ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದ ಪರಿಹಾರಗಳು

Posted By: Arshad
Subscribe to Boldsky

ಇಂದು ಪುರುಷರಲ್ಲಿ ಲೈಂಗಿಕ ದೌರ್ಬಲ್ಯ ವಿಶ್ವದಾದ್ಯಂತ ಕಾಣಬರುತ್ತಿದ್ದು ಇದಕ್ಕೆ ದೇಹದ ತ್ರಾಣ ಕಡಿಮೆಯಾಗಿರುವುದೇ ಪ್ರಮುಖ ಕಾರಣವಾಗಿದೆ. ನಿಮಿರು ದೌರ್ಬಲ್ಯ, ದೇಹದಾರ್ಢ್ಯದ ಕೊರತೆ, ಕಾಮಾಸಕ್ತಿಯ ಕೊರತೆ, ಕಡಿಮೆ ಪ್ರಮಾಣದ ಸ್ಖಲನ ಮೊದಲಾದ ಲೈಂಗಿಕ ಸಮಸ್ಯೆಗಳನ್ನು ಹಲವಾರು ಪುರುಷರು ಎದುರಿಸುತ್ತಿದ್ದಾರೆ. ಲೈಂಗಿಕ ಶಕ್ತಿ ಕುಂದಲು ಕೇವಲ ದೈಹಿಕ ಕಾರಣಗಳು ಮಾತ್ರವೇ ಅಲ್ಲ, ಮಾನಸಿಕ ಕಾರಣಗಳೂ ಇರಬಹುದು.

ಖಿನ್ನತೆ, ಮಾನಸಿಕ ಒತ್ತಡ, ಮಾನಸಿಕ ಕ್ಷೋಭೆಯಿಂದ ಏರುಪೇರಾದ ರಸದೂತಗಳ ಸಂತುಲನ, ಹೆಚ್ಚಿನ ರಕ್ತದೊತ್ತಡ, ಸ್ಥೂಲಕಾಯ ಇತ್ಯಾದಿಗಳೂ ಕಾರಣವಾಗಬಹುದು. ಈ ಕೊರತೆಯನ್ನು ತೋರಿಸಿ ಇದಕ್ಕೆ ಮದ್ದು ಎಂದು ನೀಡುವ ಔಷಧಿಗಳು ಇಂದು ಮಾರುಕಟ್ಟೆಯಲ್ಲಿ ಮುಕ್ತವಾಗಿ ಸಿಗುತ್ತಿವೆ. ಆದರೆ ಈ ಔಷಧಿಗಳು ಒಳ್ಳೆಯದು ಮಾಡುವುದಕ್ಕಿಂತ ಹೆಚ್ಚಾಗಿ ಇವುಗಳ ಅಡ್ಡ ಪರಿಣಾಮಗಳೇ ಹೆಚ್ಚು ಪ್ರಭಾವಶಾಲಿಯಾದ ಕಾರಣ ಈ ತೊಂದರೆಗೆ ನಿಸರ್ಗದ ನೆರವನ್ನೇ ಪಡೆಯುವುದು ಉತ್ತಮ. 

ವಯಾಗ್ರದಂತೆ ಕೆಲಸ ಮಾಡುವ 10 ಅದ್ಭುತ ಆಹಾರಗಳು

ಆಯುರ್ವೇದದ ಪ್ರಕಾರ, ದೇಹದಲ್ಲಿ ಕಫದ ಪ್ರಮಾಣ ಉಲ್ಬಣಗೊಂಡಾಗ ಲೈಂಗಿಕ ತೊಂದರೆಗಳು ಎದುರಾಗುತ್ತವೆ. ಕಫ ಹೆಚ್ಚಾದಾಗ ದೇಹದ ರೋಗ ನಿರೋಧಕ ಶಕ್ತಿ ಕುಂದುವುದು ಹಾಗೂ ಒಟ್ಟಾರೆ ಆರೋಗ್ಯವೂ ಕುಂದುತ್ತದೆ. ಇದರ ಚಿಕಿತ್ಸೆಗಾಗಿ ಆಯುರ್ವೇದ ಕೆಲವಾರು ಮೂಲಿಕೆಗಳನ್ನು ಸಲಹೆ ಮಾಡುತ್ತದೆ ಹಾಗೂ ಇವುಗಳ ಸರಿಯಾದ ಬಳಕೆಯಿಂದ ಲೈಂಗಿಕ ದೌರ್ಬಲ್ಯದ ಸಹಿತ ಒಟ್ಟಾರೆ ಆರೋಗ್ಯವೂ ವೃದ್ದಿಸುತ್ತದೆ. ಬನ್ನಿ, ಸುಲಭವಾಗಿ ಲಭ್ಯವಾಗುವ ಈ ನೈಸರ್ಗಿಕ ಪರಿಹಾರಗಳು ಯಾವುವು ಎಂಬುದನ್ನು ನೋಡೋಣ... 

ಬೆಳ್ಳುಳ್ಳಿ

ಬೆಳ್ಳುಳ್ಳಿ

ಭಾರತೀಯ ಅಡುಗೆಯ ಬಹುತೇಕ ಎಲ್ಲಾ ಖಾದ್ಯಗಳಲ್ಲಿ ಬೆಳ್ಳುಳ್ಳಿಯ ಬಳಕೆಯಾಗುತ್ತದೆ. ಬಾಣಸಿಗರು ಇದನ್ನು ರುಚಿಯನ್ನು ಹೆಚ್ಚಿಸುವ ಮಸಾಲೆಯ ರೂಪದಲ್ಲಿ ಪರಿಗಣಿಸಿದರೆ ಆಯುರ್ವೇದ ಇದನ್ನು ಔಷಧೀಯ ಗುಣಗಳಿಗಾಗಿ ಪರಿಗಣಿಸುತ್ತದೆ. ಆಯುರ್ವೇದದ ಹಲವಾರು ಔಷಧಿಗಳಲ್ಲಿ ಬೆಳ್ಳುಳ್ಳಿಯನ್ನು ಕೆಲವಾರು ಕಾಯಿಲೆಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಕೊಲೆಸ್ಟ್ರಾಲ್ ನಿಂದ ಹಿಡಿದು ಕಾಲಿನ ವ್ರಣಗಳವರೆಗೆ ಕೆಲವಾರು ತೊಂದರೆಗಳಿಗೆ ಬೆಳ್ಳುಳ್ಳಿ ಉತ್ತಮ ಪರಿಹಾರವಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಆದರೆ ಇದು ಲೈಂಗಿಕ ದೌರ್ಬಲ್ಯಕ್ಕೂ ಉತ್ತಮ ಪರಿಹಾರವಾಗುತ್ತದೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಇದರ ಕಾಮೋತ್ತೇಜಕ ಗುಣಗಳು ದೇಹದಲ್ಲಿ, ವಿಶೇಷವಾಗಿ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸುವ ಮೂಲಕ ದೌರ್ಬಲ್ಯವನ್ನು ದೂರಮಾಡುತ್ತದೆ. ಜೊತೆಗೇ ದೃಢತೆ, ದಾರ್ಢ್ಯತೆ ಹಾಗೂ ಸಂವೇದನಾ ಶೀಲತೆಯನ್ನೂ ಹೆಚ್ಚಿಸುತ್ತದೆ. ನಿತ್ಯವೂ ಕೆಲವು ಹಸಿ ಬೆಳ್ಳುಳ್ಳಿಯ ಎಸಳುಗಳನ್ನು ರಾತ್ರಿ ಮಲಗುವ ಮುನ್ನ ಜಗಿದು ನುಂಗಿದರೆ ನಿಧಾನವಾಗಿ ದೇಹ ಕಳೆದುಕೊಂಡಿದ್ದ ಸಾಮರ್ಥ್ಯವನ್ನು ಮತ್ತೊಮ್ಮೆ ಪಡೆಯುತ್ತದೆ.

ಬಾದಾಮಿ

ಬಾದಾಮಿ

ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಇ, ಮೆಗ್ನಿಶಿಯಂ, ಕ್ಯಾಲ್ಸಿಯಂ ಹಾಗೂ ವಿಟಮಿನ್ ಬಿ೨ ಇದ್ದು ಆರೋಗ್ಯ ಕಾಪಾಡುವಲ್ಲಿ ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಉತ್ತಮ ಪ್ರಮಾಣದ ಒಮೆಗ 3 ಕೊಬ್ಬಿನ ಆಮ್ಲಗಳು ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತವೆ. ರಾತ್ರಿ ಮಲಗುವ ಮುನ್ನ ಕೆಲವು ಬಾದಾಮಿಗಳನ್ನು ತಿನ್ನುವ ಮೂಲಕ ಪುರುಷರಲ್ಲಿ ಎದುರಾಗುವ ದೇಹದಾರ್ಢ್ಯತೆಯ ಕೊರತೆ ನೀಗುತ್ತದೆ.

ಅಶ್ವಗಂಧ

ಅಶ್ವಗಂಧ

ಇದೊಂದು ಅದ್ಭುತವಾದ ಆಯುರ್ವೇದೀಯ ಮೂಲಿಕೆಯಾಗಿದ್ದು ಹಲವಾರು ಲೈಂಗಿಕ ತೊಂದರೆಗಳಿಗೆ ಉತ್ತರವಾಗಿದೆ. ಇದರ ಒತ್ತಡ ನಿವಾರಕ ಗುಣ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ರಕ್ತಪರಿಚಲನಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ತನ್ಮೂಲಕ ಜನನಾಂಗಗಳಿಗೂ ಹೆಚ್ಚಿನ ರಕ್ತಪರಿಚಲನೆ ಒದಗಿಸಿ ಉತ್ತಮವಾದ ಸಾಮರ್ಥ್ಯ ಪಡೆಯಲು ನೆರವಾಗುತ್ತದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಆರೋಗ್ಯಕ್ಕೆ ಕಲ್ಲಂಗಡಿ ಹಣ್ಣು ಉತ್ತಮವಾದ ಆಯ್ಕೆಯಾಗಿದೆ. ಅಷ್ಟೇ ಅಲ್ಲ ಲೈಂಗಿಕ ತೊಂದರೆಗೆ ಇದೊಂದು ಉತ್ತಮವಾದ ಪರಿಹಾರವೂ ಆಗಿದೆ. ವಿಶೇಷವಾಗಿ ನಿಮಿರು ದೌರ್ಬಲ್ಯ ಹಾಗೂ ಕಾಮಾಸಕ್ತಿಯ ಕೊರತೆ ಎದುರಿಸುತ್ತಿರುವ ಪುರುಷರಿಗೆ ಕಲ್ಲಂಗಡಿ ವರದಾನವಾಗಿದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಇದೊಂದು ನೈಸರ್ಗಿಕ ವಯಾಗ್ರಾ ಎಂದೇ ಪರಿಗಣಿಸಲ್ಪಟ್ಟಿದ್ದು ಇದರ ಸೇವನೆಯಿಂದ ನರಗಳು ಸಡಿಲಗೊಂಡು ರಕ್ತಪರಿಚಲನೆ ಹೆಚ್ಚಲು ನೆರವಾಗುತ್ತದೆ ತನ್ಮೂಲಕ ಒಟ್ಟಾರೆ ಲೈಂಗಿಕ ಶಕ್ತಿ ಹೆಚ್ಚಲು ಸಾಧ್ಯವಾಗುತ್ತದೆ. ಇದರಲ್ಲಿ ಅವಶ್ಯಕ ಪೋಷಕಾಂಶಗಳು, ಅಮೈನೋ ಆಮ್ಲ ಹಾಗೂ ಆಂಟಿ ಆಕ್ಸಿಡೆಂಟುಗಳು ಹೇರಳವಾಗಿದ್ದು ಕಲ್ಲಂಗಡಿಯನ್ನು ರಾತ್ರಿ ಮಲಗುವ ಮುನ್ನ ಹೆಚ್ಚು ಹೆಚ್ಚಾಗಿ ಸೇವಿಸುವ ಮೂಲಕ ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು.

ಅಂಜೂರ

ಅಂಜೂರ

ಇವು ಪೌಷ್ಟಿಕ, ರುಚಿಕರ ಹಾಗೂ ಪೋಷಕಾಂಶಗಳಿಂದ ಕೂಡಿದ್ದು ಆಯುರ್ವೇದ ಚಿಕಿತ್ಸೆಯಲ್ಲಿಯೂ ಸ್ಥಾನ ಪಡೆದಿದೆ. ಇದರಲ್ಲಿ ಉತ್ತಮ ಪ್ರಮಾಣದ ತಾಮ್ರ, ಪೊಟ್ಯಾಶಿಯಂ, ಮ್ಯಾಂಗನೀಸ್ ಹಾಗೂ ಕರಗುವ ನಾರು ಇದೆ. ನಿಮಿರು ದೌರ್ಬಲ್ಯ, ದೇಹದಾರ್ಢ್ಯತೆಯ ಕೊರತೆ, ದೀರ್ಘ ಸಮಯದವರೆಗೆ ತೊಡಗಿಕೊಳ್ಳಲು ನೆರವಾಗುವ ಮೊದಲಾದ ಕೆಲವಾರು ಲೈಂಗಿಕ ಸಮಸ್ಯೆಗಳಿಗೆ ಅಂಜೂರವನ್ನು ಆಯುರ್ವೇದ ಶಿಫಾರಸ್ಸು ಮಾಡುತ್ತದೆ.

ಅಂಜೂರ

ಅಂಜೂರ

ಇದರಲ್ಲಿರುವ ಅಮೈನೋ ಆಮ್ಲಗಳು ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ನೆರವಾದರೆ ಆಂಟಿ ಆಕ್ಸಿಡೆಂಟುಗಳು ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಮ್ಯಾಂಗನೀಸ್ ಮತ್ತು ಪೊಟ್ಯಾಶಿಯಂ ಆರೋಗ್ಯವನ್ನು ವೃದ್ದಿಸಿ ದೇಹ ದಾರ್ಢ್ಯತೆಯನ್ನು ಹೆಚ್ಚಿಸಲು ನೆರವಾಗುತ್ತವೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

ಟೊಮೇಟೊ ಹಣ್ಣುಗಳು

ಟೊಮೇಟೊ ಹಣ್ಣುಗಳು

ಟೊಮೇಟೊಗಳನ್ನು ಸೇವಿಸುವ ಪುರುಷರಲ್ಲಿ ವೀರ್ಯದ ಗುಣಮಟ್ಟವು ಉತ್ತಮವಾಗಿರುತ್ತದೆ ಹಾಗು ಇವರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ತಿಳಿದು ಬಂದಿದೆ. ಇದಕ್ಕೆ ಟೊಮಾಟೊದಲ್ಲಿರುವ "ಲೈಕೊಪೀನ್" ಎಂಬ ಆಂಟಿಆಕ್ಸಿಡೆಂಟ್ ಕಾರಣ. ಇದು ಪುರುಷರ ಜನನಾಂಗದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಸಹ ನಿವಾರಿಸುತ್ತದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್‌ನಲ್ಲಿ ಮೆಗ್ನಿಷಿಯಂ ಪ್ರಮಾಣ ಅಧಿಕವಾಗಿರುತ್ತದೆ ಮತ್ತು ಇದು ರಕ್ತ ನಾಳಗಳ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಪಾಲಕ್ ಅನ್ನು ಪ್ರತಿದಿನ ಸೇವಿಸುವ ಮೂಲಕ ವಯಾಗ್ರ ನೀಡುವಂತಹ ಶಕ್ತಿಯನ್ನು ನಾವು ಸ್ವಾಭಾವಿಕವಾಗಿ ಪಡೆಯಬಹುದು. ಇದರಲ್ಲಿ ಉದ್ದೀಪನಗೊಳಿಸುವ ಅಂಶ ಹಾಗು ಲೈಂಗಿಕ ಕ್ರಿಯೆ ನಡೆಸುವಾಗ ಅಧಿಕ ಆನಂದವನ್ನು ಸಹ ನೀಡಲು ಸಹಾಯ ಮಾಡುತ್ತದೆ.

ಒಣಫಲಗಳು

ಒಣಫಲಗಳು

ಗೋಡಂಬಿ, ಶೇಂಗಾಬೀಜ, ಬಾದಾಮಿ, ಪಿಸ್ತಾ ಮೊದಲಾದ ಒಣಫಲಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿದ್ದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಎಂಬ ರಸದೂತವನ್ನು ಹೆಚ್ಚು ಉತ್ಪಾದಿಸಲು ನೆರವಾಗುತ್ತದೆ. ಈ ಟೆಸ್ಟಾಸ್ಟೆರಾನ್ ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಕೇಸರಿ ಹಾಲು

ಕೇಸರಿ ಹಾಲು

ಹಾಲಿನಲ್ಲಿ ಮಿಶ್ರಣ ಮಾಡಿದ ಕೇಸರಿ ಸೇವಿಸುವ ಮೂಲಕ ಪುರುಷರಲ್ಲಿ ಕಾಮೋತ್ತೇಜನ ಸಾಕಷ್ಟು ಮಟ್ಟಿಗೆ ಹೆಚ್ಚುತ್ತದೆ. ರಾತ್ರಿ ಮಲಗುವ ಮುನ್ನ ಕುಡಿದರೆ ಕಾಮಾಸಕ್ತಿ ಹೆಚ್ಚಿಸುವ ರಸದೂತಗಳು ಹೆಚ್ಚು ಬಿಡುಗಡೆಯಾಗುತ್ತವೆ ಹಾಗೂ ದಾಂಪತ್ಯ ಸುಖಕರವಾಗುತ್ತದೆ.

English summary

Ayurvedic Remedies To Improve Sexual Stamina In Men

According to Ayurveda, sexual problems are a result of aggravated Kapha. The increase in Kapha also has an adverse effect on your immunity and overall well-being.Ayurveda prescribes the use of natural herbs and remedies to cure the problem of low sexual stamina. Let's see how we can harness the potential of these herbs and remedies to help in the treatment of low sexual stamina. Let us look at some of the easily available herbs and remedies to treat the problem of low sexual stamina.