'ಜೀರಿಗೆ ಚಹಾ'- ಹೊಟ್ಟೆ ಉಬ್ಬರ ಸಮಸ್ಯೆಗೆ ಕ್ಷಣಾರ್ಧದಲ್ಲಿ ಪರಿಹಾರ

By: Hemanth
Subscribe to Boldsky

ಅಜೀರ್ಣ ಸಮಸ್ಯೆಯಿಂದ ಹೊಟ್ಟೆಯಲ್ಲಿ ವಾಯು ತುಂಬಿಕೊಂಡು ಹಲವಾರು ರೀತಿಯ ಸಮಸ್ಯೆ ಉಂಟು ಮಾಡುವುದು ಇದನ್ನು ಅನುಭವಿಸಿರುವಂತಹ ನಮಗೆಲ್ಲರಿಗೂ ತಿಳಿದಿದೆ. ಇದು ಕೆಲವೊಮ್ಮೆ ನಮ್ಮ ದೈನಂದಿನ ಜೀವನ ಸಾಗಿಸಲು ತೊಂದರೆ ಉಂಟು ಮಾಡುವುದು. ಹೊಟ್ಟೆ ಉಬ್ಬರವು ಸಣ್ಣ ಕರುಳಿನಲ್ಲಿ ಅತಿಯಾಗಿ ವಾಯು ತುಂಬಿ ಕೊಂಡಾಗ ಉಂಟಾಗುವ ಪರಿಸ್ಥಿತಿಯಾಗಿದೆ.

ಗ್ಯಾಸ್ ಉಂಟುಮಾಡುವಂತಹ ತರಕಾರಿಗಳು

ಅತಿಯಾಗಿ ಖಾರ ಹಾಗೂ ಎಣ್ಣೆಯುಕ್ತ ಪದಾರ್ಥ ಸೇವನೆ, ಅಜೀರ್ಣ, ವೈರಲ್ ಅಥವಾ ಬ್ಯಾಕ್ಟೀರಿಯಾ ಸೋಂಕು, ಅತಿಯಾಗಿ ಆಲ್ಕೋಹಾಲ್ ಸೇವನೆ, ಸರಿಯಾಗಿ ಆಹಾರ ಜಗಿಯದೆ ಇರುವುದು, ಮಲಬದ್ಧತೆ ಮತ್ತು ನೀರು ನಿಲ್ಲುವುದರಿಂದ ಹೊಟ್ಟೆ ಉಬ್ಬರವು ಕಾಣಿಸುವುದು. ಆದರೆ ಇಂತಹ ಸಮಸ್ಯೆಗಳಿಗೆ ಮಾತ್ರೆ, ಸಿರಪ್ ಗಳನ್ನು ಕುಡಿಯುವ ಬದಲು ಕೆಲವೊಂದು ಮನೆಮದ್ದು ಬಳಸುವುದು ಒಳ್ಳೆಯದು. ಆ್ಯಂಟಿಸ್ಪಾಸ್ಮೋಡಿಕ್, ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ, ಸೂಕ್ಷ್ಮಜೀವಿ ವಿರೋಧಿ ಗುಣಗಳು ಇವೆ.

ಹೊಟ್ಟೆ ಉಬ್ಬರಕ್ಕೆ ತಕ್ಷಣದ ಪರಿಹಾರ

ಜೀರಿಗೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ಸೆಲೇನಿಯಂ, ಪೊಟಾಶಿಯಂನಂತಹ ಖನಿಜಾಂಶಗಳು, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ, ಈಸ್ಟ್ರೋಜನ್, ಇತ್ಯಾದಿಗಳಿವೆ. ಜೀರಿಗೆಯಿಂದ ಹೊಟ್ಟೆಯುಬ್ಬರವನ್ನು ತಡೆಯುವುದು ಹೇಗೆ ಎಂದು ಈ ಲೇಖನ ಓದುತ್ತಾ ನಿಮಗೆ ತಿಳಿಯಲಿದೆ.....

ಜೀರಿಗೆ ಚಹಾ

ಜೀರಿಗೆ ಚಹಾ

ಹೊಟ್ಟೆ ಉಬ್ಬರ ತಡೆಯಬೇಕಾದರೆ ಜೀರಿಗೆ ಚಹಾ ಅತ್ಯುತ್ತಮ ಮನೆಮದ್ದಾಗಿದೆ. ಜೀರಿಗೆ ಚಹಾ ಮಾಡಬೇಕಾದರೆ ಒಂದು ಕಪ್ ನೀರಿಗೆ ಎರಡು ಚಮಚ ಹುಡಿ ಮಾಡಿದ ಜೀರಿಗೆ ಹಾಕಿ, ನಂತರ ಅರ್ಥ ಚಮಚ ಟೀ ಪೌಡರ್ ಹುಡಿ, ಸಣ್ಣ ತುಂಡು ಬೆಲ್ಲ ಮತ್ತು ¼ ಕಪ್ ಹಾಲು ಹಾಕಿ. ಇದನ್ನು ಸರಿಯಾಗಿ ಕುದಿಸಿದ ಬಳಿಕ ಬಿಸಿಯಾಗಿರುವಾಗಲೇ ಕುಡಿದರೆ ಹೊಟ್ಟೆ ಉಬ್ಬರ ಮತ್ತು ಅಜೀರ್ಣವು ಕಡಿಮೆಯಾಗುವುದು.

ಏಲಕ್ಕಿ ಮತ್ತು ಶುಂಠಿ ಜತೆ ಜೀರಿಗೆ

ಏಲಕ್ಕಿ ಮತ್ತು ಶುಂಠಿ ಜತೆ ಜೀರಿಗೆ

ಒಂದು ಚಮಚ ಜೀರಿಗೆ ಮತ್ತು ಒಂದು ಸಣ್ಣ ತುಂಡು ಶುಂಠಿ ತೆಗೆದುಕೊಳ್ಳಿ. ಒಂದು ಕಪ್ ನೀರಿಗೆ ಇದನ್ನು ಹಾಕಿ ಕುದಿಸಿ. ಊಟದ ಬಳಿಕ ದಿನದಲ್ಲಿ 2-3 ಸಲ ಇದರ ಸೇವನೆ ಮಾಡಿದರೆ ಒಳ್ಳೆಯ ಪರಿಹಾರ ಸಿಗುವುದು. ಕರುಳಿನಲ್ಲಿ ನಿಂತಿರುವ ವಾಯು ಹೊರಗೆ ಹೋಗುವಂತೆ ಮಾಡುವ ಶುಂಠಿಯು ಹೊಟ್ಟೆಯುಬ್ಬರದ ಒತ್ತಡ ಕಡಿಮೆ ಮಾಡುವುದು.

ಜೀರಿಗೆ ಜಗಿಯುವುದು

ಜೀರಿಗೆ ಜಗಿಯುವುದು

ಹೊಟ್ಟೆ ಉಬ್ಬರ ತಡೆಯಲು ತಾಜಾ ಜೀರಿಗೆ ಜಗಿದರೆ ಒಳ್ಳೆಯದು. ಊಟದ ಬಳಿಕ ಜೀರಿಗೆ ಜಗಿದರೆ ವಾಯುವಿನಿಂದ ಪರಿಹಾರ ಸಿಗುವುದು. ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ 3-4 ಸಲ ಸ್ವಲ್ಪ ಜೀರಿಗೆ ಜಗಿಯಿರಿ. ಕರುಳಿನಲ್ಲಿ ತುಂಬಿಕೊಂಡಿರುವ ವಾಯುವನ್ನು ಇದು ಹೊರಗೆ ಹಾಕುವುದು.

ಪುದೀನಾ ಎಲೆಗಳ ಜತೆ ಜೀರಿಗೆ

ಪುದೀನಾ ಎಲೆಗಳ ಜತೆ ಜೀರಿಗೆ

ಒಂದು ಚಮಚ ಜೀರಿಗೆ, 1-2 ಪುದೀನಾ ಎಲೆಗಳು, ¼ ಏಲಕ್ಕಿ ಹುಡಿಯನ್ನು ಒಂದು ಕಪ್ ನೀರಿಗೆ ಹಾಕಿಕೊಂಡು ಐದು ನಿಮಿಷ ಕಾಲ ಬಿಸಿ ಮಾಡಿ ಸೋಸಿಕೊಂಡು ಕುಡಿಯಿರಿ. ಪುದೀನಾದಲ್ಲಿ ಆ್ಯಂಟಿಸ್ಪಾಸ್ಮೋಡಿಕ್ ಗುಣಗಳು ಇವೆ. ಇದು ಜೀರ್ಣಕ್ರಿಯೆಯ ವ್ಯವಸ್ಥೆ ಸರಿಪಡಿಸುವುದು. ಅಜೀರ್ಣ ಮತ್ತು ವಾಯುವಿನಿಂದ ಸಮಸ್ಯೆಯಾದಾಗ ಇದನ್ನು ಸೇವಿಸಿ. ಇದು ಹೊಟ್ಟೆಯ ಉಬ್ಬರಕ್ಕೆ ಒಳ್ಳೆಯ ಚಹಾ.

ಕರಿಮೆಣಸು ಮತ್ತು ಕಪ್ಪು ಉಪ್ಪಿನೊಂದಿಗೆ ಜೀರಿಗೆ

ಕರಿಮೆಣಸು ಮತ್ತು ಕಪ್ಪು ಉಪ್ಪಿನೊಂದಿಗೆ ಜೀರಿಗೆ

50 ಗ್ರಾಂ ಜೀರಿಗೆ, 25 ಗ್ರಾಂ ಕರಿಮೆಣಸು ಮತ್ತು 50 ಗ್ರಾಂ ಕಪ್ಪು ಉಪ್ಪನ್ನು ತೆಗೆದುಕೊಳ್ಳಿ. ಇದನ್ನು ಜತೆಯಾಗಿ ಸೇರಿಸಿ ರುಬ್ಬಿಕೊಂಡು ಪೌಡರ್ ಮಾಡಿ. ಈ ಮಿಶ್ರಣದ ಅರ್ಧ ಚಮಚವನ್ನು ಉಗುರುಬೆಚ್ಚಗಿನ ನೀರಿಗೆ ಹಾಕಿ 4-5 ಗಂಟೆಗೊಮ್ಮೆ ಸೇವಿಸಿ.

ಕೊತ್ತಂಬರಿ ಜತೆ ಜೀರಿಗೆ

ಕೊತ್ತಂಬರಿ ಜತೆ ಜೀರಿಗೆ

ಹೊಟ್ಟೆ ಉಬ್ಬರಕ್ಕೆ ಇದು ಅತ್ಯುತ್ತಮ ಮನೆಮದ್ದಾಗಿದೆ. ಒಂದು ಚಮಚ ಜೀರಿಗೆ ಮತ್ತು ಒಂದು ಚಮಚ ಕೊತ್ತಂಬರಿ ತೆಗೆದುಕೊಳ್ಳಿ. ಇದನ್ನು ರುಬ್ಬಿಕೊಂಡು ಪೌಡರ್ ಮಾಡಿಕೊಳ್ಳಿ. ಊಟಕ್ಕೆ ಮೊದಲು ಈ ಹುಡಿಯನ್ನು ಸೇವಿಸಿದರೆ ಹೊಟ್ಟೆಯ ವಾಯು ಮತ್ತು ಹೊಟ್ಟೆ ಉಬ್ಬರ ಕಡಿಮೆಯಾಗುವುದು.

ಜೀರಿಗೆ ಜತೆ ಕಿತ್ತಳೆ ಸಿಪ್ಪೆ

ಜೀರಿಗೆ ಜತೆ ಕಿತ್ತಳೆ ಸಿಪ್ಪೆ

ಒಂದು ಚಮಚ ಜೀರಿಗೆ ಮತ್ತು ಸ್ವಲ್ಪ ಕಿತ್ತಳೆ ಸಿಪ್ಪೆಯನ್ನು ತುರಿದು ನೀರಿಗೆ ಹಾಕಿ. ಸರಿಯಾಗಿ ಕುದಿಸಿ ಸೋಸಿಕೊಂಡ ಬಳಿಕ ಅದಕ್ಕೆ ½ ಚಮಚ ಜೇನುತುಪ್ಪ ಸೇರಿಸಿ. ಅಜೀರ್ಣ ಮತ್ತು ಹೊಟ್ಟೆ ಉಬ್ಬರ ತಡೆಯಲು ಊಟಕ್ಕೆ ಮೊದಲು ಇದನ್ನು ಸೇವಿಸಿ. ಪ್ರಿಡ್ಜ್‌ನಲ್ಲಿ ಇದನ್ನು ಇಟ್ಟು ಬೇಕಾದಾಗ ಸೇವಿಸಿ.

English summary

Best Ways & Recipes To Use -jeera To Reduce Stomach Bloating

Before purchasing any medicine for gas and bloating relief, from medical shops, try these simple fennel recipes for bloated stomach relief, which will answer your query on what to take for bloating and gas relief....
Subscribe Newsletter