ಅಲರ್ಜಿಯಿಂದಾಗಿ 'ಸೋರುವ ಮೂಗಿನ' ಕಿರಿಕಿರಿಗೆ- ಆಯುರ್ವೇದದ ಆರೈಕೆ

By: Arshad
Subscribe to Boldsky

ಯಾವುದಾದರೂ ಕಣ ನಮ್ಮ ದೇಹಕ್ಕೆ ಒಲ್ಲದು ಎಂದು ಸೂಚಿಸುವ ವ್ಯವಸ್ಥೆಯೇ ಅಲರ್ಜಿ. ಪ್ರತಿ ವ್ಯಕ್ತಿಗೂ ಕೆಲವು ಕಣಗಳು ಅಥವಾ ವಸ್ತು ಅಲರ್ಜಿಕಾರಕವಾಗಿದ್ದು ಇದನ್ನು ಹೊರಹಾಕಲು ದೇಹ ಹಲವಾರು ವ್ಯವಸ್ಥೆಗಳನ್ನು ಪ್ರಾರಂಭಿಸುತ್ತದೆ. ಇದನ್ನೇ allergic reaction ಎಂದು ಕರೆಯುತ್ತಾರೆ.

ಮೂಗು ಸೋರಲು ಅಥವಾ ಕಟ್ಟಿದ ಮೂಗು ಶ್ವಾಸಕೋಶದ ಒಳಗೆ ಇರುವ ತೇವವಾದ ಭಾಗಕ್ಕೆ ಇಂತಹ ಯಾವುದಾದರೊಂದು ಅಲರ್ಜಿಕಾರಕ ಕಣ ಅಂಟಿಕೊಂಡರೆ ಇದನ್ನು ನಿವಾರಿಸಲು ದೇಹದ ರೋಗ ನಿರೋಧಕ ಶಕ್ತಿ ಕಫವನ್ನು ಹೆಚ್ಚಿಸಿ ನೀರಾಗಿಸಿ ಹೊರದೂಡಲು ಯತ್ನಿಸುತ್ತದೇ ಇದೇ ಮೂಗು ಸೋರುವುದು. ಗಾಳಿಯಲ್ಲಿ ತೇಲಿ ಬರುವ ಹೂವಿನ ಪರಾಗ, ಧೂಳು, ಪ್ರಾಣಿಯ ಕೂದಲು, ಹೊಗೆ, ತಂಬಾಕು ಅಥವಾ ಇನ್ನಾವುದಾದರೂ ರಾಸಾಯನಿಕವೂ ಅಲರ್ಜಿಕಾರಕವಾಗಬಹುದು. ಇವು ಶ್ವಾಸಕೋಶದ ಒಳಗೆ ಆಗಮಿಸಿದ ಬಳಿಕ ಗಾಳಿಯನ್ನು ಹೀರಿಕೊಳ್ಳುವ ಮಾಸ್ಟ್ ಜೀವಕೋಶಗಳಿಗೆ ಅಂಟಿಕೊಳ್ಳುತ್ತವೆ.

ಅಲರ್ಜಿಗೆ ಅಲಕ್ಷ್ಯ ಬೇಡ, ಸರಿಯಾದ ಸೂಕ್ತ ಚಿಕಿತ್ಸೆ ಅತ್ಯಗತ್ಯ...

ಈ ಜೀವಕೋಶಗಳು ಹಿಸ್ಟಮೈನ್ ಎಂಬ ರಸದೂತವನ್ನು ಬಿಡುಗಡೆ ಮಾಡುತ್ತವೆ. ಈ ರಸದೂತ ರಕ್ತನಾಳಗಳನ್ನು ಅಗಲವಾಗಿ ತೆರೆಯುವ ಮೂಲಕ ಒಳಭಾಗದ ಪದಗಳನ್ನೆಲ್ಲಾ ಉಬ್ಬಿಸಿ ಸ್ಥಳಾವಕಾಶ ತೀರಾ ಕಿರಿದಾಗಿಸುತ್ತದೆ. ಇದು ಸೀನು, ಮೂಗು ಕಟ್ಟುವುದು ಮೊದಲಾದವುಗಳಿಗೆ ಕಾರಣವಾಗಿದೆ. ಈ ಕಣಗಳನ್ನು ಹೊರಹಾಕಲು ತೇವವಿರುವ ಸ್ಥಳಗಳಲ್ಲಿ ಅಂಟುಅಂಟಾದ ದ್ರವವನ್ನು ಸೂಸುತ್ತದೆ. ಇದರಿಂದ ಗಾಳಿಯಿಂದ ಒಳಬರುವ ಇನ್ನಷ್ಟು ಕಣಗಳು ಅಂಟಿಕೊಂಡು ಶ್ವಾಸಕೋಶದೊಳಗೆ ತಡೆಯಲು ಸಾಧ್ಯವಾಗುತ್ತದೆ. ಇದೇ ಕಫ. ಈ ಕಫವನ್ನು ನೀರಾಗಿಸಿ ಈ ಕಣಗಳನ್ನೆಲ್ಲಾ ದೇಹದಿಂದ ಹೊರಹಾಕುವುದೇ ಸೋರುವ ಮೂಗು. ಕಣ್ಣುಗಳಲ್ಲಿ ತುರಿಕೆ, ಗಂಟಲಲ್ಲಿ ಕಿರಿಕಿರಿ, ಉಸಿರಾಡಲು ತೊಂದರೆ, ಕಣ್ಣೀರು ಹರಿಯುವುದು, ಜ್ವರ ಮೊದಲಾದವು ಈ ರೋಗದ ಲಕ್ಷಣಗಳಾಗಿವೆ. 

ತ್ವಚೆ ಅಲರ್ಜಿ ನಿವಾರಣೆಗೆ ಮನೆ ಮದ್ದು

ಯಾವುದೇ ಅಲರ್ಜಿಕಾರಕ ಕಣದಿಂದ ಎದುರಾಗುವ ರೋಗವನ್ನು ಬರದಂತೆ ತಡೆಯಲು ಈ ಕಣಗಳನ್ನು ಉಸಿರಾಡದೇ ಇರುವುದು ಅಥವಾ ಈ ಕಣಗಳು ಇರುವ ಸಂಭಾವ್ಯ ಸ್ಥಳಗಳಲ್ಲಿ ಮೂಗಿಗೆ ಅಡ್ಡ ಕರವಸ್ತ್ರವನ್ನು ಹಿಡಿದುಕೊಳ್ಳುವ ಮೂಲಕ ಸಾಕಷ್ಟು ರಕ್ಷಣೆ ಪಡೆಯಬಹುದು. ಆದರೂ ಕಣ್ಣಿಗೆ ಕಾಣದ ಈ ಕಣಗಳಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಈ ತೊಂದರೆಯನ್ನು ಸಮರ್ಥವಾಗಿ ಎದುರಿಸಲು ಆಯುರ್ವೇದ ಕೆಲವು ವಿಧಾನಗಳನ್ನು ಸೂಚಿಸಿದೆ. ಮನೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ತುಳಸಿ, ಸಾಂಬಾರ್ ಈರುಳ್ಳಿ ಮೊದಲಾದವೇ ಇವುಗಳ ಹತೋಟಿಗೆ ಸಾಕಾಗುತ್ತದೆ. ಬನ್ನಿ, ಇವುಗಳಲ್ಲಿ ಕೆಲವನ್ನು ಇಂದು ನೋಡೋಣ...

ತುಳಸಿ

ತುಳಸಿ

ತುಳಸಿಯಲ್ಲಿರುವ ಯೂಜಿನಾಲ್ ಎಂಬ ಪೋಷಕಾಂಶಕ್ಕೆ ಅದ್ಭುತವಾದ ಗುಣಪಡಿಸುವ ಶಕ್ತಿಯಿದೆ. ಇದು ತುಳಸಿಯ ಶಕ್ತಿಯ ಪ್ರಮುಖ ಭಾಗವಾಗಿದೆ. ಇದರ ಉರಿಯೂತ ನಿವಾರಕ ಗುಣ ವಿಶೇಷವಾಗಿ ಶ್ವಾಸನಾಳಗಳಲ್ಲಿ ಉಂಟಾದ ಉರಿಯೂತವನ್ನು ನಿವಾರಿಸಿ ಅಲರ್ಜಿಯ ಪರಿಣಾಮಗಳನ್ನು ಎದುರಿಸಲು ಸಮರ್ಥವಾಗಿದೆ. ಈ ತೊಂದರೆ ಇದ್ದಾಗ ಕೆಲವು ತುಳಸಿ ಎಲೆಗಳನ್ನು ಕುದಿಸಿ ಸೋಸಿದ ಟೀ ಯನ್ನು ಬಿಸಿಬಿಸಿಯಾಗಿ ಕುಡಿದರೆ ಸಾಕಾಗುತ್ತದೆ.

ಬೇವು

ಬೇವು

ಬೇವಿನ ಬ್ಯಾಕ್ಟೀರಿಯಾ ಹಾಗೂ ವೈರಸ್ ನಿವಾರಕ ಗುಣ ಇಲ್ಲಿಯೂ ಕೆಲಸಕ್ಕೆ ಬರುತ್ತದೆ. ವಿಶೇಷವಾಗಿ ಇದು ಹಲವಾರು ಅಲರ್ಜಿಕಾರಕ ಕಣಗಳಿಗೆ ಸಮರ್ಥವಾದ ಎದುರಾಳಿಯಾಗಿದೆ. ಅಲ್ಲದೇ ಸೂಕ್ಷ್ಮಜೀವಿ ನಿವಾರಕವೂ ಆಗಿದ್ದು ಬೇವು ಕುದಿಸಿದ ಟೀ ಕುಡಿಯುವ ಮೂಲಕವೂ ಉತ್ತಮ ಪರಿಹಾರ ಪಡೆಯಬಹುದು

ಅಶ್ವಗಂಧ

ಅಶ್ವಗಂಧ

ಯಾವುದೇ ವ್ಯಕ್ತಿಯ ಸಾಮಾನ್ಯ ಆರೋಗ್ಯಕ್ಕೆ ಅಶ್ವಗಂಧ ಅತ್ಯುತ್ತಮವಾಗಿದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ದೇಹಕ್ಕೆ ಆಗಮಿಸಿ ಆಕ್ರಮಣ ಎಸಗಲು ತಯಾರಿಸುತ್ತಿದ್ದ ಕಣಗಳನ್ನು ಗುರುತಿಸಿ ಹಿಮ್ಮೆಟ್ಟಿಸಲು ಸಜ್ಜಾಗಿರುವ ನಮ್ಮ ದೇಹದ ರಕ್ಷಣಾ ಜೀವಕೋಶಗಳಾದ ಟಿ-ಸೆಲ್ಸ್ ಗಳಿಗೆ ನೆರವು ನೀಡುವ ಮೂಲಕ ಆರೋಗ್ಯ ಕಾಪಾಡುತ್ತದೆ.

ಚೆಕ್ಕೆ

ಚೆಕ್ಕೆ

ಚೆಕ್ಕೆ ಒಂದು ನೈಸರ್ಗಿಕ ಮೂಗಿನ ಕಫವನ್ನು ತೆಳುವಾಗಿಸುವ ವಸ್ತುವಾಗಿದೆ. ಕಟ್ಟಿಕೊಂಡಿದ್ದ ಕಫವನ್ನು ನೀರಾಗಿಸಿ ಹೊರಹಾಕುವ ಮೂಲಕ ಹಾಗೂ ಅಗತ್ಯಕ್ಕೂ ಹೆಚ್ಚಿನ ಪ್ರಮಾಣದ ಕಫವನ್ನು ಉತ್ಪಾದಿಸದೇ ಇರುವ ಮೂಲಕ ಮೂಗು ಕಟ್ಟಿಕೊಳ್ಳುವುದರಿಂದ ತಪ್ಪಿಸುತ್ತದೆ. ಆದರೆ ಇದು ತಾತ್ಕಾಲಿಕ ಶಮನವೇ ಹೊರತು ದೀರ್ಘಕಾಲಕ್ಕೆ ಉಪಯೋಗಿಸಬಾರದು.

ಅರಿಶಿನ

ಅರಿಶಿನ

ಅರಿಶಿನದಲ್ಲಿಯೂ ಅಲರ್ಜಿನಿವಾರಕ, ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಇವೆಲ್ಲವೂ ಸೋರುವ ಮೂಗನ್ನು ನಿಲ್ಲಿಸಲೂ ಸಮರ್ಥವಾಗಿವೆ. ಸೋರುವ ಮೂಗನ್ನು ನಿಲ್ಲಿಸಲು ಬಿಸಿನೀರಿಗೆ ಅರಿಶಿನ ಮತ್ತು ಜೇನು ಬೆರೆಸಿ ಸೇವಿಸುವುದು ಅತ್ಯುತ್ತಮ ಪರಿಹಾರವಾಗಿದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ಅತ್ಯಧಿಕ ಪ್ರಮಾಣದ ವಿಟಮಿನ್ ಸಿ ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ಅಲರ್ಜಿ ನಿವಾರಕವೂ ಆಗಿದ್ದು ಉರಿಯೂತವನ್ನು ತಪ್ಪಿಸುತ್ತದೆ. ಈ ರೋಗ ಇನ್ನೂ ಪಿತ್ತದ ಅವಸ್ಥೆಯಲ್ಲಿಯೇ ಇದ್ದಾಗ ನೆಲ್ಲಿಕಾಯಿ ಅತ್ಯುತ್ತಮ ಆಯ್ಕೆಯಾಗಿದೆ. ನೆಲ್ಲಿಕಾಯಿ ಪುಡಿ

ಪ್ರಮುಖವಾಗಿರುವ ತ್ರಿಫಲ ಪುಡಿಯನ್ನು ಸೇವಿಸುವ ಮೂಲಕ ಸೋರುವ ಮೂಗನ್ನು ನಿಲ್ಲಿಸಬಹುದು.

ಹಸಿಶುಂಠಿ

ಹಸಿಶುಂಠಿ

ಹಸಿಶುಂಠಿಯಿಂದ ಉರಿಯೂತ, ಗಂಟಲ ಉರಿ ಮೊದಲಾದವುಗಳನ್ನು ಶಮನಗೊಳಿಸಬಹುದು. ಶುಂಠಿಯ ಸೇವನೆಯಿಂದ ಜೀವ ರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳುತ್ತದೆ. ಇಲಿಗಳ ಮೇಲೆ ನಡೆಸಿದ ಪ್ರಯೋಗಗಳ ಮೂಲಕ ಕಂಡುಕೊಂಡಂತೆ ಶ್ವಾಸಕೋಶದ ಮಾಸ್ಟ್ ಜೀವಕೋಶಗಳು ಅಲರ್ಜಿಕಾರಕ ಕಣಗಳನ್ನು ಅಂಟಿಸಿಕೊಳ್ಳುವುದನ್ನು ಕಡಿಮೆಗೊಳಿಸಲು ಶುಂಠಿ ನೆರವಾಗುತ್ತದೆ. ಪರಿಣಾಮವಾಗಿ ಸೋರುವ ಮೂಗು, ಸೀನು, ಮೂಗಿನೊಳಗಿನ ತುರಿಕೆ ಮೊದಲಾದವು ಕಡಿಮೆಯಾಗುತ್ತದೆ.

ಸಾಂಬಾರ್ ಈರುಳ್ಳಿ

ಸಾಂಬಾರ್ ಈರುಳ್ಳಿ

ಈ ಈರುಳ್ಳಿ ಉತ್ತಮ ವೈರಸ್ ನಿವಾರಕವಾಗಿದೆ. ಈ ಈರುಳ್ಳಿಯನ್ನು ಕೊಚ್ಚಿ ಬೆಲ್ಲದೊಂದಿಗೆ ಮಿಶ್ರಣ ಮಾಡಿ ಕೊಂಚ ಹೊತ್ತು ಇರಿಸಿದ ಬಳಿಕ ಒಸರುವ ರಸವನ್ನು ಆಗಾಗ ಕೊಂಚಕೊಂಚವಾಗಿ ಸೇವಿಸುವ ಮೂಲಕ ಸೋರುವ ಮೂಗು ನಿಲ್ಲುತ್ತದೆ.

English summary

Ayurvedic Ingredients To Treat Allergic Rhinitis

Allergic rhinitis occurs when a person's body over responds to an allergen. The person ends up with a runny nose, sore throat, sneezing and watery and itchy eyes. The allergen could be anything - a pollen, dust, mite, animal hair, smoke, tobacco or a chemical. The antibodies come and attach themselves to the mast cells in the lungs, skin and mucous membranes.
Story first published: Wednesday, July 5, 2017, 7:03 [IST]
Subscribe Newsletter