For Quick Alerts
ALLOW NOTIFICATIONS  
For Daily Alerts

ಈ 10 ಒಣಫಲಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು, ತಪ್ಪದೇ ಸೇವಿಸಿ

By Arshad
|

ಒಣಫಲಗಳಲ್ಲಿರುವ ಪೋಷಕಾಂಶಗಳು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುವ ಕಾರಣ ಇವುಗಳಲ್ಲಿ ಕೆಲವನ್ನಾದರೂ ನಿತ್ಯವೂ ಸೇವಿಸುವುದು ಅಗತ್ಯ. ಇವುಗಳಲ್ಲಿ ಆರೋಗ್ಯಕರ ಕೊಬ್ಬು, ಕರಗುವ ನಾರು, ಪ್ರೋಟೀನ್, ಹಲವಾರು ವಿಟಮಿನ್ನುಗಳು, ಹಾಗೂ ವಿಶೇಷವಾಗಿ ಮೆಗ್ನೇಶಿಯಂ ಹಾಗೂ ವಿಟಮಿನ್ ಇ ಇದೆ.

ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ನಿತ್ಯವೂ ಸುಮಾರು ಇಪ್ಪತ್ತು ಗ್ರಾಂ ನಷ್ಟು ಒಣಫಲಗಳನ್ನು ಸೇವಿಸುವ ಅಭ್ಯಾಸವುಳ್ಳವರಲ್ಲಿ ಹೃದಯದ ಕಾಯಿಲೆಗಳು ಆವರಿಸುವ ಸಂಭವ ಸುಮಾರು ಮೂವತ್ತು ಶೇಖಡಾದಷ್ಟು ಕಡಿಮೆಯಾಗಿರುತ್ತದೆ. ಅಲ್ಲದೇ ಅಕಾಲಿಕ ಸಾವಿನ ಸಾಧ್ಯತೆಯನ್ನು ಇಪ್ಪತ್ತೆರಡು ಶೇಖಡಾ ಹಾಗೂ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹದಿನೈದು ಶೇಖಡಾ ಕಡಿಮೆಯಾಗುತ್ತದೆ.

ಒಣಫಲಗಳ ಸೇವನೆಯಿಂದ ಸ್ಥೂಲಕಾಯ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರಲ್ಲಿ ಪೋಷಕಾಂಶಗಳು ಹೆಚ್ಚಿನ ಸಾಂದ್ರತೆಯಲ್ಲಿರುವ ಕಾರಣ ಸೊಂಟದ ಕೊಬ್ಬನ್ನು ಹೆಚ್ಚಿಸದೇ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ಇದರ ಸೇವನೆಯಿಂದ metabolic syndrome ಅಥವಾ ಸ್ಥೂಲಕಾಯ, ಹೃದಯದೊತ್ತಡ, ಕೊಬ್ಬು, ಅಸಾಧ್ಯ ಪ್ರಮಾಣದ ಕೊಲೆಸ್ಟ್ರಾಲ್ ಮೊದಲಾದ ತೊಂದರೆಗಳು ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.


ಆರೋಗ್ಯದ ಕಣಜ 'ಒಣ ಬೀಜ'ದ ಮೂಲ ಅರಿಯಿರಿ

ಅಲ್ಲದೇ ಕ್ಯಾನ್ಸರ್ ಸಹಿತ ಇತರ ಪ್ರಾಣಾಂತಿಕ ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ. ಇದುವರೆಗೆ ಒಣಫಲಗಳನ್ನು ಸೇವಿಸುತ್ತಾ ಬಂದಿಲ್ಲದಿದ್ದರೆ ಇಂದಿನಿಂದಲೇ ಸೇವಿಸಲು ಪ್ರಾರಂಭಿಸಿ. ಇದರ ಆಯ್ಕೆಯನ್ನು ಸುಲಭಗೊಳಿಸಲು ಅತ್ಯುತ್ತಮವಾದ ಹತ್ತು ಒಣಫಲಗಳ ಬಗ್ಗೆ ಇಂದು ವಿವರಗಳನ್ನು ನೀಡಲಾಗಿದೆ....

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಅವಶ್ಯಕ ಪೋಷಕಾಂಶಗಳಿವೆ. ಪ್ರಮುಖವಾಗಿ ವಿಟಮಿನ್ ಇ, ಮೆಗ್ನೀಶಿಯಂ, ಕರಗುವ ನಾರು, ಕಾರ್ಬೋಹೈಡ್ರೇಟುಗಳು, ಪ್ರೋಟೀನು ಹಾಗೂ ಮ್ಯಾಂಗನೀಸ್ ಇವೆ. ಇದರಲ್ಲಿರುವ ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL ಗಳ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಇನ್ನೊಂದು ಪೋಷಕಾಂಶವಾದ ಡೋಪಮೈನ್ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಚಿಂತನಾ ಹಾಗೂ ಯೋಚನಾಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ನಿತ್ಯವೂ ಬಾದಾಮಿ ತಿನ್ನುವುದು ಉತ್ತಮವಾಗಿದೆ.

ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಪಿಸ್ತಾ

ಪಿಸ್ತಾ

ಪಿಸ್ತಾಗಳಲ್ಲಿಯೂ ಉತ್ತಮ ಪ್ರಮಾಣದ ಪೊಟ್ಯಾಶಿಯಂ, ವಿಟಮಿನ್ ಬಿ೬, ತಾಮ್ರ ಹಾಗೂ ಮ್ಯಾಂಗನೀಸ್ ಇವೆ. ಇವುಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ನಿತ್ಯದ ಸೇವನೆಯಿಂದ ಸ್ಥೂಲಕಾಯವೂ ಕಡಿಮೆಯಾಗುತ್ತದೆ. ಜೊತೆಗೇ ಉರಿಯೂತ ಹಾಗೂ ಗ್ಲೈಸೆಮಿಕ್ ಸೂಚ್ಯಂಕವನ್ನು ಆರೋಗ್ಯಕರ ಮಟ್ಟದಲ್ಲಿರಿಸುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲದ ಕಾರಣ ತೂಕ ಇಳಿಸುವವರಿಗೆ ಉತ್ತಮ ಆಯ್ಕೆಯಾಗಿದೆ.

ಅಕ್ರೋಟು

ಅಕ್ರೋಟು

ಈ ಒಣಫಲದ ಕವಚವನ್ನು ಒಡೆದಾಗ ಒಳಗಿನ ಫಲ ನೋಡಲಿಕ್ಕೆ ನಮ್ಮ ಮೆದುಳನ್ನೇ ಹೋಲುತ್ತದೆ. ನಿಸರ್ಗ ನೀಡಿರುವ ಫಲಗಳು ನಮ್ಮ ದೇಹದ ಯಾವ ಅಂಗವನ್ನು ಹೋಲುತ್ತವೆಯೋ ಆ ಅಂಗಕ್ಕೇ ಹೆಚ್ಚಿನ ಪ್ರಯೋಜನ ನೀಡುವುದೊಂದು ಸೋಜಿಗ. ಅಕ್ರೋಟಿನಲ್ಲಿರುವ ಪೋಷಕಾಂಶಗಳು, ವಿಶೇಷವಾಗಿ ಒಮೆಗಾ 3 ಕೊಬ್ಬಿನ ಆಮ್ಲಗಳು ಮೆದುಳಿಗೆ ಉತ್ತಮವಾಗಿದೆ. ಅಲ್ಲದೇ ಆಂಟಿ ಆಕ್ಸಿಡೆಂಟುಗಳು ಸಹಾ ಹೆಚ್ಚಿನ ಪ್ರಮಾಣದಲ್ಲಿದ್ದು ಕೆಲವಾರು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಹಾಗೂ ವಿಶೇಷವಾಗಿ ಹೃದಯದ ಕಾಯಿಲೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.

ಗೋಡಂಬಿ

ಗೋಡಂಬಿ

ಇವುಗಳು ರುಚಿಯಾಗಿರುವ ಕಾರಣ ನಮ್ಮ ಹಲವಾರು ವಿಶೇಷ ಅಡುಗೆಗಳಲ್ಲಿ ಸ್ಥಾನ ಪಡೆಯುತ್ತವೆ. ಅಲ್ಲದೇ ಇವುಗಳ ನಿಯಮಿತ ಸೇವನೆಯಿಂದ ಸ್ಥೂಲಕಾಯ, ಹೃದಯದ ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಅನಾಕಾರ್ಡಿಕ್ ಆಮ್ಲ ದೇಹ ಇನ್ಸುಲಿನ್ ತಾಳಿಕೊಳ್ಳುವ ಸಂವೇದನೆಯನ್ನು ಹೆಚ್ಚಿಸುತ್ತದೆ ಹಾಗೂ ತನ್ಮೂಲಕ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಗೋಡಂಬಿಯಲ್ಲಿ ಸತು, ಸೆಲೆನಿಯಂ ಹಾಗೂ ತಾಮ್ರ ಮೊದಲಾದ ಖನಿಜಗಳೂ ಇರುವ ಮೂಲಕ ಆರೋಗ್ಯವನ್ನು ಹೆಚ್ಚಿಸುತ್ತವೆ.

ಪೆಕಾನ್

ಪೆಕಾನ್

ನೋಡಲು ಅಕ್ರೋಟನ್ನೇ ಹೋಲುವ ಪೆಕಾನ್‌ಗಳಲ್ಲಿಯೂ ಉತ್ತಮ ಪ್ರಮಾಣದ ಪಾಲಿಫೆನಾಲುಗಳಿದ್ದು ಇವು ಆಂಟಿ ಆಕ್ಸಿಡೆಂಟು ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ವಿಟಮಿನ್ ಇ ಉತ್ತಮ ಪ್ರಮಾಣದಲ್ಲಿದ್ದು ತ್ವಚೆಗೆ ಹಾನಿ ಎಸಗುವ ಕೆಟ್ಟ ಆಕ್ಸಿಡೆಂಟುಗಳ ಪ್ರಭಾವದಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿ ವಿವಿಧ ಖನಿಜಗಳು ಹಾಗೂ ಪೋಲಿಕ್ ಆಮ್ಲ, ಮ್ಯಾಂಗನೀಸ್, ಗಂಧಕ ಹಾಗೂ ಸತು ಸಹಾ ಉತ್ತಮ ಪ್ರಮಾಣದಲ್ಲಿವೆ.

ಮ್ಯಾಕಾಡಾಮಿಯಾ

ಮ್ಯಾಕಾಡಾಮಿಯಾ

ನಮ್ಮ ಶೇಂಗಾಬೀಜಗಳಂತೆಯೇ ಇರುವ ಈ ಒಣಫಲಗಳಲ್ಲಿ ಅಪರ್ಯಾಪ್ತ ಕೊಬ್ಬುಗಳಿರುವ ಮೂಲಕ ಹೃದಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಅಲ್ಲದೇ ಇದರಲ್ಲಿರುವ ಪಾಮಿಟೋಲಿಕ್ ಆಮ್ಲ (palmitoleic acid) ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ತನ್ಮೂಲಕ ದೇಹದಲ್ಲಿ ಕೊಬ್ಬಿನ ಸಂಗ್ರಹವಾಗದಂತೆ ತಡೆಯುತ್ತದೆ. ಈ ಒಣಫಗಳಲ್ಲಿ ಹಲವಾರು ಪೋಷಕಾಂಶಗಳು ಹಾಗೂ ಕರಗುವ ನಾರು ಸಹಾ ಇದೆ. ಖನಿಜಗಳಾದ ಸೆಲೆನಿಯಂ, ಮೆಗ್ನೇಶಿಯಂ, ತಾಮ್ರ ಹಾಗೂ ಕಬ್ಬಿಣಗಳೂ ಇವೆ.

ಬ್ರೆಜಿಲ್ ನಟ್ಸ್

ಬ್ರೆಜಿಲ್ ನಟ್ಸ್

ಇವುಗಳ ಕ್ಯಾನ್ಸರ್ ನಿರೋಧಕ ಗುಣಗಳಿಂದಾಗಿ ಇದಕ್ಕೆ ಆಂಟಿ-ಕ್ಯಾನ್ಸರ್ ಸುಪರ್ ಫುಡ್ ಎಂಬ ಅನ್ವರ್ಥನಾಮವೂ ಇದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಸೆಲೆನಿಯಂ ಇದೆ. ತನ್ಮೂಲಕ ಈ ಒಣಫಲದ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ನರವ್ಯವಸ್ಥೆ ಹಾಗೂ ಸ್ನಾಯುಗಳೂ ಉತ್ತಮಗೊಳ್ಳುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಹಾಗೂ ಆರೋಗ್ಯಕರ ಕೊಬ್ಬು ಇದ್ದು ದೇಹದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ ಹಾಗೂ ಉರಿಯೂತವನ್ನು ನಿಯಂತ್ರಿಸುತ್ತದೆ ಹಾಗೂ ಥೈರಾಯ್ಡ್ ಗ್ರಂಥಿಯ ಕ್ಷಮತೆಯನ್ನೂ ಹೆಚ್ಚಿಸುತ್ತದೆ.

ಹೇಜೆಲ್ ನಟ್ಸ್

ಹೇಜೆಲ್ ನಟ್ಸ್

ಈ ಒಣಫಲಗಳು ಕೇವಲ ಪೌಷ್ಟಿಕ ಮಾತ್ರವಲ್ಲ ಇವುಗಳ ಸೇವನೆಯಿಂದ ಹೃದಯದ ಕಾಯಿಲೆಗಳು ಆವರಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಇವುಗಳಲ್ಲಿ ವಿಟಮಿನ್ ಇ, ಮ್ಯಾಂಗನೀಸ್, ಥಿಯಾಮಿನ್, ಫೋಲೇಟ್ ಹಾಗೂ ಕೊಬ್ಬಿನ ಆಮ್ಲಗಳ ಸಹಿತ ಹಲವು ಅವಶ್ಯಕ ಪೋಷಕಾಂಶಗಳಿದ್ದು ವಿಶೇಷವಾಗಿ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಯೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಶೇಂಗಾಬೀಜ

ಶೇಂಗಾಬೀಜ

ಈ ಬೀಜಗಳನ್ನು ಬಡವರ ಬಾದಾಮಿ ಎಂದೂ ಕರೆಯುತ್ತಾರೆ. ಇವು ಅಗ್ಗವೂ ಆಗಿದ್ದು ಬಾದಾಮಿಯಂತೆಯೇ ಹಲವಾರು ಪೋಷಕಾಂಶಗಳಿದ್ದು ತ್ವಚೆಯ ಆರೈಕೆಯಲ್ಲಿ ಅದ್ಭುತವಾದ ಪರಿಣಾಮವನ್ನು ನೀಡುತ್ತವೆ. ಇದರ ಹಲವಾರು ಆರೋಗ್ಯಕರ ಪ್ರಯೋಜನಗಳ ಕಾರಣ ಇವುಗಳನ್ನು ಹೆಚ್ಚಿನ ಜನರ ನೆಚ್ಚಿನ ಒಣಫಲವಾಗಿದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಮ್ಯಾಂಗನೀಸ್ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಹಾಗೂ ಸ್ಮರಣಶಕ್ತಿಯನ್ನೂ ಹೆಚ್ಚಿಸುತ್ತದೆ.

ಚೆಸ್ಟ್ ನಟ್ಸ್

ಚೆಸ್ಟ್ ನಟ್ಸ್

ಈ ಫಲಗಳಲ್ಲಿ ಕ್ವೆರ್ಸಟಿನ್‌ನಂತಹ ಪ್ಲೇವನಾಯ್ಡುಗಳು ಉತ್ತಮ ಪ್ರಮಾಣದಲ್ಲಿವೆ ಹಾಗೂ ಕೊಬ್ಬು ಅತಿ ಕಡಿಮೆ ಇರುವ ಕಾರಣ ಕ್ಯಾನ್ಸರ್ ಹಾಗೂ ಮಧುಮೇಹ ಆವರಿಸುವುದರಿಂದ ರಕ್ಷಿಸುತ್ತದೆ. ಇದರ ಸಿಹಿಯಾದ ರುಚಿ ಇವುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಲು ಪ್ರೇರಣೆ ನೀಡುತ್ತದೆ ಹಾಗೂ ಘಾಸಿಗೊಂಡಿರುವ ರಕ್ತನಾಳಗಳು ಮತ್ತು ನರಗಳನ್ನು ಸರಿಪಡಿಸುತ್ತದೆ. ಅಲ್ಲದೇ ಇದರಲ್ಲಿರುವ ಖನಿಜಗಳು ಹಲ್ಲುಗಳನ್ನು ಬಲಪಡಿಸುತ್ತದೆ ಹಾಗೂ ಶ್ವಾಸಸಂಬಂಧಿ ತೊಂದರೆಗಳನ್ನು ದೂರಗೊಳಿಸುತ್ತದೆ.

English summary

Best Nuts To Eat For Better Health

Nuts also have the power to reduce the risk of obesity over time and since they are also energy dense, you can reap the benefits without sacrificing your waistline. Nuts have the ability to reduce the risk of metabolic syndrome, such as high blood pressure and cholesterol levels. It also reduces the risk of other chronic diseases and can also reduce the risk of certain cancers. If you want to add nuts to your diet, read on to know more about the best nuts to eat for better health.
X
Desktop Bottom Promotion