ಸಣ್ಣ ತುಂಡು ಶುಂಠಿ ಇದ್ದರೆ ಸಾಕು, ವಾಕರಿಕೆಯ ಸಮಸ್ಯೆಯೇ ಕಾಡದು

By: manu
Subscribe to Boldsky

ವಾಕರಿಕೆ/ವಾಂತಿ ಎನ್ನುವುದು ಆರೋಗ್ಯದ ಒಂದು ಸಮಸ್ಯೆ. ಇದಕ್ಕೆ ಗಂಭೀರ ಸಮಸ್ಯೆ ಅಥವಾ ಚಿಕ್ಕ-ಪುಟ್ಟ ಸಮಸ್ಯೆ ಎನ್ನುವ ಭೇದವಿಲ್ಲ. ದೇಹಕ್ಕೆ ಆಗದು ಎಂದು ಕಂಡಾಗ ವಾಕರಿಕೆಯಿಂದ ಆಹಾರವನ್ನು ಹೊರಹಾಕುತ್ತದೆ. ಸಾಮಾನ್ಯ ಸಮಸ್ಯೆಗಳಿಗಾದರೆ ಎರಡು ನಿಮಿಷ ವಾಕರಿಕೆ ಉಂಟಾಗುತ್ತದೆ. ಅದೇ ಗಂಭೀರ ಸ್ಥಿತಿಯಾಗಿದ್ದರೆ ದಿನವಿಡೀ ವಾಕರಿಕೆ ಉಂಟಾಗುತ್ತಲೇ ಇರುತ್ತದೆ.

ಗರ್ಭಾವಸ್ಥೆಯಲ್ಲಿ ವಾಕರಿಕೆ ಶಮನಕ್ಕೆ ಮನೆ ಮದ್ದು ರಾಮಬಾಣ

ಕೆಲವರಿಗೆ ಪ್ರಯಾಣ ಮಾಡುವಾಗ, ಅಜೀರ್ಣದ ಸಮಸ್ಯೆಯಿಂದ ಅಥವಾ ಕೆಲವು ಔಷಧಗಳ ಸೇವನೆಯ ಅಡ್ಡ ಪರಿಣಾಮಗಳಿಂದ ವಾಕರಿಕೆ ಉಂಟಾಗುವ ಸಾಧ್ಯತೆ ಹೆಚ್ಚು. ಇಂತಹ ಚಿಕ್ಕ ಪುಟ್ಟ ಸಮಸ್ಯೆಯುಂಟಾದಾಗ ಮನೆಯಲ್ಲಿ ಸುಲಭವಾಗಿ ಸಿಗುವ ಶುಂಠಿಯಿಂದ ಆರೈಕೆ ಮಾಡಿಕೊಳ್ಳಬಹುದು. ರೋಗ ನಿರೋಧಕ ಶಕ್ತಿ, ಜೀರ್ಣ ಕ್ರಿಯೆ ಸುಲಭವಾಗಿ ಮಾಡಬಲ್ಲ, ನೋವುಗಳ ನಿವಾರಣೆಗೆ ಸಹಾಯ ಮಾಡುವ ಶುಂಠಿಯಿಂದ ಬಹುಬೇಗ ಚೇತರಿಕೆ ಉಂಟಾಗುವುದು. ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುವ ಕೆಲವು ತೊಂದರೆಗಳಿಗೆ ಯಾವ ಬಗೆಯಲ್ಲಿ ಶುಂಠಿ ಸಹಾಯ ಮಾಡುವುದು ಎನ್ನುವ ವಿವರಣೆ ಇಲ್ಲಿದೆ ನೋಡಿ....

ವಾಂತಿ/ವಾಕರಿಕೆ

ವಾಂತಿ/ವಾಕರಿಕೆ

ತಲೆನೋವು, ಅಜೀರ್ಣ, ಪಿತ್ತ, ಗ್ಯಾಸ್‍ಗಳಂತಹ ಸಮಸ್ಯೆಯಿಂದ ವಾಂತಿ ಉಂಟಾಗುವುದು. ಹೀಗೆ ಉಂಟಾದಾಗ ಬಹಳ ಬೇಗ ಚೇತರಿಕೆ ಅನುಭವವನ್ನು ಶುಂಠಿ ನೀಡಬಲ್ಲದು. ವಾಂತಿ ಯಾದ ನಂತರ ಅಥವಾ ವಾಕರಿಕೆ ಸಂವೇದನೆ ಉಂಟಾದಾಗ ಚೂರು ಶುಂಠಿ ಮತ್ತು ಚಿಟಿಕೆ ಉಪ್ಪನ್ನು ಬಾಯಲ್ಲಿ ಇರಿಸಿಕೊಂಡರೆ ತೊಂದರೆ ಶಮನವಾಗುವುದು.

ಅಜೀರ್ಣ

ಅಜೀರ್ಣ

ಕೆಲವೊಮ್ಮೆ ಮನೆಯಲ್ಲಿ ವಿಶೇಷ ಅಡುಗೆ ಊಟ ಮಾಡಿದಾಗ ಅಥವಾ ಸ್ನೇಹಿತರು/ಸಂಬಂಧಿಕರ ಮನೆಯಲ್ಲಿ ವಿಶೇಷ ಊಟ ಮಾಡಿದಾಗ, ಗ್ಯಾಸ್ ತೊಂದರೆಯಿಂದ ಅಜೀರ್ಣ ಉಂಟಾಗುವುದು. ಈ ಸಮಸ್ಯೆಗೆ ಪರಿಹಾರವೆಂದರೆ ಶುಂಠಿ. ಶುಂಠಿ ಕಷಾಯ ಅಥವಾ ಹಸಿ ಶುಂಠಿ ಚೂರನ್ನು ಬಾಯಲ್ಲಿರಿಸಿಕೊಂಡು, ಅದರ ರಸವನ್ನು ನುಂಗುತ್ತಿದ್ದರೆ ವಾಕರಿಕೆ ಆಗದು. ಆಹಾರವೂ ಜೀರ್ಣವಾಗುವುದು.

ಕಾಲ್ನಡಿಗೆ ಮತ್ತು ಶುಂಠಿ

ಕಾಲ್ನಡಿಗೆ ಮತ್ತು ಶುಂಠಿ

ಅನಾರೋಗ್ಯದಿಂದ ಮನಸ್ಸಿಗೆ ವಾಕರಿಕೆ ಆಗಬಹುದು ಎನ್ನುವ ಸಂದೇಹ ರವಾನೆಯಾಗುತ್ತಿದೆ ಎಂದರೆ ಬಾಯಲ್ಲಿ ಚೂರು ಶುಂಠಿಯನ್ನು ಇಟ್ಟುಕೊಂಡು ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಸಾಗಿ. ಆಗ ವಾಕರಿಕೆ/ವಾಂತಿ ಉಂಟಾಗದು.

 ಅನಿಯಮಿತ ಸಮಯದ ಊಟ

ಅನಿಯಮಿತ ಸಮಯದ ಊಟ

ಕೆಲವೊಮ್ಮೆ ಊಟ ತಿಂಡಿಯ ಸಮಯದಲ್ಲಿ ಆಹಾರ ನಮ್ಮ ಹೊಟ್ಟೆಗೆ ತಲುಪದಿದ್ದರೆ ಗ್ಯಾಸ್ ಉಂಟಾಗುವುದು. ಆನಂತರ ಊಟ ಸೇವಿಸಿದಾಗ ಕೆಲವೊಮ್ಮೆ ವಾಂತಿ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಶುಂಠಿ ಜ್ಯೂಸ್, ಶುಂಠಿ ಕಷಾಯ ಅಥವಾ ಶುಂಠಿ ಚೂರನ್ನು ತಿಂದರೆ ಶಮನವಾಗುವುದು.

ತಲೆನೋವಿನ ವಾಂತಿ

ತಲೆನೋವಿನ ವಾಂತಿ

ಕೆಲವರಿಗೆ ತಲೆ ನೋವು ಹೆಚ್ಚಾದರೆ ವಾಂತಿಯಾಗುವುದು. ಇಂತಹವರು ಶುಂಟಿಯನ್ನು ತೇಯ್ದು ಹಣೆಗೆ ಹಚ್ಚಿಕೊಂಡರೆ ತಲೆನೋವು ಶಮನವಾಗುವುದು. ವಾಂತಿಯೂ ಉಂಟಾಗದು. ಇಲ್ಲವಾದರೆ ಒಂದು ಕಪ್ ನೀರಿಗೆ ಸ್ವಲ್ಪ ಶುಂಠಿಯನ್ನು ಜ್ಜಜಿ ಹಾಕಿ. ನಂತರ ಚೆನ್ನಾಗಿ ಕುದಿಸಿ. ಬಳಿಕ ಟೀಯಂತೆ ಸೇವಿಸಬೇಕು.

ತಾಳ್ಮೆ ಇರಲಿ

ತಾಳ್ಮೆ ಇರಲಿ

ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಶುಂಠಿಯ ಪರಿಣಾಮ ಬೀರದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಸಾಧ್ಯವಾದಷ್ಟು ಬೇಗ ವೈದ್ಯರಲ್ಲಿ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆದರಾಯಿತು. ಆರೋಗ್ಯವೂ ಸುಧಾರಣೆಯಾಗುವುದು.

English summary

Can Ginger Prevent Nausea?

Generally, digestive issues could trigger nausea though it could be a symptom for many other health issues. Stress, food poisoning, allergies, eating too much, certain medications, motion sickness and drinking alcohol are some of the reasons that could contribute to nausea.
Subscribe Newsletter