ತಣ್ಣೀರಿನ ಶವರ್ ಸ್ನಾನದ ಪ್ರಯೋಜನಗಳನ್ನು ನೀವು ತಿಳಿಯಲೇಬೇಕು

By: Divya Pandith
Subscribe to Boldsky

ಮುಂಜಾನೆ ಅಥವಾ ದೈನಂದಿನ ವ್ಯಾಯಾಮದ ನಂತರ ತಣ್ಣೀರಿನ ಶವರ್ ಸ್ನಾನ ಮಾಡುವುದು ಎಂದರೆ ಸ್ವಲ್ಪ ಕಷ್ಟವಾಗುವುದು. ಆದರೆ ತಣ್ಣೀರಿನ ಶವರ್ ಸ್ನಾನದ ಪ್ರಯೋಜನಗಳನ್ನು ನೀವು ಅರಿತರೆ ಎಷ್ಟೇ ಕಷ್ಟವಾದರೂ ತಣ್ಣೀರಿನ ಶವರ್ ಸ್ನಾನ ಮಾಡಲು ಮುಂದಾಗುತ್ತೀರಿ. ಇತ್ತೀಚೆಗೆ ನಡೆಸಿದ ಕೆಲವು ಹೊಸ ಸಂಶೋಧನೆಯ ಪ್ರಕಾರ ನಾವು ಬಿಸಿ ನೀರಿನ ಶವರ್ ಸ್ನಾನ ಮಾಡುವುದಕ್ಕಿಂತ ಹೆಚ್ಚಿನ ಪ್ರಯೋಜನವು ತಣ್ಣೀರಿನ ಶವರ್ ಸ್ನಾನದಲ್ಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಕೆಲಸ ಮಾಡುವಾಗ ಪದೇ ಪದೇ ಉಂಟಾಗುವ ಆರೋಗ್ಯ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗುತ್ತವೆ.

ನಿತ್ಯದ ಕೆಲಸಮಾಡಲು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಶಕ್ತರಾಗಿರುತ್ತೇವೆ ಎಂದು ಹೇಳಲಾಗಿದೆ. ಸಂಶೋಧನೆಯ ವರದಿಯ ಪ್ರಕಾರ ಕನಿಷ್ಠ 30 ದಿನ ತಂಪಾದ ಶವರ್ ಸ್ನಾನ ಮಾಡಿದವರಲ್ಲಿ ಆರೋಗ್ಯ ಬದಲಾವಣೆ ಕಂಡುಬಂದಿದೆ. ಅನಾರೋಗ್ಯದಿಂದ ಕೆಲಸಕ್ಕೆ ರಜೆಹಾಕುವುದು ಕಡಿಮೆಯಾಗಿದೆ. ಕಚೇರಿ ಕೆಲಸಕ್ಕೆ ತಮ್ಮ ಆರೋಗ್ಯ ಸಮಸ್ಯೆಯಿಂದ ರಜೆ ಹಾಕುವುದು ಕಡಿಮೆಯಾಗಿದೆ. ಅಲ್ಲದೆ ವಯಸ್ಕರಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆ ಕಂಡು ಬಂದಿಲ್ಲಾ ಎನ್ನುವ ಆಶ್ಚರ್ಯಕರ ಬದಲಾವಣೆಯು ವರದಿಯಾಗಿದೆ. 

ತಣ್ಣೀರಲ್ಲಿ ಮೀಯೋಣ ಬನ್ನಿ, ಏಳು ಲಾಭವಿದೆ!

ಅಧ್ಯಯನಕ್ಕೆ ಸರಿ ಸುಮಾರು 3000 ಅಭ್ಯರ್ಥಿಗಳನ್ನು ಒಳಪಡಿಸಲಾಗಿತ್ತು. ಇದರಲ್ಲಿ ಸಾಮಾನ್ಯ ಶವರ್ ಸ್ನಾನ ಮಾಡುವವರದ್ದು ಒಂದು ಗುಂಪು, 30 ಸೆಕೆಂಡ್‍ಗಳಷ್ಟು ಸಮಯ ತಣ್ಣನೆ ನೀರನ್ನು ತೆಗೆದುಕೊಳ್ಳುವವರದ್ದು ಒಂದು ಗುಂಪು, 60 ಸೆಕೆಂಡ್‍ಗಳ ಕಾಲ ತಣ್ಣೀರಿನ ಶವರ್ ತೆಗೆದುಕೊಳ್ಳುವವರದ್ದು ಒಂದು ಗುಂಪು ಹಾಗೂ 90 ಸೆಕೆಂಡ್‍ಗಳ ಕಾಲ ತಣ್ಣೀರಿನ ಶವರ್ ತೆಗೆದುಕೊಳ್ಳುವವರ ಒಂದು ಗುಂಪು ಎಂದು ಒಟ್ಟು ನಾಲ್ಕು ಗುಂಪುಗಳನ್ನಾಗಿ ವಿಭಜಿಸಲಾಗಿತ್ತು.

ಯಾರೆಲ್ಲಾ ತಣ್ಣೀರಿನ ಶವರ್ ಸ್ನಾನಕ್ಕೆ ಒಳಗಾಗಿದ್ದರೋ ಅವರೆಲ್ಲಾ ತಮ್ಮ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆಯುಂಟಾಗಿರುವುದನ್ನು ಕಂಡರು ಹಾಗೂ ಅನೇಕರು ತಮ್ಮ ಸಾಮಾನ್ಯ ಜೀವನದಲ್ಲಿ ಸ್ವಲ್ಪ ಸುಧಾರಣೆಯನ್ನು ಅನುಭವಿಸಿದ್ದರು. 60 ದಿನಗಳ ಬಳಿಕ 3 ಬಗೆಯ ಪ್ರಯೋಗಗಳನ್ನು ಮಾಡಲಾಯಿತು.

ನಂತರ ಎರಡು ಮತ್ತು ಮೂರನೇ ಭಾಗದ ಅಡಿಯಲ್ಲಿ ಪ್ರಯೋಗವನ್ನು ಮುಂದುವರಿಸಿದರು. ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ "ಶೀತ ಬಿಡುಗಡೆಯು ಬೀಟಾ-ಎಂಡೋರ್ಫಿನ್ಸ್ ಎಂಬ ನೋವನ್ನು ನಿಭಾಯಿಸುವ ಶಕ್ತಿ" ಹೆಚ್ಚಿತ್ತು. ಅಲ್ಲದೆ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿತ್ತು. ತಣ್ಣೀರಿನ ಸ್ನಾನದಿಂದ ಉಂಟಾಗುವ ಆರೋಗ್ಯ ಬದಲಾವಣೆ ಹಾಗೂ ಇನ್ನಿತರ ಪ್ರಮುಖ ಪ್ರಯೋಜನಗಳೇನು ಎನ್ನುವುದನ್ನು ತಿಳಿದುಕೊಳ್ಳುವ ಮೂಲ ಉದ್ದೇಶಕ್ಕಾಗಿ ಈ ಪ್ರಯೋಗವಾಗಿತ್ತು ಎನ್ನಲಾಗಿದೆ. ಈ ಅಧ್ಯಯನದ ವರದಿ ಪಿಎಲ್‍ಓಎಸ್ ವನ್ ಎಂಬ ನಿಯತಕಾಲಿಕದಲ್ಲಿ ಮೊದಲು ಪ್ರಕಟಗೊಂಡಿತ್ತು. ಯಾವುದೇ ಔಷಧಿ ವ್ಯಾಯಾಮಗಳಿಲ್ಲದೆ ಬಲು ಸುಲಭ ಉಪಾಯದಿಂದ ಆರೋಗ್ಯ ಸಮಸ್ಯೆಯನ್ನು ಬಗೆಹರಿಸಬಹುದು. ನೀವೂ ಸಹ ನಿತ್ಯ ತಣ್ಣೀರಿನ ಶವರ್ ಸ್ನಾನಕ್ಕೆ ಒಳಗಾದರೆ ಆರೋಗ್ಯದಲ್ಲುಂಟಾಗುವ ಕೆಲವು ಪ್ರಮುಖ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಆ ಪ್ರಯೋಜನಗಳು ಯಾವವು? ಎನ್ನುವುದನ್ನು ತಿಳಿಯಲು ಮುಂದಿನ ವಿವರಣೆ ನೋಡಿ...  

ರಕ್ತ ಪರಿಚಲನೆ ಸುಧಾರಿಸುತ್ತದೆ

ರಕ್ತ ಪರಿಚಲನೆ ಸುಧಾರಿಸುತ್ತದೆ

ಮುಂಜಾನೆ ತಣ್ಣೀರಿನ ಶವರ್ ಸ್ನಾನಮಾಡುವುದರಿಂದ ರಕ್ತ ಪರಿಚಲನೆಯು ಸುಗಮವಾಗಿ ಆಗುತ್ತದೆ. ತಣ್ಣನೆಯ ನೀರು ದೇಹದ ರಕ್ತವು ತನ್ನ ಬಿಸಿಯ ಮಟ್ಟವನ್ನು ಕಾಯ್ದುಕೊಂಡು ಎಲ್ಲಾ ಅಂಗಗಳಿಗೂ ಸುಲಭಾವಾಗಿ ಸಾಗುವಂತೆ ಮಾಡುವುದು. ಉತ್ತಮ ರಕ್ತ ಸಂಚಾರವಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು ಎನ್ನುವುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು.

ಶೀಘ್ರ ಚೇತರಿಕೆ

ಶೀಘ್ರ ಚೇತರಿಕೆ

ನಿತ್ಯದ ವ್ಯಾಯಾಮದ ನಂತರ ನಮ್ಮ ಸ್ನಾಯುಗಳು ಮತ್ತು ಕೀಲುಗಳು ತೀವ್ರವಾದ ನೋವಿಗೆ ಒಳಪಡಬಹುದು. ಇಂತಹ ಸಮಯದಲ್ಲಿ ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ಆರೋಗ್ಯಕರ ರಕ್ತ ಸಂಚಾರ ಉಂಟಾಗುವುದು. ಅಲ್ಲದೆ ಸ್ನಾಯು ಮತ್ತು ಕೀಲು ನೋವು ಸಹ ಸುಧಾರಣೆ ಕಾಣುವುದು. ಜೀವದಲ್ಲಿ ಒಂದು ಬಗೆಯ ಹೊಸ ಚೈತನ್ಯ ಉಂಟಾಗುವುದರ ಜೊತೆಗೆ ಕ್ರಿಯಾಶೀಲರಾಗಿ ಕೆಲಸ ಮಾಡಲು ಹುರಿದುಂಬಿಸುವುದು.

ಶೀಘ್ರ ಚೇತರಿಕೆ

ಶೀಘ್ರ ಚೇತರಿಕೆ

ತಣ್ಣೀರಿನ ಶವರ್ ಸ್ನಾನ ಮಿದುಳಿನ ಬ್ಲೂ ಸ್ಪಾಟ್ ಅನ್ನು ಉತ್ತೇಜಿಸುವುದು. ಇದು ಮಿದುಳಿನ ನೊರಾಡ್ರೆನಾಲೈನ್‍ನ ಪ್ರಮುಖ ಮೂಲ. ಇದು ನಮ್ಮಲ್ಲಿ ಉಂಟಾಗುವ ಖಿನ್ನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ತಣ್ಣೀರಿನ ಶವರ್ ಸ್ನಾನ ಮೆದುಳಿನ ಮೇಲೆ ಹೆಚ್ಚು ಪ್ರಭಾವ ಉಂಟಾಗುವುದರಿಂದ ದಿನವಿಡೀ ಮನಸ್ಸು ಶಾಂತ ಹಾಗೂ ಚೈತನ್ಯದಿಂದ ಕೂಡಿರುವಂತೆ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚಿಸುವುದು

ರೋಗನಿರೋಧಕ ಶಕ್ತಿಯನ್ನು ಹೆಚಿಸುವುದು

ತಣ್ಣೀರಿನ ಶವರ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತಣ್ಣೀರಿನ ಶವರ್ ಸ್ನಾನ ಬಿಳಿ ರಕ್ತಕಣಗಳ ಜೊತೆ ಹೋರಾಡುವ ವೈರಸ್‍ಕಣವನ್ನು ಹೆಚ್ಚಿಸುತ್ತದೆ. ಈ ಪ್ರಕ್ರಿಯೆಯಿಂದಲೇ ರೋಗ ನಿರೋಧಕ ಶಕ್ತಿ ಉಂಟಾಗುವುದು ಅಥವಾ ಪ್ರತಿರಕ್ಷಣಾ ವ್ಯವಸ್ಥೆ ಸಕ್ರಿಯಗೊಳಿಸುತ್ತದೆ.

ಫಲವತ್ತತೆಯನ್ನು ಹೆಚ್ಚಿಸುತ್ತದೆ

ಫಲವತ್ತತೆಯನ್ನು ಹೆಚ್ಚಿಸುತ್ತದೆ

ತಣ್ಣೀರಿನ ಶವರ್ ಸ್ನಾನ ಪುರುಷರಲ್ಲಿ ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಅನೇಕ ಅಧ್ಯಯನಗಳಿಗೆ ಸಂಬಂಧಿಸಿದಂತೆ ಈ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತಣ್ಣೀರಿನ ಸ್ನಾನದಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚುವ ಪ್ರಕ್ರಿಯೆಯಿಂದಲೇ ಫಲವತ್ತತೆ ಉಂಟಾಗುವುದು.

ಶಕ್ತಿಯನ್ನು ಹೆಚ್ಚಿಸುತ್ತದೆ

ಶಕ್ತಿಯನ್ನು ಹೆಚ್ಚಿಸುತ್ತದೆ

ಒತ್ತಡದ ಕೆಲಸದ ನಂತರ ಅಥವಾ ವ್ಯಾಯಾಮದ ಬಳಿಕ ತಣ್ಣೀರಿನ ಶವರ್ ಸ್ನಾನ ಮಾಡಬೇಕು. ಆಗ ನಿಮಗೆ ಅಗತ್ಯವಿರುವ ಶಕ್ತಿಯನ್ನು ಪಡೆಯಬಹುದು. ಇದಕ್ಕೆ ನಿರ್ದಿಷ್ಟವಾದ ಸಾಕ್ಷ್ಯಾಧಾರಗಳಿಲ್ಲ. ಆದರೆ ಸ್ನಾನದಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುವುದು ಮತ್ತು ಶಕ್ತಿಯನ್ನು ಹೆಚ್ಚಿಸುವುದು ಎನ್ನುವುದು ತಿಳಿಯುತ್ತದೆ.

English summary

cold shower benefits for overall health

A cold shower early in the morning or after you return from your daily workout can be a little tough, but when you consider the health benefits of a cold shower then you will surely go for it without any second thought. When we consider the benefits of a cold shower a new research report says that cold showers in the morning drastically decrease the amount of sick days you take from work. While a cold shower is by no means a cure for an illness, but it was found to make people feel more able to go to work. The study was originally published in the journal PLOS One. Meanwhile, also know the other major benefits of cold showers. Take a look.
Subscribe Newsletter