Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಮಾವಿನ ಎಲೆಗಳ ಜಾದೂಗೆ--ಮಧುಮೇಹ ಮಂಗಮಾಯ!
ಮಧುಮೇಹಿಗಳು ತಮ್ಮ ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಬೇಕು. ಇಲ್ಲವೆಂದಾದಲ್ಲಿ ಮುಂದಿನ ದಿನಗಳಲ್ಲಿ ಇದರಿಂದ ಸಮಸ್ಯೆ ಕಾಣಿಸಬಹುದು.
ಇಂದಿನ ಪ್ರತಿಯೊಂದು ರೋಗರುಜಿನಗಳಿಗೂ ನಾವು ಜೀವನಶೈಲಿಯನ್ನೇ ದೂಷಿಸಬೇಕಾಗಿದೆ. ಯಾಕೆಂದರೆ ಒತ್ತಡದ ಜೀವನ ಹಾಗೂ ಸರಿಯಾದ ಆಹಾರ ಕ್ರಮ ಪಾಲಿಸದೆ ಇರುವುದು ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ. ಮಧುಮೇಹವೆನ್ನುವುದು ನಿಧಾನವಾಗಿ ಕೊಲ್ಲುವ ರೋಗವಾಗಿದೆ. ಯಾಕೆಂದರೆ ಇದರ ಬಗ್ಗೆ ಅತಿಯಾದ ಎಚ್ಚರ ಅತ್ಯಗತ್ಯ.
ಮಧುಮೇಹಿಗಳು ತಮ್ಮ ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಬೇಕು. ಇಲ್ಲವೆಂದಾದಲ್ಲಿ ಮುಂದಿನ ದಿನಗಳಲ್ಲಿ ಇದರಿಂದ ಸಮಸ್ಯೆ ಕಾಣಿಸಬಹುದು. ಆಗಾಗ ವೈದ್ಯರಲ್ಲಿ ತಪಾಸಣೆ ಮಾಡಿಕೊಳ್ಳುತ್ತಾ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಒಳ್ಳೆಯ ಜೀವನ ಸಾಗಿಸಬಹುದು.
ಬನ್ನಿ ಬೋಲ್ಡ್ ಸ್ಕೈ ಮಧುಮೇಹಿಗಳಿಗೆಂದು ಕೆಲವೊಂದು ಮನೆಮದ್ದುಗಳನ್ನು ಹುಡುಕಿ ತಂದಿದೆ. ಇದನ್ನು ಬಳಸುವ ಮೊದಲು ವೈದ್ಯರ ಸಲಹೆ ಪಡೆದರೆ ಒಳ್ಳೆಯದು...

ಬೇಕಾಗುವ ಸಾಮಗ್ರಿಗಳು
11-12 ಮಾವಿನ ಎಲೆಗಳು ಹಾಗೂ ಎರಡು ಲೋಟ ನೀರು ತೆಗೆದುಕೊಳ್ಳಿ. ಬಳಸುವ ಮೊದಲು ಮಾವಿನ ಎಲೆಗಳನ್ನು ಸರಿಯಾಗಿ ತೊಳೆಯಿರಿ.

ನೀರನ್ನು ಹಾಕಿಕೊಂಡು ಕುದಿಸಿ
ಒಂದು ಪಾತ್ರೆಗೆ ಅರ್ಧ ಲೋಟದಷ್ಟು ನೀರನ್ನು ಹಾಕಿಕೊಂಡು ಕುದಿಸಿ. ಐದು ನಿಮಿಷ ಬಿಟ್ಟು ಮಾವಿನ ಎಲೆಗಳನ್ನು ಇದಕ್ಕೆ ಹಾಕಿಕೊಳ್ಳಿ. ಕಡಿಮೆ ಬೆಂಕಿಯಲ್ಲಿ ಇದನ್ನು ಕುದಿಸಿ.

ನೀರನ್ನು ಹಾಕಿಕೊಂಡು ಕುದಿಸಿ
ಇದನ್ನು ಸರಿಯಾಗಿ ಕುದಿಸಿದ ಬಳಿಕ ರಾತ್ರಿಯಿಡಿ ಹಾಗೆ ಬಿಡಿ. ಬೆಳಿಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ....

ಎಷ್ಟು ಸಮಯ ಪ್ರಯತ್ನಿಸಬೇಕು?
ಈ ಮದ್ದನ್ನು ಒಂದು ತಿಂಗಳು ಅಥವಾ ಎರಡು ತಿಂಗಳ ಕಾಲ ಪ್ರಯತ್ನಿಸಿ ನೋಡಿ. ನಿಮಗೆ ಫಲಿತಾಂಶ ಕಂಡುಬರುವುದು.

ಇನ್ನೊಂದು ಮದ್ದು
ಮಾವಿನ ಎಲೆಗಳನ್ನು ಕತ್ತಲೆ ಹಾಗೂ ಉಷ್ಣತೆ ಕಡಿಮೆ ಇರುವ ಜಾಗದಲ್ಲಿ ಒಣಗಿಸಿ ಬಳಿಕ ಅದನ್ನು ಹುಡಿ ಮಾಡಿ. ಈ ಹುಡಿಯನ್ನು ಬೆಳಿಗ್ಗೆ ಹಾಗೂ ಸಂಜೆ ವೇಳೆ ಒಂದು ಚಮಚ ಸೇವಿಸಿ.

ಲಾಭ
ಮಾವಿನ ಎಲೆಗಳಲ್ಲಿ ಖನಿಜಾಂಶ, ಕಿಣ್ವಗಳು, ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಹಾಗೂ ಇತರ ಕೆಲವೊಂದು ಅಂಶಗಳು ಇವೆ. ಮಾವಿನ ಎಲೆಗಳು ಅಸ್ತಮಾ, ಗಂಟಲೂತ, ಉಬ್ಬಿರುವ ರಕ್ತನಾಳ, ನಿದ್ರಾಹೀನತೆ, ಜ್ವರ ಮತ್ತು ಭೇದಿಗೆ ಒಳ್ಳೆಯದು.



Click it and Unblock the Notifications
