ಹಲ್ಲುಗಳ ಮೇಲಿನ ಕಪ್ಪು ಚುಕ್ಕೆ-ಇಲ್ಲಿದೆ ನೋಡಿ ಪವರ್‍‌ಫುಲ್ ಮನೆಮದ್ದುಗಳು

By: Arshad
Subscribe to Boldsky

ನಿಮ್ಮ ಹಲ್ಲುಗಳ ಮೇಲೆ ಎದ್ದು ಕಾಣುವಂತೆ ಕಪ್ಪು ಚುಕ್ಕೆಗಳಿದ್ದು ಇದೇ ಕಾರಣಕ್ಕೆ ಮನಃಪೂರ್ವಕವಾಗಿ ನಗಲು ನಿಮಗೆ ಮುಜುಗರವಾಗುತ್ತಿದೆಯೇ? ಹಲ್ಲಿನ ಸಹಜವರ್ಣ ಕಳೆಗುಂದಿದ್ದು ಈ ಬಗ್ಗೆ ನಿಮಗೆ ಏನು ಮಾಡಬೇಕೆಂದು ಗೊತ್ತಿಲ್ಲವೇ? ಹಾಗಾದರೆ ಇಂದಿನ ಲೇಖನ ನಿಮಗೆ ಉತ್ತಮ ಮಾಹಿತಿಯನ್ನು ಒದಗಿಸುತ್ತಿದ್ದು ಹಲ್ಲುಗಳ ಮೇಲಿನ ಕಪ್ಪುಚುಕ್ಕೆ ಹಾಗೂ ಇತರ ಕಲೆಗಳನ್ನು ಸುಲಭವಾಗಿ ಹೇಗೆ ನಿವಾರಿಸಬಹುದು ಎಂಬುದನ್ನು ತಿಳಿಸುತ್ತದೆ.

ಪವರ್‌ಫುಲ್ ಮನೆಔಷಧಿಗಳು-ಹತ್ತೇ ನಿಮಿಷದಲ್ಲಿ ಹಲ್ಲು ನೋವು ನಿಯಂತ್ರಣಕ್ಕೆ

ಕಪ್ಪು ಚುಕ್ಕೆಗಳು ಹಲ್ಲಿನ ಮುಂಭಾಗದಷ್ಟೇ ಹಿಂಭಾಗದಲ್ಲಿಯೂ ಮೂಡಬಹುದು. ಇದಕ್ಕೆ ಪ್ರಮುಖ ಕಾರಣ ಹಲ್ಲುಗಳ ಹೊರಪದರದ ಸವೆಯುವಿಕೆ. ಹಲ್ಲು ಸವೆಯಲು ಹಲ್ಲುಗಳ ಸ್ವಚ್ಛತೆಯ ಬಗ್ಗೆ ನಾವು ತೋರುವ ಅನಾದರ ಹಾಗೂ ಅಸಡ್ಡೆಯೇ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ನಮ್ಮ ಸಾಮಾನ್ಯ ಅಭ್ಯಾಸಗಳೂ ಈ ಕಲೆಗಳನ್ನು ಹೆಚ್ಚಿಸುತ್ತವೆ. ಬನ್ನಿ, ಈ ಕಲೆಗಳನ್ನು ನಿವಾರಿಸಲು ಕೆಲವು ಮನೆಮದ್ದುಗಳನ್ನು ನೋಡೋಣ...  

ಹಲ್ಲುಗಳನ್ನು ದಿನಕ್ಕೆರಡು ಬಾರಿ ಸ್ವಚ್ಛಗೊಳಿಸಲೇಬೇಕು

ಹಲ್ಲುಗಳನ್ನು ದಿನಕ್ಕೆರಡು ಬಾರಿ ಸ್ವಚ್ಛಗೊಳಿಸಲೇಬೇಕು

ನಿಮ್ಮ ಹಲ್ಲುಗಳನ್ನು ದಿನಕ್ಕೆರಡು ಬಾರಿ ಸ್ವಚ್ಛಗೊಳಿಸಲೇಬೇಕು. ಹಲ್ಲುಗಳ ಮುಂಭಾಗದ ಸಹಿತ ಹಿಂಭಾಗಗಳಿಗೂ ಸೂಕ್ತ ಕ್ರಮದಲ್ಲಿ ಉಜ್ಜಿಕೊಳ್ಳಬೇಕು. ಪ್ರತಿ ಬಾರಿ ಏನಾದರೂ ತಿಂದ ಬಳಿಕ ಮೌತ್ ವಾಶ್ ದ್ರಾವಣ ಅಥವಾ ಬರೆಯ ನೀರಿನಿಂದ ಮುಕ್ಕಳಿಸಿಕೊಂಡು ಸ್ವಚ್ಛಗೊಳಿಸಬೇಕು.

ಹಲ್ಲುಗಳನ್ನು ದಿನಕ್ಕೆರಡು ಬಾರಿ ಸ್ವಚ್ಛಗೊಳಿಸಲೇಬೇಕು

ಹಲ್ಲುಗಳನ್ನು ದಿನಕ್ಕೆರಡು ಬಾರಿ ಸ್ವಚ್ಛಗೊಳಿಸಲೇಬೇಕು

ಹಲ್ಲುಗಳ ನಡುವಣ ಬಿರುಕುಗಳಲ್ಲಿ ಸಿಲುಕಿರುವ ಆಹಾರಕಣಗಳನ್ನು ನಿವಾರಿಸಲು ಫ್ಲಾಸ್ ದಾರಗಳನ್ನು ಬಳಸಿ ಆಗಾಗ ಸ್ವಚ್ಛಗೊಳಿಸುತ್ತಾ ಇರಬೇಕು. ಈ ಸ್ಥಳ ಬ್ಯಾಕ್ಟೀರಿಯಾಗಳು ವೃದ್ಧಿಗೊಳ್ಳುವ ಸೂಕ್ತ ತಾಣವಾಗಿದೆ.

ಚೆನ್ನಾಗಿ ಅಗಿದು ನುಂಗಬೇಕು

ಚೆನ್ನಾಗಿ ಅಗಿದು ನುಂಗಬೇಕು

ಹಸಿಯಾಗಿ ತಿನ್ನಬಹುದಾದ ಯಾವುದೇ ತರಕಾರಿ, ಸೊಪ್ಪು, ದಂಟುಗಳನ್ನು ಚೆನ್ನಾಗಿ ಅಗಿದು ನುಂಗಬೇಕು. ಈ ಅಭ್ಯಾಸದಿಂದ ಆರೋಗ್ಯವೂ ವೃದ್ಧಿಸುವುದಲ್ಲದೇ ಹಲ್ಲುಗಳು ಸ್ವಚ್ಛವಾಗಿರಲು ಹಾಗೂ ಉಸಿರಿನಲ್ಲಿ ದುರ್ವಾಸನೆ ಮೂಡದಿರಲು ನೆರವಾಗುತ್ತದೆ.

ಕಾಫಿ ಸೇವನೆ ಒಳ್ಳೆಯದಲ್ಲ...

ಕಾಫಿ ಸೇವನೆ ಒಳ್ಳೆಯದಲ್ಲ...

ಕೆಫೀನ್ ಬೆರೆತಿರುವ ಪೇಯಗಳನ್ನು ಕುಡಿಯಬೇಕಾಗಿ ಬಂದಾಗ ಸ್ಟ್ರಾ ಬಳಸಿ ಹಲ್ಲುಗಳಿಗೆ ತಗಲದಂತೆ ಕುಡಿಯುವುದು ಜಾಣತನ.

ಅಡುಗೆ ಸೋಡಾ ಬೆರೆಸಿ

ಅಡುಗೆ ಸೋಡಾ ಬೆರೆಸಿ

ನಿಮ್ಮ ನಿತ್ಯದ ಬಳಕೆಯ ಟೂಥ್ ಪೇಸ್ಟ್ ಗೆ ಕೊಂಚ ಅಡುಗೆ ಸೋಡಾ ಬೆರೆಸಿ ಬಳಸುವ ಮೂಲಕ ಹಲ್ಲುಗಳ ಮೇಲೆ ಮೂಡಿದ್ದ ಕಲೆಗಳು ಸಡಿಲವಾಗಿ ನಿವಾರಣೆಯಾಗಲು ನೆರವಾಗುತ್ತದೆ.

ಕಿತ್ತಳೆ ಹಣ್ಣಿನ ಸಿಪ್ಪೆ

ಕಿತ್ತಳೆ ಹಣ್ಣಿನ ಸಿಪ್ಪೆ

ಹಲ್ಲುಗಳ ಕಲೆಗಳ ಮೇಲೆ ಕಿತ್ತಳೆ ಹಣ್ಣಿನ ಸಿಪ್ಪೆಯ ಒಳಭಾಗದ ಮೂಲಕ ಉಜ್ಜಿಕೊಳ್ಳುವ ಮೂಲಕವೂ ಕಪ್ಪು ಚುಕ್ಕೆಗಳನ್ನು ನಿವಾರಿಸಬಹುದು.

ಅಡುಗೆ ಸೋಡಾ

ಅಡುಗೆ ಸೋಡಾ

ಹಠಮಾರಿ ಕಲೆಗಳ ನಿವಾರಣೆಗೆ ಕೊಂಚ ನೀರಿನಲ್ಲಿ ಅಡುಗೆ ಸೋಡಾ ಬೆರೆಸಿ ದಪ್ಪನೆಯ ಲೇಪನ ತಯಾರಿಸಿ ಈ ಲೇಪನವನ್ನು ಕಲೆಗಳ ಮೇಲೆ ನೇರವಾಗಿ ವೃತ್ತಾಕಾರದಲ್ಲಿ ಉಜ್ಜಿಕೊಳ್ಳಬೇಕು. ಆದರೆ ಒಸಡುಗಳಿಗೆ ತಗಲದಂತೆ ಎಚ್ಚರವಹಿಸಬೇಕು. ಇದರಿಂದ ಕಠಿಣ ಕಲೆಗಳೂ ನಿವಾರಣೆಯಾಗುತ್ತವೆ.

ಉಪ್ಪು

ಉಪ್ಪು

ಹಲ್ಲುಗಳನ್ನು ಸ್ವಚ್ಛಗೊಳಿಸಲು ಉಪ್ಪು ಸಹಾ ಉತ್ತಮ ಆಯ್ಕೆಯಾಗಿದೆ. ಸಾಧ್ಯವಾದರೆ ಕಲ್ಲುಪ್ಪನ್ನು ಪುಡಿ ಮಾಡಿಕೊಂಡು ಕಲೆಗಳ ಮೇಲೆ ಉಜ್ಜಿಕೊಳ್ಳುವ ಮೂಲಕ ಕಲೆಗಳು ನಿವಾರಣೆಯಾಗುತ್ತವೆ. ಹಾಗೂ ನಿಯಮಿತವಾಗಿ ಬಳಸುವ ಮೂಲಕ ಮುಂದೆಯೂ ಕಲೆ ಮೂಡದಂತೆ ಕಾಪಾಡುತ್ತದೆ.

English summary

Black Spots on the Teeth: here are the Home Remedies

Black spots can occur anywhere on your teeth – be it on the front or at the back. They are caused by the erosion of the enamel on the teeth. The staining or black spots reflect poorly on one’s dental hygiene and general habits. If the staining is not very severe, then there are home remedies that can help you get rid of the black spots.
Subscribe Newsletter