Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಧ್ಯಯನ ವರದಿ: ವ್ಯಾಯಮದ ಬಳಿಕ ಚೆನ್ನಾಗಿ ಬೀಟ್‌ರೂಟ್ ಸೇವಿಸಬೇಕಂತೆ!
ಪ್ರತಿಯೊಂದು ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ತಿಳಿದಿರುವ ವಿಚಾರವಾಗಿದೆ. ಅದರಲ್ಲೂ ಕೆಲವೊಂದು ತರಕಾರಿಗಳಿಂದ ದೇಹಕ್ಕೆ ಅದ್ಭುತ ಆರೋಗ್ಯ ಲಾಭಗಳು ಸಿಗುವುದು. ರಕ್ತಹೀನತೆ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಬೀಟ್ ರೂಟ್ ತುಂಬಾ ಒಳ್ಳೆಯದು. ಹೊಸ ಅಧ್ಯಯನವೊಂದರ ಪ್ರಕಾರ ಬೀಟ್ ರೂಟ್‌ನ್ನು ವ್ಯಾಯಾಮದ ಬಳಿಕ ಸೇವಿಸಿದರೆ ತುಂಬಾ ಒಳ್ಳೆಯದಂತೆ. ಬೀಟ್ ರೂಟ್ ಅನ್ನು ವ್ಯಾಯಾಮ ಬಳಿಕ ಸೇವನೆ ಮಾಡುವುದರಿಂದ ಊತ ಕಡಿಮೆಯಾಗುವುದು ಎಂದು ಅಧ್ಯಯನವು ಹೇಳಿದೆ.

ನಾರ್ಥ್ರಂಬಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಸುಮಾರು 30 ಮಂದಿ ದೈಹಿಕವಾಗಿ ಚಟುವಟಿಕೆಯಲ್ಲಿರುವ ಪುರುಷರ ಮೇಲೆ ಪ್ರಯೋಗ ಮಾಡಿ ಈ ವರದಿ ಸಿದ್ಧಪಡಿಸಿದೆ. ಇವರೆಲ್ಲಾರ ವಯಸ್ಸು ಸುಮಾರು 18ರಿಂದ 28 ಮತ್ತು ಪ್ರತಿಯೊಬ್ಬರು ವಾರದಲ್ಲಿ ಎರಡು ದಿನವಾದರೂ ವ್ಯಾಯಾಮ ಮಾಡುತ್ತಲಿದ್ದರು.
ಅಧ್ಯಯನದ ವೇಳೆ ಪುರುಷರು ಸುಮಾರು 100 ಸಲ ಜಿಗಿಯುವ ವ್ಯಾಯಾಮ ಮಾಡಲಾಯಿತು. ಇದರಿಂದ ಅವರ ಕಾಲುಗಳ ಮೇಲೆ ಹಾನಿಯಾಗುತ್ತದೆ. ಮುಂದಿನ ಮೂರು ದಿನಗಳ ಕಾಲ ಈ ಪುರುಷರು 250 ಮಿ.ಲೀ. ಬೀಟ್‌ರೂಟ್ ಜ್ಯೂಸ್ ಅಥವಾ 125 ಮಿ.ಲೀ. ಬೀಟ್ ರೂಟ್ ಜ್ಯೂಸ್ ಅಥವಾ ಪ್ಲೇಸ್ಬೋ ಜ್ಯೂಸ್ ಕುಡಿಯಲು ತಿಳಿಸಲಾಯಿತು. ಪ್ಲೆಸ್ಲೋ ಜ್ಯೂಸ್‌ನಲ್ಲಿ ಬೀಟ್‌ರೂಟ್ ಜ್ಯೂಸ್ ನಷ್ಟೇ ಕ್ಯಾಲರಿ ಮತ್ತು ಕಾರ್ಬ್ರೋಹೈಡ್ರೇಟ್ಸ್ ಇದೆ.
ಮೂರು ದಿನಗಳ ಕಾಲ ಬೀಟ್ ರೂಟ್ ಜ್ಯೂಸ್ ಹೆಚ್ಚಿನ ಪ್ರಮಾಣದಲ್ಲಿ ಕುಡಿದ ಕಾರಣ ಅವರಲ್ಲಿ ಚೇತರಿಕೆ ಕಂಡುಬಂತು. ಎರಡು ದಿನಗಳ ಬಳಿಕ ಪ್ಲೆಸ್ಬೋ ಗುಂಪಿನಲ್ಲಿ ಇದ್ದವರಿಗಿಂತ ಬೀಟ್ ರೂಟ್ ಜ್ಯೂಸ್ ಕುಡಿದವರು ಶೇ. 18ರಷ್ಟು ಹೆಚ್ಚು ಎತ್ತರಕ್ಕೆ ಜಿಗಿದರು. ಬೀಟ್ ರೂಟ್ ನಲ್ಲಿ ಪ್ರಮುಖ ಪೋಷಕಾಂಶಗಳಾದ ವಿಟಮಿನ್, ಸತು, ಮೆಗ್ನಿಶಿಯಂ, ಫ್ಲಾವನಾಯ್ಡ್, ಕ್ಲೋರಿನ್, ಬಿಟೇನ್, ಸೋಡಿಯಂ, ಕ್ಯಾಲ್ಸಿಯಂ ಮತ್ತು ನೈಸರ್ಗಿಕ ನೈಟ್ರೇಟ್ ಇದೆ. ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣ ಹೊಂದಿರುವ ಕಾರಣದಿಂದ ಬೀಟ್‌ರೂಟ್ ಊತವನ್ನು ಬೇಗನೆ ಶಮನ ಮಾಡುವುದು ಎಂದು ಅಧ್ಯಯನ ನಡೆಸಿರುವ ಡಾ, ಟಾಮ್ ಕ್ಲಿಫರ್ಡ್ ತಿಳಿಸಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

