ಕೆಳಹೊಟ್ಟೆಯ ಭಾಗಕ್ಕೆ ಎಣ್ಣೆ ಮಸಾಜ್ ಮಾಡಿಕೊಂಡರೆ ನಾನಾ ಲಾಭಗಳಿವೆ!

By: Arshad
Subscribe to Boldsky

ಕೆಳಹೊಟ್ಟೆಯನ್ನು ಮಸಾಜ್ ಮಾಡುವ ಮೂಲಕ ಪ್ರಯೋಜನಗಳನ್ನು ಅಲ್ಲಗಳೆಯಲಾಗದು. ಕೆಲವೊಮ್ಮೆ ಬೆಳಗ್ಗೆದ್ದಾಗ ಪ್ರಾತಃವಿಧಿ ಪ್ರಾರಂಭವಾಗದೇ ಚಡಪಡಿಸುವಂತಾಗುತ್ತದೆ. ಈ ಸಮಯದಲ್ಲಿ ಕೊಂಚ ನಡೆದಾಡುವ ಮೂಲಕ ಅಥವಾ ಕೊಂಚವೇ ಉಗುರುಬೆಚ್ಚನೆಯ ನೀರನ್ನು ಗುಟುಕರಿಸುವುದರಿಂದಲೂ ನಿಸರ್ಗದ ಕರೆ ಶೀಘ್ರವೇ ಬರಬಹುದು. ಒಂದು ವೇಳೆ ಇದೂ ಸಾಧ್ಯವಾಗದೇ ಇದ್ದರೆ ಕೆಳಹೊಟ್ಟೆಗೆ ಕೊಂಚ ಮಸಾಜ್ ಮಾಡುವುದನ್ನು ಪ್ರಯತ್ನಿಸಬಹುದು.

ಕೆಳಹೊಟ್ಟೆಯನ್ನು ಮಸಾಜ್ ಮಾಡುವ ಮೂಲಕ ಕರುಳುಗಳಿಗೆ ಪ್ರಚೋದನೆ ದೊರಕುತ್ತದೆ ಹಾಗೂ ಗಟ್ಟಿಯಾಗಿದ್ದ ತ್ಯಾಜ್ಯ ಸುಲಭವಾಗಿ ಮುಂದುವರೆಯಲು ನೆರವಾಗುತ್ತದೆ. ಮಸಾಜ್ ಮಾಡಲು ಕೆಳಹೊಟ್ಟೆಯ ಮೇಲೆ ಯಾವುದಾದರೂ ಅವಶ್ಯಕ ತೈಲವನ್ನು ಕೊಂಚ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಕೆಲವು ತೊಟ್ಟುಗಳನ್ನು ಹಾಕಿ ಕೊಂಚವೇ ಒತ್ತಡದಿಂದ ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು. 

ಹೊಕ್ಕಳಿಗೆ ಒಂದೆರಡು ಚಮಚ ಎಣ್ಣೆ ಹಚ್ಚಿಕೊಂಡರೆ ನಾನಾ ಲಾಭ!

ಮಸಾಜ್ ಮಾಡಲು ಅತ್ಯುತ್ತಮ ವಿಧಾನವೆಂದರೆ ಮೊದಲು ನೆಲದ ಮೇಲೆ ಚಾಪೆಯೊಂದನ್ನು ಹಾಸಿ ಅಂಗಾತ ಮಲಗಿಕೊಳ್ಳಿ. ಎರಡೂ ಹಸ್ತಗಳನ್ನು ಒಂದಕ್ಕೊಂದು ಉಜ್ಜಿಕೊಂಡು ಬೆಚ್ಚಗಾಗಿಸಿ. ಮೊದಲು ಹೊಕ್ಕುಳಲ್ಲಿ ಕೆಲವು ತೊಟ್ಟು ಎಣ್ಣೆಯನ್ನು ಹಾಕಿ ತೋರುಬೆರಳನ್ನು ಹೊಕ್ಕುಳಲ್ಲಿರಿಸಿ ಹೊಕ್ಕುಳ ಪಕ್ಕದ ಭಾಗವನ್ನು ಉಳಿದ ಎರಡೂ ಕೈಗಳ ಬೆರಳುಗಳಿಂದ ವೃತ್ತಾಕಾರದಲ್ಲಿ ಮಸಾಜ್ ಮಾಡಿ. 

ಹೊಟ್ಟೆಯ ಹೊಕ್ಕಳು: ನೀವು ತಿಳಿದಿರದ ಅಮೋಘ ಸಂಗತಿಗಳು

ಹೊಕ್ಕುಳ ಪಕ್ಕದ ಭಾಗವನ್ನು ಸುಮಾರು ಐವತ್ತು ಬಾರಿ ಮಸಾಜ್ ಮಾಡಿದರೆ ಸಾಕು. ಶೀಘ್ರವೇ ಇದರ ಪರಿಣಾಮವನ್ನು ಗಮನಿಸಬಹುದು. ಬನ್ನಿ, ಸುಲಭ ವಿಸರ್ಜನೆಯ ಹೊರತಾಗಿ ಈ ಮಸಾಜ್ ಮೂಲಕ ಇನ್ನಾವ ಪ್ರಯೋಜನ ಪಡೆಯಬಹುದು ಎಂಬುದನ್ನು ನೋಡೋಣ... 

ಮಲಬದ್ಧತೆಯಿಂದ ಪರಿಹಾರ ಒದಗಿಸುತ್ತದೆ

ಮಲಬದ್ಧತೆಯಿಂದ ಪರಿಹಾರ ಒದಗಿಸುತ್ತದೆ

ಪ್ರತಿದಿನ ಬೆಳಿಗ್ಗೆದ್ದ ಬಳಿಕ ಮೊದಲ ಕಾರ್ಯವಾಗಿ ಕೆಳಹೊಟ್ಟೆಯ ಮಸಾಜ್ ಮಾಡುವ ಮೂಲಕ ಮಲಬದ್ಧತೆಗೆ ಪರಿಹಾರ ದೊರಕುತ್ತದೆ. ತನ್ಮೂಲಕ ಮಲವಿಸರ್ಜನೆ ಸುಲಭವಾಗುತ್ತದೆ ಹಾಗೂ ಜೀರ್ಣಾಂಗಗಳನ್ನು ಪೂರ್ಣವಾಗಿ ಖಾಲಿಗೊಳಿಸುವ ಮೂಲಕ ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ.

ಜೀರ್ಣಾಂಗಗಳ ಆರೋಗ್ಯ ಹೆಚ್ಚಿಸುತ್ತದೆ

ಜೀರ್ಣಾಂಗಗಳ ಆರೋಗ್ಯ ಹೆಚ್ಚಿಸುತ್ತದೆ

ನಿಯಮಿತವಾಗಿ ಕೆಳಹೊಟ್ಟೆಯನ್ನು ಮಸಾಜ್ ಮಾಡುತ್ತಿರುವ ಮೂಲಕ ಜಠರ ಮತ್ತು ಕರುಳುಗಳ ಆರೋಗ್ಯ ಹೆಚ್ಚುತ್ತದೆ. ವಿಶೇಷವಾಗಿ ಈ ಭಾಗದಲ್ಲಿ ರಕ್ತಪರಿಚಲನೆ ಹೆಚ್ಚುವ ಮೂಲಕ ಹೊಟ್ಟೆಯ ಭಾಗದಲ್ಲಿ ಹೆಚ್ಚು ಪ್ರಚೋದನೆ ದೊರಕುತ್ತದೆ ಹಾಗೂ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಹೊಟ್ಟೆಯ ಸ್ನಾಯುಗಳನ್ನು ಹುರಿಗಟ್ಟಿಸುತ್ತದೆ

ಹೊಟ್ಟೆಯ ಸ್ನಾಯುಗಳನ್ನು ಹುರಿಗಟ್ಟಿಸುತ್ತದೆ

ಮಸಾಜ್ ಮಾಡುವ ಸಮಯದಲ್ಲಿ ಹೊಟ್ಟೆಯ ಸ್ನಾಯುಗಳನ್ನು ಅನಿವಾರ್ಯವಾಗಿ ಸಂಕುಚಿಸಲೇಬೇಕಾದ ಕಾರಣ ಈ ಸ್ನಾಯುಗಳು ಹೆಚ್ಚು ಹುರಿಗಟ್ಟುತ್ತವೆ. ನಿಯಮಿತವಾದ ಮಸಾಜ್ ನಿಂದ ಹೊಟ್ಟೆಯ ಸ್ನಾಯುಗಳು ಹುರಿಗಟ್ಟುತ್ತವೆ ಹಾಗೂ ಕೊಬ್ಬು ಕರಗುತ್ತದೆ. ಹೊಟ್ಟೆಯ ಸ್ನಾಯು ಹುರಿಗಟ್ಟಿಸಲು ಈ ವಿಧಾನವೂ ಸಮರ್ಥವೆಂದು ಇದುವರೆಗೆ ಕನಿಷ್ಠವಾಗಿ ನಿರೀಕ್ಷಿಸಲಾಗಿತ್ತು.

ಮಹಿಳೆಯರ ಮಾಸಿಕ ದಿನಗಳ ನೋವು ತಗ್ಗಿಸುತ್ತದೆ

ಮಹಿಳೆಯರ ಮಾಸಿಕ ದಿನಗಳ ನೋವು ತಗ್ಗಿಸುತ್ತದೆ

ಮಹಿಳೆಯರ ಮಾಸಿಕ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ನೋವನ್ನು ಕಡಿಮೆ ಮಾಡಲು ಹಾಗೂ ರಕ್ತಸ್ರಾವವನ್ನು ತಗ್ಗಿಸಲು ಹೊಟ್ಟೆಯ ಮಸಾಜ್ ಉತ್ತಮವಾಗಿದೆ. ಇದರ ಉತ್ತಮ ಪರಿಣಾಮ ಪಡೆಯಬೇಕೆಂದರೆ ಮಾಸಿಕ ದಿನಗಳು ಪ್ರಾರಂಭವಾಗುವ ಐದರಿಂದ ಏಳು ದಿನಗಳ ಮೊದಲಿನಿಂದಲೇ ಮಸಾಜ್ ಪ್ರಾರಂಭಿಸಬೇಕು.

ಒತ್ತಡವನ್ನು ನಿವಾರಿಸುತ್ತದೆ

ಒತ್ತಡವನ್ನು ನಿವಾರಿಸುತ್ತದೆ

ದೈಹಿಕ ಪ್ರಯೋಜನಗಳ ಜೊತೆಗೇ ಈ ಮಸಾಜ್ ನಿಂದ ಕೆಲವು ಭಾವನಾತ್ಮಕ ಪ್ರಯೋಜನಗಳೂ ಇವೆ. ಮಸಾಜ್ ಬಳಿಕ ದೈಹಿಕವಾಗಿ ನಿರಾಳರಾಗುವ ಜೊತೆಗೇ ಮನಸ್ಸು ಸಹಾ ನಿರಾಳವಾಗುತ್ತದೆ.

ಹೊಟ್ಟೆಯುಬ್ಬರಿಕೆಯನ್ನು ನಿವಾರಿಸುತ್ತದೆ

ಹೊಟ್ಟೆಯುಬ್ಬರಿಕೆಯನ್ನು ನಿವಾರಿಸುತ್ತದೆ

ಇದು ಹೊಟ್ಟೆಯ ಮಸಾಜ್ ನ ಅತ್ಯುತ್ತಮ ಪ್ರಯೋಜನವಾಗಿದೆ. ಒಂದು ವೇಳೆ ನೀವು ಹೊಟ್ಟೆಯುಬ್ಬರಿಕೆಯಿಂದ ಸತತವಾಗಿ ಬಳಲುತ್ತಿದ್ದರೆ ಕೆಳಹೊಟ್ಟೆಯ ಮಸಾಜ್ ನಿಂದ ಖಂಡಿತವಾಗಿಯೂ ಪ್ರಯೋಜನವಿದೆ. ಹೊಟ್ಟೆಯುಬ್ಬರಿಕೆಗೆ ಕಾರಣವಾದ ಹೆಚ್ಚಿನ ತ್ಯಾಜ್ಯ ಸಂಗ್ರಹ ಸುಲಭವಾಗಿ ಹೊರಹೋಗುವ ಮೂಲಕ ಹೊಟ್ಟೆಯುಬ್ಬರಿಕೆ ಇಲ್ಲವಾಗುತ್ತದೆ.

ಎಚ್ಚರಿಕೆ

ಎಚ್ಚರಿಕೆ

ಹೊಟ್ಟೆಯ ಭಾಗದಲ್ಲಿ ಮೂಳೆ ಇಲ್ಲದೇ ಇರುವ ಕಾರಣ ಈ ಭಾಗದ ಮಸಾಜ್ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಅಲ್ಲದೇ ಈ ಭಾಗದಲ್ಲಿ ಹೆಚ್ಚಿನ ಒತ್ತಡ ಹೇರಕೂಡದು. ಅಲ್ಲದೇ ಈ ಕೆಳಗಿನ ತೊಂದರೆ ಇರುವ ವ್ಯಕ್ತಿಗಳಿಗೆ ಈ ಮಸಾಜ್ ಸೂಕ್ತವಲ್ಲ: ಮೂತ್ರಪಿಂಡಗಳ ಕಲ್ಲುಗಳ ತೊಂದರೆ ಇರುವವರು, ಪಿತ್ತಕೋಶದಲ್ಲಿ ಕಲ್ಲು, ಉರಿಯೂತದ ತೊಂದರೆ, ಕರುಳಿನ ಹುಣ್ಣು, ಹರ್ನಿಯಾ, ಕರುಳುಗಳಲ್ಲಿ ರಕ್ತಸ್ರಾವ ಮೊದಲಾದ ತೊಂದರೆ ಇರುವ ವ್ಯಕ್ತಿಗಳು. ಒಂದು ವೇಳೆ ಮಹಿಳೆಯರು ಗರ್ಭಧರಿಸಲು ಬಯಸುತ್ತಿದ್ದರೆ ಅಥವಾ ಈಗಾಗಲೇ ಗರ್ಭವತಿಯಾಗಿದ್ದರೆ ಈ ಮಸಾಜ್ ಅನ್ನು ಸರ್ವಥಾ ನಿರ್ವಹಿಸಕೂಡದು.

English summary

Benefits Of Lower Abdominal Massage

The benefits of lower abdominal massage cannot be underestimated. Soon after you wake up, if your bowel movements don't start, you might become restless. Sometimes, walking in your living room or drinking some hot water can trigger the nature's calls. But if they don't, then try belly massage. Here are some abdominal massage benefits.
Subscribe Newsletter