ವೀಳ್ಯದೆಲೆ ಎಂಬ ಹಸಿರು ಬಂಗಾರವನ್ನು ಎಷ್ಟು ಹೊಗಳಿದರೂ ಸಾಲದು!

By: Arshad
Subscribe to Boldsky

ವೀಳ್ಯದೆಲೆಯನ್ನು ಭಾರತದಲ್ಲಿ ಪಾನ್ ಎಂಬ ಹೆಸರಿನಿಂದಲೇ ಹೆಚ್ಚಾಗಿ ಕರೆಯಲಾಗುತ್ತದೆ. ಪೈಪರೇಸಿಯೇ ಕುಟುಂಬಕ್ಕೆ ಸೇರಿದ ಈ ಬಳ್ಳಿಜಾತಿಯ ಗಿಡ ಕಂಭ, ಮರ, ಜಂತಿಗಳನ್ನು ತಬ್ಬಿಕೊಂಡು ಹರಡುತ್ತಾ ಸಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆಗೆ ವಿಶೇಷವಾದ ಸ್ಥಾನವಿದ್ದು ಹಲವು ವಿಶೇಷ ಸಂದರ್ಭಗಳಲ್ಲಿ, ಉದಾಹರಣೆಗೆ ಮದುವೆ, ಗೃಹಪ್ರವೇಶ, ಹೊಸವರ್ಷ ಮೊದಲಾದ ಸಂದರ್ಭಗಳನ್ನು ಆಚರಿಸಲೂ ಬಳಸಲಾಗುತ್ತದೆ.

ಪುರಾತನ ಸಮಯದಲ್ಲಿ ಈ ಎಲೆಗಳನ್ನು ಜಗಿಯುವುದರಿಂದ ನಾಲಿಗೆ ಮತ್ತು ತುಟಿಗಳು ಕೆಂಪಗಾಗುತ್ತಿದ್ದ ಕಾರಣದಿಂದ ಕೇವಲ ಮಹಿಳೆಯರು ಮಾತ್ರ ಒಂದು ರೀತಿಯ ಸೌಂದರ್ಯ ಪ್ರಸಾದನದ ರೂಪದಲ್ಲಿ ಸೇವಿಸುತ್ತಿದ್ದರು. ಪಶ್ಚಿಮ ಬಂಗಾಳದ ಬರೂವಿಸ್ ಎಂಬ ಒಂದು ಬುಡಕಟ್ಟು ಜನರು ಈ ಎಲೆಗಳನ್ನು ಬೆಳೆಸುವುದನ್ನೇ ಪ್ರಮುಖ ಕೃಷಿಯಾಗಿಸಿಕೊಂಡು ಬಂದಿದ್ದು ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಈ ಎಲೆಗೆ ದೇವರಿಗೆ ಸಮಾನವಾದ ಪೂಜೆಯನ್ನೂ ಸಲ್ಲಿಸುತ್ತಾರೆ.  ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು? 

ಈ ಎಲೆಯನ್ನು ಜಗಿದ ಬಳಿಕ ಪ್ರಾಪ್ತವಾಗುವ ಅಹ್ಲಾದಕರ ಭಾವನೆಯಿಂದಾಗಿ ಈ ಎಲೆಯನ್ನು ಹಲವು ಉದ್ದೇಶಗಳಿಗಾಗಿ ಬಳಲಾಗುತ್ತಿದೆ. ಆದರೆ ಇದರಲ್ಲಿರುವ ಔಷಧೀಯ ಗುಣಗಳೇ ಈ ಎಲೆಯ ನಿಜವಾದ ಸಾಮರ್ಥ್ಯವಾಗಿದೆ. ಬನ್ನಿ, ಈ ಸಾಮರ್ಥದ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ಎಂಬುದನ್ನು ನೋಡೋಣ.... 

ಗಾಯಗಳನ್ನು ಮಾಗಿಸುತ್ತದೆ

ಗಾಯಗಳನ್ನು ಮಾಗಿಸುತ್ತದೆ

ವೀಳ್ಯದೆಲೆಯಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ. ಇವು ಉತ್ಕರ್ಷಣಶೀಲ ಒತ್ತಡ (oxidative stress)ವನ್ನು ಕಡಿಮೆಗೊಳಿಸಿ ತನ್ಮೂಲಕ ಗಾಯಗಳನ್ನು ಶೀಘ್ರವಾಗಿ ಮಾಗಿಸಲು ನೆರವಾಗುತ್ತವೆ. ಅಲ್ಲದೇ ಗಾಯದ ಮೂಲಕ ನಷ್ಟಹೊಂದಿದ್ದ ಅಂಗಾಂಶಗಳನ್ನು ಮತ್ತೆ ಮರುತುಂಬಿಸಲು ಹಾಗೂ ಇದರಲ್ಲಿ ಪೂರ್ಣಪ್ರಮಾಣದ ಪ್ರೋಟೀನುಗಳಿರುವಂತೆ ಸಹಕರಿಸುತ್ತದೆ. ಇದಕ್ಕಾಗಿ ಕೆಲವು ಎಲೆಗಳನ್ನು ಹಿಂಡಿ ತೆಗೆದ ರಸವನ್ನು ಗಾಯದ ಮೇಲೆ ಹಚ್ಚಬೇಕು ಬಳಿಕ ಕೆಲವು ಎಲೆಗಳನ್ನು ಗಾಯದ ಮೇಲೆ ಸುತ್ತಿ ಬ್ಯಾಂಡೇಜು ಮಾಡಬೇಕು. ಇದರಿಂದ ಗಾಯ ಒಂದೆರಡು ದಿನಗಳಲ್ಲಿಯೇ ಮಾಗುತ್ತದೆ.

ಸಂಧಿವಾತ

ಸಂಧಿವಾತ

ಈ ಎಲೆಗಳಲ್ಲಿರುವ ಪಾಲಿಫಿನಾಲ್, ವಿಶೇಷವಾಗಿ ಚಾವಿಕಾಲ್ ಎಂಬ ಪೋಷಕಾಂಶ ಅತ್ಯುತ್ತಮವಾದ ಉರಿಯೂತ ನಿವಾರಕವಾಗಿದೆ. ಈ ಎಲೆಯ ರಸವನ್ನು ಸಂಧಿವಾತ ಹಾಗೂ ಇತರ ತೊಂದರೆ ಇರುವ ಕೀಲುಗಳ ಮೇಲೆ ನೇರವಾಗಿ ಹಚ್ಚುವ ಮೂಲಕ ಉತ್ತಮ ಪರಿಹಾರ ಕಂಡುಕೊಳ್ಳಬಹುದು...

ವೀಳ್ಯದ ಎಲೆ ತಿಂದರೆ ಆರೋಗ್ಯಕ್ಕಾಗುವ ಲಾಭ

ಅಜೀರ್ಣ

ಅಜೀರ್ಣ

ಈ ರಸ ಜೀರ್ಣಾಂಗಗಳನ್ನು ರಕ್ಷಿಸುವ, ವಾಯುಪ್ರಕೋಪ ನಿವಾರಕ, ಸಾರಸಂಗ್ರಹಿ ಮೊದಲಾದ ಗುಣಗಳನ್ನು ಹೊಂದಿದೆ. ವೀಳ್ಯದೆಲೆಯನ್ನು ಜಗಿದು ನುಂಗುವ ಮೂಲಕ ಇದರ ರಸದಲ್ಲಿರುವ ಗುಣಗಳನ್ನು ಪಡೆಯಬಹುದು. ಇದು ಅಜೀರ್ಣ ಸಹಿತ ಹಲವು ಜೀರ್ಣಕ್ರಿಯೆ ತೊಂದರೆಗಳನ್ನು ನಿವಾರಿಸುತ್ತದೆ. ಬರೆಯ ಎಲೆಯನ್ನು ಜಗಿದು ನುಂಗುವ ಮೂಲಕ ಬಾಯಿಯಲ್ಲಿ ಹೆಚ್ಚಿನ ಲಾಲಾರಸ ಉತ್ಪತ್ತಿಯಾಗಲು ನೆರವಾಗುತ್ತದೆ.

ಬಾಯಿಯ ದುರ್ವಾಸನೆ

ಬಾಯಿಯ ದುರ್ವಾಸನೆ

ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಯ ಸ್ವಚ್ಛತೆಯನ್ನು ಕಾಪಾಡಲು ನೆರವಾಗುತ್ತದೆ. ವೀಳ್ಯದೆಲೆಯನ್ನು ಜಗಿಯುವುದರಿಂದ ಲಾಲಾರಸದ ಉತ್ಪತ್ತಿ ಹೆಚ್ಚುತ್ತದೆ ಎಂದು ಸಂಶೋಧನೆಗಳ ಮೂಲಕ ಸಾಬೀತಾಗಿದೆ. ಲಾಲಾರಸ ಹೆಚ್ಚಿದ್ದಷ್ಟೂ ಬಾಯಿಯಲ್ಲಿರುವ ಪಿಎಚ್ ಮಟ್ಟವನ್ನು ಸಂತುಲಿತ ಮಟ್ಟಕ್ಕೆ ಇಳಿಸುವ ಮೂಲಕ ಬಾಯಿಯೊಳಗೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯಾಗದಂತೆ ತಡೆಯಬಹುದು.

ಪುರುಷರಲ್ಲಿ ಉದ್ರೇಕತೆಯ ತೊಂದರೆ

ಪುರುಷರಲ್ಲಿ ಉದ್ರೇಕತೆಯ ತೊಂದರೆ

ಆಯುರ್ವೇದದ ಪ್ರಕಾರ "ಧ್ವಜ ಭಂಗ" ಅಥವಾ ಪುರುಷರಲ್ಲಿ ಉದ್ರೇಕತೆಯ ಕೊರತೆಯನ್ನು ನೀಗಿಸುವಲ್ಲಿ ವೀಳ್ಯದೆಲೆ ಅತ್ಯುತ್ತಮವಾಗಿದೆ. ಈ ರಸದಲ್ಲಿರುವ ಪೋಷಕಾಂಶಗಳು ಒತ್ತಡವನ್ನು ಕಡಿಮೆಗೊಳಿಸುವುದರ ಜೊತೆಗೇ ರಕ್ತನಾಳಗಳನ್ನು ಸಡಿಲಿಸಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ. ಊಟದ ಬಳಿಕ ಒಂದು ಅಥವಾ ಎರಡು ವೀಳ್ಯದೆಲೆಗಳನ್ನು ಜಗಿದು ನುಂಗುವ ಮೂಲಕ ಈ ತೊಂದರೆಯನ್ನು ಪರಿಹರಿಸಿಕೊಳ್ಳಬಹುದು.

ಸುಟ್ಟಗಾಯಗಳಿಗೆ

ಸುಟ್ಟಗಾಯಗಳಿಗೆ

ಕೆಲವು ವೀಳೆಯದೆಲೆಗಳನ್ನು ಜಜ್ಜಿ ಒಂದು ಬಟ್ಟೆಯಲ್ಲಿ ಹಿಂಡಿ ರಸ ತೆಗೆಯಿರಿ. ಇದಕ್ಕೆ ಕೊಂಚ ಜೇನು ಸೇರಿಸಿ ಸುಟ್ಟಜಾಗಕ್ಕೆ ಹಚ್ಚಿ ಒಣಗಲುಬಿಡಿ. ಒಣಗಿದ ಬಳಿಕವೂ ಇನ್ನಷ್ಟು ರಸ ಹಚ್ಚಿ. ಇದೇ ರೀತಿ ದಿನದಲ್ಲಿ ಕೆಲವಾರು ಬಾರಿ ಪುನರಾವರ್ತಿಸಿ. ಒಂದೆರಡು ದಿನಗಳಲ್ಲಿ ಸುಟ್ಟಚರ್ಮದ ಕೆಳಗೆ ಹೊಸಚರ್ಮ ಬೆಳೆಯಲು ಪ್ರಾರಂಭವಾಗುತ್ತದೆ.

ಕೆಂಪಾದ ಮತ್ತು ತುರಿಕೆಯಿರುವ ಕಣ್ಣು

ಕೆಂಪಾದ ಮತ್ತು ತುರಿಕೆಯಿರುವ ಕಣ್ಣು

ಒಂದು ಕಪ್ ನೀರನ್ನು ಕುದಿಸಿ ಒಲೆಯಿಂದ ಇಳಿಸಿದ ಬಳಿಕ ಸುಮಾರು ಆರು ಎಳೆಯ ವೀಳ್ಯದೆಲೆಗಳನ್ನು ಹಾಕಿ ತಣಿಯಲು ಬಿಡಿ. ಬಳಿಕ ಈ ನೀರನ್ನು ಸೋಸಿ ದಿನಕ್ಕೆ ಮೂರು ಬಾರಿ ಕಣ್ಣುಗಳನ್ನು ತೊಳೆದುಕೊಳ್ಳಿ. ಒಂದೆರಡು ದಿನಗಳಲ್ಲಿಯೇ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಪೂರ್ತಿಯಾಗಿ ಉರಿ ಕಡಿಮೆಯಾಗುವ ತನಕ ಈ ವಿಧಾನವನ್ನು ಅನುಸರಿಸಿ.

ಮೈ ಕೈ ತುರಿಕೆಗೆ

ಮೈ ಕೈ ತುರಿಕೆಗೆ

ಸುಮಾರು ಒಂದು ಲೀಟರ್ ನೀರಿಗೆ ಇಪ್ಪತ್ತು ವೀಳೆಯದೆಲೆಗಳನ್ನು ಹಾಕಿ ಕುದಿಸಿ ತಣಿಸಿ. ತಣಿದ ನೀರಿನಿಂದ ಎಲೆಗಳನ್ನು ಸೋಸಿ ತೆಗೆದು ಈ ನೀರಿನಿಂದ ತುರಿಕೆಯಿರುವ ಜಾಗವನ್ನು ಚೆನ್ನಾಗಿ ತೊಳೆದುಕೊಳ್ಳಿ. ಈ ನೀರನ್ನು ಅದ್ದಿದ ಸ್ಪಂಜ್ ಉಪಯೋಗಿಸಿ ಒರೆಸಿಕೊಳ್ಳುವುದೂ ಉತ್ತಮ ವಿಧಾನವಾಗಿದೆ. ಒಂದೆರಡು ದಿನಗಳಲ್ಲಿಯೇ ತುರಿಕೆ ಪೂರ್ಣವಾಗಿ ಮಾಯವಾಗುವುದು.

ಮೈ ಕೈ ತುರಿಕೆಗೆ

ಮೈ ಕೈ ತುರಿಕೆಗೆ

ಸುಮಾರು ಎಂಟರಿಂದ ಹತ್ತು ಚೆನ್ನಾಗಿ ಬಲಿತ ವೀಳೆಯದೆಲೆಗಳ ಎರಡೂ ಬದಿಗೆ ಕೊಬ್ಬರಿ ಎಣ್ಣೆ ಹಚ್ಚಿ ಒಂದರ ಮೇಲೊಂದಿರಿಸಿ. ಇವನ್ನು ಒಟ್ಟಿಗಿರಿಸಲು ದಾರವನ್ನು ಸುತ್ತಿ ಒಂದು ಚಿಕ್ಕ ಗಂಟಾಗಿಸಿ. ಇದನ್ನು ಕಾವಲಿಯ ಮೇಲಿಟ್ಟು ಎಲೆಗಳು ಒಣಗುವವರೆಗೆ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ಬಿಸಿಯಿದ್ದಂತೆಯೇ ಸ್ತನಗಳಿಗೆ ಶಾಖ ನೀಡುವುದರಿಂದ ತಾಯಿಹಾಲು ಹೆಚ್ಚುತ್ತದೆ.

 

English summary

Ayurveda Says Betel Leaves Help Treat These Diseases

Betel leaf or paan along with its refreshing quality is also used for various medicinal purposes and this is what actually sets it apart. Given below are the magical medicinal benefits of Paan..
Story first published: Thursday, June 8, 2017, 7:02 [IST]
Subscribe Newsletter