ಹೊಕ್ಕಳಿಗೆ ತೆಂಗಿನೆಣ್ಣೆ ಬಿಟ್ಟರೆ ಅನೇಕ ಆರೋಗ್ಯ ಸಮಸ್ಯೆಗಳು ಮಾಯವಾಗುವುದು

Posted By: Divya pandith
Subscribe to Boldsky

ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಅತ್ಯುತ್ತಮ ಎಣ್ಣೆ ತೆಂಗಿನೆಣ್ಣೆ, ಆರೋಗ್ಯದ ಸುಧಾರಣೆಗೆ, ಕುರುಕಲು ಹಾಗೂ ಆಹಾರ ಪದಾರ್ಥಗಳ ತಯಾರಿಸಲು ಅತ್ಯುತ್ತಮ ಸಹಕಾರವನ್ನು ನೀಡುತ್ತದೆ. ಹೆಚ್ಚು ಪೋಷಕಾಂಶದ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ. ಆಹಾರ ಪದಾರ್ಥಗಳಿಗೆ ಉತ್ತಮ ರುಚಿಯನ್ನು ನೀಡುವ ಈ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ, ಪೌಷ್ಠಿಕಾಂಶ ಹಾಗೂ ಗಾಯಗಳನ್ನು ಬಹುಬೇಗ ಗುಣಪಡಿಸುವ ಶಕ್ತಿಯನ್ನು ಒಳಗೊಂಡಿದೆ.

ಈ ಎಣ್ಣೆಯು ಚರ್ಮದ ಆರೋಗ್ಯ ಹಾಗೂ ಅಂಗವರ್ಧನಕ್ಕೆ ಬಹು ಉಪಕಾರಿ. ಇದರ ಬಳಕೆಯಿಂದ ತ್ವಚೆಯು ಆಕರ್ಷಕ ಹೊಳಪನ್ನು ಪಡೆದುಕೊಳ್ಳಬಹುದು. ಅಲ್ಲದೆ ಸೊಂಟದ ಭಾಗದಲ್ಲಿ ಮತ್ತು ಹೊಕ್ಕಳು ಭಾಗಕ್ಕೆ ಅನ್ವಯಿಸಿಕೊಳ್ಳುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಜೊತೆಗೆ ಸೊಂಟದ ಭಾಗದಲ್ಲಿ ಶೇಖರಣೆಗೊಂಡಿರುವ ಕೊಬ್ಬುಗಳು ಬಹುಬೇಗ ಕರಗುವುದು ಎಂದು ಹೇಳಲಾಗುತ್ತದೆ. ಅಪರೂಪದ ವಿಶೇಷತೆಯನ್ನು ಒಳಗೊಂಡಿರುವ ತೆಂಗಿನೆಣ್ಣೆಯ ಬಳಕೆಯಿಂದ ಇನ್ನೂ ಯಾವೆಲ್ಲಾ ಉಪಯೋಗವನ್ನು ಪಡೆದುಕೊಳ್ಳಬಹುದು? ಎನ್ನುವದರ ವಿವರಣೆ ಇಲ್ಲಿದೆ ನೋಡಿ...

 ಫಲವತ್ತತೆಯನ್ನು ಸುಧಾರಿಸುವುದು

ಫಲವತ್ತತೆಯನ್ನು ಸುಧಾರಿಸುವುದು

ಹೊಕ್ಕಳಿಗೆ ತೆಂಗಿನೆಣ್ಣೆ ಹಾಕುವುದರಿಂದ ಫಲವಂತಿಕೆಯ ಪ್ರಮಾಣ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಇದರಲ್ಲಿ ಟ್ರೈಗ್ಲಿಸರೈಡ್ ಸಮೃದ್ಧವಾಗಿರುವುದರಿಂದ ಫಲವಂತಿಕೆಯ ಸುಧಾರಣೆಗೆ ಸಹಾಯವಾಗುವುದು.

ಶೀತವನ್ನು ತಡೆಗಟ್ಟುತ್ತದೆ

ಶೀತವನ್ನು ತಡೆಗಟ್ಟುತ್ತದೆ

ತೆಂಗಿನೆಣ್ಣೆ ತಂಪಿನ ಗುಣವನ್ನು ಹೊಂದಿದೆ. ಆದರೂ ದೇಹದ ಶೀತ ಮತ್ತು ಅನಾರೋಗ್ಯವನ್ನು ತಡೆಗಟ್ಟುತ್ತದೆ. ದೇಹದ ಶಕ್ತಿ ಹೆಚ್ಚಿಸಲು ಹಾಗೂ ಉಷ್ಣವನ್ನು ತಗ್ಗಿಸಲು ಬಹು ಸಹಕಾರಿ ಎಂದು ಹೇಳಲಾಗುವುದು.

ಹೊಟ್ಟೆ ಸೆಳೆತ ಹಾಗೂ ಮುಟ್ಟಿನ ನೋವು ನಿವಾರಕ

ಹೊಟ್ಟೆ ಸೆಳೆತ ಹಾಗೂ ಮುಟ್ಟಿನ ನೋವು ನಿವಾರಕ

ಹೊಕ್ಕಳಿಗೆ ತೆಂಗಿನೆಣ್ಣೆಯನ್ನು ಬಿಡುವುದರಿಂದ ಹೊಟ್ಟೆ ನೋವು ಹಾಗೂ ಮುಟ್ಟಿನಿಂದ ಬಳಲುವ ಹೊಟ್ಟೆ ನೋವನ್ನು ನಿವಾರಿಸಬಹುದು. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗುಣಗಳು ಉದರದ ನೋವು ನಿವಾರಿಸಲು ಸಹಾಯಮಾಡುವುದು. ಅಲ್ಲದೆಹೊಕ್ಕಳಿಗೆ ತೆಂಗಿನೆಣ್ಣೆಯನ್ನು ಹಾಕುವುದರಿಂದ ಉತ್ತಮ ದೃಷ್ಟಿಯನ್ನು ಪಡೆದುಕೊಳ್ಳಬಹುದು.

ಹೊಕ್ಕಳಿಗೆ ಎಣ್ಣೆಯನ್ನು ಹಾಕುವ ವಿಧಾನ

ಹೊಕ್ಕಳಿಗೆ ಎಣ್ಣೆಯನ್ನು ಹಾಕುವ ವಿಧಾನ

ಮೊದಲು ಒಂದು ಹತ್ತಿ ಉಂಡೆಯನ್ನು ತಯಾರಿಸಿಕೊಳ್ಳಿ.

ನಂತರ ಆ ಉಂಡೆಯನ್ನು ತೆಂಗಿನೆಣ್ಣೆಯಲ್ಲಿ ಅದ್ದಿ.

ಎಣ್ಣೆಯಿಂದ ಕೂಡಿದ ಹತ್ತಿ ಉಂಡೆಯನ್ನು ಹೊಕ್ಕಳಿನ ಮೇಲೆ ಇರಿಸಿ.

ನಂತರ 15 ನಿಮಿಷಗಳಕಾಲ ಆ ವಲಯವನ್ನು ಮಸಾಜ್ ಮಾಡಿ.

ಏಕೆ ಪ್ರಯೋಜನಕಾರಿ?

ಏಕೆ ಪ್ರಯೋಜನಕಾರಿ?

ಹೊಕ್ಕಳು ಬಳ್ಳಿಯ ಸಹಾಯದಿಂದಲೇ ತಾಯಿ ಹೊಟ್ಟೆಯಲ್ಲಿರುವ ಮಗು ಆಹಾರವನ್ನು ಪಡೆದುಕೊಳ್ಳುತ್ತದೆ. ಹೊಕ್ಕಳು ಬಳ್ಳಿಯಿಂದ ಸಾವಿರಾರು ನರಗಳ ಸಂಪರ್ಕ ಇರುತ್ತದೆ. ಈ ಸ್ಥಳದಲ್ಲಿ ತೆಂಗಿನೆಣ್ಣೆ ಹಾಕುವುದರಿಂದ ಆಂತರಿಕ ಅಂಗಗಳು ಬಹಳ ಆರೋಗ್ಯಕರವಾಗಿರಲು ಸಹಾಯವಾಗುವುದು.. ಕೇವಲ ತೆಂಗಿನ ಎಣ್ಣೆ ಮಾತ್ರವಲ್ಲ, ಇನ್ನಷ್ಟು ಇತರ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು,, ಅವು ಯಾವುದು ಎಂಬುದನ್ನು ಮುಂದೆ ಓದಿ...

ತುಟಿಗಳು ಬಿರಿಬಿಟ್ಟಿದ್ದರೆ ಅಥವಾ ಗಂಟು ನೋವು ಕಾಣಿಸಿಕೊಂಡರೆ

ತುಟಿಗಳು ಬಿರಿಬಿಟ್ಟಿದ್ದರೆ ಅಥವಾ ಗಂಟು ನೋವು ಕಾಣಿಸಿಕೊಂಡರೆ

ತುಟಿಗಳು ಬಿರಿಬಿಟ್ಟಿದ್ದರೆ ಅಥವಾ ಗಂಟು ನೋವು ಕಾಣಿಸಿಕೊಂಡರೆ, ಒಂದೆರಡು ಚಮಚ ಹನಿ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿಕೊಳ್ಳಿ. ಇದು ಕೊಂಚ ವಿಚಿತ್ರವಾಗಿ ಕಂಡರೂ ಈ ಪ್ರಾಚೀನ ವಿಧಾನ ನಿಜವಾಗಿಯೂ ಕೆಲಸ ಮಾಡುತ್ತದೆ.

ಫ್ಲೂ ಜ್ವರ ಮತ್ತು ಶೀತವಾಗಿದೆಯೇ?

ಫ್ಲೂ ಜ್ವರ ಮತ್ತು ಶೀತವಾಗಿದೆಯೇ?

ಫ್ಲೂ ಜ್ವರ ಮತ್ತು ಶೀತವಾಗಿದೆಯೇ? ಒಂದು ಚಿಕ್ಕ ತುಂಡು ಬಟ್ಟೆಯನ್ನು ಆಲ್ಕೋಹಾಲ್‌ನಲ್ಲಿ ಮುಳುಗಿಸಿ ರಾತ್ರಿ ಮಲಗುವಾಗ ಹೊಕ್ಕಳ ಮೇಲಿಸಿರಿ. ಬೆಳಿಗ್ಗೆದ್ದಾಗ ಜ್ವರ ಮತ್ತು ಶೀತ ಕಡಿಮೆಯಾಗಿರುತ್ತದೆ.

ಮುಟ್ಟಿನ ದಿನಗಳಲ್ಲಿ

ಮುಟ್ಟಿನ ದಿನಗಳಲ್ಲಿ

ಮಾಸಿಕ ದಿನಗಳ ನೋವಿನಿಂದ ಬಳಲುತ್ತಿರುವ ಮಹಿಳೆಯರು ಒಂದು ಚಿಕ್ಕ ತುಂಡು ಬಟ್ಟೆಯನ್ನು ಕೊಂಚ ಬ್ರಾಂದಿಯಲ್ಲಿ ತೋಯಿಸಿ ರಾತ್ರಿ ಮಲಗುವ ಮುನ್ನ ಹೊಕ್ಕುಳ ಮೇಲಿಟ್ಟು ಮಲಗಿಕೊಳ್ಳುವ ಮೂಲಕ ನೋವು ಕಡಿಮೆಯಾಗುತ್ತದೆ

ಕೆಲವು ಹನಿ ಬೇವಿನ ಎಣ್ಣೆ

ಕೆಲವು ಹನಿ ಬೇವಿನ ಎಣ್ಣೆ

ಕೆಲವು ಹನಿ ಬೇವಿನ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ನಯವಾಗಿ ಮಸಾಜ್ ಮಾಡುವ ಮೂಲಕ ಕೆಲವೇ ದಿನಗಳಲ್ಲಿ ಮೊಡವೆ ಮಾಯವಾಗುತ್ತವೆ. ಅಲ್ಲದೆ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ಮಸಾಜ್ ಮಾಡುವ ಮೂಲಕ ಮುಖದ ಕಾಂತಿ ಹೆಚ್ಚುತ್ತದೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಕೆಲವು ಹನಿ ಕೊಬ್ಬರಿ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ಸುತ್ತಲಿನ ಭಾಗವನ್ನು ನಯವಾಗಿ ಮಸಾಜ್ ಮಾಡುವ ಮೂಲಕ ಫಲವತ್ತತೆಯನ್ನು ಹೆಚ್ಚಿಸಬಹುದು. ಇನ್ನು ನಿಮಗೆ ನಿಮ್ಮ ತ್ವಚೆ ಸೌಮ್ಯ ಮತ್ತು ಆರೋಗ್ಯಕರವಾಗಿರಬೇಕೆಂಬ ಬಯಕೆಯೇ? ಹಾಗಾದರೆ ಒಂದು ಹನಿ ಹಸುವಿನ ತುಪ್ಪವನ್ನು ಹೊಕ್ಕಳಿಗೆ ಹಚ್ಚಿ ಮಸಾಜ್ ಮಾಡಿ.

English summary

benefits-of-oil-in-belly-button

As you all know coconut oil is an edible oil which is processed from the meat of coconut. It contains high amount of saturated fat, nutrient value, healing powers, etc. Due to its high content of saturated fat, it is also used in many tropical remedies. Believe it or not, putting oil in belly button can give you some incredible health benefits. It is also known to be an Ayurvedic practice that dates back to thousands of years ago. It is believed that it can deliver beneficial healthy internal organs and prevents the body from bloating. Some of the benefits of putting coconut oil in your belly button are as follows..