ಒಂದೇ ಕಪ್ ಕಾಫಿ- ಇಷ್ಟೆಲ್ಲಾ ಖತರ್ನಾಕ್ ಕಾಯಿಲೆಗಳನ್ನು ಗುಣಪಡಿಸುತ್ತದೆಯೇ?

Posted By: Anuradha Yogesh
Subscribe to Boldsky

ನಾವೆಲ್ಲ ಕಾಫಿ ಸೇವನೆಯಿಂದ ಆರೋಗ್ಯ ಹಾಳಾಗುವದೆಂದೇ ತಿಳಿದಿದ್ದೇವೆ. ಆದರೆ ಇತ್ತೀಚಿನ ವರದಿಗಳ ಪ್ರಕಾರ ಕಾಫಿ ಸೇವನೆ ಎಚ್‌ಐವಿ(ಏಡ್ಸ್) ಮತ್ತು ಎಚ್‌ಸಿವಿ(ಹೆಪಟೈಟಿಸ್-ಸಿ) ಪೀಡಿತರಿಗೆ ಸಂಜೀವಿನಿಯಾಗಬಲ್ಲದು ಎಂದು ತಿಳಿದುಬಂದಿದೆ. ನಮಗೆಲ್ಲ ತಿಳಿದಿರುವಂತೆ ಎಚ್‌ಐವಿ ಹಾಗು ಎಚ್‌ಸಿವಿ ಮಾರಣಾಂತಿಕ ರೋಗಗಳು. ಕಾಫಿ ಸೇವನೆಯಿಂದ ಸುಮಾರು ಶೇ. 5೦ ರಷ್ಟಾದರೂ ಮರಣದ ಸಾಧ್ಯತೆ ಕಡಿಮೆ ಮಾಡಬಹುದೆಂಬ ವರದಿ ಆಶ್ಚರ್ಯಕರವಾದುದಲ್ಲವೆ?

ಅನೇಕ ತರಹದ ಹಣ್ಣು ತರಕಾರಿಗಳು, ಕಾಫಿ, ಕೋಕೊನಲ್ಲಿ ಹೇರಳವಾಗಿ ದೊರೆಯುವ ಪಾಲಿಫಿನಾಲ್ ಯಕೃತ್ತನ್ನು(ಲಿವರನ್ನು) ಸಂರಕ್ಷಿಸುವ ಸಾಮರ್ಥ್ಯ ಹೊಂದಿದೆ. ಕಾಫಿ ಕೂಡ ಇದಕ್ಕೆ ಹೊರತಾಗಿಲ್ಲ. ಇದು ಯಕೃತ್ತಿನ ಕಾರ್ಯಾಚರಣೆಗೆ ಪೂರಕವಾಗಿದೆ. ಅಷ್ಟೇ ಅಲ್ಲದೆ ಫೈಬ್ರೊಸಿಸ್, ಸಿರಾಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ.

ಎಚ್‌ಐವಿ ಪೀಡಿತರಲ್ಲಿ ರೋಗನಿರೋಧಕತೆ ಕಡಿಮೆಗೊಳ್ಳುತ್ತ ಹೋಗುತ್ತದೆ. ದಿನಕ್ಕೆ ಮೂರು ಬಾರಿ ಕಾಫಿ ಸೇವನೆಯಿಂದ ಇನ್ಸುಲಿನ್ ಉತ್ಪಾದನೆ ಹೆಚ್ಚಿ, ಯಕೃತ್ತಿನಿಂದ ಸ್ರವಿಸುವ ಕಿಣ್ವ ಹೆಚ್ಚುತ್ತದೆ. ಇದರಿಂದ ರೋಗನಿರೋಧಕತೆ ಕೂಡ ಹೆಚ್ಚುತ್ತದೆ. ಕೆಫಿನ್ ಅಲರ್ಜಿ ಇರುವ ರೋಗಿಗಳು ಡಿ-ಕೆಫಿನೇಟೆಡ್ (ಕಡಿಮೆ ಕೆಫಿನ್ ಇರುವ) ಕಾಫಿ ಕುಡಿಯಬಹುದು.

ಸಂಶೋಧಕರು ಇನ್ನೂ ಈ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ಎಚ್‌ಐವಿ ಲೈಂಗಿಕ ಸಂಪರ್ಕದಿಂದ, ರಕ್ತದಿಂದ ಹರಡುವ ರೋಗ. ಈ ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿ ಹೇಳಿರುವ ಕೆಲವು ಎಚ್ಚರಿಕೆಗಳನ್ನು ಪರಿಪಾಲಿಸಿ....

ಅನೈತಿಕ ಲೈಂಗಿಕ ಸಂಪರ್ಕದಿಂದ ದೂರವಿರಿ

ಅನೈತಿಕ ಲೈಂಗಿಕ ಸಂಪರ್ಕದಿಂದ ದೂರವಿರಿ

ಎಚ್‌ಐವಿ ಸೋಂಕಿರುವ ವ್ಯಕ್ತಿಯ ಜೊತೆ ಲೈಂಗಿಕ ಸಂಪರ್ಕ ಮಾಡಿದಾಗ, ಆ ವ್ಯಕ್ತಿಯ ವೀರ್ಯ ಅಥವ ಯೋನಿ ದ್ರವದಿಂದ ನಿಮಗೂ ಕೂಡ ಎಚ್‌ಐವಿ ಸೋಂಕು ಆಗುವದರಲ್ಲಿ ಸಂಶಯವಿಲ್ಲ. ಆದ್ದರಿಂದ ಅನೈತಿಕ ಲೈಂಗಿಕ ಸಂಪರ್ಕದಿಂದ ದೂರವಿದ್ದಷ್ಟೂ ಒಳ್ಳೆಯದು.

ಸುರಕ್ಷಿತ ಲೈಂಗಿಕ ಸಂಪರ್ಕ ಮಾಡಿ

ಸುರಕ್ಷಿತ ಲೈಂಗಿಕ ಸಂಪರ್ಕ ಮಾಡಿ

ಯಾವುದೇ ತರಹದ ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ತಪ್ಪದೆ ಕಾಂಡೋಮ್ ಬಳಸಿ. ಇದರಿಂದ ನೇರ ಸಂಪರ್ಕವಾಗದೆ ಎಚ್‌ಐವಿ ಸೋಂಕು ತಡೆಯಬಹುದು.

ನೀರು ಆಧಾರಿತ(ವಾಟರ್ ಬೇಸ್ಡ್) ಲುಬ್ರಿಕಂಟ್ ಬಳಸಿ

ನೀರು ಆಧಾರಿತ(ವಾಟರ್ ಬೇಸ್ಡ್) ಲುಬ್ರಿಕಂಟ್ ಬಳಸಿ

ಅನೇಕರು ಲೈಂಗಿಕ ಸಂಪರ್ಕ ಮಾಡುವಾಗ ಶುಷ್ಕತೆ ಕಡಿಮೆ ಮಾಡಲು ಲುಬ್ರಿಕಂಟ್ ಬಳಸುತ್ತಾರೆ. ಸಾಧ್ಯವಾದಷ್ಟು ನೀರು-ಆಧಾರಿತ ಲುಬ್ರಿಕಂಟ್ ಬಳಸಿ. ಎಣ್ಣೆ ಆಧಾರಿತ(ಆಯಿಲ್ ಬೇಸ್ಡ್)ಲುಬ್ರಿಕಂಟ್, ಕಾಂಡೋಮ್ ಅನ್ನು ದುರ್ಬಲಗೊಳಿಸಿ ಎಚ್‌ಐವಿ ಸೋಂಕು ಉಂಟು ಮಾಡುವ ಸಾಧ್ಯತೆಗಳಿವೆ.

ಸೂಜಿಗಳ ಮರುಬಳಕೆ/ಹಂಚಿಕೊಳ್ಳುವಿಕೆ ಬೇಡ

ಸೂಜಿಗಳ ಮರುಬಳಕೆ/ಹಂಚಿಕೊಳ್ಳುವಿಕೆ ಬೇಡ

ಯಾವುದೇ ಕಾರಣಕ್ಕೂ ಮನೆ ಅಥವ ಆಸ್ಪತ್ರೆಯಲ್ಲಿ ಸೂಜಿಗಳ ಮರುಬಳಕೆ ಕಂಡುಬಂದರೆ ತಡೆಯಿರಿ. ಅನೇಕ ಮಾದಕ ವ್ಯಸನಿಗಳು ಸೂಜಿ ಹಂಚಿಕೊಂಡು ಮಾದಕ ದ್ರವ್ಯ ಸೇವನೆ ಮಾಡಿ ಸೋಂಕಿಗೆ ಒಳಗಾಗಿ ಸಂಪೂರ್ಣ ಜೀವನವನ್ನೇ ಹಾಳುಮಾಡಿಕೊಳ್ಳುತ್ತಾರೆ. ರಕ್ತದಾನ ಅಥವ ಯಾವುದೇ ಕಾರಣಗಳಿಂದ ಮತ್ತೊಂದು ವ್ಯಕ್ತಿಯ ರಕ್ತದ ಜೊತೆಗೆ ಸಂಪರ್ಕ ಬರುವ ಸಾಧ್ಯತೆಗಳಿದ್ದರೆ ತುಂಬಾ ಎಚ್ಚರಿಕೆಯಿಂದಿರಬೇಕು.

ಯಾವುದೇ ತರಹದ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳಬೇಡಿ

ಯಾವುದೇ ತರಹದ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳಬೇಡಿ

ಕೆಲವೊಮ್ಮೆ ಹಲ್ಲುಜ್ಜುವಾಗ ಟೂಥ್‌ಬ್ರಶ್‌ಗೆ ರಕ್ತ ಹತ್ತಬಹುದು ಅಥವ ಶೇವ್ ಮಾಡುವಾಗ ಗಾಯವಾಗಿ ಬ್ಲೇಡ್‌ಗೆ ರಕ್ತ ತಾಗಬಹುದು. ಎಚ್‌ಐವಿ ಸೋಂಕಿರುವ ವ್ಯಕ್ತಿಯ ಬ್ರಶ್ ಅಥವ ಬ್ಲೇಡ್ ಉಪಯೋಗಿಸಿದರೆ ಸೋಂಕಿನ ಸಂಭವ ತಪ್ಪಿದ್ದಲ್ಲ.ಒಟ್ಟಾರೆ ಸೂಕ್ಷ್ಮ ವಿಷಯಗಳಲ್ಲಿ ಸ್ವಲ್ಪ ಎಚ್ಚರಿಕೆಯಿಂದಿದ್ದರೆ ಸಾಕು, ಎಚ್‌ಐವಿ ಸೋಂಕಿನಿಂದ ದೂರವಿರಬಹುದು, ಸ್ವಲ್ಪ ಮೈ ಮರೆತರೂ ಅಪಾಯ ತಪ್ಪಿದ್ದಲ್ಲ ಜೋಕೆ !!

English summary

Coffee To Reduce Mortality In People With HIV And Hepatitis C

A recently published study has shown that coffee consumption of three or more cups per day halved the mortality rate among patients with hepatitis C and HIV infection. Polyphenols and caffeine are known to have hepato-protective properties. Previous research has shown that for people at risk of liver disease, coffee consumption associated with better liver function, less fibrosis, cirrhosis and liver cancer risk.