Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನೀವು ತಿಳಿಯಲೇಬೇಕಾದ ಕೆಲವೊಂದು ಆರೋಗ್ಯದ ವಿಷಯಗಳು
ಆರೋಗ್ಯದ ಬಗ್ಗೆ ಹಲವಾರು ರೀತಿಯ ಸತ್ಯಗಳು ಹಾಗೂ ಸುಳ್ಳುಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಾ ಇರುತ್ತದೆ. ಆದರೆ ನಾವು ಇಂಟರ್ನೆಟ್ ನಿಂದ ನಮಗೆ ಬೇಕಾಗಿರುವ ವಿಷಯಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.
ಇಂಟರ್ನೆಟ್ (ಅಂತರ್ಜಾಲ) ಮುಂದೆ ಕುಳಿತರೆ ವಿಶ್ವವೇ ನಮ್ಮ ಮುಂದೆ ಬಂದು ಹೋಗುತ್ತದೆ. ಹಾಗಿದೆ ಇಂದಿನ ಇಂಟರ್ನೆಟ್ ಯುಗ. ನಿಮಗೆ ಯಾವ ವಿಷಯದ ಬಗ್ಗೆ ತಿಳಿದುಕೊಳ್ಳಬೇಕೋ ಅದನ್ನು ನೀವು ಇಂಟರ್ನೆಟ್‌ನಲ್ಲಿ ತಿಳಿಯಬಹುದು. ಆದರೆ ಅಲ್ಲೂ ಪರ ಮತ್ತು ವಿರೋಧಗಳು ಇರುತ್ತದೆ. ಇಂಟರ್ನೆಟ್‌ನಲ್ಲಿ ಹೆಚ್ಚಿಗೆ ಹುಡುಕಿದ ಶಬ್ದಗಳಲ್ಲಿ ಆರೋಗ್ಯ ಕೂಡ ಇದೆ.
ಆರೋಗ್ಯದ ಬಗ್ಗೆ ಹಲವಾರು ರೀತಿಯ ಸತ್ಯಗಳು ಹಾಗೂ ಸುಳ್ಳುಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಾ ಇರುತ್ತದೆ. ಆದರೆ ನಾವು ಇಂಟರ್ನೆಟ್ ನಿಂದ ನಮಗೆ ಬೇಕಾಗಿರುವ ವಿಷಯಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.
ಇಂಟರ್ನೆಟ್‌ನಲ್ಲಿ ಆರೋಗ್ಯದ ಬಗ್ಗೆ ಇರುವ ಮಾಹಿತಿಯನ್ನು ಓದಿಕೊಂಡು ಅದನ್ನು ಅಳವಡಿಸಿಕೊಂಡರೆ ಅದರಿಂದ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಆರೋಗ್ಯದ ಬಗ್ಗೆ ಯಾವೆಲ್ಲಾ ವಿಷಯಗಳನ್ನು ಗಮನಿಸಬೇಕು ಮತ್ತು ಅದನ್ನು ಪಾಲಿಸಿಕೊಂಡು ಹೋಗಬೇಕು. ಯಾವುದನ್ನು ಕಡೆಗಣಿಸಬೇಕು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ. ಇದನ್ನು ಓದಿ ಆರೋಗ್ಯ ಕಾಪಾಡಿಕೊಳ್ಳಿ...

ಒತ್ತಡ
ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ಒತ್ತಡವು ಶೇ.90ರಷ್ಟು ಕಾಯಿಲೆಗಳಿಗೆ ರಹದಾರಿಯಾಗಿದೆ. ಮಾನಸಿಕ ಹಾಗೂ ದೈಹಿಕ ಕಾಯಿಲೆಗಳು ಇದರಲ್ಲಿ ಒಳಗೊಂಡಿದೆ.ಒತ್ತಡ ನಿವಾರಣೆಗೆ ಅನುಸರಿಸಿ- 'ಊರ್ಧ್ವ ಹಸ್ತಾಸನ'

ಶುಂಠಿ
ಶುಂಠಿಯಲ್ಲಿ ಪರಿಣಾಮಕಾರಿ ಉರಿಯೂತ ಶಮನಕಾರಿ ಗುಣಗಳು ಇರುವ ಕಾರಣದಿಂದ ಯಾವುದೇ ರೂಪದಲ್ಲಿ ಇದನ್ನು ಸೇವಿಸಿದರೂ ಅದು ಶೇ.25ರಷ್ಟು ನೋವನ್ನು ಕಡಿಮೆ ಮಾಡುತ್ತದೆ. ಶುಂಠಿ ಜಜ್ಜಿ ಹಾಕಿದ ಬಿಸಿ ನೀರು ಕುಡಿದರೆ-ತೂಕ ಇಳಿಕೆ...

ಹೃದಯ
ಪ್ರತೀ ದಿನ ನಮ್ಮ ಹೃದಯವು ರಕ್ತವನ್ನು ಪಂಪ್ ಮಾಡುವ ವೇಳೆ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಶಕ್ತಿಯಿಂದ ಒಂದು ಟ್ರಕ್ ಅನ್ನು ಸುಮಾರು 32 ಕಿ.ಮೀ. ಸಾಗಿಸಬಹುದಂತೆ! ಹೃದಯ ರೋಗದ ಲಕ್ಷಣಗಳಿವು,,,ಯಾವುದಕ್ಕೂ ಎಚ್ಚರಿಕೆಯಿಂದಿರಿ!

ಜೀರ್ಣಕ್ರಿಯೆ
ಹೊಟ್ಟೆಯಲ್ಲಿ ಉತ್ಪತ್ತಿಯಾಗುವಂತಹ ಜೀರ್ಣಕ್ರಿಯೆ ಆಮ್ಲವು ಒಂದು ಗಡ್ಡ ತೆಗೆಯುವ ಬ್ಲೇಡ್ ನ್ನು ಕರಗಿಸುವ ಶಕ್ತಿಯನ್ನು ಹೊಂದಿದೆ.ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಟಾಪ್ 20 ಟಿಪ್ಸ್

ಮನುಷ್ಯನ ಬಾಯಿ
ಮನುಷ್ಯನ ಬಾಯಿಯು ಒಂದು ಶತಕೋಟಿ ವಿವಿಧ ರೀತಿಯ ರುಚಿಗಳನ್ನು ಗ್ರಹಿಸಬಲ್ಲದು.

ಬಾಯಿ ರುಚಿ...
60ರ ಹರೆಯಕ್ಕೆ ಕಾಲಿಡುತ್ತಿರುವಂತಹ ಸುಮಾರು ಅರ್ಧದಷ್ಟು ಜನರು ತಮ್ಮ ರುಚಿಯನ್ನು ಕಳೆದುಕೊಳ್ಳುತ್ತಾರೆ.

ಉಗುರುಗಳು
ಮನುಷ್ಯರ ಕೈಯ ಉಗುರುಗಳು ಕಾಲುಗಳ ಉಗುರುಗಳಿಗಿಂತ ನಾಲ್ಕು ಪಟ್ಟು ವೇಗವಾಗಿ ಬೆಳೆಯುತ್ತದೆ.



Click it and Unblock the Notifications
