Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ಅಡುಗೆಮನೆಯ ರಾಣಿ, ಅರಿಶಿನದ ಚಿನ್ನದಂತಹ ಗುಣಗಳು
ಅರಿಶಿನವನ್ನು ಹಿಂದಿನ ಕಾಲದಿಂದಲೂ ಭಾರತೀಯರು ಅಡುಗೆ ಹಾಗೂ ಕೆಲವೊಂದು ಔಷಧಿಗಳಲ್ಲಿ ಬಳಸುತ್ತಾ ಬಂದಿದ್ದಾರೆ. ಇದರಲ್ಲಿರುವ ಕೆಲವೊಂದು ಔಷಧಿಯ ಗುಣಗಳು ತುಂಬಾ ಪರಿಣಾಮಕಾರಿಯಾಗಿ ರೋಗಗಳನ್ನು ನಿವಾರಣೆ ಮಾಡುತ್ತದೆ
ಅರಿಶಿನವನ್ನು ಹಿಂದಿನ ಕಾಲದಿಂದಲೂ ಭಾರತೀಯರು ಅಡುಗೆ ಹಾಗೂ ಕೆಲವೊಂದು ಔಷಧಿಗಳಲ್ಲಿ ಬಳಸುತ್ತಾ ಬಂದಿದ್ದಾರೆ. ಇದರಲ್ಲಿರುವ ಕೆಲವೊಂದು ಔಷಧಿಯ ಗುಣಗಳು ತುಂಬಾ ಪರಿಣಾಮಕಾರಿಯಾಗಿ ರೋಗಗಳನ್ನು ನಿವಾರಣೆ ಮಾಡುತ್ತದೆ ಮತ್ತು ಇನ್ನು ಕೆಲವು ಕಾಯಿಲೆಗಳು ಬರದಂತೆ ತಡೆಯುತ್ತದೆ. ಇದರಿಂದ ಅರಿಶಿನವನ್ನು ಹೆಚ್ಚಾಗಿ ಅಡುಗೆಗಳಲ್ಲಿ ಬಳಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮನಸ್ಸನ್ನು ಹಿಂಡುವ ಖಿನ್ನತೆಯ ನಿಯಂತ್ರಣಕ್ಕೆ- ಅರಿಶಿನ ಜ್ಯೂಸ್
ಬನ್ನಿ ಇಂದು ಬೋಲ್ಡ್ ಸ್ಕೈ ಈ ಲೇಖನದಲ್ಲಿ ಎರಡು ಪ್ರಮುಖ ಕಾಯಿಲೆಗಳಾದ ಯಕೃತ್ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಯನ್ನು ನಿವಾರಿಸಲು ಅರಿಶಿನವು ಹೇಗೆ ನೆರವಾಗಲಿದೆ ಎಂದು ನಿಮಗೆ ತಿಳಿಸಿಕೊಡಲಾಗುವುದು. ಅರಿಶಿನದಲ್ಲಿ ಉರಿಯೂತ ಶಮನಕಾರಿ ಹಾಗೂ ಆ್ಯಂಟಿಆ್ಸಕ್ಸಿಡೆಂಟ್ ಗುಣಗಳು ಸಮೃದ್ಧವಾಗಿದೆ. ಅಲ್ಲದೆ ಇದರಲ್ಲಿರುವ ಕುರ್ಕುಮಿನ್ ಎನ್ನುವಂತಹ ಅಂಶವು ಯಕೃತ್‌ನ ಉರಿಯೂತವನ್ನು ಕಡಿಮೆ ಮಾಡಿಕೊಂಡು ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಮಾಡುವುದು. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ
ಕುರ್ಕುಮಿನ್‌ನ ಮತ್ತೊಂದು ಲಾಭವೆಂದರೆ ಇದು ಬೆಟಾ ಅಮ್ಲಯ್ಡ್ ಪದರಗಳು ನಿರ್ಮಾಣವಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಅಲ್ಝೆಮರ್ ಕಾಯಿಲೆಯನ್ನು ತಡೆಯಬಹುದು. ಅದರಲ್ಲಿಯೂ ಅರಿಶಿನದೊಂದಿಗೆ ತೆಂಗಿನ ಹಾಲನ್ನು ಬಳಸಿದಾಗ ಇದರಲ್ಲಿ ಇರುವಂತಹ ಮಧ್ಯಮ ಸರಪಳಿಯ ಗ್ಲಿಸರೈಡ್‌ಗಳು ಖಿನ್ನತೆ ಬರದಂತೆ ನೋಡಿಕೊಂಡು ನೆನಪಿನ ಶಕ್ತಿಯ ಕಳೆದುಕೊಳ್ಳುವುದನ್ನು ತಡೆಯುವುದು ಮತ್ತು ಯಕೃತ್ ಅನ್ನು ಶುದ್ಧೀಕರಿಸಲು ನೆರವಾಗುವುದು.....

1#
ಒಂದು ಚಮಚ ಅರಿಶಿನ ತೆಗೆದುಕೊಳ್ಳಿ.

2#
ಒಂದು ಚಮಚ ತೆಂಗಿನ ಎಣ್ಣೆ

3#
ಎರಡು ಕಪ್ ತೆಂಗಿನ ಹಾಲು

4#
ಒಂದು ಚಿಟಿಕೆ ಕರಿಮೆಣಸಿನ ಹುಡಿ

5#
ಈ ಎಲ್ಲಾ ಸಾಮಗ್ರಿಗಳನ್ನು ಒಂದು ತವಾಗೆ ಹಾಕಿ ಬಿಸಿ ಮಾಡಿ.

5#
ಈ ಪಾನೀಯವನ್ನು ಬಿಸಿಯಾಗಿರುವಾಗಲೇ ಕುಡಿಯಿರಿ. ಅಥವಾ ಇದನ್ನು ಸೂಪ್ ಅಥವಾ ಪದಾರ್ಥಗಳಿಗೆ ಬಳಸಬಹುದು. ಇದನ್ನು ಪ್ರತೀದಿನ ಸೇವಿಸಿ.



Click it and Unblock the Notifications