ವಿಶ್ವ ವೈದ್ಯರ ದಿನ ವಿಶೇಷ: ಸ್ವಚ್ಛವಾಗಿದ್ದರೆ ಮಾತ್ರ ಆರೋಗ್ಯ...

By: Hemanth
Subscribe to Boldsky

ಸ್ವಚ್ಛತೆ ಎನ್ನುವುದು ಮನಸ್ಸಿನಿಂದ ಬಂದರೆ ಮಾತ್ರ ಅದು ನಮ್ಮ ಸುತ್ತಮುತ್ತಲು ಕಾಣಿಸಿಕೊಳ್ಳುತ್ತದೆ ಎನ್ನುವ ಮಾತಿದೆ. ಇಲ್ಲವೆಂದರೆ ಎಷ್ಟೇ ಜಾಗೃತಿ ಮೂಡಿಸಿದರೂ ಅದು ಬೋರ್ಗಲ್ಲಿನ ಮೇಲೆ ನೀರು ಸುರಿದಂತೆ. ಪ್ರತಿಯೊಬ್ಬರು ಕೂಡ ತಾವು ಸ್ವಚ್ಛವಾಗಿದ್ದುಕೊಂಡು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟರೆ ಆಗ ನಮ್ಮ ನಾಡು ಹಾಗೂ ದೇಶ ಕೂಡ ಸ್ವಚ್ಛವಾಗುತ್ತದೆ. ಆದರೆ ನಾವೇ ಕೊಳಕು ಮಾಡಿದರೆ ಎಲ್ಲವೂ ಕೊಳಕಾಗಿರುತ್ತದೆ.

ಇಂದಿನ ಕಲುಷಿತ ವಾತಾವರಣದಲ್ಲಿ ಪ್ರತಿಯೊಂದು ವಸ್ತುವು ಕಲ್ಮಶವಾಗಿರುತ್ತದೆ. ಎಲ್ಲದರಲ್ಲೂ ವಿಷಕಾರಿ ಅಂಶಗಳು ಮೆತ್ತಿಕೊಂಡಿರುತ್ತದೆ. ಇದರಿಂದ ಮಾರಕ ರೋಗಗಳು, ಸೋಂಕು ನಮ್ಮ ದೇಹಕ್ಕೆ ಹರಡುವುದರಲ್ಲಿ ಸಂಶಯವೇ ಇಲ್ಲ. ಇಂತಹ ಸಮಯದಲ್ಲಿ ನಾವು ಸ್ವಚ್ಛವಾಗಿದ್ದರೆ ನಮ್ಮ ಆರೋಗ್ಯವನ್ನು ಒಳ್ಳೆಯ ರೀತಿಯಿಂದ ಕಾಪಾಡಬಹುದು. ಹಿಂದಿನಿಂದಲೂ ಹಿರಿಯರು, ಅಧ್ಯಾಪಕರು ಸ್ವಚ್ಛತೆ ಬಗ್ಗೆ ಹೇಳುತ್ತಾ ಬಂದಿದ್ದಾರೆ. 

ವೈದ್ಯರೇ ನಿದ್ರೆ ಮಾಡದಿದ್ದರೆ? ಅವರ ಆರೋಗ್ಯದ ಗತಿಯೇನು?

ಆದರೆ ನಾವು ಅದನ್ನು ಕಡೆಗಣಿಸುತ್ತಲೇ ಬಂದಿದ್ದೇವೆ. ನಾವು ಸ್ವಚ್ಛವಾಗಿದ್ದರೂ ಮನೆಯ ಕಸವನ್ನು ಬದಿಯ ರಸ್ತೆಯಲ್ಲಿ ಹಾಕುತ್ತೇವೆ. ಇದು ಸ್ವಚ್ಛತೆಯಲ್ಲ. ನಾವು ಸ್ವಚ್ಛವಾಗಿರುವುದು ಎಷ್ಟು ಅಗತ್ಯ ಎಂದು ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಲೇಕ್ ಸೈಡ್ ಸೆಂಟರ್ ಫಾರ್ ಹೆಲ್ತ್ ಪ್ರಮೋಷನ್‌ನ ಕಾರ್ಯಾಧ್ಯಕ್ಷ, ಪೀಡಿಯಾಟ್ರಿಕ್ ಪುಲ್ಮನೊಲಾಜಿಸ್ಟ್ ಆಗಿರುವಂತಹ ಬೆಂಗಳೂರಿನ ಡಾ. ಎಚ್ ಪರಮೇಶ್ ಅವರು ಬೋಲ್ಡ್ ಸ್ಕೈಯ ಓದುಗರಿಗಾಗಿ ಬರೆದಿರುವಂತಹ ಲೇಖನ...

ಮುಚ್ಚದೆ ಇಟ್ಟಿರುವಂತಹ ಆಹಾರ ತಿನ್ನಬೇಡಿ

ಮುಚ್ಚದೆ ಇಟ್ಟಿರುವಂತಹ ಆಹಾರ ತಿನ್ನಬೇಡಿ

ಮುಚ್ಚದೆ ಹಾಗೆ ಇಟ್ಟಿರುವಂತಹ ಆಹಾರದ ಮೇಲೆ ನೊಣ ಹಾಗೂ ಸೊಳ್ಳೆಗಳು ಸುತ್ತುತ್ತಾ ಇರುತ್ತದೆ. ಆಹಾರವು ಕಲುಷಿತಗೊಳ್ಳಲು ಇದು ಸುಲಭದ ದಾರಿಯಾಗಿದೆ. ರೋಗಗಳನ್ನು ಒಳಗೊಂಡಿರುವ ಬ್ಯಾಕ್ಟೀರಿಯಾಗಳು ನೊಣಗಳ ಮೂಲಕ ಆಹಾರವನ್ನು ತಲುಪುವುದು ಎಂದು ವೈದ್ಯರು ಹೇಳುತ್ತಾರೆ. ಹೆಚ್ಚು ಶ್ರಮ ವಹಿಸದೆ ಕೇವಲ ಆಹಾರವನ್ನು ಮುಚ್ಚಿಟ್ಟು ನೊಣ ಹಾಗೂ ಸೊಳ್ಳೆಗಳು ಅದರಲ್ಲಿ ಕುಳಿತುಕೊಳ್ಳದಂತೆ ಎಚ್ಚರ ವಹಿಸಿ.

ಕೆಮ್ಮುವಾಗ ಬಾಯಿಗೆ ಕರವಸ್ತ್ರ ಹಿಡಿಯಿರಿ

ಕೆಮ್ಮುವಾಗ ಬಾಯಿಗೆ ಕರವಸ್ತ್ರ ಹಿಡಿಯಿರಿ

ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಲ್ಲದೆ ಮನೆಯಲ್ಲಿ ರಾಜಾರೋಷವಾಗಿ ಕೆಮ್ಮುತ್ತಾ ಇರುತ್ತಾರೆ. ಆದರೆ ಇದು ಸರಿಯಲ್ಲ. ಬಾಯಿಗೆ ಏನಾದರೂ ಹಿಡಿಯದೆ ಕೆಮ್ಮಿದರೆ ಆಗ ಕೀಟಾಣುಗಳು ಹರಡುತ್ತದೆ. ಕೆಮ್ಮುವಾಗ ಮತ್ತು ಶೀನುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವೈದ್ಯರು ತಿಳಿಸಿದ್ದಾರೆ.

*ನಿಮಗೆ ನಿಯಂತ್ರಿಸಲು ಸಾಧ್ಯವಾಗದೆ ಇರುವ ಕೆಮ್ಮು ಅಥವಾ ಶೀನು ಬಂದಾಗ ಟಿಶ್ಯೂನಿಂದ ಬಾಯಿ ಮುಚ್ಚಿಕೊಳ್ಳಿ.

*ಹೀಗೆ ಬಳಸಿದ ಟಿಶ್ಯೂವನ್ನು ಬದಿಯಲ್ಲೇ ಇರುವಂತಹ ಕಸದ ಬುಟ್ಟಿಗೆ ಹಾಕುವುದನ್ನು ಮರೆಯಬೇಡಿ.

*ಟಿಶ್ಯು ಇಲ್ಲದೆ ಇರುವಂತಹ ಸಂದರ್ಭದಲ್ಲಿ ನಿಮಗೆ ಕೆಮ್ಮು ಅಥವಾ ಶೀನು ಬಂದರೆ ಮೇಲ್ಭಾಗದ ತೋಳನ್ನು ಬಳಸಿಕೊಳ್ಳಿ ಮತ್ತು ಕೈಯನ್ನು ಬಳಸಬೇಡಿ.

*ಕೆಮ್ಮಿದ ಬಳಿಕ ತಕ್ಷಣ ಹೋಗಿ ಕೈ ತೊಳೆಯಿರಿ.

*ಕೆಮ್ಮುವಾಗ ಮತ್ತು ಶೀನುವಾಗ ಈ ಕ್ರಮಗಳನ್ನು ಪಾಲಿಸಿದರೆ ಆಗ ರೋಗಗಳನ್ನು ತುಂಬಾ ದೂರವಿಡಬಹುದು. ಇದರಿಂದ ಇತರರಿಗೆ ರೋಗ ಹರಡುವುದು ತಪ್ಪುತ್ತದೆ.

'ಆಯುರ್ವೇದ ಸಿರಪ್‌'-ಒಂದೆರಡು ದಿನಗಳಲ್ಲಿಯೇ ಕೆಮ್ಮು ನಿಯಂತ್ರಣಕ್ಕೆ!

ವೈಯಕ್ತಿಕ ಸಾಮಗ್ರಿಗಳನ್ನು ಹಂಚಿಕೊಳ್ಳಬೇಡಿ

ವೈಯಕ್ತಿಕ ಸಾಮಗ್ರಿಗಳನ್ನು ಹಂಚಿಕೊಳ್ಳಬೇಡಿ

ನೀವು ದಿನನಿತ್ಯ ಬಳಸುವಂತಹ ಕೆಲವೊಂದು ವೈಯಕ್ತಿಕ ಸಾಮಗ್ರಿಗಳು ವೈಯಕ್ತಿಕವಾಗಿಯೇ ಇರಲಿ. ತುಂಬಾ ಹತ್ತಿರದವರಿಗೂ ಇದನ್ನು ಹಂಚಿಕೊಳ್ಳಲು ಬಿಡಬೇಡಿ. ನೀವು ಸ್ವಾರ್ಥಿ ಎಂದು ಅವರು ಭಾವಿಸಿಕೊಂಡರೂ ಪರವಾಗಿಲ್ಲ. ಈ ನಿಯಮವನ್ನು ಸರಿಯಾಗಿ ಪಾಲಿಸದೆ ಇರುವಂತಹ ಸಂದರ್ಭದಲ್ಲಿ ರೋಗಕಾರಕ ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.

ನಿಮ್ಮ ತುಂಬಾ ಹತ್ತಿರದ ಸ್ನೇಹಿತರೊಂದಿಗೆ ಲಿಪ್ ಸ್ಟಿಕ್ ಅನ್ನು ಹಂಚಿಕೊಳ್ಳುವುದು ತುಂಬಾ ಅಪಾಯಕಾರಿ. ಯಾಕೆಂದರೆ ತುಟಿಯು ತುಂಬಾ ಸೂಕ್ಷ್ಮ ಮತ್ತು ಇದರಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಇರುತ್ತದೆ. ಇದರಲ್ಲಿ ಕೆಲವು ಕಡಿಮೆ ಹಾನಿಯನ್ನು ಉಂಟು ಮಾಡಬಹುದು ಮತ್ತು ಇನ್ನು ಕೆಲವು ತೀವ್ರ ಹಾನಿಯನ್ನು ಉಂಟು ಮಾಡಬಹುದು. ಬೇರೆಯವರ ಲಿಪ್ ಸ್ಟಿಕ್ ಬಳಸಿದರೆ ನೀವು ಬೇಗನೆ ಅನಾರೋಗ್ಯಕ್ಕೆ ಒಳಗಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಮನೆಯಲ್ಲೇ ತಯಾರಿಸಿದ ಆಹಾರ ಸೇವನೆ

ಮನೆಯಲ್ಲೇ ತಯಾರಿಸಿದ ಆಹಾರ ಸೇವನೆ

ರಸ್ತೆ ಬದಿಯಲ್ಲಿರುವ ಗಾಡಿಗಳಲ್ಲಿ ತಯಾರಿಸುವಂತಹ ತಿಂಡಿ ತಿನಿಸುಗಳನ್ನು ನೋಡಿದಾಗ ನಿಮ್ಮ ಬಾಯಿಯಲ್ಲಿ ನೀರು ಬರದೇ ಇರುವುದಿಲ್ಲ. ಇದು ಆ ಸಮಯಕ್ಕೆ ನಿಮ್ಮ ಬಾಯಿಗೆ ರುಚಿ ಹಾಗೂ ಹೊಟ್ಟೆಗೆ ಸುಖ ನೀಡಬಹುದು. ಆದರೆ ದೀರ್ಘ ಕಾಲಕ್ಕೆ ಇದರಿಂದ ಭಾರೀ ಅಪಾಯ ಎದುರಾಗುವ ಸಾಧ್ಯತೆಗಳು ಇದ್ದೇ ಇದೆ. ಇದರಿಂದ ಆರೋಗ್ಯಕರ ಜೀವನ ಸಾಗಿಸಲು ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ಆಹಾರಗಳು ಮತ್ತು ತಿಂಡಿಗಳನ್ನು ತಿನ್ನುವ ಬದಲು ಮನೆಯಲ್ಲೇ ತಯಾರಿಸಿದ ಆಹಾರ ಸೇವನೆ ಒಳ್ಳೆಯದು. ಇದರಿಂದ ಹಲವಾರು ರೀತಿಯ ಕಾಯಿಲೆಗಳಿಂದ ಪಾರಾಗಬಹುದು. ಇನ್ನು ಮುಂದೆ ರಸ್ತೆ ಬದಿಯಲ್ಲಿ ತಿನ್ನುವ ಮೊದಲು ಮತ್ತೊಮ್ಮೆ ಯೋಚಿಸಿ.

ಸ್ವಚ್ಛತೆ ಹಾಗೂ ಸುರಕ್ಷಿತ ಲೈಂಗಿಕ ಸಂಪರ್ಕ ಕೂಡ ಅಷ್ಟೇ ಅಗತ್ಯ. ರಾಸಾಯನಿಕಗಳ ಬಳಕೆ ಕಡಿಮೆ ಮಾಡುವುದು ಮತ್ತು ಶುದ್ಧವಾದ ನೀರನ್ನು ಕುಡಿಯುವುದು ಹೀಗೆ ಹಲವಾರು ರೀತಿಯ ಸಲಹೆಗಳನ್ನು ವೈದ್ಯರ ದಿನದ ಅಂಗವಾಗಿ ಪರಮೇಶ್ ಅವರು ನಮಗೆ ನೀಡಿದ್ದಾರೆ. ಇದನ್ನು ಪಾಲಿಸಿಕೊಂಡು ಹೋಗಿ ಆರೋಗ್ಯಕರ ಜೀವನ ನಡೆಸುವುದು ಮುಖ್ಯವಾಗಿದೆ.

English summary

Basic Hygiene Tips From Doctors To Reduce The Risk Of Infections

From the time we were little, we would have heard of many tips from elders, teachers, friends and acquaintances about personal hygiene and its impact on our health. But sad is the case when because of our everyday pressures on our work front we have failed to pay heed to those valuable pieces of advice and have ended up with various health issues! In this modern world wher disease-causing germs and pollution are most prevalent, it's time we wake up to the ways in keeping ourselves healthy by following these golden rules, laid down by experts in the field of medicine, which I have tried to list out.
Subscribe Newsletter