ಹೊಟ್ಟೆಯುಬ್ಬರದ ಸಮಸ್ಯೆ ಇದೆಯೇ? ಕೂಡಲೇ ವೈದ್ಯರನ್ನು ಕಾಣಿ!

Posted By: deepu
Subscribe to Boldsky

ಹೊಟ್ಟೆಯುಬ್ಬರ ಸಮಸ್ಯೆ ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುವುದು. ಯಾಕೆಂದರೆ ಇಂದಿನ ದಿನಗಳ ಜೀವನ ಶೈಲಿಯೇ ಹಾಗೆ ಇದೆ. ಒತ್ತಡ, ಅನಾರೋಗ್ಯಕರ ಆಹಾರ ಕ್ರಮ ಮತ್ತು ಅತಿಯಾಗಿ ಔಷಧಿ ಸೇವನೆ ಮಾಡುವುದರಿಂದಲೂ ಹೊಟ್ಟೆಯುಬ್ಬರ ಬರಬಹುದು. ಆದರೆ ಹೀಗೆ ಬರುವ ಹೊಟ್ಟೆಯುಬ್ಬರವು ಕೆಲವೇ ದಿನಗಳಲ್ಲಿ ಮಾಯವಾಗುವುದು. ಆದರೆ ಹೊಟ್ಟೆಯುಬ್ಬರವು ಕಡಿಮೆಯಾಗದೆ ಹಾಗೆ ಉಳಿದುಕೊಂಡಿದ್ದರೆ ಅದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಹೊಟ್ಟೆಯುಬ್ಬರವು ಹೊಟ್ಟೆಯು ಹೊರಗೆ ಹಾಗೂ ಒಳಗಿನಿಂದ ಊದಿಕೊಳ್ಳುವ ಪರಿಸ್ಥಿತಿಯಾಗಿದೆ.

ಕರುಳು ಅತಿಯಾಗಿ ಜೀರ್ಣಕ್ರಿಯೆ ಆಮ್ಲವನ್ನು ಬಿಡುಗಡೆ ಮಾಡಿದಾಗ ಹೊಟ್ಟೆಯಲ್ಲಿ ಹೊಟ್ಟೆಯುಬ್ಬರವು ಕಾಣಿಸಿಕೊಳ್ಳುವುದು. ಹೊಟ್ಟೆಯುಬ್ಬರದಿಂದ ನಿಮಗೆ ಕಿರಿಕಿರಿಯಾಗುವುದು ಮತ್ತು ಯಾವಾಗಲೂ ಹೊಟ್ಟೆ ತುಂಬಿದಂತೆ ಆಗುವುದು ಮತ್ತು ಊಟ ಮಾಡುವುದು ಕೂಡ ಸಮಸ್ಯೆಯಾಗುವುದು. ಬಟ್ಟೆ ಧರಿಸಲು ಇದರಿಂದ ಸಮಸ್ಯೆಯಾಗಬಹುದು. ಹೊಟ್ಟೆಯುಬ್ಬರವು ಹೊಟ್ಟೆ ತುಂಬಿದಂತೆ ಮಾಡುವುದು ಮಾತ್ರವಲ್ಲದೆ ಗುಳುಗುಳು ಎನ್ನುವ ಶಬ್ದ ಉಂಟು ಮಾಡುವುದು.

ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಈ ಆಹಾರಗಳನ್ನು ಸೇವಿಸಬೇಡಿ....

ಥೈರಾಯ್ಡ್ ಕಾರ್ಯನಿರ್ವಹಿಸದೆ ಇರುವುದು, ಹಾರ್ಮೋನುಗಳ ಅಸಮತೋಲನ, ಎದೆಯುರಿ ಮತ್ತು ಕಿರಿಕಿರಿ ಉಂಟು ಮಾಡುವ ಸಮಸ್ಯೆ ಹೊಟ್ಟೆಯುಬ್ಬರ ಸಮಸ್ಯೆಗಳಾಗಿವೆ. ಹೊಟ್ಟೆಯುಬ್ಬರ ತುಂಬಾ ದಿನಗಳ ಕಾಲ ಇದ್ದರೆ ನೀವು ಅದರ ಬಗ್ಗೆ ಗಂಭೀರವಾಗಿ ಚಿಂತೆ ಮಾಡಬೇಕು ಮತ್ತು ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಲೇಖನದಲ್ಲಿ ಕೆಲವೊಂದು ಎಚ್ಚರಿಕೆ ಚಿಹ್ನೆಗಳನ್ನು ನೀಡಲಾಗಿದೆ. ಅದು ಯಾವುದೆಂದು ನೀವು ಓದಿಕೊಳ್ಳಿ...  

ಜೀರ್ಣಕ್ರಿಯೆ ಸಮಸ್ಯೆ

ಜೀರ್ಣಕ್ರಿಯೆ ಸಮಸ್ಯೆ

ಹೊಟ್ಟೆಯುಬ್ಬರ ಪ್ರಮುಖ ಚಿಹ್ನೆಯೆಂದರೆ ನೀವು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎನ್ನುವುದು. ಜೀರ್ಣಾಂಗ ವ್ಯೂಹದ ಸಮಸ್ಯೆ, ಹೊಟ್ಟೆಯ ಅಲ್ಸರ್, ಉದರದ ಕಾಯಿಲೆಗಳು, ಕಿರಿಕಿರಿ ಉಂಟು ಮಾಡುವ ಕರುಳಿನ ರೋಗ ಇತ್ಯಾದಿಗಳು ಜೀರ್ಣ ಕ್ರಿಯೆಯ ಕೆಲವು ಪ್ರಮುಖ ಸಮಸ್ಯೆಗಳು.

ದ್ರವ ಧಾರಣ(ಒಡೆಮಾ)

ದ್ರವ ಧಾರಣ(ಒಡೆಮಾ)

ನಮ್ಮ ದೇಹದ ಹೊಟ್ಟೆ ಹಾಗೂ ಶ್ರೋಣಿಯ ಭಾಗವು ನೀರಿನಿಂದ ತುಂಬಿಕೊಂಡಿರುವುದು. ಆದರೆ ಹೊಟ್ಟೆ ಹಾಗೂ ಶ್ರೋಣಿಯ ಭಾಗದಲ್ಲಿ ಅತಿಯಾಗಿ ನೀರು ತುಂಬಿಕೊಂಡಾಗ ಹೊಟ್ಟೆಯುಬ್ಬರ ಕಾಣಿಸಿಕೊಳ್ಳುವುದು. ಈ ಸಮಸ್ಯೆಯನ್ನು ಸಾಮಾನ್ಯವಾಗಿ ಒಡೆಮಾ ಎಂದು ಕರೆಯಲಾಗುವುದು. ಯಕೃತ್ ನ ಸಮಸ್ಯೆಯಿಂದ ಬಳಲುವಂತಹ ವ್ಯಕ್ತಿಯಲ್ಲಿ ಶ್ರೋಣಿಯ ಭಾಗದಲ್ಲಿ ನೀರು ಅತಿಯಾಗಿ ತುಂಬಿಕೊಳ್ಳುವುದು. ಇದರಿಂದ ಹೊಟ್ಟೆಯುಬ್ಬರ ಕಾಣಿಸಿಕೊಳ್ಳುವುದು.

ಶ್ರೋಣಿಯ ಉರಿಯೂತ ಕಾಯಿಲೆ

ಶ್ರೋಣಿಯ ಉರಿಯೂತ ಕಾಯಿಲೆ

ಶ್ರೋಣಿಯ ಭಾಗದಲ್ಲಿ ನೋವು, ಜ್ವರ ಮತ್ತು ಹೊಟ್ಟೆಯುಬ್ಬರವು ದೀರ್ಘ ಸಮಯ ತನಕ ಕಾಣಿಸಿಕೊಂಡರೆ ಆಗ ಅದನ್ನು ಶ್ರೋಣಿಯ ಉರಿಯೂತ ಕಾಯಿಲೆ ಎನ್ನಬಹುದು. ಈ ಕಾಯಿಲೆಯು ಲೈಂಗಿಕವಾಗಿ ಹರಡಿರುವ ಕಾಯಿಲೆಯಿಂದ ಅಥವಾ ಸಂತಾನೋತ್ಪತ್ತಿಯ ಅಂಗಾಂಗಗಳಿಗೆ ಸೋಂಕು ಉಂಟಾದಾಗ ಈ ಸಮಸ್ಯೆಯಾಗುವುದು.

ಕ್ರೋನ್ಸ್ ಕಾಯಿಲೆ

ಕ್ರೋನ್ಸ್ ಕಾಯಿಲೆ

ಅತಿಯಾದ ಹೊಟ್ಟೆಯುಬ್ಬರ, ವಾಕರಿಕೆ, ವಾಂತಿ ಮತ್ತು ಹೊಟ್ಟೆಯಲ್ಲಿನ ಇತರ ಕೆಲವು ಸಮಸ್ಯೆಗಳು ಕರುಳಿನ ಸಮಸ್ಯೆಯ ಪ್ರಮುಖ ಲಕ್ಷಣವಾಗಿರಬಹುದು ಮತ್ತು ಸಣ್ಣ ಕರುಳಿಗೆ ಇದರ ಪರಿಣಾಮವಾಗಿರಬಹುದು.

ಅಂಡಾಶಯದ ಕ್ಯಾನ್ಸರ್

ಅಂಡಾಶಯದ ಕ್ಯಾನ್ಸರ್

ಯಾವಾಗಲೂ ಹೊಟ್ಟೆಯುಬ್ಬರ ಮತ್ತು ಶ್ರೋಣಿಯ ಭಾಗದಲ್ಲಿ ನೋವು ಮತ್ತು ಹೊಟ್ಟೆ ಬೇಗ ತುಂಬಿದಂತೆ ಆಗುವುದು ಅಂಡಾಶಯ ಕ್ಯಾನ್ಸರ್ ನ ಪ್ರಮುಖ ಲಕ್ಷಣಗಳಾಗಿವೆ. ಅಂಡಾಶಯದ ಕ್ಯಾನ್ಸರ್ ತಳಿಶಾಸ್ತ್ರ ಅಥವಾ ಹೆರಿಗೆಯಾಗದೆ ಇರುವುದರಿಂದ ಬರಬಹುದು. 50ಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಸಾಮಾನ್ಯ.

ಗರ್ಭಾಶಯದ ಕ್ಯಾನ್ಸರ್

ಗರ್ಭಾಶಯದ ಕ್ಯಾನ್ಸರ್

ಶ್ರೋಣಿಯ ಭಾಗದಲ್ಲಿ ನೋವು, ಮೂತ್ರವಿಸರ್ಜನೆ, ಲೈಂಗಿಕ ಕ್ರಿಯೆ ವೇಳೆ ನೋವು ಇತ್ಯಾದಿ ಸಮಸ್ಯೆಯೊಂದಿಗೆ ಹೊಟ್ಟೆಯುಬ್ಬರ ಕಾಣಿಸಿಕೊಂಡರೆ ಅದು ಗರ್ಭಾಶಯದ ಕ್ಯಾನ್ಸರ್ ನ ಲಕ್ಷಣವಾಗಿದೆ. ತಳಿಶಾಸ್ತ್ರ, ವಿಕಿರಣ ಥೆರಪಿ ಮತ್ತು ಒಸ್ಟ್ರೋಜನ್ ಔಷಧಿಗಳು ಈ ರೀತಿಯ ಕ್ಯಾನ್ಸರ್ ಗೆ ಕಾರಣವಾಗಬಹುದು.

ಹೊಟ್ಟೆಯ ಕ್ಯಾನ್ಸರ್

ಹೊಟ್ಟೆಯ ಕ್ಯಾನ್ಸರ್

ವಾಕರಿಕೆ. ವಾಂತಿ. ಅಜೀರ್ಣ ಮತ್ತು ತೂಕ ಕಳೆದುಕೊಳ್ಳುವ ಜತೆಗೆ ಹೊಟ್ಟೆಯುಬ್ಬರವು ಕಾಣಿಸಿಕೊಂಡರೆ ಇದು ಹೊಟ್ಟೆಯ ಕ್ಯಾನ್ಸರ್ ನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.

ಪ್ಯಾಂಕಿಯಾಟ್ರಿಕ್ ಕ್ಯಾನ್ಸರ್

ಪ್ಯಾಂಕಿಯಾಟ್ರಿಕ್ ಕ್ಯಾನ್ಸರ್

ದೀರ್ಘ ಸಮಯವಿರುವ ಹೊಟ್ಟೆಯುಬ್ಬರ, ಬೆನ್ನು ಮತ್ತು ಹೊಟ್ಟೆಯಲ್ಲಿ ನೋವು ಮತ್ತು ಹಸಿವು ಕಳೆದುಕೊಳ್ಳುವುದು, ಕಾಮಾಲೆ ಮತ್ತು ತೂಕ ಕಳೆದುಕೊಳ್ಳುವುದು ಪ್ಯಾಂಕಿಯಾಟ್ರಿಕ್ ಕ್ಯಾನ್ಸರ್ ನ ಪ್ರಮುಖ ಲಕ್ಷಣವಾಗಿದೆ. ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಕೆಲವರು ಇದು ಸಾಮಾನ್ಯ ನೋವೆಂದು ಕಡೆಗಣಿಸಿದರೆ ಅಪಾಯ ಕಟ್ಟಿಟ್ಟಬುತ್ತಿ.

ಕರುಳಿನ ಕ್ಯಾನ್ಸರ್

ಕರುಳಿನ ಕ್ಯಾನ್ಸರ್

ಹೊಟ್ಟೆಯುಬ್ಬರವು ಕರುಳಿನ ಕ್ಯಾನ್ಸರ್ ನ ಪ್ರಮುಖ ಲಕ್ಷಣವಾಗಿದೆ. ಯಾಕೆಂದರೆ ಕರುಳು ಬ್ಲಾಕ್ ಆಗಿ ಹೊಟ್ಟೆಯುಬ್ಬರ ಬರುವುದು. ಕರುಳಿನ ಕ್ಯಾನ್ಸರ್ ಆರಂಭಿಕ ಹಂತದಲ್ಲಿದ್ದರೆ ಹೊಟ್ಟೆಯುಬ್ಬರದೊಂದಿಗೆ ಮಲದಲ್ಲಿ ರಕ್ತ ಹೋಗುವುದು ಮತ್ತು ಮಲಬದ್ಧತೆ ಸಮಸ್ಯೆ ಕಾಣಿಸುವುದು.

ಯಕೃತ್ ಕಾಯಿಲೆ

ಯಕೃತ್ ಕಾಯಿಲೆ

ಹೊಟ್ಟೆಯುಬ್ಬರದೊಂದಿಗೆ ಚರ್ಮ ಹಾಗೂ ಕಣ್ಣುಗಳು ಹಳದಿಯಾಗುತ್ತಾ ಇದ್ದರೆ ಇದರ ಬಗ್ಗೆ ಎಚ್ಚರಿಕೆ ಅತೀ ಅಗತ್ಯ. ಇದು ಯಕೃತ್ ನ ಕಾಯಿಲೆ ಮತ್ತು ಯಕೃತ್ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಅತಿಯಾಗಿ ಮದ್ಯಪಾನ,ಡ್ರಗ್ಸ್ ಸೇವನೆ ಮತ್ತು ಹೆಪಟಿಟಿಸ್ ನಿಂದ ಯಕೃತ್ ಮೇಲೆ ಪರಿಣಾಮ ಬೀರುವುದು. ಇದರ ಬಗ್ಗೆ ತಕ್ಷಣ ಗಮನಹರಿಸಬೇಕು. ಇಲ್ಲವಾದಲ್ಲಿ ಅದು ಯಕೃತ್ ನ ಕ್ಯಾನ್ಸರ್ ಗೆ ಕಾರಣವಾಗಬಹುದು.

ಕರುಳಿನ ಅಡಚಣೆ

ಕರುಳಿನ ಅಡಚಣೆ

ದೇಹವು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಕರುಳು ಸ್ವಚ್ಛವಾಗಿರುವುದು ಅತೀ ಅಗತ್ಯ. ಹೊಟ್ಟೆಯುಬ್ಬರದೊಂದಿಗೆ ಮಲಬದ್ಧತೆ, ವಾಕರಿಕೆ ಮತ್ತು ವಾಂತಿ ಕಾಣಿಸಿಕೊಂಡರೆ ಇದು ಕರುಳಿನ ಅಡಚಣೆಯ ಸಂಕೇತವಾಗಿದೆ. ಇದು ಗಡ್ಡೆ ಅಥವಾ ಪದರಕ್ಕೆ ಆಗಿರುವ ಗಾಯದ ಲಕ್ಷಣವಾಗಿರಬಹುದು.

English summary

bloated-stomach-warning-signs-not-to-ignore

Stomach bloating is basically a condition in which the stomach becomes swollen, both internally and externally. This happens when the intestines secrete excess digestive acids, and when the accumulation of gas in the tummy is also excessive, thus causing bloating. Hence, if stomach bloating is severe, one should be very careful about the warning signs. Listed here are a few warning signs you need to check for. Take a look.