ಪುರುಷರಿಗೆ ಶಾಕಿಂಗ್ ಸುದ್ದಿ! ಕೂದಲುದುರುವುದಕ್ಕೆ ಇದು ಕೂಡ ಕಾರಣವಂತೆ!

By: Hemanth
Subscribe to Boldsky

ಮನುಷ್ಯನಿಂದ ಹಿಡಿದು ಪ್ರಾಣಿಗಳ ತನಕ ಪ್ರತಿಯೊಬ್ಬರಲ್ಲೂ ಲೈಂಗಿಕ ಬಯಕೆಗಳು ಎನ್ನುವುದು ಪ್ರಕೃತಿ ಸಹಜ. ಕೆಲವು ಪ್ರಾಣಿಗಳು ಹಾಗೂ ಪಕ್ಷಿಗಳು ಋತುಮಾನಕ್ಕೆ ಅನುಗುಣವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ. ಆದರೆ ಮಾನವ ಮಾತ್ರ ವರ್ಷದ ಪ್ರತಿದಿನವೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾನೆ. ಲೈಂಗಿಕ ಕ್ರಿಯೆ ನಡೆಸಲು ಸಂಗಾತಿ ಬೇಕೆನ್ನುವುದು ಸತ್ಯ. ವಿರುದ್ಧ ಲಿಂಗಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಆಗ ಲೈಂಗಿಕ ತೃಪ್ತಿಯು ಸಿಗುತ್ತದೆ.

ಆದರೆ ಯಾವುದೋ ಕಾರಣಕ್ಕಾಗಿ ಏಕಾಂಗಿಯಾಗಿರುವವರು ಹಾಗೂ ಇನ್ನಷ್ಟೇ ಮದುವೆಯಾಗಬೇಕಿರುವವರು ವಯೋಸಹಜವಾದ ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳಲು ಹಸ್ತಮೈಥುನದ ಮೊರೆ ಹೋಗುತ್ತಾರೆ. ಹಸ್ತಮೈಥುನ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕೆಟ್ಟದು ಎನ್ನುವ ಬಗ್ಗೆ ಈಗಲೂ ಚರ್ಚೆ ನಡೆಯುತ್ತಾ ಇದೆ. ಹಸ್ತಮೈಥುನ ಮಾಡಿಕೊಳ್ಳುವವರು ಕೂಡ ಇದರ ಬಗ್ಗೆ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಲೈಂಗಿಕ ಬಯಕೆಯು ಪೂರ್ತಿಯಾಗದೆ ಇರುವ ವ್ಯಕ್ತಿಗಳಲ್ಲಿ ಖಿನ್ನತೆ ಕಾಡಬಹುದು ಮತ್ತು ಸಂಬಂಧಗಳಿಗೂ ಇದರಿಂದ ಹಾನಿಯಾಗಬಹುದು. ಇದರಿಂದ ವೈವಾಹಿಕ ಜೀವನದಲ್ಲಿ ಇರುವವರು ಕೂಡ ಲೈಂಗಿಕ ತೃಪ್ತಿಯನ್ನು ಪಡೆಯುವುದು ಅನಿವಾರ್ಯ. 

Bald head

ಲೈಂಗಿಕ ತೃಪ್ತಿಯಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗಿ ಕೋಶಗಳು ಪುನರುತ್ಪಾದನೆಯಾಗುವುದು. ವಯಸ್ಸಿಗೆ ಬಂದಿರುವ ವ್ಯಕ್ತಿಗಳು ನಿಯಮಿತವಾಗಿ ಲೈಂಗಿಕ ತೃಪ್ತಿ ಪಡೆಯಬೇಕು. ಸಂಗಾತಿಗಳು ಇರುವವರು ಈ ರೀತಿ ತೃಪ್ತಿ ಪಡೆದುಕೊಳ್ಳವರು. ಆದರೆ ಏಕಾಂಗಿಯಾಗಿರುವವರು ತಮ್ಮ ಕಲ್ಪನಾ ಲೋಕದಲ್ಲಿ ತಮಗೆ ಇಷ್ಟಬಂದವರನ್ನು ಕಲ್ಪಿಸಿಕೊಂಡು ಹಸ್ತಮೈಥುನ ಮಾಡಿಕೊಳ್ಳುವರು.

ಹಸ್ತಮೈಥುನವು ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಆದರೆ ಹಿತಿಮಿತಿಯಲ್ಲಿ ಮಾತ್ರ ಇದು ಒಳ್ಳೆಯದು. ಅತಿಯಾಗಿ ಹಸ್ತುಮೈಥುನ ಮಾಡಿಕೊಂಡರೆ ಅದರಿಂದ ಕೂದಲು ಉದುರುವ ಸಮಸ್ಯೆಯು ಕಾಡುತ್ತದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಮತ್ತಷ್ಟು ಓದಿಕೊಳ್ಳಿ.

ಹಸ್ತಮೈಥುನ ಮತ್ತು ಕೂದಲು ಉದುರುವಿಕೆಗೆ ಸಂಬಂಧ

ಆರೋಗ್ಯಕರ ಜೀವನಶೈಲಿ ಮತ್ತು ಯಾವುದೇ ಕಾಯಿಲೆಗಳು ಇಲ್ಲದೆ ಇದ್ದರೂ ನಿಮ್ಮಲ್ಲಿ ಕೂದಲು ಉದುರುವ ಸಮಸ್ಯೆ ಕಾಡುತ್ತಾ ಇದ್ದರೆ ಇದಕ್ಕೆ ಪ್ರಮುಖ ಕಾರಣವೇ ಹಸ್ತಮೈಥುನ. ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಅತಿಯಾಗಿ ಹಸ್ತಮೈಥುನ ಮಾಡಿಕೊಳ್ಳುವುದರಿಂದಾಗಿ ದೇಹದಲ್ಲಿರುವ ಪೋಷಕಾಂಶಗಳಾದ ವಿಟಮಿನ್ ಮತ್ತು ಪ್ರೋಟೀನ್ ಹೊರಹೋಗುವುದು. ಇದರಿಂದ ಕೂದಲಿನ ಕೋಶಗಳು ದುರ್ಬಲವಾಗಿ ಕೂದಲು ಉದುರುವುದು ಎಂದು ಇತ್ತೀಚಿನ ವರದಿಯೊಂದು ಹೇಳಿದೆ.

Bald head

ಅತಿಯಾಗಿ ಹಸ್ತುಮೈಥುನ ಮಾಡಿಕೊಳ್ಳುವುದರಿಂದ ಪುರುಷರಲ್ಲಿ ಇರುವಂತಹ ಟೆಸ್ಟೋಸ್ಟೆರಾನ್ ಹಾರ್ಮೋನು ಡಿಎಚ್ ಟಿ ಎನ್ನುವ ಸಂಯುಕ್ತವಾಗಿ ಬದಲಾಗುವುದು. ಡಿಎಚ್ ಟಿ ಕೂಡ ಪುರುಷರಲ್ಲಿ ಕೂದಲು ಉದುರುವಿಕೆ, ಎಣ್ಣೆಯುಕ್ತ ತಲೆಬುರುಡೆ ಮತ್ತು ಮೊಡವೆಗಳಿಗೆ ಕಾರಣವಾಗಿದೆ. ಪುರುಷರು ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಅದರಿಂದ ಕೂದಲು ಉದುರುವಿಕೆ ಸಮಸ್ಯೆ ಕಾಡುವುದು ಎಂದು ಇತ್ತೀಚಿನ ಅಧ್ಯಯನಗಳು ಹೇಳಿವೆ. ಈ ಚಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಬೇರೆ ಹವ್ಯಾಸದಲ್ಲಿ ತೊಡಗಿಕೊಳ್ಳಬೇಕು.

English summary

Can Excessive Masturbation Cause Hair Loss In Men?

Apart from facilitating procreation, sexual intercourse between two people also aims at providing carnal pleasure to both the parties involved. Sexual pleasure is very important in an adult human's life, as it is just another basic instinct like hunger and thirst, so it has to be satisfied. Lack of sexual pleasure in a person's life can cause a lot of frustration and disappointment, which could cause depression and even damage relationships.
Story first published: Thursday, August 31, 2017, 23:31 [IST]
Subscribe Newsletter