದನ್ನು ಕಚ್ಚುವ ಮುನ್ನವೇ ಕಂಡುಕೊಳ್ಳುವ ಶಕ್ತಿಯನ್ನು ನೀಡಿದೆ. ಸಂಶೋಧನೆಯಲ್ಲಿ ಕಂಡುಕೊಂಡಂತೆ 'ಒ' ಗುಂಪಿನ ರಕ್ತದ ವ್ಯಕ್ತಿಗಳ ರಕ್ತ ಸೊಳ್ಳೆಗಳಿಗೆ ಭಾರೀ ಇಷ್ಟ. ಈ ಗುಂಪಿನ ರಕ್ತದವರು ಇಲ್ಲದಿದ್ದರೆ ಮುಂದಿನ ಆಯ್ಕೆ ಬಿ ಗುಂಪು, ಬಳಿಕದ ಆಯ್ಕೆ ಎ ಗುಂಪು. ಎಬಿ ಗುಂಪಿಗೆ ಅತಿ ಕಡಿಮೆ ಬೇಡಿಕೆ.

ಬಿಯರ್ ಕುಡಿಯುವ ವ್ಯಕ್ತಿಗಳಿಗೆ ಸೊಳ್ಳೆಗಳು ಹೆಚ್ಚೇ ಕಚ್ಚುತ್ತವೆಯಂತೆ!!

ಬಿಯರ್ ಕುಡಿಯುವ ವ್ಯಕ್ತಿಗಳಿಗೆ ಸೊಳ್ಳೆಗಳು ಹೆಚ್ಚೇ ಕಚ್ಚುತ್ತವೆಯಂತೆ!!

ರಕ್ತದ ಗುಂಪು ಮಾತ್ರವಲ್ಲ, ವ್ಯಕ್ತಿಯ ಬೆವರು ಸಹಾ ಸೊಳ್ಳೆಗಳನ್ನು ಆಕರ್ಷಿಸಲು ನೆರವಾಗುತ್ತದೆ. ಬಿಯರ್ ಕುಡಿದವರ ಚರ್ಮದಲ್ಲಿ ಹರಿಯುವ ಬೆವರು ಕೊಂಚ ಭಿನ್ನವಾದ ವಾಸನೆ ಹೊಂದಿದ್ದು ಈ ವಾಸನೆ ಸೊಳ್ಳೆಗಳಿಗೆ ಭಾರೀ ಆಕರ್ಷಣೆ ನೀಡುತ್ತವೆ. ಆದ್ದರಿಂದ ಯಾವುದೇ ರಕ್ತದ ಗುಂಪಿನವರಾಗಲಿ, ಬಿಯರ್ ಕುಡಿದಿದ್ದರೆ ಈ ವ್ಯಕ್ತಿಗಳನ್ನು ಸೊಳ್ಳೆಗಳು ಇತರರಿಗಿಂತ ಹೆಚ್ಚೇ ಕಚ್ಚುತ್ತವೆ.

ಸೊಳ್ಳೆಗಳು ಮನುಷ್ಯರನ್ನೇ ಏಕೆ ಕಡಿಯುತ್ತವೆ ಎಂದು ತಿಳಿದಿದೆಯೇ?

 ಬಟ್ಟೆಗಳು

ಬಟ್ಟೆಗಳು

ಸೊಳ್ಳೆಗಳ ಕಚ್ಚುವಿಕೆಗೂ ಬಟ್ಟೆಗಳ ಬಣ್ಣಕ್ಕೂ ನಿಕಟ ಸಂಬಂಧವಿದೆ. ಗಾಢವರ್ಣದ ಬಟ್ಟೆಗಳು ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುತ್ತವೆ. ಅದರಲ್ಲೂ ಈ ಆಕರ್ಷಣೆ ಮಧ್ಯಾಹ್ನದ ಹೊತ್ತಿನಲ್ಲಿ ಗರಿಷ್ಟವಾಗಿರುತ್ತದೆ. ವಿಶೇಷವಾಗಿ ರಕ್ತಗೆಂಪು, ಕಪ್ಪು ಮತ್ತು ಗಾಢನೀಲಿ ಬಣ್ಣದ ಬಟ್ಟೆಗಳನ್ನು ತೊಟ್ಟವರನ್ನೇ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ. ಸೊಳ್ಳೆಗಳಿಗೆ ಸಂಯುಕ್ತ ಕಣ್ಣುಗಳಿದ್ದು ಮನುಷ್ಯರನ್ನು ಗುರುತಿಸಬಲ್ಲವು. ಇದೇ ಕಾರಣಕ್ಕೆ ಸೊಳ್ಳೆ ಪರದೆಗಳನ್ನು ಬಿಳಿ ಅಥವಾ ತಿಳಿಬಣ್ಣದಿಂದಲೇ ತಯಾರಿಸಲಾಗುತ್ತದೆ.

ಇಂಗಾಲದ ಡೈ ಆಕ್ಸೈಡ್

ಇಂಗಾಲದ ಡೈ ಆಕ್ಸೈಡ್

ಸೊಳ್ಳೆಗಳು ಕಿವಿಯ ಹತ್ತಿರವೇ ಬಂದು ಗುಂಯ್ಗುಡುವುದೇಕೆ? ಇದಕ್ಕೆ ಕಾರಣ ನಮ್ಮ ನಿಃಶ್ವಾಸದ ಮೂಲಕ ಹೊಮ್ಮುವ ಇಂಗಾಲದ ಡೈ ಆಕ್ಸೈಡ್. ಸೊಳ್ಳೆಗಳು ಸುಮಾರು ನೂರೈವತ್ತು ಅಡಿ ದೂರದಿಂದ ಇಂಗಾಲದ ಡೈ ಆಕ್ಸೈಡ್ ಹೆಚ್ಚಿರುವ ಸ್ಥಳಗಳನ್ನು ನೋಡಬಲ್ಲ ವಿಶೇಷ ಶಕ್ತಿಯನ್ನು ಹೊಂದಿವೆ. ಮಾನವರ ಉಸಿರಿನ ಮೂಲಕ ಹೊಮ್ಮುವ ಈ ಅನಿಲವನ್ನು ಹಿಂಬಾಲಿಸಿಯೇ ಸೊಳ್ಳೆಗಳು ಸುಲಭವಾಗಿ ಮನುಷ್ಯರ ಇರುವಿಕೆಯನ್ನು ಕಂಡುಕೊಳ್ಳುತ್ತವೆ. ಸ್ಥೂಲವ್ಯಕ್ತಿಗಳು ಇತರರಿಗಿಂತಲೂ ಹೆಚ್ಚು ಪ್ರಮಾಣದ ಇಂಗಾಲದ ಡೈಆಕ್ಸೈಡ್ ಅನಿಲವನ್ನು ನಿಃಶ್ವಾಸದ ಮೂಲಕ ಬಿಡುವುದರಿಂದ ಈ ವ್ಯಕ್ತಿಗಳನ್ನು ಸೊಳ್ಳೆಗಳು ಇತರರಿಗಿಂತ ಹೆಚ್ಚೇ ಗಮನಿಸುತ್ತವೆ ಹಾಗೂ ಇವರ ಬಳಿಗೆ ಬೇಗನೇ ಬರುತ್ತವೆ.

ಇಂಗಾಲದ ಡೈ ಆಕ್ಸೈಡ್

ಇಂಗಾಲದ ಡೈ ಆಕ್ಸೈಡ್

ಮೂಗಿನಿನಿಂದ ಹೊರಬಿದ್ದ ಇಂಗಾಲದ ಡೈ ಆಕ್ಸೈಡ್ ಅನಿಲ ಗಾಳಿಯಲ್ಲಿ ತೇಲಿ ಕಿವಿಯ ಬಳಿಯಿಂದ ಹಿಂದೆ ಹೋಗುತ್ತದೆ. ಆದ್ದರಿಂದಲೇ ಸೊಳ್ಳೆಗಳು ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹಿಂಬಾಲಿಸುತ್ತಾ ನಮ್ಮ ಕಿವಿಯ ಬಳಿ ಹೆಚ್ಚೂ ಕಡಿಮೆ ನಿಂತಂತೆ ಇದ್ದು ತನ್ನ ಗುರಿಯನ್ನು ಸ್ಪಷ್ಟವಾಗಿಸುತ್ತಾ ಇರುತ್ತದೆ. ಇದೇ ಕಿವಿಯ ಬಳಿ ಗುಂಯ್ಗುಡುವುದಕ್ಕೆ ಕಾರಣ.

ಗರ್ಭಾವಸ್ಥೆ

ಗರ್ಭಾವಸ್ಥೆ

ಗರ್ಭಿಣಿಯರನ್ನೂ ಸೊಳ್ಳೆಗಳು ಇತರರಿಗಿಂತ ಹೆಚ್ಚೇ ಕಚ್ಚುತ್ತವೆ. ಏಕೆಂದರೆ ಈ ಸಮಯದಲ್ಲಿ ಗರ್ಭಿಣಿಯ ಉಸಿರಾಟ ಕೊಂಚ ಹೆಚ್ಚೇ ಆಗಿರುತ್ತದೆ. ವಿಶೇಷವಾಗಿ ಆರು ತಿಂಗಳು ಕಳೆದ ಬಳಿಕ ಉಸಿರಾಟದ ಗತಿ ಹೆಚ್ಚಿರುತ್ತದೆ. ಈ ಹೆಚ್ಚಿನ ಉಸಿರಾಟದ ಮೂಲಕ ಹೆಚ್ಚು ಬಿಡುಗಡೆಗೊಳ್ಳುವ ಇಂಗಾಲದ ಡೈ ಆಕ್ಸೈಡ್ ಸೊಳ್ಳೆಗಳನ್ನು ಹೆಚ್ಚೇ ಆಕರ್ಷಿಸುತ್ತದೆ. ಅಷ್ಟೇ ಅಲ್ಲ, ಗರ್ಭಿಣಿಯರ ಶರೀರದ ತಾಪಮಾನ ಕೊಂಚ ಹೆಚ್ಚಿರುವ ಕಾರಣವೂ ಸೊಳ್ಳೆಗಳನ್ನು ಇತರರಿಗಿಂತಲೂ ಹೆಚ್ಚು ಆಕರ್ಷಿಸಲು ಕಾರಣವಾಗುತ್ತದೆ.

ಬ್ಯಾಕ್ಟೀರಿಯಾ

ಬ್ಯಾಕ್ಟೀರಿಯಾ

ನಮ್ಮ ಚರ್ಮದಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳೂ ಸೊಳ್ಳೆಗಳಿಗೆ ಆಹ್ವಾನ ನೀಡಬಹುದು. ಕೆಲವು ಬ್ಯಾಕ್ಟೀರಿಯಾಗಳು ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಆಶ್ರಯ ಪಡೆದು ಸೋಂಕು ಹರಡಿ ಒಂದು ಬಗೆಯ ವಾಸನೆಯನ್ನು ಬಿಡುಗಡೆ ಮಾಡುತ್ತವೆ. ಈ ಪರಿಮಳವನ್ನು ಆಸ್ವಾದಿಸಿದ ಸೊಳ್ಳೆ ತಕ್ಷಣವೇ ಬ್ಯಾಕ್ಟೀರಿಯಾದ ಆಹ್ವಾನವನ್ನು ಮನ್ನಿಸಿ ಬಂದುಬಿಡುತ್ತದೆ.

ಬ್ಯಾಕ್ಟೀರಿಯಾ

ಬ್ಯಾಕ್ಟೀರಿಯಾ

ನಮ್ಮ ಚರ್ಮದಲ್ಲಿ ಎಷ್ಟು ಬಗೆಯ ಬ್ಯಾಕ್ಟೀರಿಯಾಗಳಿರುತ್ತವೆಯೋ ಅಷ್ಟೂ ಹೆಚ್ಚು ಸೊಳ್ಳೆಗಳನ್ನು ಆಕರ್ಷಿಸಲು ಅಥವಾ ವಿಕರ್ಷಿಸಲು ಕಾರಣವಾಗುತ್ತವೆ. ಇದೇ ಕಾರಣಕ್ಕೆ ಚರ್ಮದ ಮೇಲೆ ಕೊಂಚ ನೀಲಗಿರಿ ಎಣ್ಣೆಯನ್ನು ಹಚ್ಚಿದರೆ ಸೊಳ್ಳೆಗಳು ಕಚ್ಚವುದಿಲ್ಲ.

ಬೆವರು

ಬೆವರು

ಬೆವರಿಗೂ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ. ಇವುಗಳ ಮೂಗಿನಲ್ಲಿ ಅಮೋನಿಯಾ, ಯೂರಿಕ್ ಆಮ್ಲ, ಲ್ಯಾಕ್ಟಿಕ್ ಆಮ್ಲ ಹಾಗೂ ಬೆವರಿನ ಮೂಲಕ ವಿಸರ್ಜಿಸುವ ಕೆಲವಾರು ರಾಸಾಯನಿಕಗಳನ್ನು ಗ್ರಹಿಸುವ ಶಕ್ತಿಯನ್ನು ಸೊಳ್ಳೆಗಳು ಪಡೆದಿವೆ.

ಬೆವರು

ಬೆವರು

ಆದ್ದರಿಂದ ಬೆವರು ಹರಿಯುವ ಸಮಯದಲ್ಲಿ, ವಿಶೇಷವಾಗಿ ವ್ಯಾಯಾಮದ ಬಳಿಕದ ಬೆವರಿನ ಸಮಯದಲ್ಲಿ ಇತರರಿಗಿಂತಲೂ ನಿಮ್ಮನ್ನೇ ಹೆಚ್ಚು ಕಚ್ಚುತ್ತವೆ ಹಾಗೂ ಸೊಳ್ಳೆಗಳು ಸದಾ ನಿಮ್ಮ ಹಿಂದೆಯೇ ಹಾರಾಡಿಕೊಂಡಿರುತ್ತವೆ.

English summary

do-mosquitoes-target-certain-blood-types

Do mosquitoes target certain blood types? Mosquitoes are dangerous. They can cause diseases like Dengue, Malaria and even Zika. Mosquitoes are like carriers of several diseases. Mosquitoes also disturb your sleep, create itching sensation on your skin and also irritate you with the buzzing sound in the ears. And when there are 2-3 people in a room and all the mosquitoes are biting you, you may wonder why mosquitoes are targeting you.
Subscribe Newsletter