ಅಧ್ಯಯನ ವರದಿ: ದೇಹ ರಾಸಾಯನಿಕಕ್ಕೆ ಒಗ್ಗಿಕೊಂಡರೆ ಆಪತ್ತೇ ಜಾಸ್ತಿ...

By: Hemanth
Subscribe to Boldsky

ನಮಗೆ ಅರಿವೇ ಇಲ್ಲದಂತೆ ಕೆಲವೊಂದು ರಾಸಾಯನಿಕಗಳಿಗೆ ನಮ್ಮ ದೇಹವು ಒಡ್ಡಿಕೊಳ್ಳುತ್ತದೆ. ನಾವು ಬಳಸುವಂತಹ ಕೆಲವೊಂದು ವಸ್ತುಳಿಂದಲೇ ಈ ರಾಸಾಯನಿಕಗಳು ದೇಹದೊಳಗೆ ಹೋಗಬಹುದು. ನಾವು ಬಳಸುವಂತಹ ಸಾಬೂನು, ಶಾಂಪೂ ಮತ್ತು ಕಂಡೀಷನರ್ ಗಳಲ್ಲಿ ಕೂಡ ರಾಸಾಯನಿಕಗಳು ಇವೆ. ಆದರೆ ಇದು ಹುಟ್ಟುವ ಮಗುವಿನಲ್ಲಿ ಅಂಗವೈಕಲ್ಯವನ್ನು ಉಂಟು ಮಾಡುತ್ತದೆ ಎಂದು ಸಂಶೋಧನೆಗಳು ಎಚ್ಚರಿಸಿವೆ.

ಅಮೋನಿಯಂನ ಕೆಲವೊಂದು ಅಂಶಗಳು ಅಥವಾ ಕ್ವಾಟ್ಸ್ ಮಗುವಿನ ಸಂಧಿವಾತ ಅಪಾಯ ಕಾರಣವಾಗಿದೆ ಎಂದು ಇಲಿಗಳ ಮೇಲೆ ನಡೆಸಿರುವಂತಹ ಸಂಶೋಧನೆಗಳಿಂದ ತಿಳಿದುಬಂದಿದೆ. ಈ ರಾಸಾಯನಿಕಗಳನ್ನು ಹೆಚ್ಚಾಗಿ ಮನೆ, ಆಸ್ಪತ್ರೆ, ಸಾರ್ವಜನಿಕ ಸ್ಥಳ ಮತ್ತು ಈಜು ಕೊಳಗಳಲ್ಲಿ ಉಪಯೋಗಿಸುತ್ತಾರೆ ಎಂದು ಅಮೆರಿಕಾದ ವರ್ಜಿನಿಯಾದಲ್ಲಿರುವ ಎಡ್ವರ್ಡ್ ವಯಾ ಕಾಲೇಜಿನ ಆಸ್ಟಿಯೋಪೆಥಿಕ್ ಮೆಡಿಸಿನ್‌ನ ಸಹಾಯಕ ಪ್ರಾಧ್ಯಾಪಕ ಟೆರಿ ಹೃಬೆಕ್ ತಿಳಿಸಿದ್ದಾರೆ. 

Clothes wash

ಹುಟ್ಟುವ ಮಗುವಿಗೆ ಆಗುವಂತಹ ಅಂಗವೈಕಲ್ಯದ ಬಗ್ಗೆ ನಡೆಸಿರುವ ಸಂಶೋಧನೆಯ ಪ್ರಕಾರ ಸಾಮಾನ್ಯವಾಗಿ ಬಳಸುವಂತಹ ಕ್ವಾಟ್ಸ್‌ಗಳಾದ ಅಲ್ಕೈಲ್ ಡೈಮೀಥೈಲ್ ಬೆಂಜೈಲ್ ಅಮೋನಿಯಂ ಕ್ಲೋರೈಡ್ ಮತ್ತು ಡಡೆಸಿಲ್ ಡೈಮೀಥೈಲ್ ಅಮೋನಿಯಂ ಕ್ಲೋರೈಡ್ ಅನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಯಿತು.

ಈ ಅಧ್ಯಯನದಲ್ಲಿ ಪುರುಷ ಹಾಗೂ ಮಹಿಳೆ ಮತ್ತು ಇಬ್ಬರನ್ನು ಈ ರಾಸಾಯನಿಕಕ್ಕೆ ಒಗ್ಗಿಕೊಂಡಾಗ ಆಗುವಂತಹ ಅನಾಹುತವನ್ನು ತಿಳಿಯಲಾಯಿತು ಎಂದು ಹೃಬೆಕ್ ತಿಳಿಸಿದ್ದಾರೆ. ಈ ವಸ್ತುಗಳನ್ನು ಎಬಿಬಿಎಸಿ ಮತ್ತು ಡಿಡಿಎಸಿ ಎಂದು ಪಟ್ಟಿ ಮಾಡಲಾಗಿದೆ. ಇವುಗಳ ಪ್ರತಿರೋಧಕ ಮತ್ತು ಪ್ರತಿಸ್ಥಾಯಿ ಗುಣಗಳಿಂದಾಗಿ ಇವುಗಳಿಗೆ ಮೌಲ್ಯಗಳನ್ನು ನೀಡಲಾಗಿದೆ.

ಇವುಗಳನ್ನು ಸಾಮಾನ್ಯವಾಗಿ ಸ್ವಚ್ಛ ಮಾಡುವ ಉತ್ಪನ್ನ ಮತ್ತು ಸೋಂಕುನಿವಾರಕ, ಆಹಾರ ಸಂರಕ್ಷಣೆ, ಈಜುಕೊಳ, ಲಾಂಡ್ರಿ ಉತ್ಪನ್ನ, ಶಾಂಪೂ, ಕಂಡೀಷನರ್, ಕಣ್ಣಿನ ಡ್ರಾಪ್ಸ್ ಮತ್ತು ಇತರ ಕೆಲವೊಂದು ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಈ ರಾಸಾಯನಿಕಗಳಿಗೆ ಒಗ್ಗಿಕೊಳ್ಳುವುದರಿಂದ ಹುಟ್ಟುವ ಮಗುವಿನಲ್ಲಿ ಸ್ಪಿನಾ ಬಿಫಿಡಾ ಮತ್ತು ಆನೆನ್ಸ್ಫಾಲಿ ದಂತಹ ಅಂಗವೈಕಲ್ಯ ಕಾಣಿಸಿಕೊಳ್ಳುತ್ತದೆ.

ಇಲಿಗಳ ಮೇಲೆ ಪ್ರಯೋಗ ನಡೆಸುತ್ತಿರುವ ವೇಳೆ ಈ ರಾಸಾಯನಿಕಗಳನ್ನು ಇಲಿಗಳ ದೇಹಕ್ಕೆ ಕೊಡುವ ಅಗತ್ಯವೇ ಕಂಡುಬರಲಿಲ್ಲ. ಯಾಕೆಂದರೆ ಈ ರಾಸಾಯನಿಕಗಳು ಇರುವ ಕ್ಲೀನರ್ ಗಳನ್ನು ಬಳಸಿದಾಗ ಇಲಿಗಳು ಜನ್ಮ ನೀಡಿದ ಮರಿಗಳಲ್ಲಿ ಅಂಗವೈಕಲ್ಯ ಕಂಡುಬಂದಿದೆ. 

baby

ಈ ರಾಸಾಯನಿಕಗಳಿಗೆ ಒಗ್ಗಿಕೊಳ್ಳುವುದನ್ನು ನಿಲ್ಲಿಸಿದರೂ ಇಲಿಗಳಲ್ಲಿ ಎರಡು ತಲೆಮಾರಿನ ತನಕ ಅಂಗವೈಕಲ್ಯ ಕಂಡು ಬಂದಿದೆ ಎನ್ನುವುದನ್ನು ಗಮನಿಸಲಾಗಿದೆ ಎಂದು ಹೃಬೆಕ್ ವಿವರ ನೀಡಿದ್ದಾರೆ. ಇಲಿಗಳ ಮೇಲೆ ಈ ಪ್ರಯೋಗವನ್ನು ನಡೆಸಲಾಗಿದೆ. ಆದರೆ ಇದು ಮನುಷ್ಯರಿಗೂ ತುಂಬಾ ಹಾನಿಕಾರಕವಾಗುವ ಸಾಧ್ಯತೆ ಇದ್ದೇ ಇದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

English summary

Chemicals Found In Detergents, Shampoos Linked To Birth Defects

Parents' exposure to chemicals often used as disinfectants and preservatives in household and personal products such as detergents, shampoos and conditioners may be associated with birth defects in children, researchers have warned. The study, conducted on both mice and rats, showed that the chemicals -- known as quaternary ammonium compounds or "quats" -- can lead to birth defects of the brain, spine or spinal cord.
Subscribe Newsletter