Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅರ್ಧ ಲಿಂಬೆ + ಚಿಟಿಕೆಯಷ್ಟು ಅಡುಗೆ ಸೋಡಾದ ಜಬರ್ದಸ್ತ್ ಪವರ್!
ಲಿಂಬೆಯಲ್ಲಿರುವಂತಹ ಹಲವಾರು ರೀತಿಯ ಆರೋಗ್ಯ ಲಾಭಗಳ ಬಗ್ಗೆ ನೀವು ಈಗಾಗಲೇ ತಿಳಿದುಕೊಂಡಿದ್ದೀರಿ. ಆದರೆ ಲಿಂಬೆಯನ್ನು ಇತರ ಕೆಲವೊಂದು ವಸ್ತುಗಳೊಂದಿಗೆ ಬಳಸಿದಾಗ ಅದರಿಂದ ಸಿಗುವ ಆರೋಗ್ಯ ಲಾಭಗಳು ಹೆಚ್ಚಾಗುವುದು. ಲಿಂಬೆಯನ್ನು ಅಡುಗೆ ಸೋಡಾದಲ್ಲಿ ಅದ್ದಿದರೆ ಕ್ಯಾನ್ಸರ್ ನಿಂದ ನಮ್ಮನ್ನು ರಕ್ಷಿಸುತ್ತದೆ. ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರುವ ಕೆಲವು ಆಹಾರಗಳಲ್ಲಿ ಇವು ಒಂದಾಗಿದೆ.
ಇದರಲ್ಲಿ ನೈಸರ್ಗಿಕದತ್ತವಾಗಿ ಆಂಟಿಆಕ್ಸಿಡೆಂಟ್ ಮತ್ತು ಕ್ಷಾರೀಯ ಗುಣಗಳು ಇವೆ. ಈ ಆಹಾರಗಳಲ್ಲಿ ವಿಟಮಿನ್, ಖನಿಜಾಂಶ ಮತ್ತು ಲಾಭಕರವಾಗಿರುವ ಕಿಣ್ವಗಳು ಇವೆ. ಇದು ರೋಗವನ್ನು ತಡೆಯುತ್ತದೆ. ಅರ್ಧ ಲಿಂಬೆಯನ್ನು ಸೋಡಿಯಂ ಬೈಕಾರ್ಬನೇಟ್ ನಲ್ಲಿ ಮುಳುಗಿಸುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು ಮತ್ತು ಇದನ್ನು ನೀವು ಪ್ರಯತ್ನಿಸಲೇಬೇಕು. ಆ ಲಾಭಗಳು ಯಾವುದು ಎಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದೆ....

ಕಿಡ್ನಿಯ ಸಮಸ್ಯೆಗೆ
ಲಿಂಬೆ ಮತ್ತು ಸೋಡಿಯಂ ಬೈಕಾರ್ಬನೇಟ್‌ನ ಮಿಶ್ರಣವು ದೇಹವನ್ನು ಕ್ಷಾರೀಯಗೊಳಿಸುವುದು. ದೇಹವು ಅತಿಯಾಗಿ ಆಮ್ಲೀಯವನ್ನು ಬಿಡುಗಡೆ ಮಾಡಿದಾಗ ಇದು ಅದರ ವಿರುದ್ಧ ಹೋರಾಡುವುದು. ಕಿಡ್ನಿಯ ಸಮಸ್ಯೆಗೆ ಇದು ಅತ್ಯುತ್ತಮ ಮದ್ದಾಗಿದೆ.

ಜೀರ್ಣಕ್ರಿಯೆ
ಲಿಂಬೆಯಿಂದ ಜೀರ್ಣಕ್ರಿಯೆಯು ಉತ್ತಮಗೊಳ್ಳುವುದು. ಸ್ವಲ್ಪ ಅಡುಗೆ ಸೋಡಾ ಇದಕ್ಕೆ ಹಾಕಿದರೆ ಜೀರ್ಣಕ್ರಿಯೆಯು ಮತ್ತಷ್ಟು ಉತ್ತಮವಾಗುವುದು. ಇದು ಆಮ್ಲೀಯ ವಿರೋಧಿಯಂತೆ ಕೆಲಸ ಮಾಡಿ ವಾಯುಗುಣ ವಿರುದ್ಧ ಹೋರಾಡುವುದು.

ಯಕೃತ್‌ಗೆ ಒಳ್ಳೆಯದು
ಈ ಮದ್ದು ಯಕೃತ್ ನ್ನು ಶುದ್ಧೀಕರಿಸುವುದು ಮತ್ತು ದೇಹಕ್ಕೆ ಬೇಕಾಗಿರುವಂತಹ ವಿಟಮಿನ್ ಸಿ, ಪೊಟಾಶಿಯಂ ಮತ್ತು ಆ್ಯಂಟಿಆಕ್ಸಿಡೆಂಟ್ ಅನ್ನು ಒದಗಿಸಿಕೊಡುವುದು.

ಒಳ್ಳೆಯ ನಿಯಂತ್ರಕ
ಲಿಂಬೆ ಮತ್ತು ಸೋಡಿಯಂ ಬೈಕಾರ್ಬನೇಟ್ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಮತ್ತು ಹೃದಯದ ಆರೋಗ್ಯವನ್ನು ಸುಧಾರಣೆ ಮಾಡುವುದು.



Click it and Unblock the Notifications
