Latest Updates
-
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್!
ಹೊಕ್ಕಳಿಗೆ ಒಂದೆರಡು ಚಮಚ ಎಣ್ಣೆ ಹಚ್ಚಿಕೊಂಡರೆ ನಾನಾ ಲಾಭ!
ಹೊಕ್ಕಳಲ್ಲಿ ಎಣ್ಣೆಯನ್ನು ಹಾಕಿ ನಯವಾಗಿ ತಿಕ್ಕಿಕೊಳ್ಳುವ ಮೂಲಕ ಸಂಧಿವಾತ, ಮಣಿಕಟ್ಟಿನ ನೋವು, ಶೀತ, ಫ್ಲೂ ಜ್ವರ, ನೆಗಡಿ, ಚರ್ವವ್ಯಾಧಿಗಳು ಮೊದಲಾದವುಗಳಿಗೆ ಉತ್ತಮವಾದ ಪರಿಹಾರ ದೊರಕುತ್ತದೆ....
ತಾಯಿಯ ಗರ್ಭದಲ್ಲಿದ್ದಾಗ ಮಗುವಿನ ಎಲ್ಲಾ ಕಾರ್ಯಗಳೂ ಹೊಕ್ಕಳು ಬಳ್ಳಿಯ ಮೂಲಕವೇ ನಡೆಯುತ್ತದೆ. ಜನನದ ಬಳಿಕ ಇದು ಮುಚ್ಚಿಹೋಗುತ್ತದೆ. ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿರುವ ಕೆಲವು ವಿಧಾನಗಳು ನಮಗೆ ವಿಚಿತ್ರ, ಕೆಲಸಕ್ಕೆ ಬಾರದವು ಎಂದೆನ್ನಿಸಿದರೂ ವಾಸ್ತವವಾಗಿ ಇವು ನಿಜಕ್ಕೂ ಪರಿಣಾಮಕಾರಿಯಾಗಿವೆ. ಹೊಟ್ಟೆಯ ಹೊಕ್ಕಳು: ನೀವು ತಿಳಿದಿರದ ಅಮೋಘ ಸಂಗತಿಗಳು
ಹೊಕ್ಕಳಲ್ಲಿ ಕೆಲವು ಹನಿ ಎಣ್ಣೆಯನ್ನು ಹಚ್ಚಿಕೊಳ್ಳುವ ಮೂಲಕ ಕೆಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಹೊಕ್ಕಳಲ್ಲಿ ಎಣ್ಣೆಯನ್ನು ಹಾಕಿ ನಯವಾಗಿ ತಿಕ್ಕಿಕೊಳ್ಳುವ ಮೂಲಕ ಸಂಧಿವಾತ, ಮಣಿಕಟ್ಟಿನ ನೋವು, ಶೀತ, ಫ್ಲೂ ಜ್ವರ, ನೆಗಡಿ, ಚರ್ವವ್ಯಾಧಿಗಳು ಮೊದಲಾದವುಗಳಿಗೆ ಉತ್ತಮವಾದ ಪರಿಹಾರ ದೊರಕುತ್ತದೆ. ಬನ್ನಿ, ಇದರ ಪ್ರಯೋಜನಗಳ ಬಗ್ಗೆ ಅರಿಯೋಣ...

ಪ್ರಯೋಜನ #1
ತುಟಿಗಳು ಬಿರಿಬಿಟ್ಟಿದ್ದರೆ ಅಥವಾ ಗಂಟು ನೋವು ಕಾಣಿಸಿಕೊಂಡರೆ, ಒಂದೆರಡು ಚಮಚ ಹನಿ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿಕೊಳ್ಳಿ. ಇದು ಕೊಂಚ ವಿಚಿತ್ರವಾಗಿ ಕಂಡರೂ ಈ ಪ್ರಾಚೀನ ವಿಧಾನ ನಿಜವಾಗಿಯೂ ಕೆಲಸ ಮಾಡುತ್ತದೆ.

ಪ್ರಯೋಜನ #2
ಫ್ಲೂ ಜ್ವರ ಮತ್ತು ಶೀತವಾಗಿದೆಯೇ? ಒಂದು ಚಿಕ್ಕ ತುಂಡು ಬಟ್ಟೆಯನ್ನು ಆಲ್ಕೋಹಾಲ್‌ನಲ್ಲಿ ಮುಳುಗಿಸಿ ರಾತ್ರಿ ಮಲಗುವಾಗ ಹೊಕ್ಕಳ ಮೇಲಿಸಿರಿ. ಬೆಳಿಗ್ಗೆದ್ದಾಗ ಜ್ವರ ಮತ್ತು ಶೀತ ಕಡಿಮೆಯಾಗಿರುತ್ತದೆ.

ಪ್ರಯೋಜನ #3
ಮಾಸಿಕ ದಿನಗಳ ನೋವಿನಿಂದ ಬಳಲುತ್ತಿರುವ ಮಹಿಳೆಯರು ಒಂದು ಚಿಕ್ಕ ತುಂಡು ಬಟ್ಟೆಯನ್ನು ಕೊಂಚ ಬ್ರಾಂದಿಯಲ್ಲಿ ತೋಯಿಸಿ ರಾತ್ರಿ ಮಲಗುವ ಮುನ್ನ ಹೊಕ್ಕುಳ ಮೇಲಿಟ್ಟು ಮಲಗಿಕೊಳ್ಳುವ ಮೂಲಕ ನೋವು ಕಡಿಮೆಯಾಗುತ್ತದೆ.ಮನೆ ಔಷಧ: ಒಂದೇ ಗಂಟೆಯಲ್ಲಿ ಮುಟ್ಟಿನ ನೋವು ನಿಯಂತ್ರಣಕ್ಕೆ

ಪ್ರಯೋಜನ #4
ಕೆಲವು ಹನಿ ಬೇವಿನ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ನಯವಾಗಿ ಮಸಾಜ್ ಮಾಡುವ ಮೂಲಕ ಕೆಲವೇ ದಿನಗಳಲ್ಲಿ ಮೊಡವೆ ಮಾಯವಾಗುತ್ತವೆ.

ಪ್ರಯೋಜನ #5
ಕೆಲವು ಹನಿ ಬಾದಾಮಿ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ಮಸಾಜ್ ಮಾಡುವ ಮೂಲಕ ಮುಖದ ಕಾಂತಿ ಹೆಚ್ಚುತ್ತದೆ.

ಪ್ರಯೋಜನ #6
ಕೆಲವು ಹನಿ ಕೊಬ್ಬರಿ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ಸುತ್ತಲಿನ ಭಾಗವನ್ನು ನಯವಾಗಿ ಮಸಾಜ್ ಮಾಡುವ ಮೂಲಕ ಫಲವತ್ತತೆಯನ್ನು ಹೆಚ್ಚಿಸಬಹುದು.

ಪ್ರಯೋಜನ #7
ನಿಮಗೆ ನಿಮ್ಮ ತ್ವಚೆ ಸೌಮ್ಯ ಮತ್ತು ಆರೋಗ್ಯಕರವಾಗಿರಬೇಕೆಂಬ ಬಯಕೆಯೇ? ಹಾಗಾದರೆ ಒಂದು ಹನಿ ಹಸುವಿನ ತುಪ್ಪವನ್ನು ಹೊಕ್ಕಳಿಗೆ ಹಚ್ಚಿ ಮಸಾಜ್ ಮಾಡಿ.

ಪ್ರಯೋಜನ #8
ಒಂದು ವೇಳೆ ನಿಮ್ಮ ಮೊಣಕಾಲಿನಲ್ಲಿ ಭಾರೀ ನೋವಿದ್ದರೆ, ಕೊಂಚ ಹರಳೆಣ್ಣೆಯನ್ನು ಮಲಗುವ ಮುನ್ನ ಹೊಕ್ಕುಳಿಗೆ ಹಚ್ಚಿ ಮಲಗುವ ಮೂಲಕ ನೋವು ಕಡಿಮೆಯಾಗಬಹುದು.ಮೊಣಕಾಲು ನೋವು ನಿವಾರಣೆಗೆ ಆಯುರ್ವೇದ ಚಿಕಿತ್ಸೆ



Click it and Unblock the Notifications
