For Quick Alerts
ALLOW NOTIFICATIONS  
For Daily Alerts

  ವಯಾಗ್ರದಂತೆ ಕೆಲಸ ಮಾಡುವ ಆಹಾರಗಳು-ಯಾವುದೇ ಅಡ್ಡಪರಿಣಾಮಗಳಿಲ್ಲ!

  By Deepu
  |

  ವಯಾಗ್ರ ಎಂಬ ಹೆಸರು ಯಾರು ಕೇಳಿಲ್ಲ. ತಮ್ಮ ಲೈಂಗಿಕ ಬಯಕೆಯನ್ನು ಉತ್ಕಂತಭರಿತವನ್ನಾಗಿ ಮಾಡುವ ಮತ್ತು ಲೈಂಗಿಕ ಆರೋಗ್ಯವನ್ನು ಸಾಧ್ಯವಾದಷ್ಟು ಹೆಚ್ಚಿಸುವ ಇದರ ಕುರಿತಾಗಿ ಬಹುತೇಕರು ಕೇಳಿಯೇ ಇರುತ್ತಾರೆ. ಈ ಔಷಧಿಯು ಗಂಡಸರಲ್ಲಿ ನಪುಂಸಕತೆಯನ್ನು ಮತ್ತು ಶಿಶ್ನ ನಿಮಿರುವಿಕೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗೆ ಈ ಔಷಧಿಯು ಗಂಡಸರಲ್ಲಿ ಸಾಮಾನ್ಯವಾಗಿ ಕಂಡು ಬರುವ ಶಿಶ್ನ ನಿಮಿರುವಿಕೆಯಲ್ಲಿನ ತೊಂದರೆಗಳನ್ನು ಹಾರ್ಮೋನ್‍ಗಳನ್ನು ಉದ್ಧೀಪಿಸುವ ಮೂಲಕ ನಿವಾರಿಸುತ್ತದೆ.

  ಇನ್ನು ವಯಾಗ್ರ ಮಾತ್ರೆಯ ಕುರಿತು ಇತಿಹಾಸ ಹೇಳುವುದಾದರೆ 1998ರಲ್ಲಿ ಬಿಡುಗಡೆಯಾದ ವಯಾಗ್ರಾ ಮಾತ್ರೆ ಇಡಿಯ ವಿಶ್ವದಲ್ಲಿ ಸಂಚಲನೆ ಉಂಟುಮಾಡಿತ್ತು. ಪುರುಷರಲ್ಲಿ ಪೌರುಷವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿರುವ ಮಾತ್ರೆ ಎಂದು ಪ್ರಚಾರ ಮಾಡಿದ್ದೇ ತಡ, ವಿಶ್ವದ ಇತಿಹಾಸದಲ್ಲಿಯೇ ಹಿಂದೆಂದೂ ಮಾರಾಟವಾಗದಷ್ಟು ಪ್ರಮಾಣದಲ್ಲಿ ಜನರು ಮುಗಿಬಿದ್ದು ಖರೀದಿಸಿದ್ದು ಒಂದು ವಿಶ್ವದಾಖಲೆಯಾಗಿತ್ತು.

  sildenafil citrate ಎಂಬ ರಾಸಾಯನಿಕವನ್ನು ಪ್ರಮುಖವಾಗಿ ಹೊಂದಿರುವ ಈ ಮಾತ್ರೆ ಲಕ್ಷಗಟ್ಟಲೇ ಜನರ ಆತ್ಮವಿಶ್ವಾಸವನ್ನಂತೂ ಹೆಚ್ಚಿಸಿತ್ತು. ಇಂದಿಗೂ ನಿಮಿರುದೌರ್ಬಲ್ಯವನ್ನು ಹೊಂದಿರುವ ಪುರುಷರು ಅತಿ ಹೆಚ್ಚಾಗಿ ಬಳಸುತ್ತಿರುವ ಮಾತ್ರೆಯಾಗಿದೆ. ಆದರೆ ಒಂದು ಮಾತು ನೆನಪಿರಲಿ, ವಯಾಗ್ರದ ಹೊರತಾಗಿ ಹಲವಾರು ಪರಿಣಾಮಕಾರಿಯಾದ ಆಹಾರ ಪದಾರ್ಥಗಳು ನಿಮ್ಮ ಲೈಂಗಿಕ ಆರೋಗ್ಯವನ್ನು ಮತ್ತು ತುಡಿತವನ್ನು ಉದ್ಧೀಪನಗೊಳಿಸುತ್ತವೆ. ಇವುಗಳು ಯಾವುದೇ ಅಡ್ಡ ಪರಿಣಾಮವಿಲ್ಲದೆ ನಿಮ್ಮ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತವೆ.

  ಮಿಲನಕ್ಕೂ ಮುನ್ನ, ಅಪ್ಪಿತಪ್ಪಿಯೂ ಇಂತಹ ಆಹಾರಗಳನ್ನು ಸೇವಿಸಬೇಡಿ

  ಇಲ್ಲಿ ಪಟ್ಟಿಮಾಡಲಾದ ಆಹಾರ ಪದಾರ್ಥಗಳು ನಿಮ್ಮ ಜನನಾಂಗಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ. ಜೊತೆಗೆ ಇವುಗಳು ನಿಮ್ಮ ರಕ್ತದೊತ್ತಡವನ್ನು ಅಧಿಕಗೊಳಿಸುತ್ತವೆ ಮತ್ತು ಅದರ ಜೊತೆಗೆ ನಿಮ್ಮ ಜನನಾಂಗವನ್ನು ಸಹ ಶಕ್ತಿಯುತವಾಗಿ ನಿಮಿರುವಂತೆ ಮಾಡುತ್ತವೆ. ಹಾಗಾಗಿ ಇಲ್ಲಿ ವರ್ಗೀಕರಿಸಲಾಗಿರುವ ಆಹಾರಗಳು ವಯಾಗ್ರದಂತೆಯೇ ವರ್ತಿಸುತ್ತವೆ. ಬನ್ನಿ ಹಾಗಾದರೆ ವಯಾಗ್ರದಂತೆ ವರ್ತಿಸುವ ಈ ಆಹಾರ ಪದಾರ್ಥಗಳನ್ನು ಒಮ್ಮೆ ನೋಡಿಕೊಂಡು ಬರೋಣ...

  ಕಲ್ಲಂಗಡಿ ಹಣ್ಣುಗಳು

  ಕಲ್ಲಂಗಡಿ ಹಣ್ಣುಗಳು

  ಕಲ್ಲಂಗಡಿ ಹಣ್ಣುಗಳು ವಯಾಗ್ರದಂತೆಯೇ ವರ್ತಿಸುತ್ತವೆಯಂತೆ. ಕಲ್ಲಂಗಡಿ ಹಣ್ಣುಗಳ ಒಂದು ತುಂಡು, ಅದರ ತ್ವಚೆಯ ಸ್ವಲ್ಪ ಒಳಗೆ ಇರುವ ಹಸಿರು ಭಾಗವು ಅತ್ಯಧಿಕವಾದ ಸಿಟ್ರುಲಿನ್ ಎಂಬ ಅಂಶವನ್ನು ಒಳಗೊಂಡಿದೆ. ಸಿಟ್ರುಲಿನ್ ರಾಸಾಯನಿಕವು ನಮ್ಮ ದೇಹದಲ್ಲಿ ಅರ್ಜಿನೈನ್ ಮತ್ತು ನೈಟ್ರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ನೈಟ್ರಿಕ್ ಆಮ್ಲವು ಗಂಡಸರಲ್ಲಿ ಲೈಂಗಿಕತೆಯ ಕುರಿತಾಗಿ ತುಡಿತ ಬರಲು ಮತ್ತು ಸದೃಢವಾದ ಜನನಾಂಗದ ನಿಮಿರುವಿಕೆಗೆ ಸಹಾಯ ಮಾಡುತ್ತದೆ.

  ದಾಳಿಂಬೆ

  ದಾಳಿಂಬೆ

  ದಾಳಿಂಬೆಯಲ್ಲಿ ಹಲವಾರು ಆರೋಗ್ಯಕರವಾದ ಪ್ರಯೋಜನಗಳು ಲಭ್ಯವಿರುತ್ತವೆ. ಇದು ಸಹ ಸ್ವಾಭಾವಿಕವಾದ ವಯಾಗ್ರದಂತೆ ಕಾರ್ಯನಿರ್ವಹಿಸುತ್ತವೆ. ದಾಳಿಂಬೆಗಳು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಜನನಾಂಗದತ್ತ ರಕ್ತ ಪರಿಚಲನೆಯನ್ನು ಅಧಿಕಗೊಳಿಸುತ್ತದೆ. ಇದು ಇಬ್ಬರ ಸಮಾಗಮದ ಉತ್ತುಂಗ ಕಾಲದಲ್ಲಿ ಭಾರಿ ನೆರವನ್ನು ನೀಡುವ ಹಣ್ಣಾಗಿದೆ.

  ರಾತ್ರಿ ಮಲಗುವ ಮುನ್ನ ಒಂದೊಂದು ಬಾಳೆ ಹಣ್ಣು ಸೇವಿಸಿ

  ರಾತ್ರಿ ಮಲಗುವ ಮುನ್ನ ಒಂದೊಂದು ಬಾಳೆ ಹಣ್ಣು ಸೇವಿಸಿ

  ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

  ದಿನಕ್ಕೆ ಎರಡು ಅಥವಾ ಮೂರು ಕಪ್ ಕಾಫಿ ಸೇವಿಸಿ

  ದಿನಕ್ಕೆ ಎರಡು ಅಥವಾ ಮೂರು ಕಪ್ ಕಾಫಿ ಸೇವಿಸಿ

  ಕಾಫಿ ಒಂದು ಅಧ್ಯಯನದ ಪ್ರಕಾರ ಯಾರು ಒಂದು ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸುತ್ತಾರೋ ಅವರಿಗೆ ನಿಮಿರುವಿಕೆಯ ದೋಷ ಬರುವ ಸಾಧ್ಯತೆಯು ಕಾಫಿ ಸೇವಿಸದೆ ಇರುವ ಪುರುಷರಿಗೆ ಹೋಲಿಸಿದರೆ ಕಡಿಮೆ ಇರುತ್ತದೆಯಂತೆ. ಕಾಫಿಯಲ್ಲಿರುವ ಉದ್ದೀಪನಕಾರಕಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆಯಂತೆ ಹಾಗು ಆ ಮೂಲಕ ಶಿಶ್ನವನ್ನು ಸದೃಢವಾಗಿ ಇರಿಸುತ್ತವೆಯಂತೆ.

  ಬಿಸಿ ಮಸಾಲೆ ಪದಾರ್ಥಗಳು

  ಬಿಸಿ ಮಸಾಲೆ ಪದಾರ್ಥಗಳು

  ಒಂದು ಅಧ್ಯಯನದ ಪ್ರಕಾರ ಬಿಸಿ ಸಾಸ್ ಮತ್ತು ಮಸಾಲೆ ಪದಾರ್ಥಗಳನ್ನು ಸೇವಿಸುವ ಪುರುಷರಲ್ಲಿ ಪುರುಷರ ಹಾರ್ಮೋನ್ ಆದ ಟೆಸ್ಟೋಸ್ಟಿರೋನ್ ಅಧಿಕವಾಗಿರುವುದು ಕಂಡು ಬರುತ್ತದೆಯಂತೆ. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ಅಂಶವು ಶಿಶ್ನದ ಗಾತ್ರವನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಯ ಸುತ್ತ ಇರುವ ಕೊಬ್ಬನ್ನು ಸಹ ಕರಗಿಸುತ್ತದೆಯಂತೆ.

  ಟೊಮೇಟೊ ಹಣ್ಣುಗಳು

  ಟೊಮೇಟೊ ಹಣ್ಣುಗಳು

  ಟೊಮೇಟೊಗಳನ್ನು ಸೇವಿಸುವ ಪುರುಷರಲ್ಲಿ ವೀರ್ಯದ ಗುಣಮಟ್ಟವು ಉತ್ತಮವಾಗಿರುತ್ತದೆ ಹಾಗು ಇವರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ತಿಳಿದು ಬಂದಿದೆ. ಇದಕ್ಕೆ ಟೊಮಾಟೊದಲ್ಲಿರುವ "ಲೈಕೊಪೀನ್" ಎಂಬ ಆಂಟಿಆಕ್ಸಿಡೆಂಟ್ ಕಾರಣ. ಇದು ಪುರುಷರ ಜನನಾಂಗದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಸಹ ನಿವಾರಿಸುತ್ತದೆ.

  ಮೊಟ್ಟೆಗಳು

  ಮೊಟ್ಟೆಗಳು

  ಮೊಟ್ಟೆಗಳು ಸಹ ಜನನಾಂಗದ ನಿಮಿರುವಿಕೆಗೆ ಸಹಾಯ ಮಾಡುವ ಒಂದು ಅದ್ಭುತವಾದ ಆಹಾರವಾಗಿದೆ. ವಿಟಮಿನ್ ಡಿ, ಬಿ5 ಮತ್ತು ಬಿ6 ಈ ಎಲ್ಲಾ ಅಂಶಗಳು ಲೈಂಗಿಕ ತುಡಿತವನ್ನು ಉದ್ಧೀಪನ ಮಾಡುವ ಮತ್ತು ದೇಹದಲ್ಲಿನ ರಕ್ತ ನಾಳಗಳಿಗೆ ವಿಶ್ರಾಂತಿಯನ್ನು ನೀಡುವ ಅಂಶಗಳಾಗಿವೆ. ಇವುಗಳು ನಿಮ್ಮ ಸಂಗಾತಿಯೊಂದಿಗೆ ನಿಮಗೆ ಒಂದು ಮಧುರವಾದ ರತಿಕ್ರೀಡೆಗೆ ಅನುವು ಮಾಡಿಕೊಡುತ್ತದೆ.

  ವಾಲ್‍ನಟ್‍ಗಳು

  ವಾಲ್‍ನಟ್‍ಗಳು

  ಒಣ ಹಣ್ಣುಗಳು ಯಾವಾಗಲು ಸದೃಢವಾದ ನಿಮಿರುವಿಕೆಗೆ ಸಹಾಯ ಮಾಡುವ ಆಹಾರ ಪದಾರ್ಥಗಳಾಗಿವೆ. ಇವುಗಳು ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಮತ್ತು ವಿಟಮಿನ್ ಬಿ 3ಗಳನ್ನು ಒಳಗೊಂಡಿರುತ್ತವೆ. ಇವುಗಳು ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತವೆ ಮತ್ತು ಗಂಡಸರ ಜನನಾಂಗಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ.

  ಶುಂಠಿ

  ಶುಂಠಿ

  ಈ ಮಸಾಲೆ ಪದಾರ್ಥವು ನಿಮ್ಮ ಲೈಂಗಿಕ ಜೀವನವನ್ನು ಗಣನೀಯವಾಗಿ ಸುಧಾರಿಸುತ್ತದೆ. ಅದರಲ್ಲಿಯೂ ಇದು ನಿಮಿರುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಶುಂಠಿಯು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ, ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿಮಿರುವಿಕೆಯ ದೋಷವನ್ನು ಸರಿಪಡಿಸುತ್ತದೆ. ಒಂದು ಟೀಸ್ಪೂನ್ ಶುಂಠಿಯನ್ನು ಪ್ರತಿದಿನ ಕೆಲವು ವಾರಗಳವರೆಗೆ ಸೇವಿಸಿ. ಇದರಿಂದ ಟೆಸ್ಟೋಸ್ಟಿರೋನ್ ಮಟ್ಟಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.

  ಪಾಲಕ್ ಸೊಪ್ಪು

  ಪಾಲಕ್ ಸೊಪ್ಪು

  ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್‌ನಲ್ಲಿ ಮೆಗ್ನಿಷಿಯಂ ಪ್ರಮಾಣ ಅಧಿಕವಾಗಿರುತ್ತದೆ ಮತ್ತು ಇದು ರಕ್ತ ನಾಳಗಳ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್ ಅನ್ನು ಪ್ರತಿದಿನ ಸೇವಿಸುವ ಮೂಲಕ ವಯಾಗ್ರ ನೀಡುವಂತಹ ಶಕ್ತಿಯನ್ನು ನಾವು ಸ್ವಾಭಾವಿಕವಾಗಿ ಪಡೆಯಬಹುದು. ಇದರಲ್ಲಿ ಉದ್ದೀಪನಗೊಳಿಸುವ ಅಂಶ ಹಾಗು ಲೈಂಗಿಕ ಕ್ರಿಯೆ ನಡೆಸುವಾಗ ಅಧಿಕ ಆನಂದವನ್ನು ಸಹ ನೀಡಲು ಸಹಾಯ ಮಾಡುತ್ತದೆ.

  ಬೆಳ್ಳುಳ್ಳಿ

  ಬೆಳ್ಳುಳ್ಳಿ

  ಬಹಳ ಹಿಂದಿನಿಂದಲೂ ಭಾರತದಲ್ಲಿ ನೈಸರ್ಗಿಕ ಕಾಮೋತ್ತೇಜಕವಾಗಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತಾ ಬರಲಾಗಿದೆ. ಇದೇ ಕಾರಣಕ್ಕೆ ಬೆಳ್ಳುಳ್ಳಿಗೆ 'ಗರ್ಮಿ ಸಾಮಾನು' ಎಂದೂ ಹಳ್ಳಿಗಳಲ್ಲಿ ಕರೆಯುತ್ತಾರೆ. ಇದು ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಸಮಾನವಾಗಿ ಕಾಮೋತ್ತೇಜಕತೆಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ಜನನಾಂಗಗಳಿಗೆ ರಕ್ತಪೂರೈಕೆಯನ್ನು ಹೆಚ್ಚಿಸಲು ನೆರವಾಗುತ್ತದೆ.

  ಕೇಸರಿ

  ಕೇಸರಿ

  ಹಾಲಿನಲ್ಲಿ ಮಿಶ್ರಣ ಮಾಡಿದ ಕೇಸರಿ ಸೇವಿಸುವ ಮೂಲಕ ಪುರುಷರಲ್ಲಿ ಕಾಮೋತ್ತೇಜನ ಸಾಕಷ್ಟು ಮಟ್ಟಿಗೆ ಹೆಚ್ಚುತ್ತದೆ. ರಾತ್ರಿ ಮಲಗುವ ಮುನ್ನ ಕುಡಿದರೆ ಕಾಮಾಸಕ್ತಿ ಹೆಚ್ಚಿಸುವ ರಸದೂತಗಳು ಹೆಚ್ಚು ಬಿಡುಗಡೆಯಾಗುತ್ತವೆ ಹಾಗೂ ದಾಂಪತ್ಯ ಸುಖಕರವಾಗುತ್ತದೆ.

  ಕಪ್ಪು ಚಾಕಲೇಟು

  ಕಪ್ಪು ಚಾಕಲೇಟು

  ಒಂದು ವೇಳೆ ಚಾಕಲೇಟು ತಿನ್ನುವುದು ನಿಮಗೆ ಇಷ್ಟವಿದ್ದರೆ ಜಿಹ್ವಾಚಪಲ್ಯವನ್ನು ತಣಿಸುವ ಜೊತೆಗೇ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲೂ ಕಪ್ಪು ಚಾಕಲೇಟಿನಿಂದ ಸಾಧ್ಯ. ಇದಲ್ಲಿರುವ ಫಿನೈಲ್ ಇಥೈಲಿಮೈನ್ ಎಂಬ ಪೋಷಕಾಂಶಗಳು ಪುರುಷರ ದೇಹದಲ್ಲಿ ಎಂಡಾರ್ಫಿನ್ ಗಳನ್ನು ಹೆಚ್ಚಿಸಿ ಲೈಂಗಿಕ ಶಕ್ತಿಯನ್ನು ವೃದ್ಧಿಸಲು ನೆರವಾಗುತ್ತದೆ.

  ಸ್ಟ್ರಾಬೆರಿ

  ಸ್ಟ್ರಾಬೆರಿ

  ಈ ಹಣ್ಣುಗಳು ಕೇವಲ ಹೃದಯಕ್ಕೆ ಮಾತ್ರ ಒಳ್ಳೆಯದಲ್ಲ, ಬದಲಿಗೆ ಉತ್ತಮ ಲೈಂಗಿಕ ಕ್ರಿಯೆಗೂ ಪೂರಕವಾಗಿದೆ. ನಿಮ್ಮ ನಿತ್ಯದ ಆಹಾರದಲ್ಲಿ ಕೊಂಚ ಸ್ಟ್ರಾಬೆರಿ ಜ್ಯೂಸ್ ಅನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಆಹಾರ ಉತ್ತಮ ಕಾಮೋತ್ತೇಜಕವಾಗಿಸಬಹುದು.

  ಓಟ್ ಮೀಲ್

  ಓಟ್ ಮೀಲ್

  ಓಟ್ಸ್ ರವೆಯಿಂದ ತಯಾರಾದ ಆಹಾರಗಳು ಸಹಾ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಆಹಾರದಲ್ಲಿ ಪುರುಷರ ದೇಹದ ಟೆಸ್ಟೋಸ್ಟೆರಾನ್ ಎಂಬ ರಸದೂತವನ್ನು ಹೆಚ್ಚಿಸುವ ಗುಣವಿದೆ. ಇದು ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

  ಒಣಫಲಗಳು

  ಒಣಫಲಗಳು

  ಗೋಡಂಬಿ, ಶೇಂಗಾಬೀಜ, ಬಾದಾಮಿ, ಪಿಸ್ತಾ ಮೊದಲಾದ ಒಣಫಲಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿದ್ದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಎಂಬ ರಸದೂತವನ್ನು ಹೆಚ್ಚು ಉತ್ಪಾದಿಸಲು ನೆರವಾಗುತ್ತದೆ. ಈ ಟೆಸ್ಟಾಸ್ಟೆರಾನ್ ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು

  ನೆರವಾಗುತ್ತದೆ.

  English summary

  Best Natural Viagra Foods to Enhance Sex Energy in Men

  Viagra is widely talked about when it comes to boosting sexual drive and overall sexual health. The drug sees its application in treating erectile dysfunction and impotency in men. Here are 10 best foods that act like Viagra. These are highly impressive foods that boost sex drive. Read on..
  Story first published: Tuesday, October 17, 2017, 23:28 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more