ಮಲಗುವ ಮುನ್ನ ಹೀಗೆ ಮಾಡಿದರೆ ಉತ್ತಮ ನಿದ್ರೆ ನಿಮ್ಮದಾಗುವುದು

By: Divya Pandith
Subscribe to Boldsky

ಪ್ರತಿಯೊಬ್ಬರೂ ಜಗತ್ತಿಗೆ ಅನುಗುಣವಾಗಿ ಆರೋಗ್ಯವಂತರಾಗಿರಲು ಬಯಸುತ್ತಾರೆ. ಜೊತೆಗೆ ಆಕರ್ಷಕ ವ್ಯಕ್ತಿತ್ವವನ್ನು ಹೊಂದಬೇಕೆಂದು ಬಯಸುತ್ತಾರೆ. ಬಾಡಿ ಮಾಸ್ಇಂಡೆಕ್ಸ್ಗೆ ಸರಿ ಹೊಂದಿದವರಾಗಿರಬೇಕೆಂದು ಇಚ್ಛಿಸುವುದು ಸಹಜ. ಐಬಿಎಮ್‌ನ ಪ್ರಕಾರ ನಮ್ಮ ಎತ್ತರಕ್ಕೆ ತಕ್ಕಂತೆ ತೂಕವು ಸರಿ ಹೊಂದಿರಬೇಕು. ಆದರೆ ಅನೇಕರು ಎತ್ತರಕ್ಕೆ ಸರಿಯಾಗಿ ತೂಕ ಹೊಂದಿರುವುದಿಲ್ಲ. ತೂಕ ಹೆಚ್ಚಿರುತ್ತದೆ ಇಲ್ಲವೇ ಕಡಿಮೆ ಇರುತ್ತದೆ. ಆಗ ಅದು ನೋಡುಗರಿಗೆ ಅಷ್ಟು ಆಕರ್ಷಕ ವ್ಯಕ್ತಿತ್ವದಂತೆ ತೋರುವುದಿಲ್ಲ.

ನಮ್ಮ ಆರೋಗ್ಯ ಹಾಗೂ ತೂಕವು ಸೂಕ್ತ ರೀತಿಯಲ್ಲಿರಬೇಕೆಂದರೆ ನಮ್ಮ ನಿದ್ರೆಯ ಕ್ರಮವೂ ಸರಿಯಾಗಿ ಇರಬೇಕು. ನಿದ್ರೆ ಸೂಕ್ತ ಕ್ರಮದಲ್ಲಿಲ್ಲಾ ಎಂದಾದರೆ ನಿದ್ರಾಹೀನತೆಯಿಂದ ತೂಕ ಕಡಿಮೆಯಾಗುವುದು. ಪಿತ್ತಗಳಂತಹ ಕೆಲವು ಆರೋಗ್ಯ ಸಮಸ್ಯೆಯು ತಲೆದೂರಬಹುದು. ಅಧಿಕ ನಿದ್ರೆಯಿಂದ ಸ್ಥೂಲಕಾಯವಾಗಬಹುದು. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದರಿಂದ ದೇಹವು ಹೆಚ್ಚು ಚಟುವಟಿಕಾಶೀಲವಾಗಿರುತ್ತದೆ. ಜೊತೆಗೆ ದೈನಂದಿನ ಕೆಲಸ ನಿರ್ವಹಿಸಲು ಅನುಕೂಲವಾಗುವುದು. ನಿಮಗೂ ಸೂಕ್ತ ನಿದ್ರೆಗೆ ಜಾರಬೇಕು, ಚಟುವಟಿಕೆಯಿಂದ ಕೆಲಸ ನಿರ್ವಹಿಸಬೇಕು, ಇದರೊಟ್ಟಿಗೆ ದೇಹದ ಅನಗತ್ಯ ಕೊಬ್ಬು ಕರಗಬೇಕೆಂದುಕೊಂಡಿದ್ದರೆ ಮಲಗುವ ಮುನ್ನ ಮಾಡಬೇಕಾದ ಉತ್ತಮ ಹವ್ಯಾಸವನ್ನು ಅರಿಯಿರಿ. ಹಾಗಾದರೆ ಆ ಹವ್ಯಾಸಗಳು ಯಾವವು ಎನ್ನುವುದರ ಕುರಿತು ಮುಂದಿನ ವಿವರಣೆಯಲ್ಲಿದೆ ಪರಿಶೀಲಿಸಿ...

ಕಾಳುಗಳು

ಕಾಳುಗಳು

ಒಣ ಹಣ್ಣು ಮತ್ತು ಕಾಳುಗಳು ಹೆಚ್ಚು ಕೊಬ್ಬಿನಿಂದ ಕೂಡಿಕೊಂಡಿದೆ. ಅದನ್ನು ಸೇವಿಸುವುದರಿಂದ ದೇಹದ ತೂಕವು ಗಣನೀಯವಾಗಿ ಏರಿಕೆಯಾಗುತ್ತದೆ ಎಂದು ನಂಬಲಾಗುತ್ತದೆ. ಇತ್ತೀಚಿನ ವರದಿ ಹಾಗೂ ಸಂಶೋಧನೆಯ ಪ್ರಕಾರ ಕಾಳುಗಳು ಆಕ್ಸಿಡೀಕರಿಸಿ ನಿರ್ದಿಷ್ಟ ಪ್ರೋಟೀನ್ ಮತ್ತು ಕೊಬ್ಬನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುವುದು. ಇತ್ತೀಚೆಗೆ ನಡೆಸಿದ ಕೆಲವು ಸಂಶೋಧನೆಯ ಪ್ರಕಾರ ರಾತ್ರಿ ಮಲಗುವ ಮುನ್ನ ಕಾಳುಗಳನ್ನು ತಿಂದು ನಿದ್ರಿಸಬೇಕು. ಇದರಲ್ಲಿರುವ ನಾರಿನಂಶವು

ಉತ್ತಮ ಜೀರ್ನಕ್ರಿಯೆಗೆ ಅನುವು ಮಾಡಿಕೊಡುತ್ತದೆ. ಅಲ್ಲದೆ ಉತ್ತಮ ನಿದ್ರೆ ಮತ್ತು ತೂಕನಷ್ಟಕ್ಕೆ ಸಹಾಯ ಮಾಡುವುದು.

ಗ್ಯಾಜೆಟ್ಸ್‌ಗಳನ್ನು ಆಫ್ ಮಾಡಿ

ಗ್ಯಾಜೆಟ್ಸ್‌ಗಳನ್ನು ಆಫ್ ಮಾಡಿ

ಎಲೆಕ್ಟ್ರಾನಿಕ್ ಗ್ಯಾಜೆಟ್ಸ್‌ಗಳಿಂದ ಹೊರ ಹೊಮ್ಮುವ ಕಿರಣಗಳು ಮೆಲೊಟೊನಿನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಬಹು ಬೇಗ ನಿದ್ರೆ ಬರದೆ ಇರುವಾಗ ಹಸಿವು ನಮ್ಮನ್ನು ಕಾಡುತ್ತದೆ. ಹಾಗಾಗಿ ಮಲಗಲು ಒಂದು ಗಂಟೆ ಮುಂಚಿತವಾಗಿಯೇ ಗ್ಯಾಜೆಟ್ಸ್ಗಳನ್ನು ಆರಿಸಬೇಕು. ಆಗ ಸೂಕ್ತ ನಿದ್ರೆ ಹೊಂದಬಹುದು. ತೂಕವೂ ಸಮತೋಲನದಲ್ಲಿರುವುದು.

ಬೆಚ್ಚಗಿನ ನೀರಲ್ಲಿ ಕಾಲನ್ನು ಇರಿಸಿ

ಬೆಚ್ಚಗಿನ ನೀರಲ್ಲಿ ಕಾಲನ್ನು ಇರಿಸಿ

ಮಲಗುವ ಮುನ್ನ ಒಂದು ಬುಟ್ಟಿಯಲ್ಲಿ ಬೆಚ್ಚಗಿನ ನೀರನ್ನು ಹಾಕಿ, ಪಾದಗಳನ್ನು ಸ್ವಲ್ಪ ಸಮಯ ನೆನೆಯಿಡಿ. ಆಗ ದೇಹದ ಸ್ನಾಯು ವಿಶ್ರಾಂತಿ ಪಡೆದು ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಪ್ರಕ್ರಿಯೆಯು ನಿಮ್ಮನ್ನು ಉತ್ತಮ ನಿದ್ರೆಗೆ ಜಾರುವಂತೆ ಮಾಡುತ್ತದೆ.

ಶವರ್ ಸ್ನಾನ

ಶವರ್ ಸ್ನಾನ

ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವಿಕೆಯು ನಿಮ್ಮ ನರಗಳನ್ನು ವಿಶ್ರಾಂತಿ ಮಾಡುತ್ತದೆ ಮತ್ತು ನೀವು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಶವರ್ ಸಮಯದಲ್ಲಿ ಯಾವುದೇ ಸಾರಭೂತ ತೈಲವನ್ನು ಬಳಸುವುದರಿಂದ ಆಹ್ಲಾದಕರ ವಾಸನೆ ಇರುತ್ತದೆ. ನೀವು ಮಲಗಿದ್ದಾಗಲೂ ಸಹ ನಿಮ್ಮ ದೇಹವು ಕೆಲವು ಕ್ಯಾಲೊರಿಗಳನ್ನು ಸುಟ್ಟುದರಿಂದ ನಿದ್ರೆಯ ಉತ್ತಮ ಗುಣಮಟ್ಟ ಹೆಚ್ಚಾಗಿ ತೂಕ ನಷ್ಟಕ್ಕೆ ಸಹಾಯ ಮಾಡುವುದು.

ಅಂಗಾಲಿನ ಮಸಾಜ್

ಅಂಗಾಲಿನ ಮಸಾಜ್

ಅಂಗಾಲಿನ ಮಸಾಜ್ ದೇಹದಲ್ಲಿ ಕೆಲವು ಅಂಶಗಳನ್ನು ಪ್ರಚೋದಿಸುತ್ತದೆ. ಅದು ಕೊಬ್ಬು ಕೋಶಗಳನ್ನು ಸುಡುವಿಕೆಯನ್ನು ಉತ್ತೇಜಿಸುತ್ತದೆ. ಒಂದು ರಿಫ್ರೆಶ್ ಶವರ್ ನಂತರ ನಿಮ್ಮ ಬೆರಳಿನಿಂದ ಉತ್ತಮವಾದ ವಿಶ್ರಾಂತಿ ಗೆ ಅಂಗಾಲಿನ ಮಸಾಜ್ ನಿಮ್ಮ ಗುರಿಯನ್ನು ತಲುಪಲು ಸಹಾಯ ಮಾಡುವುದು.

ಸ್ವಚ್ಛ ವಾದ ಹಾಸಿಗೆ ವಸ್ತ್ರ

ಸ್ವಚ್ಛ ವಾದ ಹಾಸಿಗೆ ವಸ್ತ್ರ

ಸ್ವಚ್ಛ ಮತ್ತು ಮೃದು ಬಟ್ಟೆಗಳನ್ನು ಧರಿಸಿ ಉತ್ತಮ ರಾತ್ರಿ ನಿದ್ರೆಯನ್ನು ಖಚಿತಪಡಿಸುತ್ತದೆ. ಹಾಸಿಗೆ ವಸ್ತ್ರಗಳು ಕೂಡ ಸ್ವಚ್ಛವಾಗಿವೆಯೆ ಎಂದು ಖಚಿತಪಡಿಸಿಕೊಳ್ಳಿ. ರಾತ್ರಿಯ ಮಧ್ಯದಲ್ಲಿ ಎಚ್ಚರಗೊಳ್ಳದೆ ಉತ್ತಮ ನಿದ್ರೆಗೆ ಜಾರಬಹುದು.

ಅನುಕೂಲಕರ ವಾತಾವರಣ

ಅನುಕೂಲಕರ ವಾತಾವರಣ

ನಿಮ್ಮ ಕೋಣೆಯಲ್ಲಿ ನಿಮ್ಮ ದೇಹವನ್ನು ಶಮನಗೊಳಿಸಲು ಮತ್ತು ನಿದ್ರೆಗೆ ತಂದುಕೊಡುವ ಅನುಕೂಲಕರ ವಾತಾವರಣ ಮತ್ತು ಸ್ನೇಹಶೀಲ ವಾತಾವರಣ ಇರಬೇಕು. ಆಗಲೇ ನೀವು ರಾತ್ರಿ ಮಧ್ಯೆ ಎಚ್ಚರಗೊಳ್ಳುವುದು ಮತ್ತು ಆಹಾರ ಸೇವಿಸುವುದನ್ನು ತಡೆಯಬಹುದು.

ಬೆಚ್ಚಗಿನ ಹಾಲು ಕುಡಿಯಿರಿ

ಬೆಚ್ಚಗಿನ ಹಾಲು ಕುಡಿಯಿರಿ

ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿಯುವುದರಿಂದ ರಾತ್ರಿ ಉತ್ತಮ ನಿದ್ರೆಗೆ ಜಾರಲು ಸಹಾಯ ಮಾಡುವುದು. ಹಾಲಿನಲ್ಲಿರುವ ಕಿಣ್ವಗಳು ನಿಮ್ಮ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಮಲಗುವ ಸಮಯವನ್ನು ಕಳೆದುಕೊಳ್ಳುವ ಮೊದಲು ಇದು ಅತ್ಯುತ್ತಮ ಪಾನೀಯವಾಗಿದೆ.

ಮಲಗುವ ಮುನ್ನ ಬಾತ್‌ರೂಮ್ ಹೋಗಿ

ಮಲಗುವ ಮುನ್ನ ಬಾತ್‌ರೂಮ್ ಹೋಗಿ

ಮಲಗುವ ಮುನ್ನ ಮೂತ್ರವಿಸರ್ಜನೆ ಮಾಡುವುದು ಅಭ್ಯಾಸ ಮಾಡಿಕೊಂಡರೆ ಮಧ್ಯ ರಾತ್ರಿಯಲ್ಲಿ ಎಚ್ಚಗೊಳ್ಳುವುದು ಹಾಗೂ ನಿದ್ರಾಹೀನತೆಗೆ ಒಳಗಾಗುವುದನ್ನು ತಡೆಯಬಹುದು. ಉತ್ತಮ ನಿದ್ರೆಯು ಮರುದಿನದ ಕ್ರಿಯಾಶೀಲ ಚಟುವಟಿಕೆಗೆ ಅನುಕೂಲ ಮಾಡಿಕೊಡುವುದು.

ಪುಸ್ತಕ ಓದಿ

ಪುಸ್ತಕ ಓದಿ

ಪುಸ್ತಕ ಓದುವುದರಿಂದ ಮೆದುಳಿನ ಕೋಶಗಳು ಶಾಂತಗೊಳ್ಳುತ್ತವೆ. ಜೊತೆಗೆ ಉತ್ತಮ ನಿದ್ರೆಗೆ ಸಹಾಯ ಮಾಡುವುದು. ಗ್ಯಾಜೆಟ್ಸ್‌ಗಳನ್ನು ಬಳಸುವ ಬದಲು ಪುಸ್ತಕ ಓದುವುದು ಉತ್ತಮ.

ಬೆಳಕನ್ನು ಆರಿಸಿ

ಬೆಳಕನ್ನು ಆರಿಸಿ

ನಿದ್ರೆ ಮಾಡುವಾಗ ಎಲ್ಲಾ ಬೆಳಕನ್ನು ಆರಿಸಿ. ನಿದ್ರೆ ಮಾಡುವ ಸಮಯದಲ್ಲಿ ಬೆಳಕು ಇದ್ದರೆ ಮೆಲಟೋನ್ ಕಡಿಮೆ ಪ್ರಮಾಣದಲ್ಲಿ ಶ್ರವಿಸುತ್ತದೆ. ಹಾಗಾದಾಗ ನಿದ್ರೆ ಭಂಗವಾಗುವುದು. ಎಲ್ಲಾ ಬೆಳಕನ್ನು ಆರಿಸಿಕೊಂಡು ಮಲಗಿದರೆ ಮೆದುಳು ಶಾಂತಗೊಂಡು ನಿದ್ರೆಗೆ ಜಾರುವುದು.

ಊಟದಲ್ಲಿ ಪೆಪ್ಪರ್ ಬಳಸಿ

ಊಟದಲ್ಲಿ ಪೆಪ್ಪರ್ ಬಳಸಿ

ಊಟದಲ್ಲಿ ಪೆಪ್ಪರ್ ಬಳಸಿದರೆ ನಿಮ್ಮ ಜೀರ್ಣಕಾರಿ ವ್ಯವಸ್ಥೆಯನ್ನು ಉತ್ತೇಜಿಸಲು ಮತ್ತು ನಿಮ್ಮ ಮೆಟಾಬಲಿಸಮ್ ಅನ್ನು ಹೆಚ್ಚಿಸುತ್ತದೆ. ತೂಕವನ್ನು ಗಣನೀಯವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮೆಣಸಿನಕಾಳು ಹೊಟ್ಟೆಭಾಗದ ಕೊಬ್ಬನ್ನು ಬಲು ಸುಲಭವಾಗಿ ಕರಗಿಸುವುದು.

ಮಧ್ಯವನ್ನು ಸೇವಿಸದಿರಿ

ಮಧ್ಯವನ್ನು ಸೇವಿಸದಿರಿ

ಕೆಲವರಿಗೆ ಮಲಗುವ ಮುನ್ನ ವೈನ್ ಕುಡಿಯುವ ಅಭ್ಯಾಸ ಇರುತ್ತದೆ. ಅದು ಉತ್ತಮ ನಿದ್ರೆಯನ್ನು ನೀಡುತ್ತದೆ ಎನ್ನಲಾಗುವುದು. ಆದರೆ ಇತ್ತೀಚಿನ ಅಧ್ಯಯನಗಳು ಮದ್ಯವು ನಾವು ನಿದ್ದೆ ಮಾಡುವ ರೀತಿಯಲ್ಲಿ ಅಡ್ಡಿಪಡಿಸುತ್ತದೆ ಮತ್ತು ವಯಸ್ಕರಲ್ಲಿ ಜಾಗೃತಿ ಹೆಚ್ಚಿಸುತ್ತದೆ ಎಂದು ಹೇಳಿದೆ. ಇದು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ನಿದ್ರೆಯ ಅವಧಿಯನ್ನು ಕಡಿಮೆ ಮಾಡುತ್ತದೆ. ಆಲ್ಕೊಹಾಲ್ ಅನ್ನು ಸೇವಿಸುವುದರಿಂದ ಕ್ಯಾಲೋರಿ ಕರಗಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಮಧ್ಯವು ಸಹಕರಿಸುವುದಿಲ್ಲ ಎಂದು ಹೇಳಲಾಗುತ್ತದೆ.

ಮಲಗುವ ಮುನ್ನ ಯೋಗ ಉತ್ತಮವಲ್ಲ

ಮಲಗುವ ಮುನ್ನ ಯೋಗ ಉತ್ತಮವಲ್ಲ

ಮಲಗುವ ಮುನ್ನ ಯೋಗ ಮಾಡುವುದರಿಂದ ದೇಹದಲ್ಲಿ ಅಡ್ರಿನಾಲಿನ್ ಹೆಚ್ಚುತ್ತದೆ. ಇದರಿಂದ ನಿಮಗೆ ಹಸಿವು ಉಂಟಾಗುವುದು. ಬಹುಬೇಗ ನಿದ್ರೆಗೆ ಜಾರಲು ಸಾಧ್ಯವಾಗದು. ಹಸಿವನ್ನು ನೀಗಿಸಲು ಆಹಾರ ಸೇವಿಸುವುದರ ಮೂಲಕ ತೂಕವು ಹೆಚ್ಚುವುದು. ನಿದ್ರೆ ಮಾಡುವ ಮುನ್ನ ಯೋಗ ಮಾಡುವ ಬದಲು ಧ್ಯಾನ ಮಾಡಬಹುದು.

English summary

Best Bedtime Habits To Sleep Well & Lose Weight

Everyone wants to be fit and healthy in today's world. Being healthy means having a fit body with a normal BMI. BMI or the body mass index is the way of measuring the weight in proportion to the height of the person. This will tell us whether we are under weight or over weight. Maintaining an ideal BMI is very important. When our body weight is healthy, our body carries out all its functions quite effectively.
Story first published: Saturday, November 11, 2017, 23:45 [IST]
Subscribe Newsletter