Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಆಯುರ್ವೇದ ಪ್ರಕಾರ, ಆಹಾರದ ವಿಷಯದಲ್ಲಿ ಇಂತಹ ತಪ್ಪು ಮಾಡಬಾರದಂತೆ
ಭಾರತದಲ್ಲಿ ಆಯುರ್ವೇದ ಸಹಸ್ರಾರು ವರ್ಷಗಳಿಂದ ಸಮರ್ಥ ಚಿಕಿತ್ಸಾ ಪದ್ಧತಿಯಾಗಿ ಬಳಕೆಯಲ್ಲಿದೆ. ಇದರ ಫಲಿತಾಂಶವನ್ನು ಕಂಡುಕೊಂಡ ಬಳಿಕ ವಿಶ್ವದ ಇತರ ದೇಶಗಳೂ ಈ ಪದ್ಧತಿಯನ್ನು ಅನುಸರಿಸತೊಡಗಿವೆ. ಇಂದಿಗೂ ಭಾರತದಲ್ಲಿ ಆಯುರ್ವೇದ ಪ್ರಮುಖ ಚಿಕಿತ್ಸಾ ವಿಧಾನವಾಗಿದೆ. ಇದರ ಪರಿಣಾಮ ಕೊಂಚ ನಿಧಾನ ಎಂದು ಈ ವೈದ್ಯಪದ್ಧತಿಯನ್ನು ನಿರಾಕರಿಸುತ್ತಿದ್ದವರೂ ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವ ಕಾರಣ ಹೆಚ್ಚಿನವರು ಈಗ ಈ ಪದ್ಧತಿಯತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ.
ಆಯುರ್ವೇದದ ಪ್ರಕಾರ ನಿಮ್ಮ ಆರೋಗ್ಯ ನಿಮ್ಮ ಆಹಾರವನ್ನು ಆಧರಿಸಿದೆ. ಆದ್ದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ಉತ್ತಮ ಆಹಾರವನ್ನು ಸೂಕ್ತ ಕ್ರಮದಲ್ಲಿಯೇ ಸೇವಿಸಬೇಕು ಹಾಗೂ ನಮ್ಮ ದೇಹಪ್ರಕೃತಿಗೆ ಅನುಸಾರವಾಗಿಯೇ ಸೇವಿಸಬೇಕು. ಅಷ್ಟೇ ಅಲ್ಲ, ನಮ್ಮ ಆರೋಗ್ಯಕ್ಕೆ ಸಲ್ಲದ ಆಹಾರ ಅಥವಾ ತಪ್ಪಾದ ಹೊತ್ತಿನಲ್ಲಿ ಸೇವಿಸುವುದರಿಂದಲೂ ಆರೋಗ್ಯ ಕೆಡುತ್ತದೆ. ಬನ್ನಿ, ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ಎಂಬುದನ್ನು ನೋಡೋಣ....

ಜೇನನ್ನು ಅಡುಗೆಗೆ ಬಳಸುವುದು
ಜೇನು ಹಲವು ಪೋಷಕಾಂಶಗಳ ಗಣಿಯಾಗಿದ್ದು ಇದನ್ನು ಎಂದಿಗೂ ಬಿಸಿ ಮಾಡಬಾರದು. ಆಯುರ್ವೇದದ ಪ್ರಕಾರ ಜೇನನ್ನು ಬಿಸಿ ಮಾಡಿದರೆ ಇದರ ಪೋಷಕಾಂಶಗಳು ಪರಿವರ್ತನೆಗೊಂಡು ಆಮ ಅಥವಾ ವಿಷಕಾರಿ ಅಜೀರ್ಣವಾದ ಆಹಾರ ಉತ್ಪತ್ತಿಯಾಗಲು ಕಾರಣವಾಗುತ್ತವೆ. ಈ ಆಮ ಜೀರ್ಣಾಂಗ ವ್ಯವಸ್ಥೆಯನ್ನು ಕೆಡಿಸುತ್ತದೆ.

ರಾತ್ರಿ ಊಟದ ಬಳಿಕ ಕಲ್ಲಂಗಡಿ ತಿನ್ನಬಾರದು
ಕಲ್ಲಂಗಡಿಯಲ್ಲಿ ಬಹುತೇಕ ನೀರೇ ಇದೆ ಹಾಗೂ ಉಳಿದ ಪ್ರಮಾಣ ಸಕ್ಕರೆಯಾಗಿದೆ. ರಾತ್ರಿಯೂಟದ ಬಳಿಕ ಕಲ್ಲಂಗಡಿ ಹಣ್ಣನ್ನು ತಿಂದರೆ ಈ ಸಕ್ಕರೆ ಹೊಟ್ಟೆ ಕೆಡಿಸಲು ಕಾರಣವಾಗುತ್ತದೆ. ಪರಿಣಾಮವಾಗಿ ಅಜೀರ್ಣ, ಹೊಟ್ಟೆಯಲ್ಲಿ ಗುಡುಗುಡು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಊಟದ ನಡುವೆ ತಣ್ಣೀರು ಕುಡಿಯುವುದು
ಬೆಳಿಗ್ಗೆದ್ದ ತಕ್ಷಣ ತಣ್ಣೀರು ಕುಡಿಯುವುದು ಅತ್ಯಂತ ಉತ್ತಮ ಅಭ್ಯಾಸ. ಆದರೆ ಆಯುರ್ವೇದದ ಪ್ರಕಾರ ಊಟದ ನಡುವೆ ತಣ್ಣೀರು ಕುಡಿಯುವುದು ಹಾಗೂ ಊಟದ ಬಳಿಕವೂ ತಕ್ಷಣ ನೀರು ಕುಡಿಯುವುದು ಅನಾರೋಗ್ಯಕರವಾಗಿದೆ.

ಊಟದ ನಡುವೆ ತಣ್ಣೀರು ಕುಡಿಯುವುದು
ಇದರಿಂದ ಜೀರ್ಣಾಂಗ ವ್ಯವಸ್ಥೆಯೇ ಕೆಡಬಹುದು. ಆದರೆ ಊಟದ ನಡುವೆ ಕೊಂಚ ಪ್ರಮಾಣದ ಉಗುರುಬೆಚ್ಚನೆಯ ನೀರು ಕುಡಿಯುವುದು ಪ್ರಯೋಜನಕಾರಿಯಾಗಿದೆ.



Click it and Unblock the Notifications