Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ನೆನಪಿಡಿ, ಬಿಗಿಯಾದ ಸಾಕ್ಸ್ ಮಾತ್ರ ಧರಿಸಬೇಡಿ, ಇದು ಬಹಳ ಡೇಂಜರ್!!
ಸಾಕ್ಸ್ ಹಾಕಿಕೊಂಡು ಇಡೀ ದಿನ ಕುಳಿತುಕೊಂಡಿದ್ದರೆ ಅಥವಾ ಸಾಕ್ಸ್ ತೆಗೆಯದೆ ಹಲವಾರು ಗಂಟೆಗಳ ಕಾಲ ಇದ್ದರೆ ಅದರಿಂದ ಕೆಟ್ಟ ವಾಸನೆ ಬರುವುದು. ಇದಕ್ಕೆ ಹಲವಾರು ರೀತಿಯ ಕಾರಣಗಳು ಇವೆ. ಸಾಕ್ಸ್ ಗಳಲ್ಲಿ ಇಂದು ಹಲವಾರು ರೀತಿಯ ಸಾಕ್ಸ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ನೀವು ತುಂಬಾ ಒಳ್ಳೆಯ ಗುಣಮಟ್ಟದ ಸಾಕ್ಸ್ ಧರಿಸಿದರೆ ತುಂಬಾ ಒಳ್ಳೆಯದು. ಆದರೆ ಬಿಗಿಯಾದ ಸಾಕ್ಸ್ ಧರಿಸಿದರೆ ಅದರಿಂದ ದೊಡ್ಡ ಮಟ್ಟದ ಸಮಸ್ಯೆಯಾಗುವುದು. ಬಿಗಿಯಾದ ಸಾಕ್ಸ್ ಧರಿಸುವುದರಿಂದ ಚರ್ಮಕ್ಕೆ ಸರಿಯಾಗಿ ಗಾಳಿ ಸಿಗುವುದಿಲ್ಲ ಮತ್ತು ಕೆಲವು ಸಲ ರಕ್ತಸಂಚಾರವು ಕಡಿಮೆಯಾಗಿ ಕಾಲು ಊದಿಕೊಳ್ಳಬಹುದು. ಸಾಕ್ಸ್ ತೆರೆದುಕೊಂಡಿದ್ದರೆ ಅದು ತುಂಬಾ ಕೆಟ್ಟದಾಗಿ ಕಾಣಿಸುವುದು. ಆದರೆ ಬಿಗಿ ಸಾಕ್ಸ್ ಧರಿಸುವುದು ತುಂಬಾ ಅನಾರೋಗ್ಯಕಾರಿ. ಬಿಗಿ ಸಾಕ್ಸ್ ಧರಿಸುವುದರಿಂದ ಆಗುವ ಅಪಾಯಗಳ ಬಗ್ಗೆ ತಿಳಿಯಿರಿ....

ಬಿಗಿ ಸಾಕ್ಸ್‌ನ ಪರಿಣಾಮಗಳು
ಬಿಗಿ ಸಾಕ್ಸ್ ನಿಂದ ರಕ್ತಸಂಚಾರದ ಮೇಲೆ ಪರಿಣಾಮ ಉಂಟಾಗಬಹುದು. ಕಾಲಿನಲ್ಲಿ ರಕ್ತಸಂಚಾರ ಮೇಲೆ ಪರಿಣಾಮವಾದಾಗ ನಿಮಗೆ ಕಿರಿಕಿರಿ ಭಾವನೆಯಾಗಬಹುದು. ಈ ಭಾಗದಲ್ಲಿ ಊತದ ಅನುಭವವು ಆಗಬಹುದು. ಇದು ಬಿಗಿ ಸಾಕ್ಸ್ ನ ಮೊದಲ ಅಪಾಯ.

ರಕ್ತನಾಳ ಉಬ್ಬುವುದು
ಬಿಗಿ ಸಾಕ್ಸ್ ನಿಂದ ರಕ್ತನಾಳವು ಉಬ್ಬಬಹುದು. ಈಗಾಗಲೇ ರಕ್ತನಾಳ ಉಬ್ಬುವ ಸಮಸ್ಯೆ ಇರುವವರಲ್ಲಿ ಬಿಗಿ ಸಾಕ್ಸ್ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಬಹುದು.

ಎಡಿಮಾದ ಅಪಾಯವಿದೆಯಾ?
ಇದನ್ನು ನಂಬಲು ಕಷ್ಟವಾಗಬಹುದು. ಆದರೆ ಬಿಗಿ ಸಾಕ್ಸ್‌ಗಳು ಎಡಿಮಾದ ಅಪಾಯವನ್ನು ಉಂಟು ಮಾಡಬಹುದು. ದ್ರವ್ಯವು ಶೇಖರಣೆಯಾಗುವುದರಿಂದ ಉಂಟಾಗುವ ಊತವೇ ಎಡಿಮಾ. ಎಡಿಮಾದಿಂದಾಗಿ ಕಾಲುಗಳು ಹಾಗೂ ಪಾದಗಳು ಊದಿಕೊಳ್ಳಬಹುದು.

ಮರಗಟ್ಟುವಿಕೆ ಉಂಟು ಮಾಡುವುದೇ?
ಬಿಗಿಯಾದ ಸಾಕ್ಸ್ ನಿಂದಾಗಿ ಕಾಲು ಹಾಗೂ ಪಾದವು ಮರಗಟ್ಟಬಹುದು. ದೀರ್ಘ ಸಮಯದ ತನಕ ಕುಳಿತುಕೊಂಡು ಕೆಲಸ ಮಾಡುವಂತಹ ಪರಿಸ್ಥಿತಿಯಲ್ಲಿ ಇದು ಮತ್ತಷ್ಟು ಬಿಗಡಾಯಿಸಬಹುದು.

ಅಥ್ಲೀಟ್ ಪಾದಕ್ಕೆ ಕಾರಣವಾಗುವುದೇ?
ಬಿಗಿ ಸಾಕ್ಸ್ ಗಳು ಮತ್ತು ಶೂ ಅಥ್ಲೀಟ್ ಪಾದಕ್ಕೆ ಕಾರಣವಾಗಬಹುದು. ಇದು ಹೇಗೆಂದು ನಿಮಗೆ ಅಚ್ಚರಿಯಾಗಬಹುದು. ಅಥ್ಲೀಟ್ ಪಾದ ಉಂಟು ಮಾಡುವ ಶಿಲೀಂಧ್ರಿಯಗಳು ಇಲ್ಲಿ ತೇವವಿರುವ ಕಾರಣದಿಂದಾಗಿ ಮತ್ತಷ್ಟು ಬೆಳೆಯಬಹುದು. ಬಿಗಿಯಾದ ಸಾಕ್ಸ್ ನಿಂದ ಹೆಚ್ಚಿನ ಬೆವರು ಬರಬಹುದು ಮತ್ತು ಇದು ಶಿಲೀಂಧ್ರಿಯಗಳಿಗೆ ವಾಸಸ್ಥಾನವಾಗಬಹುದು.

ಚರ್ಮದ ಮೇಲೆ ಗೆರೆಗಳು
ಚರ್ಮದ ಮೇಲೆ ಬೀಳುವಂತಹ ಗೆರೆಗಳನ್ನು ಸಾಕ್ಸ್ ಬ್ಯಾಂಡ್ ಲೈನ್ ಎಂದು ಕರೆಯಲಾಗುತ್ತದೆ. ಚರ್ಮವನ್ನು ಸಾಕ್ಸ್ ಬಿಗಿಯಾಗಿ ಹಿಡಿದಿಟ್ಟುಕೊಂಡಿರುವ ಜಾಗದಲ್ಲಿ ಈ ಗೆರೆಗಳು ಮೂಡುವುದು. ಇದರಿಂದ ಚರ್ಮವು ಕೆಂಪಾಗಬಹುದು ಮತ್ತು ತುರಿಕೆ ಉಂಟಾಗಬಹುದು.

ಏನು ಧರಿಸಬೇಕು?
ಸಂಪೂರ್ಣವಾಗಿ ಹತ್ತಿ ಬಟ್ಟೆಯಿಂದ ತಯಾರಿಸಿರುವಂತಹ ಸಾಕ್ಸ್‌ಗಳನ್ನು ಧರಿಸಿ. ಸಿಂಥೆಟಿಕ್ ಸಾಮಗ್ರಿ ಬಳಸಬೇಡಿ. ಸರಿಯಾಗಿ ಹೊಂದಿಕೊಳ್ಳುವ ಸಾಕ್ಸ್ ಧರಿಸಿ. ಬಿಗಿಯಾಗಿದ್ದರೆ ಕೆಂಪು ಗೆರೆಗಳು ಮೂಡುವುದು. ಇಂತಹ ಗೆರೆಗಳು ಕಾಣಿಸಿಕೊಂಡರೆ ಸಾಕ್ಸ್ ನ್ನು ಸ್ವಲ್ಪ ಎಳೆಯಿರಿ. ಇದರಿಂದ ಬಿಗಿತ ಕಡಿಮೆಯಾಗುವುದು.



Click it and Unblock the Notifications