ಖಾಲಿ ಹೊಟ್ಟೆಗೆ ನೀರಿನ ಥೆರಪಿ ಮಾಡಿದರೆ-ಹತ್ತಾರು ರೋಗಗಳು ನಿಯಂತ್ರಣಕ್ಕೆ!

By: manu
Subscribe to Boldsky

ನಮ್ಮಲ್ಲಿ ಕೆಲವರಿಗೆ ಬೆಳಿಗ್ಗೆದ್ದ ತಕ್ಷಣ ಒಂದು ದೊಡ್ಡ ಲೋಟ ತಣ್ಣೀರು ಕುಡಿಯುವ ಅಭ್ಯಾಸವಿರುತ್ತದೆ. ಇದು ಕೆಲವರಿಗೆ ವಿಚಿತ್ರ ಎನ್ನಿಸಬಹುದು. ಆದರೆ ಒಂದು ದಿನವೂ ಬಿಡದೇ ಈ ಅಭ್ಯಾಸವನ್ನು ನಡೆಸಿಕೊಂಡು ಬಂದಿರುವವರು ಉತ್ತಮ ಆರೋಗ್ಯ ಹೊಂದಿರುತ್ತಾರೆ. ಜಪಾನೀಯರ ಪ್ರಕಾರ ಒಂದು ಕ್ರಮದಲ್ಲಿ ನೀರು ಕುಡಿಯುವುದನ್ನು ಅನುಸರಿಸುವುದರಿಂದ ಹಲವಾರು ಆರೋಗ್ಯದ ಏರುಪೇರುಗಳನ್ನು ಎದುರಿಸಬಹುದು.  ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ವಾಟರ್ ಥೆರಪಿ ಅಥವಾ ನೀರಿನ ಚಿಕಿತ್ಸೆಯ ಮೂಲಮಂತ್ರವೆಂದರೆ ನಮ್ಮ ದೇಹದ ನೀರಿನ ಪ್ರಮಾಣವನ್ನು ಸಮತೋಲನದಲ್ಲಿರಿಸಿ ಆರೋಗ್ಯವನ್ನು ವೃದ್ಧಿಸುವುದು. ಆದರೆ ಮೂತ್ರಪಿಂಡಗಳ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳು ಅಥವಾ ಈಗಾಗಲೇ ಬೇರೆ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರು ಈ ಚಿಕಿತ್ಸೆಯನ್ನು ವೈದ್ಯರ ಅನುಮತಿಯಿಲ್ಲದೇ ಪ್ರಯತ್ನಿಸಬಾರದು.  ನೆನಪಿಟ್ಟುಕೊಳ್ಳಿ- ಇನ್ನೆಂದಿಗೂ 'ನಿಂತು ನೀರು' ಕುಡಿಯಬೇಡಿ!

ಅಲ್ಲದೇ ಒಂದು ವೇಳೆ ನೀವು ಈಗಾಗಲೇ ಬೇರೆ ಔಷಧಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಈ ಚಿಕಿತ್ಸೆಯನ್ನು ಪ್ರಯತ್ನಿಸದಿರುವುದೇ ಉತ್ತಮ. ಅಲ್ಲದೇ ಸತತವಾಗಿ ಮೂತ್ರ ವಿಸರ್ಜಿಸುವ ತೊಂದರೆ ಇರುವ ವ್ಯಕ್ತಿಗಳಿಗೂ ಈ ವಿಧಾನ ಸೂಕ್ತವಲ್ಲ.... 

ನೀರಿನ ಚಿಕಿತ್ಸೆ ಎಂದರೇನು?

ನೀರಿನ ಚಿಕಿತ್ಸೆ ಎಂದರೇನು?

ಪ್ರತಿದಿನವೂ ಬೆಳಿಗ್ಗೆದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಒಂದು ನಿಗದಿತ ಪ್ರಮಾಣದ ನೀರನ್ನು ಕುಡಿಯುವುದು ಹಾಗೂ ದಿನದ ಇತರ ಆಹಾರಗಳಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುವುದು ಈ ಚಿಕಿತ್ಸೆಯ ಮೂಲಮಂತ್ರವಾಗಿದೆ.

ಈ ಚಿಕಿತ್ಸೆಯಿಂದ ಯಾವ ಕಾಯಿಲೆಗಳು ಗುಣವಾಗುತ್ತವೆ?

ಈ ಚಿಕಿತ್ಸೆಯಿಂದ ಯಾವ ಕಾಯಿಲೆಗಳು ಗುಣವಾಗುತ್ತವೆ?

ಮೈಕೈನೋವು, ತಲೆನೋವು, ಅಸ್ತಮಾ, ಬ್ರಾಂಕೈಟಿಸ್, ಅಪಸ್ಮಾರ ಅಥವಾ ಮೂರ್ಛೆರೋಗ, ಹೃದಯಬಡಿತದಲ್ಲಿ ಏರುಪೇರು, ಕ್ಷಯರೋಗ, ಮೂತ್ರಪಿಂಡದ ತೊಂದರೆ, ಮೂತ್ರನಾಳದ ಸೋಂಕು, ಅಪಾನವಾಯು, ಗ್ಯಾಸ್ ಟ್ರಬಲ್, ವಾಂತಿ, ಮಧುಮೇಹ, ಮೂಲವ್ಯಾಧಿ, ಮಲಬದ್ದತೆ, ಗರ್ಭಾಶಯದ ತೊಂದರೆ, ಕಿವಿ ಮತ್ತು ಮೂಗಿನ ಸೋಂಕು, ಮಹಿಳೆಯರ ಮಾಸಿಕ ದಿನಗಳ ತೊಂದರೆ ಹಾಗೂ ಕೆಲವು ಕಣ್ಣಿನ ತೊಂದರೆಗಳಿಗೆ ಈ ಚಿಕಿತ್ಸೆ ನೆರವಾಗುತ್ತದೆ.

ಈ ಚಿಕಿತ್ಸೆಯನ್ನು ಪ್ರಾರಂಭಿಸುವುದು ಹೇಗೆ?

ಈ ಚಿಕಿತ್ಸೆಯನ್ನು ಪ್ರಾರಂಭಿಸುವುದು ಹೇಗೆ?

ಬೆಳಿಗೆದ್ದ ತಕ್ಷಣ, ಹಾಸಿಗೆಯಲ್ಲಿಯೇ, 640 ಮಿಲೀ ನೀರನ್ನು ನಿಧಾನವಾಗಿ ಕುಡಿಯಿರಿ. ಮುಂದಿನ ನಲವತ್ತೈದು ನಿಮಿಷಗಳವರೆಗೆ ಏನನ್ನೂ ಸೇವಿಸದಿರಿ. ಬಳಿಕ ಅಲ್ಪ ಉಪಾಹಾರ ಸೇವಿಸಿ. ಬಳಿಕ ಎರಡು ಗಂಟೆಗಳ ಕಾಲ ಏನನ್ನೂ ಸೇವಿಸದಿರಿ. ಮಧಾಹ್ನದ ಊಟದ ಬಳಿಕವೂ ಎರಡು ಘಂಟೆಗಳ ಕಾಲ ಏನನ್ನೂ ಸೇವಿಸದಿರಿ. ಇದೇ ಕ್ರಮದಲ್ಲಿ ರಾತ್ರಿಯೂಟವನ್ನೂ ಅನುಸರಿಸಿ.

ಈ ಚಿಕಿತ್ಸೆಯಿಂದ ಹೇಗೆ ಲಾಭವಾಗುತ್ತದೆ?

ಈ ಚಿಕಿತ್ಸೆಯಿಂದ ಹೇಗೆ ಲಾಭವಾಗುತ್ತದೆ?

ಜಪಾನೀಯರು ಕಂಡುಕೊಂಡ ಪ್ರಕಾರ ಈ ಚಿಕಿತ್ಸೆಯಿಂದ ಗ್ಯಾಸ್ ಟ್ರಬಲ್ ಅಥವಾ ಅಪಾನವಾಯುವಿನ ತೊಂದರೆ ಹತ್ತೇ ದಿನದಲ್ಲಿ ಕಡಿಮೆಯಾಗುತ್ತದೆ. ಮಧುಮೇಹ ಒಂದೇ ತಿಂಗಳಲ್ಲಿ ನಿಯಂತ್ರಣಕ್ಕೆ ಬರುತ್ತದೆ, ಅಧಿಕ ರಕ್ತದೊತ್ತಡ ನಲವತ್ತು ದಿನದಲ್ಲಿ ಕಡಿಮೆಯಾಗುತ್ತದೆ, ಮಲಬದ್ಧತೆ ಹತ್ತು ದಿನಗಳಲ್ಲಿ ಕಡಿಮೆಯಾಗುತ್ತದೆ, ಕ್ಷಯರೋಗದ ಲಕ್ಷಣಗಳು ಮೂರು ತಿಂಗಳಲ್ಲಿ ಕಡಿಮೆಯಾಗತೊಡಗುತ್ತವೆ. ಅಲ್ಲದೇ ಈ ವಿಧಾನದಿಂದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ದಿನವಿಡೀ ಉಲ್ಲಾಸದಿಂದಿರಲು ನೆರವಾಗುತ್ತದೆ.

ಈ ಚಿಕಿತ್ಸೆಯನ್ನು ಎಷ್ಟು ಕಾಲ ಅನುಸರಿಸಬೇಕು?

ಈ ಚಿಕಿತ್ಸೆಯನ್ನು ಎಷ್ಟು ಕಾಲ ಅನುಸರಿಸಬೇಕು?

ಈ ಚಿಕಿತ್ಸೆಗೆ ಇಷ್ಟೇ ಕಾಲ ಎಂಬುದಿಲ್ಲ, ಇದನ್ನು ಚಿಕಿತ್ಸೆಯಂತಲ್ಲದೇ ನಿತ್ಯದ ಅಭ್ಯಾಸವಾಗಿಸಲು ಜಪಾನೀಯರು ಸಲಹೆ ನೀಡುತ್ತಾರೆ.

ಈ ಚಿಕಿತ್ಸೆ ಎಷ್ಟು ಫಲಕಾರಿ?

ಈ ಚಿಕಿತ್ಸೆ ಎಷ್ಟು ಫಲಕಾರಿ?

ಈ ವಿಧಾನವನ್ನು ಜಪಾನೀಯರು ನೂರಾರು ವರ್ಷಗಳಿಂದ ಅನುಸರಿಸುತ್ತಾ ಬಂದಿದ್ದು ಈ ಸರಳ ವಿಧಾನ ಜಪಾನ್ ಆದ್ಯಂತ ಜನಪ್ರಿಯವಾಗಿದೆ. ಇದು ಅಗ್ಗವೂ, ಸುಲಭವೂ, ಸರಳವೂ ಆಗಿರುವುದಲ್ಲದೇ ಇದರಲ್ಲಿ ಯಾವುದೇ ಅಡ್ಡಪರಿಣಾಮಗಳೂ ಇರದೇ ಇರುವುದರಿಂದ ಹೆಚ್ಚಿನ ಎಲ್ಲರಿಗೂ ಈ ವಿಧಾನ ಉತ್ತಮವಾಗಿದೆ. ಯಾವುದೇ ಕಾಯಿಲೆ ಇಲ್ಲದೇ ಇದ್ದವರೂ ಈ ವಿಧಾನ ಅನುಸರಿಸುವ ಮೂಲಕ ಉತ್ತಮ ಆರೋಗ್ಯವನ್ನು ಉಳಿಸಿಕೊಂಡು ಹೋಗುವಲ್ಲಿ ನೆರವಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುವುದರ ಮಹತ್ವ

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುವುದರ ಮಹತ್ವ

ಬೆಳಿಗ್ಗೆದ್ದಾಗ ನಮ್ಮ ಅನೈಚ್ಛಿಕ ಕಾರ್ಯಗಳು ಪೂರ್ಣಗೊಂಡಿದ್ದು ಈಗ ಐಚ್ಛಿಕ ಕಾರ್ಯಗಳು ಪ್ರಾರಂಭವಾಗುತ್ತವೆ. ಈ ಹೊತ್ತಿನಲ್ಲಿ ತಣ್ಣೀರು ಒದಗಿಸುವ ಮೂಲಕ ನಮ್ಮ ಜೀರ್ಣಾಂಗಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ಪೂರ್ಣವಾಗಿ ಹೊರಹೋಗಲು ಸಾಧ್ಯವಾಗುತ್ತದೆ. ಈ ಕಾರ್ಯಕ್ಕೆ ಸುಮಾರು ಮುಕ್ಕಾಲು ಗಂಟೆ ತಗಲುತ್ತದೆ. ಈ ಅವಧಿಯಲ್ಲಿ ಏನನ್ನೂ ಸೇವಿಸದೇ ಇರುವ ಮೂಲಕ ಕಲ್ಮಶಗಳು ಪೂರ್ಣವಾಗಿ ನಿವಾರಣೆಯಾಗುವುದೇ ಈ ಚಿಕಿತ್ಸೆಯ ಮೂಲವಾಗಿದೆ. ಬಳಿಕ ಸೇವಿಸುವ ಆಹಾರದಿಂದ ಪೂರ್ಣಪ್ರಮಾಣದ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಇನ್ನೊಂದು ಪ್ರಯೋಜನ

ಇನ್ನೊಂದು ಪ್ರಯೋಜನ

ಬೆಳಗ್ಗಿನ ನೀರಿನ ಸೇವನೆಯಿಂದ ಲಭ್ಯವಾಗುವ ಇನ್ನೊಂದು ಪ್ರಯೋಜನವೆಂದರೆ ನಮ್ಮ ದೇಹದ ದುಗ್ಧಗ್ರಂಥಿಗಳ ವ್ಯವಸ್ಥೆಯಲ್ಲಿ ಸಮತೋಲನ ಪಡೆಯುವುದು. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಇನ್ನಷ್ಟು ಬಲಗೊಳ್ಳುತ್ತದೆ.

ಅಷ್ಟಕ್ಕೂ ನಮ್ಮ ದೇಹಕ್ಕೆ ಬರೆಯ ನೀರೇ ಏಕೆ ಬೇಕು?

ಅಷ್ಟಕ್ಕೂ ನಮ್ಮ ದೇಹಕ್ಕೆ ಬರೆಯ ನೀರೇ ಏಕೆ ಬೇಕು?

ನಮ್ಮ ದೇಹದ 71 ಶೇಖಡಾ ನೀರಿನಿಂದ ಕೂಡಿದೆ. ಬಾಯಿಯಲ್ಲಿನ ಜೊಲ್ಲಿನ ಉತ್ಪಾದನೆ, ನಮ್ಮ ಶ್ವಾಸನಾಳಗಳ ಒಳಗಿನ ಆರ್ದ್ರತೆ, ಶರೀರದ ತಾಪಮಾನ ಕಾಪಾಡಿಕೊಳ್ಳಲು, ಶರೀರದ ತ್ಯಾಜ್ಯಗಳನ್ನು ವಿಸರ್ಜಿಸಲು, ನಮ್ಮ ಮೂಳೆಸಂದುಗಳಿಗೆ ಜಾರುಕವನ್ನು ನೀಡಲು ಮೊದಲಾದ ನೂರಾರು ಕೆಲಸಗಳಿಗೆ ನೀರು ಅಗತ್ಯವಾಗಿ ಬೇಕಾಗಿರುತ್ತದೆ. ಬೆಳಗ್ಗಿನ ನೀರಿನ ಸೇವನೆಯಿಂದ ಈ ಎಲ್ಲಾ ಕಾರ್ಯಗಳು ಸುಲಲಿತವಾಗಿ ಜರುಗುತ್ತವೆ.

English summary

Believe It Or Not, You Just Need Water To Try This Remedy!

Some of us have the habit of drinking water soon after waking up. Well, even this simple practice, when done methodically and consistently helps in combating many health disorders, according to Japanese. The objective of water therapy is to use water to balance and regulate health. Don't try water therapy if you already have serious health conditions or kidney issues. Talk to your family doctor before trying it.
Subscribe Newsletter